fbpx
Awareness

ಮಕ್ಕಳನ್ನು ಸಾವಿಗೆ ತಳ್ಳುವ ಡೆಡ್ಲಿ ಗೇಮ್ ಗೆ ಭಾರತ ಸರಕಾರದಿಂದ ಖಡಕ್ ವಾರ್ನಿಂಗ್

ನವದೆಹಲಿ: ಮಕ್ಕಳನ್ನು ಸಾವಿಗೆ ಪ್ರಚೋದಿಸುವ ಡೆಡ್ಲಿ ಬ್ಯೂ ವೇಲ್ ಆನ್ಲೈನ್ ಗೇಮ್ ಅನ್ನು ಈ ಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕೆಂದು ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳುವ ಈ ಗೇಮ್ ಅನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕೆಂದು ಸೂಚಿಸಿದೆ.


ಡೆಡ್ಲಿ ಗೇಮ್ ಕುರಿತು ಸಾಮಾಜಿಕ ಜಾಲ ತಾಣಗಳು ಹಾಗೂ ಆಡಳಿತ ವಿಭಾಗ ಅರ್ಥಮಾಡಿಕೊಳ್ಳಬೇಕು. ಮಕ್ಕಳ ಸಾವಿಗೆ ಕಾರಣವಾಗುವ ಇಂತಹ ಆಟಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದು ಪತ್ರದಲ್ಲಿ ಹೇಳಲಾಗಿದೆ. ಮುಂಬೈ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಗೇಮ್ ಆಡಲು ಹೋಗಿ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು ಇತ್ತೀಚೆಗೆ ವರದಿಯಾಗಿತ್ತು. ಈ ಕಾರಣದಿಂದ ಗೂಗಲ್, ಫೇಸ್ಬುಕ್, ವಾಟ್ಸಪ್,ಇನ್ಸ್ಟಾಗ್ರಾಮ್, ಮೈಕ್ರೋಸಾಫ್ಟ್ ಮತ್ತು ಯಾಹೂ ಕಂಪನಿಗಳು ಈ ಕೂಡಲೇ ಮಕ್ಕಳ ಆತ್ಮಹತ್ಯೆಗೆ ಪ್ರಚೋದಿಸುವ ಈ ಡೆಡ್ಲಿ ಗೇಮ್ ಅನ್ನು Delete ಮಾಡಬೇಕೆಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಚ್ಚರಿಸಿದೆ.
ಭಾರತದಲ್ಲಿ ಈ ಡೆಡ್ಲಿ ಬ್ಲೂ ವೇಲ್ ಗೇಮ್ ಚಟದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಂದಲೇ ಈ ಗೇಮ್ ಅನ್ನು ತೆಗೆದುಹಾಕಬೇಕೆಂದು ಹೇಳಿದ್ದು, ಸಂಬಂಧಪಟ್ಟ ಕಂಪನಿಗಳಿಗೆ ಪತ್ರವನ್ನು ಬರೆದಿದೆ.
ಪತ್ರದಲ್ಲಿ ಸಾಮಾಜಿಕ ಜಾಲತಾಣಗಳು ಹಲವು ಸೂಚನೆಗಳನ್ನು ಪಾಲಿಸುವಂತೆ ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ನಿರ್ದೇಶನವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. 50 ದಿನಗಳ ಟಾರ್ಗೆಟ್ ನೀಡುವ ಡೆಟ್ಲಿ ಬ್ಲೂವೇಲ್ ಗೇಮ್ ಪ್ರತಿಯೊಂದು ದಿನವೂ ಒಂದೊಂದು ಟಾಸ್ಕ್ ನೀಡಲಿದೆ. ಹೀಗೆ ಟಾಸ್ಕ್ ಪೂರ್ತಿಗೊಳಿಸುತ್ತಿದ್ದಂತೆ ಮತ್ತೆ ಮತ್ತೆ ಗೇಮ್ ಆಡಲು ಪ್ರಚೋದಿಸುತ್ತದೆ. ಕೊನೆಗೇ 50ನೇ ದಿನದ ಆಟದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುತ್ತದೆ. ಅಲ್ಲಿಗೆ ಡೆಡ್ಲಿ ಗೇಮ್ ಜತೆ ಆಟಗಾರನ ಆಟ ಮುಗಿಯಲಿದೆ.
ಡೆಡ್ಲಿ ಗೇಮ್ ಕುರಿತು ಸಾಮಾಜಿಕ ಜಾಲ ತಾಣಗಳು ಹಾಗೂ ಆಡಳಿತ ವಿಭಾಗ ಅರ್ಥಮಾಡಿಕೊಳ್ಳಬೇಕು. ಮಕ್ಕಳ ಸಾವಿಗೆ ಕಾರಣವಾಗುವ ಇಂತಹ ಆಟಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದು ಪತ್ರದಲ್ಲಿ ಹೇಳಲಾಗಿದೆ. ಮುಂಬೈ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಗೇಮ್ ಆಡಲು ಹೋಗಿ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು ಇತ್ತೀಚೆಗೆ ವರದಿಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top