fbpx
ಉಪಯುಕ್ತ ಮಾಹಿತಿ

ನಿಮ್ಮ ಮನೆಯಲ್ಲಿ ತಯಾರಿಸಿ ಈ ಹೊಸ ರುಚಿ ರೈಸ್ ಕೇಸರಿಬಾತ್

ರೈಸ್ ಕೇಸರಿಬಾತ್ ಬಹಳ ರುಚಿ!
ಅನ್ನದ ಕೇಸರಿಬಾತ್ ಬೇಕಾಗುವ ಸಾಮಗ್ರಿಗಳು:
*ಜೀರಾ ರೈಸ್ (ಅಥವಾ ಬಾಸ್ಮತಿ ರೈಸ್) – 250 ಗ್ರಾಂ
*ಕೇಸರಿ ದಳ – 3/4 ಗ್ರಾಂ
*ಸಕ್ಕರೆ – 375 ಗ್ರಾಂ
*ಶುದ್ಧ ತುಪ್ಪ – 250 ಗ್ರಾಂ (ಸ್ವಲ್ಪ ಕಡಿಮೆ ಬಳಸಿದರೂ ಆಗುತ್ತದೆ)
*ಲವಂಗ – 2
*ಹಾಲು 5 – 6 ಚಮಚ
*ನಿಂಬೆರಸ – 4 1/2 ಚಮಚ
*ಉಪ್ಪು – 1 ಚಮಚ
*ಗೋಡಂಬಿ – 10
*ಒಣದ್ರಾಕ್ಷಿ 25 – 30
*ಮಾಡುವ ವಿಧಾನ:
*ಉದುರಾಗಿ ಅನ್ನ ಮಾಡಿಕೊಳ್ಳಿ. ಅಕ್ಕಿ ಬೇಯಿಸುವಾಗ 1 ಚಮಚ ತುಪ್ಪ ಸೇರಿಸಿ ಬೇಯಿಸಿ. ಅನ್ನದ ಅಗುಳು ಚೆನ್ನಾಗಿ ಬೆಂದಿರಬೇಕು, ಆದರೆ ಅನ್ನ ಮುದ್ದೆಯಾಗಂತೆ ಎಚ್ಚರವಹಿಸಿ.
*ಬೇಯಿಸಿದ ಅನ್ನದಲ್ಲಿ ಹೆಚ್ಚಿನ ನೀರು ಏನಾದರೂ ಉಳಿದಿದ್ದರೆ ನೀರನ್ನು ತೆಗೆದುಬಿಡಿ. ಅನ್ನವನ್ನು ಒಂದು ಪ್ಲೇಟ್ ನಲ್ಲಿ ಹರವಿ 5 ನಿಮಿಷ ಆರಲು ಬಿಡಿ.
*ಹಾಲನ್ನು ಚೆನ್ನಾಗಿ ಕಾಯಿಸಿಕೊಂಡು ಅದರಲ್ಲಿ ಕೇಸರಿ ದಳಗಳನ್ನು ನೆನೆಸಿ 10 ನಿಮಿಷ ಇಡಿ.
ಲವಂಗವನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಗೋಡಂಬಿಯನ್ನು ಚೂರುಮಾಡಿಕೊಳ್ಳಿ.
*ನಿಂಬೆರಸ ಮತ್ತು ಉಪ್ಪನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ.
*ಒಂದು ಹರವಾದ ಪಾತ್ರೆಯಲ್ಲಿ ಅನ್ನ, ಸಕ್ಕರೆ, ತುಪ್ಪ ಇಷ್ಟನ್ನೂ ಹಾಕಿಕೊಂಡು ಸ್ವಲ್ಪ ದೊಡ್ಡ ಉರಿಯಲ್ಲಿ ತಳಹತ್ತದಂತೆ ಕೈಯಾಡಿಸುತ್ತಿರಿ.
*ಮಿಶ್ರಣ ಕುದಿಯತೊಡಗಿದಾಗ ಹಾಲಿನಲ್ಲಿ ನೆನೆಸಿದ ಕೇಸರಿ, ಉಪ್ಪು, ನಿಂಬೆರಸ ಸೇರಿಸಿ ಬಿಡದೆ ಕೈಯಾಡಿಸಿ.
*ಮಿಶ್ರಣ ತುಪ್ಪವನ್ನೆಲ್ಲ ಹೀರಿಕೊಳ್ಳತೊಡಗಿದಾಗ ಉರಿಯನ್ನು ಕಡಿಮೆಮಾಡಿ ಮೀಡಿಯಮ್ ಗೆ ತನ್ನಿ.
*ಈಗ ಕೇಸರಿ ಮಿಶ್ರಣಕ್ಕೆ ದ್ರಾಕ್ಷಿ, ಪುಡಿಮಾಡಿದ ಲವಂಗ ಸೇರಿಸಿ ಕೈಯಾಡಿಸಿ.
*ಮಿಶ್ರಣ ತುಪ್ಪವನ್ನು ಉಗುಳತೊಡಗಿದಾಗ ಉರಿ ಆಫ್ ಮಾಡಿ ಗೇರುಬೀಜದ ಚೂರುಗಳನ್ನು ಸೇರಿಸಿ ಕೈಯಾಡಿಸಿ, ಮುಚ್ಚಿಡಿ.
*10 ನಿಮಿಷ ಸೆಟ್ ಆಗಲು ಬಿಟ್ಟು, ಬಿಸಿ ಬಿಸಿ ಕೇಸರಿಯನ್ನು ಸವಿದುನೋಡಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top