fbpx
ದೇವರು

ಮಕ್ಕಳಿಗೆ ಕಿವಿ ಚುಚ್ಚುವುದರ ಹಿಂದಿನ ವೈಜ್ಞಾನಿಕ ಸಂಗತಿಯನ್ನ ತಿಳಿದಿಕೊಳ್ಳಿ.

ಮಕ್ಕಳಿಗೆ ಕಿವಿ ಚುಚ್ಚುವುದರ ಹಿಂದಿನ ವೈಜ್ಞಾನಿಕ ಸಂಗತಿಯನ್ನ ತಿಳಿದಿಕೊಳ್ಳಿ.

 

ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪುರಾತನವಾದ ಸಂಪ್ರದಾಯವಾಗಿದೆ.ಈ ಸಂಪ್ರದಾಯಕ್ಕೆ ತತ್ವಶಾಸ್ತ್ರಜ್ಞರು ಮತ್ತು ವೈಧ್ಯರು ಸಹ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬುದ್ದಿಯ ಬೆಳವಣಿಗೆಯನ್ನು ಮತ್ತು ಮಾನಸಿಕ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ.

 

 

ಮಾನವನ ದೇಹದ ಪಂಚೇಂದ್ರಿಯಗಳಲ್ಲಿ ಕಿವಿ ಸಹ ಒಂದು.ಶಬ್ದವನ್ನು,ಮಾತನ್ನು ಅರಿಯಲು ಮಗುವಿನ ಕಿವಿ ಚುರುಕಾಗಬೇಕು. ಹಾಗಾಗಿ ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ ವೈಜ್ಞಾನಿಕವಾಗಿ ಕೂಡ ಒಳ್ಳೆಯದು.

 

 

 

ಸಾಮಾನ್ಯವಾಗಿ ಮಕ್ಕಳಿಗೆ ಕಿವಿ ಚುಚ್ಚುವುದು ಹತ್ತನೇ ಹನ್ನೆರಡನೇ, ಹದಿನಾರನೇ ದಿನ ಅಥವಾ ಆರನೇ, ಏಳನೇ, ಎಂಟನೇ, ಅಥವಾ ಹತ್ತನೇ,ಹನ್ನರಡನೇ ತಿಂಗಳಲ್ಲಿ ಮಾಡುವುದು. ಈ ಸಂಪ್ರದಾಯ ಗಂಡುಮಕ್ಕಳು, ಹೆಣ್ಣುಮಕ್ಕಳು ಇಬ್ಬರಿಗೂ ಮಾಡಲಾಗುತ್ತದೆ. ವಿಷ್ಣು, ರುದ್ರ, ಬ್ರಹ್ಮ , ಚಂದ್ರ, ಸೂರ್ಯ, ದಿಕ್ಪಾಲಕರು, ಅಶ್ವಿನೀದೇವತಾ,ಸರಸ್ವತೀ, ಗೋವು, ಬ್ರಾಹ್ಮಣ ಗುರು ಇವುಗಳನ್ನು ಪೂಜಿಸಿ, ಕಿವಿಗೆ ಅರಗಿನ ರಸವನ್ನು ಹಚ್ಚಿ, ಕಿವಿ ಚುಚ್ಚುವುದು ಸಂಪ್ರದಾಯ. ಗಂಡುಮಕ್ಕಳಿಗೆ ಮೊದಲು ಬಲದ ಕಿವಿಯನ್ನೂ, ಹೆಣ್ಣುಮಕ್ಕಳಿಗೆ ಮೊದಲು ಎಡದ ಕಿವಿಯನ್ನೂ ಚುಚ್ಚುವುದು ರೂಢಿ.

 

 

 

ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ ಭಾರತದಲ್ಲಿ ಮಾತ್ರ ಅಲ್ಲ ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು ಧರಿಸೋದಕ್ಕಾಗಿಯೇ ಕಿವಿಯನ್ನು ಚುಚ್ಚುವ ಸಂಪ್ರದಾಯನ್ನು ಅನುಸರಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top