fbpx
ಆರೋಗ್ಯ

ಮಕ್ಕಳಾದ ಮೇಲೆ ಲೈಂಗಿಕ ಜೀವನ ಹೇಗಿರುತ್ತೆ ಅಂತ ತಿಳ್ಕೊಬೇಕಂದ್ರೆ ಇಲ್ಲಿ ಓದಿ.

ಮಕ್ಕಳಾದ ಮೇಲೆ ಲೈಂಗಿಕ ಜೀವನ 


ಗಂಡಸು ಮದುವೇಕಿಂತ ಮುಂಚೆ ಹೇಳೋರು ಕೇಳೋರು ಇಲ್ದಂಗೆ ತಿರ್ಗಾಡ್ಕೊಂಡು ಇರ್ತಾನೆ
ಮದುವೆ ಮಾಡ್ಬಿಟ್ರೆ ಮೂಗ್ ದಾರ ಹಾಕೊಂಡು ಹೆಂಡ್ತಿ ಬಂದ್ಮೇಲೆ ಸರಿ ಹೋಗ್ತಾನೆ ಅಂತ ಹೇಳ್ತಾರೆ , ಇನ್ನು ಸರಿ ಹೋಗ್ಲಿಲ್ವಾ ಮಗು ಆದ್ಮೇಲೆ ಸಂಸಾರದಲ್ಲಿ ಜವಾಬ್ದಾರಿ ಜಾಸ್ತಿ ಆಗುತ್ತೆ ಅಂತ ಹೇಳ್ತಾರೆ .
ಹ್ಮ್ಮ್ ಸೃಷ್ಟಿ ನೇ ವಿಚಿತ್ರ ಕಣ್ರೀ ಸಂಶೋಧನೆಗಳು ಹೇಳೋ ಪ್ರಕಾರ ಹೆಣ್ಣು ಗಂಡಿನ ಲೈಂಗಿಕ ಸಂಬಂಧ ಗಂಡನನ್ನ ಹತೋಟಿಗೆ ಇಟ್ಕೊಳ್ಳೋಕೆ ನೆರವಾಗುತ್ತಂತೆ

ಮನುಷ್ಯ ದೈಹಿಕ ಸಂಪರ್ಕದ ಜೊತೆ ಮಾನಸಿಕ ಅವಲಂಬನೆ ಜಾಸ್ತಿ ಮಾಡ್ಕೊತಾನಂತೆ ಇದಕ್ಕೆ ಮುಖ್ಯ ಕಾರಣ ಇಬ್ಬರ ನಡುವಿನ ಸೆಕ್ಸ್ ಜೀವನ ಇನ್ನಷ್ಟು ಮಜವಾಗಿರುತ್ತದೆ ಮತ್ತೆ ಆಸಕ್ತಿಯಿಂದ ಸಂಭೋಗ ಕ್ರಿಯೆಯಲ್ಲಿ ನಿರತರಾಗಿರುತ್ತಾರಂತೆ.
ಹೀಗಂತ ಬ್ರಿಟನ್ ನಲ್ಲಿ ನಡೆದ ಸಂಶೋಧನೆ ತಿಳಿಸುತ್ತೆ .

ಸಾಮಾನ್ಯವಾಗಿ ಮದುವೆ ಆಗಿ ಮಕ್ಕ್ಳು ಆದ್ಮೇಲೆ ಗಂಡ ಹೆಂಡ್ತೀರು 2 ತಿಂಗಳಾದ್ಮೇಲೆ ಮತ್ತೆ ಲೈಂಗಿಕ ಸಂಭೋಗ ಕ್ರಿಯೆ ನಡೆಸುತ್ತಾರಂತೆ , ಮಗುವಾದ ನಂತರ ಹೆಂಡ್ತಿ ಗಿಂತ ಗಂಡ ಲೈಂಗಿಕ ಆಸಕ್ತಿ ಹೆಚ್ಚು ಬೆಳೆಸಿಕೊಂಡಿರ್ತಾನಂತೆ,
ವಾರದಲ್ಲಿ ಎರಡು ಬಾರಿ ಲೈಂಗಿಕ ಕ್ರಿಯೆ ಮಾಡಾಕೆ ಆಸೆ ಪಟ್ರೆ ಹೆಂಡ್ತಿ ವಾರಕ್ಕೆ ಎರಡೇ ಸಾರಿ ಸಾಕು ಅಂತಾಳಂತೆ , ಯಾಕೆಂದ್ರೆ ಸಾಕಷ್ಟು ದೈಹಿಕ ಬದಲಾವಣೆಗಳ ಕಾರಣದಿಂದ.


ಆದರೂ ತೃಪ್ತಿದಾಯಕ ಲೈಂಗಿಕ ಕ್ರಿಯೆ ನಡೆಸ್ತಾರಂತೆ , ಮಗು ಆಗೋಕಿಂತ ಮುಂಚೆ ಗಿಂತಲೂ ಇಬ್ರು ಹೆಚ್ಚು ಆಸಕ್ತಿಯಿಂದ ಸಂಭೋಗದಲ್ಲಿ ತೊಡಗಿಕೊಳ್ಳುತ್ತಾರಂತೆ , ಮತ್ತೆ ಸೆಕ್ಸ್ ಜೀವನ ಇನ್ನು ಸುಖಕರ ವಾಗಿರುತ್ತಂತೆ.

ಹೆಣ್ಣಿಗೆ ಸ್ವಲ್ಪ ಮುಜುಗರ :

ಸ್ವಲ್ಪ ಮಗುವಾದ ಮೇಲೆ ದುಂಡಗಾಗಿರುವ ಪತ್ನಿ ತನ್ನ ದೇಹದ ಮೇಲೆ ಅಷ್ಟು ಕಾಳಜಿ ತೆಗೆದುಕೊಂಡರು ಸಹ ದೈಹಿಕ ಬದಲಾವಣೆಗಳಿಂದ ದಪ್ಪಗಿರುತ್ತಾರೆ , ಮಗುವಿಗೆ ಹಾಲು ಕುಡಿಸುತ್ತಿದ್ದರೆ ಸ್ತನಗಳು ದಪ್ಪಗಿರುತ್ತವೆ .


ಆದರೆ ಗಂಡಸಿಗೆ ಅದೇ ಇಷ್ಟವಂತೆ , ಸಣ್ಣ ಮೈಕಟ್ಟಿನ ಹೆಂಡತಿಗಿಂತ ದುಂಡು ದುಂಡಾದ ಹೆಂಡತಿ ಇಷ್ಟವಾಗುತ್ತಾಳಂತೆ.
ಒಟ್ಟು 1500 ದಂಪತಿಗಳನ್ನು ಒಳಪಡಿಸಿ ನಡೆಸಿದ ಈ ಅಧ್ಯಯನ ಶೇಖಡಾ 94 ರಷ್ಟು ಗಂಡ ಹೆಂಡತಿಯರು ಸುಖಕರ ಲೈಂಗಿಕ ಜೀವನ ಮಾಡ್ತಿದ್ದಾರೆ ಅಂತ ಹೇಳಿತ್ತು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top