ಇತರೆ

ಈ ಜಾಗದಲ್ಲಿ ಸೂರ್ಯ ಹುಟ್ಟೋದು ಇಲ್ಲ ಮುಳುಗೋದು ಇಲ್ಲ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ಜಾಗದಲ್ಲಿ ಸೂರ್ಯ ಹುಟ್ಟೋದು ಇಲ್ಲ ಮುಳುಗೋದು ಇಲ್ಲ.

 

 

ಇಲ್ಲಿ ಸೂರ್ಯ ಮುಳುಗೋದು ಇಲ್ಲ ಕತ್ತಲು ಆಗುವುದಿಲ್ಲ.
ದಿನದ 24 ಗಂಟೆಯೂ ಸಹ ಸೂರ್ಯನ ಬೆಳಕು ಇದ್ದ ಹಾಗೆ ಇರುತ್ತದೆ.ಸೂರ್ಯನು ಕೂಡ ಹಾಗೆ ಇರುತ್ತಾನೆ ಹುಟ್ಟುವುದು ಇಲ್ಲ ಮುಳುಗೋದು ಇಲ್ಲ.ಆದ್ದರಿಂದ ಕತ್ತಲು ಸಹ ಆಗುವುದಿಲ್ಲ.ದಿನದ 24 ಗಂಟೆ ಪೂರ್ತಿ ಬೆಳಕೋ ಬೆಳಕು.ನಮ್ಮ ಭಾರತದಲ್ಲಿಯೂ ಹಾಗೆ ಇದ್ದರೆ ಒಂಥರಾ ಖುಷಿ ,ಸಂಭ್ರಮ ಎರಡು ಇರುತ್ತದೆ.ಅಲ್ವಾ ?
ಅಂತಹ ಅಚ್ಚರಿಯನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಾ ಇರುತ್ತಾರೆ. ಹಾಗೆ ಅದನ್ನು ವೀಕ್ಷಿಸಿ ಸಂತಸ ಪಡುತ್ತಾರೆ.ಹೀಗೆ ನೀವು ಕೂಡ ನೋಡಿ ಆನಂದ ಪಡಬೇಕು ಅಂದರೆ ಈಗ ಇಲ್ಲಿ ಹೇಳುವ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿದರೆ , ನೋಡಿ, ಖುಷಿ ಪಟ್ಟು ಆನಂದಿಸಬಹುದು.

 

 

ಅಲ್ಲಿ ಮಾತ್ರ ಏಕೆ ಸೂರ್ಯ ಮುಳುಗೋದಿಲ್ಲ ?

ಅಂದರೆ ಉತ್ತರ ಮತ್ತು ದಕ್ಷಿಣ ದ್ರುವದಲ್ಲಿ ಭೂಮಿ 23 ಡಿಗ್ರಿ ಬಾಗಿರುತ್ತದೆ.ಹಾಗಾಗಿ ಸೂರ್ಯ ಅಲ್ಲಿ ಮುಳುಗೋದಿಲ್ಲ.ಅಂದರೆ ನಿಮಗೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರಲೇಬೇಕಾಲ್ಲ. ಸೂರ್ಯ ಮುಳುಗೋದು ಇಲ್ಲ,ಹುಟ್ಟೋದು ಇಲ್ಲ ಅದು ಇದ್ದಲ್ಲಿಯೇ ಇರುತ್ತೆ . ಆದರೆ ನಮ್ಮ ಭೂಮಿಯೇ (ನಾವು ಅಂದರೆ ಮನುಷ್ಯರು ಜೀವಿಸುವ ಗ್ರಹ ) ಸೂರ್ಯನ ಸುತ್ತ ಸದಾ ಕಾಲ ಸುತ್ತುತ್ತಿರುತ್ತದೆ. ಆದ್ದರಿಂದ ನಮಗೆ ಹಗಲು ರಾತ್ರಿ ಸಂಭವಿಸುತ್ತವೆ.ಸೂರ್ಯ ಮುಳುಗೋದು ,ಹುಟ್ಟೋದು ಅಂತ ಹೇಳ್ತೀವಿ.ಆದರೆ ಸೂರ್ಯ ಇದ್ದ ಕಡೆಯೇ ಇರುತ್ತದೆ ಭೂಮಿ ಮಾತ್ರ ತಿರುಗತ್ತೆ.

 

 

ನಾರ್ವೇ ದೇಶದಲ್ಲಿ ಮೇ ತಿಂಗಳಿನಿಂದ ಜುಲೈ ತಿಂಗಳಿನವರೆಗೆ ಅಂದರೆ ಸುಮಾರು 76 ದಿನಗಳ ಕಾಲ ಅಲ್ಲಿ ಸೂರ್ಯ ಮುಳುಗೋದಿಲ್ಲ.ಅಂದರೆ ಕತ್ತಲು ಸಹ ಆಗುವುದಿಲ್ಲ.ಜನ ಕಚೇರಿಯ ಕೆಲಸಗಳನ್ನು ಮುಗಿಸುತ್ತಾರೆ ಆದರೂ ಸಹ ಸೂರ್ಯ ಅಲ್ಲಿ ಇದ್ದ ಹಾಗೆ ಇರುತ್ತದೆ.ಮಂಜು ಗೆಡ್ಡೆಗಳು ಇರುವ ಪ್ರದೇಶ ಅಥವಾ ಸ್ಥಳ (Iceland) ಈ ಭೂಭಾಗದಲ್ಲೂ ಸಹ ಸೂರ್ಯ ಮುಳುಗೋದಿಲ್ಲ,ರಾತ್ರಿ ಹೊತ್ತಲ್ಲಿ ಸ್ವಲ್ಪ ಮಂದಗತಿಯ ಸೂರ್ಯ ಇರುತ್ತಾನೆ. ಆದ್ದರಿಂದ ಪ್ರವಾಸಿಗರು ತುಂಬಾ ಸಂತೋಷ ಪಡುತ್ತಾರೆ.ಮೇ 10 ನೇ ತಾರೀಖಿನಿಂದ ಜುಲೈ ತಿಂಗಳಿನವರೆಗೆ ಇಲ್ಲಿ ಸೂರ್ಯ ಒಂದು ಕ್ಷಣವೂ ಸಹ ಮುಳುಗಿ ಮರೆಯಾಗುವುದಿಲ್ಲ.ಕೆನಡಾದ “ಇನುವಿಕ್” ಮತ್ತು ಉತ್ತರ ಪಶ್ಚಿಮದಲ್ಲೂ ಸೂರ್ಯ 24 ಗಂಟೆಯೂ ಇರುತ್ತಾನೆ.ಬೇಸಿಗೆ ಕಾಲದಲ್ಲಿ ಸುಮಾರು 50 ದಿನ ಸೂರ್ಯನ ಬೆಳಕು ಇದ್ದ ಹಾಗೆ ಇರುತ್ತದೆ . ಒಂದು ಸ್ವಲ್ಪವೂ ಸಹ ಸೂರ್ಯ ಮರೆಯಾಗುವುದಿಲ್ಲ.

 

 

ಅಲಸ್ಕಾದಲ್ಲಿ ಚಳಿಗಾಲದಲ್ಲಿ ಸೂರ್ಯ ಮುಳುಗೋದಿಲ್ಲ ಹಾಗೆ ಪ್ರಕೃತಿ ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತಾನೆ ಸೂರ್ಯ.ಸ್ವೀಡನ್ ದೇಶದಲ್ಲಿ ಆಗಾಗ ಸ್ವಲ್ಪ ಹೊತ್ತು ಕತ್ತಲಾದಂತೆ ಇರುತ್ತದೆ.ಹಾಗೆ ಸೂರ್ಯ ಬರುತ್ತಾನೆ ನೋಡಲು ತುಂಬಾ ಚೆನ್ನಾಗಿರತ್ತೆ.ಅದಕ್ಕೆ ಸಮಯ ಸಿಕ್ಕಾಗ ನೀವು ಸಹ ಈ ಪ್ರದೇಶಗಳಿಗೆ ಭೇಟಿ ನೀಡಿ ಆನಂದಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top