fbpx
ಆರೋಗ್ಯ

ಅಕ್ಕಿ ಗಂಜಿಯಿಂದ ನಿಮ್ಮ ಅರೋಗ್ಯ ಮತ್ತು ಸೌಂದರ್ಯ ಎರಡನ್ನೂ ಹೆಚ್ಚಿಸಿಕೊಳ್ಳಬಹುದು! ಹೇಗೆ ಅಂತೀರಾ ಇಲ್ಲಿ ಓದಿ!

ಅಕ್ಕಿ ಗಂಜಿಯಿಂದ ನಿಮ್ಮ ಅರೋಗ್ಯ ಮತ್ತು ಸೌಂದರ್ಯ ಎರಡನ್ನೂ ಹೆಚ್ಚಿಸಿಕೊಳ್ಳಬಹುದು! ಹೇಗೆ ಅಂತೀರಾ ಇಲ್ಲಿ ಓದಿ!

 

ನಮ್ಮ ದೇಹಕ್ಕೆ ಏನಾದರೂ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತೇವೆ.ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಅನೇಕ ರೂಪಾಯಿಗಳನ್ನು ವ್ಯವ ಮಾಡುತ್ತೇವೆ. ಆದರೆ ನಮ್ಮ ಸಾಂಪ್ರದಾಯ ಜೀವನದ ವಿಧಾನದಲ್ಲಿ ಅನೇಕ ಶಾರೀರಿಕ ಸಮಸ್ಯೆಗಳಿಗೆ ಸಿಂಪಲ್ ಪರಿಹಾರಗಳಿವೆ. ನಮ್ಮ ಆಹಾರದ ಪದಾರ್ಥಗಳಲ್ಲಿಯೇ ನಮ್ಮ ಆರೋಗ್ಯವು ಅಡಗಿರುತ್ತದೆ. ಅವುಗಳಲ್ಲಿ ಅಕ್ಕಿ ಗಂಜಿ ಕೂಡ ಒಂದು. ಅನ್ನ ಮಾಡುವಾಗ ಹೊರಕ್ಕೆ ಗಂಜಿಯಲ್ಲಿ ಕೆಲವು ರೋಗಗಳನ್ನು ಹೋಗಲಾಡಿಸುವ ಅನೇಕ ಪೋಷಕಾಂಶಗಳಿವೆ. ಗಂಜಿ ಇಂದ ಯಾವ್ಯಾವ ಪ್ರಯೋಜನಗಳನ್ನ ಪಡ್ಕೋಬೋದು ಎಂದು ಈ ಕೆಳಗೆ ಓದಿ ತಿಳ್ಕೊಳಿ.

 

 

1.ಗಂಜಿಯನ್ನು ಒಂದು ಹತ್ತಿ ಬಟ್ಟೆಯಲ್ಲಿ ಅದ್ದಿಕೊಂಡು ಮುಖದ ಮೊಡವೆಗಳ ಮೇಲೆ ಹತ್ತಿಯಿಂದ ನಿದಾನವಾಗಿ ಸ್ಪರ್ಶಿಸಿದರೆ ಮುಖದ ವಯಸ್ಸಿನ ಮೊಡವೆಗಳು ದೂರವಾಗುತ್ತವೆ.

2.ತಣ್ಣಗಾಗಿರುವ ಅಕ್ಕಿ ಗಂಜಿಯನ್ನು ತೆಗೆದುಕೊಂಡು ತುರಿಕೆಯಾಗುತ್ತಿರುವ ಜಾಗಕ್ಕೆ ಹಚ್ಚಿದರೆ ಚರ್ಮದ ತುರಿಕೆ ಆದಷ್ಟು ಬೇಗ ಶಮನವಾಗುತ್ತದೆ.

3.ತಣ್ಣಗಾಗಿರುವ ಗಂಜಿಯನ್ನು ಎರಡು ಚಮಚದಷ್ಟು ತೆಗೆದುಕೊಂಡು ಮುಖ ತೊಳೆಯುವ ನೀರಿನಲ್ಲಿ ಹಾಕಿ ಮುಖ ತೊಳೆದುಕೊಂಡರೆ ಮುಖ ಸೌಂದರ್ಯ ಹೆಚ್ಚುತ್ತದೆ ಮುಖದ ಜಿಡ್ಡು ಕೂಡ ದೂರವಾಗುತ್ತದೆ.

4.ಸ್ನಾನ ಮಾಡುವ ಅರ್ಧ ಗಂಟೆ ಮುಂಚಿತವಾಗಿ ತುಸು ಬೆಚ್ಚಗಿನ ಗಂಜಿಯನ್ನು ತಲೆಯ ಚರ್ಮ ಮತ್ತು ಕೂದಲಿಗೆ ಹಚ್ಚಿ ಸ್ನಾನ ಮಾಡಿ ಕೂದಲನ್ನು ತೊಳೆದುಕೊಂಡರೆ ತಲೆಯ ಹೊಟ್ಟು, ಡ್ಯಾಂಡ್ರಾಫ್, ಕಡಿಮೆ ಯಾಗುತ್ತದೆ. ಕೂದಲು ಆಕರ್ಷಕವಾಗುತ್ತದೆ.

5.ರಾತ್ರಿ ಮಲಗುವ ಮುನ್ನ ತುಸು ಬೆಚ್ಚಗಿನ ಗಂಜಿಯನ್ನು ಚರ್ಮಕ್ಕೆ ಹಚ್ಚಿಕೊಂಡು ಬೆಳಗ್ಗೆ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮವು ಬೇಗ ಸುಕ್ಕಾಗುವುದನ್ನು ತಪ್ಪಿಸುತ್ತದೆ.

6.ಬಿಸಿ ಗಂಜಿಯಲ್ಲಿ ಬಟ್ಟೆಗಳನ್ನು ನೆನೆಸಿ ನಂತರ ಒಗೆಯುವುದರಿಂದ ಬಟ್ಟೆಯಲ್ಲಿ ಅಂಟಿಕೊಂಡಿದ್ದ ಸೂಕ್ಮಾ ಕೀಟಾಣುಗಳು ನಾಶಗೊಳ್ಳುತ್ತವೆ.

7.ಗಂಜಿಯನ್ನು ಪ್ರತಿದಿನ ಸೇವಿಸುತ್ತಿದ್ದರೆ ಸುಸ್ತು ಕಡಿಮೆಯಾಗುತ್ತದೆ ಮತ್ತು ದೇಹದ ಉಷ್ತ್ನತೆಯ ಪ್ರಮಾಣವನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿಸುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top