fbpx
ಆರೋಗ್ಯ

ಪುರುಷರಲ್ಲಿ ವೀರ್ಯಾಣುಗಳನ್ನು ಹೆಚ್ಚಿಸಬಲ್ಲ ಹಳೆ ಕಾಲದ ಮದ್ದುಗಳು.

ಪುರುಷರಲ್ಲಿ ವೀರ್ಯಾಣುಗಳನ್ನು ವೃದ್ಧಿಸಬಲ್ಲ ಪ್ರಾಚೀನ ಕಾಲದ ಮದ್ದುಗಳು ..

ಪುರುಷರಲ್ಲಿ ವೀರ್ಯಾಣು ಕಡಿಮೆಯಾಗಲು ಬಹಳಷ್ಟು ಕಾರಣಗಳಿವೆ ಒತ್ತಡ, ಆಧುನಿಕ ಜೀವನ ಶೈಲಿ , ಮಾನಸಿಕ ತೊಂದರೆಗಳು ,ಆಹಾರ ಇತ್ಯಾದಿ.

1 ಮಿಲಿ ವಿರ್ಯದಲ್ಲಿ (Semen ) 15 ದಶಲಕ್ಷ ವೀರ್ಯಾಣು(Sperm )ಗಳಿಗಿಂತಲೂ ಕಡಿಮೆ ಇದ್ದರೆ ಒಲಿಗೊಝೋಸ್ಪೆರ್ಮಿಯಾ(oligozoospermia ) ಎಂದು ಕರೆಯುತ್ತಾರೆ.

 

ಕೆಲವು ಮನೆ ಮದ್ದುಗಳು ವೀರ್ಯಾಣುಗಳನ್ನು ವೃದ್ಧಿಸುತ್ತದೆ.

 

ಹೋಚು-ಎಕ್ಕಿ

ಇದನ್ನು ಮೊದಲ ಬಾರಿಗೆ ಜಪಾನ್ನಲ್ಲಿ ಪರಿಚಯಿಸಲಾಯಿತು
ಶುಚಿಯಾದ ಗಿನ್ಸೆಂಗ್, ಆಸ್ಪ್ಯಾರಗಸ್, ಏಂಜೆಲಿಕಾ ರೂಟ್, ಮತ್ತು ಇತರ ಹಲವು ಅಗತ್ಯ ಗಿಡಮೂಲಿಕೆಗಳಿಂದ ಮಾಡುವ ಪದಾರ್ಥವಿದು
1986 ರಲ್ಲಿ ಜಪಾನಿ ಸಂಶೋಧಕರ ತಂಡ 12 ವಾರಗಳವರೆಗೆ ಪ್ರತಿದಿನ ಮೂಲಿಕೆಗಳನ್ನು ಸೇವಿಸಿದವರು ವೀರ್ಯ ಚಲನಶೀಲತೆ, ವೀರ್ಯಾಣು ಸಾಂದ್ರತೆ ಮತ್ತು ಸುಧಾರಣೆ ಮಟ್ಟವನ್ನು ತಲುಪಿದ್ದಾರೆ
ಎಂದು ಹಲವಾರು ಅಧ್ಯಯನಗಳು ನಡೆಸಿ ಕಂಡುಹಿಡಿದಿದ್ದಾರೆ.

ಅಗಸೆಬೀಜದ ಎಣ್ಣೆ

ಒಮೆಗಾ 6, ಒಮೆಗಾ 9, ವಿಟಮಿನ್ ಬಿ, ಪ್ರೋಟೀನ್, ಪೊಟ್ಯಾಸಿಯಮ್, ಫೈಬರ್, ಸತು, ಲೆಸಿಥಿನ್ ಮತ್ತು ಮೆಗ್ನೀಸಿಯಮ್ನಂತಹ ಅನೇಕ ಪ್ರಯೋಜನಕಾರಿ ಸಕ್ರಿಯ ಸಂಯುಕ್ತಗಳನ್ನು ಒಳಗೊಂಡಿರುವ
ಈ ನೈಸರ್ಗಿಕ ಮೂಲಿಕೆ ವೀರ್ಯವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಪರಿಣಾಮಕಾರಿಯಾಗಿದೆ.
ದೇಹಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳನ್ನ ನೀಡಿ ವೀರ್ಯ ಚಲನಶೀಲತೆ ಮತ್ತು ಗುಣಮಟ್ಟ ಹೆಚ್ಚಿಸಿ ಉತ್ತಮ ವೀರ್ಯವನ್ನು ಉತ್ಪಾದಿಸಲು ಸಹಕಾರಿಯಾಗಿದೆ .

ಮಕಾ ಬೇರುಗಳು :

3 ಚಮಚ ಮಕಾ ಬೇರುಗಳನ್ನು ತೆಗೆದುಕೊಂಡು ಅದಕ್ಕೆ 2 ಗ್ಲಾಸ್ ನೀರು ಬೇರೆಸಿ ಶೇಖರಿಸಿ ಇಟ್ಟು ದಿನವು ಅರ್ಧ ಚಮಚ 2 ತಿಂಗಳು ಕುಡಿಯಬೇಕು.

ಅಶ್ವಗಂಧ:

ಅಶ್ವಗಂಧ ಪುಡಿ ಅರ್ಧ ಟೀ ಚಮಚ ಬೆಚ್ಚಗಿನ ಒಂದು ಲೋಟ ಹಾಲಿನಲ್ಲಿ ಬೇರೆಸಿ ದಿನಕ್ಕೆ ಎರಡು ಬಾರಿ 3 ತಿಂಗಳು ಕುಡಿದರೆ ಒಳ್ಳೆಯದು.

ಪಾನಸ್ ಗಿನ್ಸೆಂಗ್ :

ಇದು ಟೆಸ್ಟೋಸ್ಟೆರಾನ್ ಹೆಚ್ಚಿಸಲು ಮತ್ತು ವೀರ್ಯಾಣು ಸಂಖ್ಯೆಯನ್ನು ವೃದ್ಧಿಸಲು ಸಹಾಯಕ, ಪುರುಷರ ಫಲವತ್ತತೆ ಹೆಚ್ಚಿಸಲು ಸಹಾಯಕ.

ಬೆಳ್ಳುಳ್ಳಿ :

ಬೆಳ್ಳುಳ್ಳಿ ನೈಸರ್ಗಿಕ ಅಪ್ರೊಡಿಸಿಯಾಕ್ ಅಂಶವನ್ನು ಹೊಂದಿದ್ದು ವೀರ್ಯ ಉತ್ಪಾದನೆ ಹೆಚ್ಚಿಸುತ್ತದೆ , ಇದು ವೀರ್ಯಾಣುಗಳ ಚಲನೆ ಹೆಚ್ಚಿಸುತ್ತದೆ ಹಾಗು ಅಲ್ಲಿಸಿನ್ ಎಂಬ ಅಂಶವು ರಕ್ತಪರಿಚಲನೆ ಹೆಚ್ಚಿಸಲು ಸಹಾಯಕ , ಖನಿಜ ಸೆಲೆನಿಯಮ್ ಅಂಶವು ಸಹ ಪುರುಷರ ಆರೋಗ್ಯಕ್ಕೆ ಉತ್ತಮ.

ನಿಮ್ಮ ದಿನನಿತ್ಯದ ಆಹಾರದಲ್ಲಿ 1 ಅಥವಾ 2 ಜಜ್ಜಿದ ಬೆಳ್ಳುಳ್ಳಿ ಲವಂಗ ಸೇರಿಸಿ ತಿನ್ನಿ .

ಗೋಕ್ಷುರಾ:

ವೀರ್ಯಾಣು ಹೆಚ್ಚಿಸಲು ಮತ್ತು ಹಾರ್ಮೋನ್ ಮಟ್ಟವನ್ನು ವರ್ಧಿಸಲು , ವೀರ್ಯಾಣು ಗುಣಮಟ್ಟವನ್ನು ಸುಧಾರಿಸಲು ಸಹಕಾರಿ.

ದಿನವು 15 ನಿಮಿಷ ವ್ಯಾಯಾಮ ಮಾಡುವುದು ಸಹ ಆರೋಗ್ಯಕ್ಕೆ ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top