fbpx
News

ಮೆಲ್ಬೋರ್ನ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಭಾರತೀಯ ನಟಿ ಐಶ್

ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಭಾರತೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಆಸ್ಟ್ರೇಲಿಯಾದಲ್ಲಿ ನಡೆದ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್‘ನಲ್ಲಿ ಭಾಗವಹಿಸಿರುವ ಐಶ್ವರ್ಯಾ ರೈ ತ್ರಿವರ್ಣ ಧ್ವಜಾರೋಹಣ ಮಾಡಿ ಧ್ವಜವಂದನೆ ಸಲ್ಲಿಸಿದ್ದಾರೆ. ಮೆಲ್ಬೋರ್ನ್​ನಲ್ಲಿ ಹೀಗೆ ಧ್ವಜಾರೋಹಣ ಮಾಡಿದ ಮೊದಲ ಭಾರತೀಯ ನಟಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.


ಆಸ್ಟ್ರೇಲಿಯಾದಲ್ಲಿ ನಡೆದ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್‘ನಲ್ಲಿ ಭಾಗವಹಿಸಿರುವ ಐಶ್ವರ್ಯಾ ರೈ ತ್ರಿವರ್ಣ ಧ್ವಜಾರೋಹಣ ಮಾಡಿ ಧ್ವಜವಂದನೆ ಸಲ್ಲಿಸಿದ್ದಾರೆ. ಮೆಲ್ಬೋರ್ನ್​ನಲ್ಲಿ ಹೀಗೆ ಧ್ವಜಾರೋಹಣ ಮಾಡಿದ ಮೊದಲ ಭಾರತೀಯ ನಟಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರಂತೆ. ವಿಶೇಷ ಎಂದರೆ ಈ ಸಂದರ್ಭದಲ್ಲಿ ಐಶ್ವರ್ಯಾ ಜತೆಗೆ ಪುತ್ರಿ ಆರಾಧ್ಯ ಕೂಡ ಹಾಜರಿದ್ದು, ಧ್ವಜವಂದನೆ ಸಲ್ಲಿಸಿರುವುದು. ಇನ್ನೂ ಈ ಫಿಲ್ಮ್ ಫೆಸ್ಟಿವಲ್​ನಲ್ಲಿ ‘ವೆಸ್ಟ್​ಪ್ಯಾಕ್‘ ಪ್ರಶಸ್ತಿಗೂ ಐಶ್ವರ್ಯಾ ರೈ ಪಾತ್ರ ರಾದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ನಾವು ಸೃಜನಶೀಲ ವ್ಯಕ್ತಿಗಳು ಪ್ರತಿ ಸಲವೂ ಇನ್ನೂ ಹೆಚ್ಚಿನದನ್ನು ಮಾಡಲು ಬಯಸುತ್ತೇವೆ. ಹಾಗಾಗಿ ನಾವು ಸಾಧನೆಯ ಹಾದಿಯಲ್ಲಿ ವಿರಮಿಸುವುದಿಲ್ಲ. ಆ ನಿಟ್ಟಿನಲ್ಲಿ ನಾನಿನ್ನೂ ತುಂಬ ದೂರ ಸಾಗಬೇಕಿದೆ. ಅದಕ್ಕಾಗಿ ಸಿಕ್ಕ ಈ ಗೌರವಕ್ಕೆ ಧನ್ಯ. ಎಲ್ಲಕ್ಕಿಂತ ಹೆಚ್ಚು ಇದಕ್ಕೆಲ್ಲ ಅವಕಾಶ ನೀಡಿದ ಚಿತ್ರರಂಗ ಹಾಗೂ ನನ್ನ ಅಭಿನಯವನ್ನು ಮೆಚ್ಚಿ ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ. ಅಂದಹಾಗೆ ಆ. 10ರಂದು ಆರಂಭವಾಗಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ಆ. 22ರ ವರೆಗೂ ನಡೆಯಲಿದೆ.
ಧ್ವಜಾರೋಹಣ ಮುಗಿಸಿ ಮಾತನಾಡಿದ ಐಶ್ವರ್ಯಾ, ’ಈ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆ ತಂದಿದೆ. ಆಯೋಜಕರಿಗೆ ನಾನು ತುಂಬು ಹೃದಯದ ಧನ್ಯವಾದ ತಿಳಿಸಲು ಬಯಸುತ್ತೇನೆನನ್ನ ಹಾಗೂ ನನ್ನ ಮಗಳ ಜೀವನದಲ್ಲಿ ಇದು ಮರೆಯಲಾಗದ ದಿನ’ ಎಂದು ಭಾವೋದ್ವೇಗದಿಂದ ಹೇಳಿಕೊಂಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top