fbpx
ದೇವರು

ಬೆಳಗ್ಗೆ ಎದ್ದು ಮೊಬೈಲ್ ನೋಡೋ ಬದ್ಲು ಈ ಮೂರು ವಿಷಯ ಪಾಲಿಸಿ ಜೀವನದಲ್ಲಿ ಯಶಸ್ಸು ಪಡ್ಕೋತ್ತೀರಾ

ನೀವು ಬೆಳಗಿನ ಜಾವದಲ್ಲಿ ನಿದ್ರೆಯಿಂದ ಎದ್ದ ತಕ್ಷಣ ಪ್ರತೀದಿನ ಈ ಮೂರು ಕ್ರಮಗಳನ್ನು ಪಾಲಿಸಿದರೆ, ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ಈ ಮೂರರಲ್ಲಿ ನೀವೂ  ಯಾವುದಾದರೊಂದನ್ನು ಪ್ರಯತ್ನಿಸಿ ನೋಡಿ.

ಬಹಳ ಜನ ಬೆಳಗಿನ ಸಮಯದಲ್ಲಿ ಜೋರಾಗಿ ಗಡಿಯಾರದಲ್ಲಿ ಸರಿಯಾದ ಸಮಯದಲ್ಲಿ ಎಚ್ಚರಗೊಳ್ಳುವುದಕ್ಕೆ  ಜೋರಾದ ಶಬ್ಧದಲ್ಲಿ ಎಚ್ಚರಿಕೆಯ ಗಂಟೆಯನ್ನು (alarm) ಇಟ್ಟುಕೊಂಡು ಮಲಗುತ್ತಾರೆ.ಇದು ಅವರ ಮನಸ್ಸಿಗೆ ಕಿರಿ ಕಿರಿಯನ್ನು ಉಂಟುಮಾಡುತ್ತದೆ.ಇನ್ನು ಕೆಲವರು ಹೆಂಡತಿಯ ಮೇಲೆ ಕೂಗಾಡುತ್ತಾರೆ, ನಿದ್ರೆಯಲ್ಲಿ ಕನಸ್ಸನ್ನು ಕಾಣುತ್ತಿದ್ದರೆ ಆ ಎಚ್ಚರಿಕೆಯ ಶಬ್ದದಿಂದ ಭಯ ಭೀತಿಗೊಳ್ಳುತ್ತಾರೆ.ಈ ರೀತಿಯಾಗಿ ಎಚ್ಚರಗೊಂಡು ಶುರುವಾದ ದಿನಗಳು ನಮ್ಮ ಅಂದಿನ ದಿನದಲ್ಲಿ ಧನಾತ್ಮಕ ಶಕ್ತಿಯನ್ನು ತರುವುದಿಲ್ಲ. ಆದರೆ ಏನಾದರೂ  ಆಗಲಿ ನಾವು ನಮ್ಮ ಜೀವನದಲ್ಲಿ ಕೆಟ್ಟ ದಿನಗಳನ್ನು ತಡೆಯಲು ಆಗುವುದಿಲ್ಲ. ನಾವು ಪ್ರಯತ್ನ ಮಾಡಿ ನಿದ್ರೆಯಿಂದ ಒಳ್ಳೆಯ ಮನಸ್ಸಿನಿಂದ ಎದ್ದರೆ ನಮ್ಮ ಆ ದಿನವನ್ನು ಶಾಂತ ಸ್ವಭಾವದಿಂದ ಯಾವುದೇ ಕಿರಿಕಿರಿಯಿಲ್ಲದೆ ಉಳಿದ ಬಾಕಿ  ದಿನವನ್ನು ಸಂತೋಷದಿಂದ ಕಳೆಯಬಹುದು .

ಅದಕ್ಕೋಸ್ಕರ  ನಿಮಗೆ ನಿಜವಾಗ್ಲೂ ಎಲ್ಲಾ ದಿನಗಳು  ಚೆನ್ನಾಗಿರಬೇಕು ಅಂದ್ರೆ ನಾವು ನಿಮಗೆ ಈ ಕೆಳಗೆ ಹೇಳುವ  3 ಸರಳ ವಿಧಾನಗಳನ್ನು ಪಾಲಿಸಿ ನೋಡಿ!ಇವುಗಳನ್ನು ನೀವು ಬೆಳಗಿನ ಜಾವ ನಿದ್ರೆಯಿಂದ ಎದ್ದ ತಕ್ಷಣ ಮಾಡಬೇಕು. ಇವು ನಿಮ್ಮ ದಿನನಿತ್ಯದ ಜೀವನದಲ್ಲಿ  ಮಾಡುವ ಅಭ್ಯಾಸಗಳಿಗಿಂತಲು  ಬಹಳ ಬಹಳ ಮುಖ್ಯವಾದವು ಇವಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅತೀ ಬೇಗನೆ ಯಶಸ್ಸನ್ನು ಕಾಣುತ್ತೀರಿ.ಹಾಗೆ ನಾವು ನಿಮಗೆ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು  ಕೂಡ ತಿಳಿಸಿತ್ತೇವೆ.

1.ನೀವು ಮನೆಯಿಂದ ಹೊರಗೆ ಹೋಗುವ ಮುನ್ನ ಬೆಲ್ಲವನ್ನು ತಿಂದು ನೀರನ್ನು ಕುಡಿಯಿರಿ.

ಕಾರಣ:-ಇದರ ಹಿಂದಿರುವ ವೈಜ್ಞಾನಿಕ ಕಾರಣವೇನೆಂದರೆ ನಮ್ಮ ದೇಹದಲ್ಲಿ ಆಗುವ ರಕ್ತ ಸಂಚಾರ. ಬೆಲ್ಲದಲ್ಲಿ ಮುಖ್ಯವಾಗಿ ಸುಕ್ರೋಸ್ ಅಂಶವು ಹೆಚ್ಚಿಗೆ ಇದೆ.ಬೆಲ್ಲವನ್ನು ನೀರಿನ ಜೊತೆ ತಿಂದರೆ ನಮ್ಮ ಶಕ್ತಿಯ ಮಟ್ಟದಲ್ಲಿ ಹೆಚ್ಚಳವಾಗುತ್ತದೆ ಮತ್ತು ಆ ದಿನ ಪೂರ್ತಿ ನೀವು ಕ್ರಿಯಾಶೀಲರಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

2.ನೀವು ಮನೆ ಬಿಡುವ ಮುನ್ನ ನಿಮ್ಮ ಮನೆಯಲ್ಲಿರುವ ಹಿರಿಯರು ಅಥವಾ ಅಪ್ಪ-ಅಮ್ಮಂದಿರ ಪಾದಗಳನ್ನು ಸ್ಪರ್ಶಿಸಿ ಅಂದರೆ ಅವರ ಆಶೀರ್ವಾದವನ್ನು ಪಡೆಯಬೇಕು.

ಕಾರಣ:-ಮನುಷ್ಯನಲ್ಲಿ ಶಕ್ತಿಯ ಅಲೆಗಳು ತಲೆಯಿಂದ ಪಾದಗಳ ಕಡೆಗೆ ಹಿಮ್ಮುಖವಾಗಿ  ಹರಿಯುತ್ತವೆ.ನೀವು ಪಾದಗಳನ್ನು ಸ್ಪರ್ಶಿಸಲು ಕೆಳಗೆ ಬಗ್ಗಿದ್ದಾಗ ರಕ್ತವು ಮೆದುಳಿನ ಕಡೆಗೆ ಹರಿಯುತ್ತದೆ.ನೀವೇ ಊಹಿಸಿ ನೋಡಿ ಅದು ನಾವು ಅವರ ಶಕ್ತಿಯನ್ನು ಸೆಳೆದು  ಕೊಳ್ಳುತ್ತಿರುವ ಹಾಗೆ  ಭಾಸವಾಗುತ್ತದೆ ಮತ್ತು ನಿಮ್ಮ ಕಡೆಗೆ ಶಕ್ತಿಯು ಹರಿದು ಬರುತ್ತಿರುವ ಹಾಗೆ ಅನಿಸುತ್ತದೆ. ಹಾಗೂ ಈ ಕ್ರಮವನ್ನು ನೀವು ಸತತವಾಗಿ ಮಾಡಿದರೆ ಪಿತೃ ದೋಷದಿಂದ ಮುಕ್ತಿಯನ್ನು ಗಳಿಸಿ ನಿಮಗೆ  ಅದೃಷ್ಟದಿಂದ ಲಾಭವನ್ನು ತಂದುಕೊಡುತ್ತದೆ ಎಂದು ಜ್ಯೋತಿಷಿಗಳು  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

3.ನಿಮ್ಮ ಎರಡು ಅಂಗೈಯನ್ನು ಜೊತೆಗೆ ಕೂಡಿಸಿ ಮುಖದ ಮುಂದೆ ತಂದು ನೋಡಿಕೊಂಡು ಕಣ್ಣುಗಳಿಗೆ ಒತ್ತಿಕೊಳ್ಳಿ.

ನೀವು ಬೆಳ್ಳಗೆ ನಿದ್ರೆಯಿಂದ ಎದ್ದ ತಕ್ಷಣ ನಿಮ್ಮ ಎರಡು ಅಂಗೈಯನ್ನು ಜೊತೆಗೆ ಕೂಡಿಸಿ ಮುಂದೆ ತಂದು ಅಂಗೈಯನ್ನೇ ನೋಡಿಕೊಂಡು ನಿಮ್ಮ ಕಣ್ಣುಗಳಿಗೆ ಒತ್ತಿಕೊಳ್ಳಿ.ನೆನಪಿಡಿ ನಿಮ್ಮ ಅಂಗೈಗಳನ್ನು ಬರೀ ಜೋಡಿಸುವುದಲ್ಲ ಅವುಗಳನ್ನು ನಾವು  ನೀರು  ಹಾಕಿದರೆ ನಿಂತುಕೊಳ್ಳುವ ಹಾಗೆ,  ಈ ಮೇಲಿನ ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ಇಟ್ಟುಕೊಂಡು ಎರಡರಿಂದ ಮೂರು ಬಾರಿ ನೋಡಿಕೊಂಡು ಕಣ್ಣುಗಳಿಗೆ ಒತ್ತಿಕೊಳ್ಳಬೇಕು.

ನಿಮಗೆ ಗೊತ್ತಾ ನಮ್ಮ ಅಂಗೈನ ಬೆರಳುಗಳ ತುದಿಯಲ್ಲಿ ಲಕ್ಷ್ಮಿ ದೇವಿಯು (ಹಣ,ಆಸ್ತಿ,ಐಶ್ವರ್ಯ, ಸಂಪತ್ತಿನ ಅಧಿದೇವತೆ),ಸರಸ್ವತಿ ದೇವಿ (ಜ್ಞಾನದ ದೇವತೆ) ಅಂಗೈನ ಮದ್ಯದಲ್ಲಿ, ಮತ್ತು ನಾವು ಬಳೆಗಳನ್ನು  ಧರಿಸುವ ಸ್ಥಳದಲ್ಲಿ ಬ್ರಹ್ಮ ದೇವರು (ಇಡೀ ವಿಶ್ವಕ್ಕೆ ದೇವರು,ಸೃಷ್ಟಿಕರ್ತ)ವಾಸವಿದ್ದಾರೆ.ಅದಕ್ಕೆ ಬೆಳಗ್ಗೆ ಎದ್ದ ಕೂಡಲೇ ನಮ್ಮ ಅಂಗೈಗಳನ್ನು ನೋಡಿದರೆ ನಮಗೆ ಅವರ ದರ್ಶನವಾಗಿ  ಅನುಗ್ರಹ, ಆಶೀರ್ವಾದ ಲಭಿಸಿದಂತಾಗುತ್ತದೆ. ಅದೃಷ್ಟವೇ ಬಂದು ಮೋಡಿ ಮಾಡಿದಂತೆ ಅನಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top