fbpx
ಆರೋಗ್ಯ

ತಣ್ಣೀರಲ್ಲಿ ಸ್ನಾನ ಮಾಡೋದ್ರಿಂದಾಗೋ ಈ 7 ಪ್ರಯೋಜನಗಳ ಬಗ್ಗೆ ತಿಳ್ಕೊಳಿ.

ತಣ್ಣೀರಲ್ಲಿ ಸ್ನಾನ ಮಾಡೋದ್ರಿಂದಾಗೋ ಈ 7 ಪ್ರಯೋಜನಗಳ ಬಗ್ಗೆ ತಿಳ್ಕೊಳಿ.

 

 

 

ತುಂಬಾ ಜನ ತಣ್ಣೀರು ಸ್ನಾನ ಅಂದ್ರೆ ಮೂಗು ಮುರಿತಾರೆ. ತಣ್ಣೀರಲ್ಲಿ ಸ್ನಾನ ಮಾಡಕ್ಕೆ ಆಗಲ್ಲಪ್ಪ ತುಂಬಾ ಚಳಿ ಅಂತ ಮಾತಾಡ್ತಾರೆ. ಆದ್ರೆ ತಣ್ಣೀರಲ್ಲಿ ಸ್ನಾನ ಮಾಡೋದ್ರಿಂದ ಬಿಸಿ ನೀರಲ್ಲಿ ಸ್ನಾನ ಮಾಡೋದಕ್ಕಿಂತ ಹೆಚ್ಚು ಅರೋಗ್ಯ ಪ್ರಯೋಜನಗಳನ್ನ ನೀವು ಪಡ್ಕೋಬೋದು. ಅವ್ಯಾವು ಅಂತ ತಿಳ್ಕೊಬೇಕಂದ್ರೆ ಮುಂದೆ ಓದಿ.

 

 

ತಣ್ಣೀರಲ್ಲಿ ಸ್ನಾನ ಮಾಡೋದ್ರಿಂದಾಗೋ ಪ್ರಯೋಜನಗಳು:

1.ತೂಕ ಇಳಿಸ್ಕೊಬೋದು:

 

ತಣ್ಣೀರಲ್ಲಿ ಸ್ನಾನ ಮಾಡುದ್ರೆ ಬೊಜ್ಜು ಕರಗಿ ದೇಹದ ತೂಕ ಕಡಿಮೆ ಮಾಡ್ಕೊಬೋದು ಅಂತ ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

2.ಉಸಿರಾಟ ಕ್ರಿಯೆ ಚನ್ನಾಗಿ ನಡೆಯುತ್ತೆ:

 

 
ತಣ್ಣೀರನ್ನು ತಲೆಮೇಲಿಂದ ಹಾಕೊಂಡಾಗ ಉಸಿರನ್ನು ಜಾಸ್ತಿ ಯಾಗಿ ಎಳೆದುಕೊಳ್ಳೋದ್ರಿಂದ ನಮ್ಮ ಶ್ವಾಸಕೋಶಗಳು ಹಿಗ್ಗಾಗಿ ದೊಡ್ಡದಾಗುತ್ತವೆ.ಇದರಿಂದ ಚನ್ನಾಗಿ ಉಸಿರಾಡಲು ಸಾಧ್ಯವಾಗುತ್ತೆ.

3.ಸುಸ್ತನ್ನು ಕಡಿಮೆ ಮಾಡುತ್ತೆ:

 


ಬಿಸಿ ನೀರಿನಲ್ಲಿ ಸ್ನಾನ ಮಾಡೋದಕ್ಕಿಂತ ತಣ್ಣೀರು ಸ್ನಾನ ಮಾಡಿದಾಗ ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಆರಾಮ ಅನಿಸುತ್ತದೆ. ತುಂಬಾ ಸುಸ್ತಾದಾಗ ತಣ್ಣೀರು ಸ್ನಾನ ಮಾಡಿದರೆ ಸುಸ್ತು ಕಡಿಮೆಯಾಗುತ್ತೆ.

4.ಚರ್ಮದ ಅರೋಗ್ಯ:

 


ತಣ್ಣೀರರಲ್ಲಿ ಸ್ನಾನ ಮಾಡುದ್ರೆ ಚರ್ಮ ರೋಗಗಳು ಬರೋದಿಲ್ಲ.ಅರ್ಜಿ ಆಗಿರೋರು ಬಿಸಿ ನೀರಲ್ಲಿ ಸ್ನಾನ ಮಾಡುದ್ರೆ ಉರಿಯೊದ್ರಿಂದ ತಣ್ಣೀರಲ್ಲಿ ಸ್ನಾನ ಮಾಡುದ್ರೆ ಒಳ್ಳೇದು.

5.ದೇಹದ ದುರ್ವಾಸನೆಯನ್ನು ದೂರಮಾಡುತ್ತೆ:

 


ಬೆವರಿನ ವಾಸನೆನ ದೂರಮಾಡೋಕೆ ಕ್ರೀಮು, ಫರ್ಫೂಮ್ ಗಳನ್ನೂ ಬಳಸೋದಕ್ಕಿಂತ ತಣ್ಣೀರಲ್ಲಿ ಸ್ನಾನ ಮಾಡುದ್ರೆ ಯಾವದೇ ಅಡ್ಡ ಪರಿಣಾಮಗಳಾಗದೆ ದೇಹದ ದುರ್ಗಂಧ ದೂರವಾಗುತ್ತೆ.

6.ನೆಮ್ಮದಿಯ ನಿದ್ದೆ ಬರುತ್ತೆ:

 

 

ನಿದ್ದೆ ಇಲ್ದೆ ನಿದ್ರಾಹೀನತೆಯಿಂದ ಬಳಲುತ್ತಿರೋರು ತಣ್ಣೀರಲ್ಲಿ ಸ್ನಾನ ಮಾಡಿ. ತನ್ನೆರಲ್ಲಿ ಸ್ನಾನ ಮಾಡುದ್ರೆ ನಿದ್ರೆ ಸಕ್ಕಾತ್ತಾಗಿ ಬರುತ್ತೆ.

7.ಲೈಂಕಿಗ ಆಸಕ್ತಿಯನ್ನ ಕೆರಳಿಸುತ್ತೆ:


ತಣ್ಣೀರಲ್ಲಿ ಸ್ನಾನ ಮಾಡುದ್ರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಗಳ ಪ್ರಮಾಣ ಜಾಸ್ತಿಯಾಗಿ ಪುಸ್ರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಜಾಸ್ತಿ ಆಯ್ತದೆ. ಮತ್ತು ಲೈಂಗಿಕ ಆಸಕ್ತಿಯನ್ನು ಕೆಳಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top