fbpx
ಸಾಧನೆ

17 ನೇ ವಯಸ್ಸಲ್ಲಿ ಕಾಲೇಜು ಬಿಟ್ಟು ಮಾಡಿದ ವ್ಯವಹಾರದಿಂದ ವಾರ್ಷಿಕವಾಗಿ 360 ಕೋಟಿ ಸಂಪಾದಿಸುತ್ತಿರುವ 22ರ ಯುವಕ.

17ನೇ ವಯಸ್ಸಲ್ಲಿ ಕಾಲೇಜು ಬಿಟ್ಟು ಮಾಡಿದ ವ್ಯವಹಾರದಿಂದ ವಾರ್ಷಿಕವಾಗಿ 360ಕೋಟಿ ಸಂಪಾದಿಸುತ್ತಿರುವ 22ರ ಯುವಕ.

 

 

ಜೀವನದಲ್ಲಿ ನಾವು ಯಶಸ್ಸಿನ ಶಿಖರವನ್ನೆರಬೇಕಾದರೆ ಕನಸುಗಳು ಮತ್ತು ಸಮರ್ಪಣೆ ಭಾವನೆಯನ್ನು ಸರಿಯಾದ ರೀತಿಯಲ್ಲಿ ಸಂಯೋಜನೆ ಮಾಡಬೇಕು. ಈ ಹೇಳಿಕೆಗೆ ಜೀವಂತ ಸಾಕ್ಷಿಗಳಲ್ಲಿ OYO ROOMS ಕಂಪನಿಯ ಸಂಸ್ಥಾಪಕ ಮಾಲೀಕ ಮತ್ತು ಸಿಇಒ ಆಗಿರುವ ರಿತೇಶ್ ಅಗರ್ವಾಲ್ ರವರು ಸಹ ಒಬ್ಬರಾಗಿದ್ದಾರೆ.ರಿತೇಶ್ ಈಗ ಯುವ ಉದ್ಯಮಿಗಳಿಗೆ ಮಾತ್ರವಲ್ಲದೆ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂಬ ಮನಸ್ಸಿರುವ ಯುವಕರಿಗೆ ಸ್ಪೂರ್ತಿಯಾಗಿದ್ದರೆ.

 

 

ರಿತೇಶ್ ರವರ ಜನನ ಒರಿಸ್ಸಾದ ಒಂದು ಮಾಧ್ಯಮ ವರ್ಗದ ಕುಟುಂಬದಲ್ಲಿ ಆಗುತ್ತದೆ.ಇವರಿಗೆ ಬಾಲ್ಯದಿಂದಲೂ ಸಾಫ್ಟವೆರ್ ಪ್ರೋಗ್ರಾಮಿಂಗ್ ನಲ್ಲಿ ಬಹಳ ಆಸಕ್ತಿ ಇತ್ತು.ಕಾಲೇಜನ್ನು ಬಿಟ್ಟ ರಿತೇಶ್ ಅವರು ಓರವಲ್ ಸ್ಟೈಸ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿದರು.ಓಯೋ ರೂಮ್ಸ್ ಆ್ಯಪ್‌ ಬಗ್ಗೆ ಬಹುತೇಕ ಜನರಿಗೆ ತಿಳಿದಿರುತ್ತದೆ. ಹೋಟೆಲ್ ಬುಕಿಂಗ್ ಮಾಡುವ ಓಯೋ ಆ್ಯಪ್‌’ನ್ನು ಅಭಿವೃದ್ಧಿಪಡಿಸಿದ ರಿತೇಶ್ ಅಗರ್ವಾಲ್ 17ನೇ ವಯಸ್ಸಿನಲ್ಲಿ ಕಾಲೇಜನ್ನು ಬಿಟ್ಟು ತನ್ನ ಕನಸನ್ನು ಬೆನ್ನಟ್ಟಿದವರು. ತನ್ನ ಎಂಟನೇ ವಯಸಿನಲ್ಲಿ ಸಾಫ್ಟ್ ವೆರ್ ಪ್ರೋಗ್ರಾಮ್ ಗಳ ಕೋಡ್ ಅನ್ನು ಬರೆಯಲು ಪ್ರಾರಂಭಿಸಿದರು.

 

 

ಇವರು ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರ ದೆಹಲಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೇರಿಕೊಂಡರು. ಅವರು 2-3 ದಿನಗಳ ಕಾಲ ಕಾಲೇಜಿಗೆ ತೆರಳಿದರು ಮತ್ತು ನಂತರ ಅವನು ಇಷ್ಟಪಡುವದನ್ನು ಪ್ರಯತ್ನಿಸಲು 2 ದಿನಗಳ ರಜಾದಿನವನ್ನು ತೆಗೆದುಕೊಳ್ಳಬೇಕು ಎಂದು ಅಂದುಕೊಂಡರು ಆದ್ರೆ ಅವರು ಅದೇ ಕೊನೆಯ ಬಾರಿ ಕಾಲೇಜಿಗೆ ಹೋಗಿದ್ದು.

ಇವರು ತಮ್ಮ 17ನೇ ವಯಸ್ಸಿನಲ್ಲಿ ಇವರಿದ್ದ ಮನೆಗೆ ಬಾಡಿಗೆ ಕಟ್ಟಲು ಸಾಧ್ಯವಿಲ್ಲದಾಗ ಇವರನ್ನು ಮನೆ ಮಾಲೀಕರು ಹೊರಹಾಕಿದ್ದರು. ಒಂದೊಮ್ಮೆ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಹೋದಾಗ ಅಲ್ಲಿ ಕೆಟ್ಟ ವ್ಯವಸ್ಥೆಗೆ ತುಂಬಾ ಹಣವನ್ನು ಬಿಲ್ ಮಾಡಿದ್ದರು ಮತ್ತೊಂದು ಬಾರಿ ತುಂಬಾ ಚನ್ನಾಗಿದ್ದ ವ್ಯವಸ್ಥೆಗೆ ಕಡಿಮೆ ಬಿಲ್ ಹಾಕಿದ್ದರು ಈ ಘಟನೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅತಿ ಕಡಿಮೆ ದರದಲ್ಲಿ ಹೋಟೆಲ್ ಸೌಲಭ್ಯವನ್ನು ಕಲ್ಪಿಸಿಕೊಡುವ ವ್ಯವಹಾರವನ್ನು ಸಾಲ ಮಾಡಿ ಪ್ರಾರಂಭಿಸಿದರು. ಇವರ ಕೆಲಸಕ್ಕೆ ಮೆಚ್ಚಿದ ಫೈನಾನ್ಸ್ ಕಂಪನಿಯೊಂದು ಇವರಿಗೆ 30 ಲಕ್ಷ ರುಪಾಯಿಗಳ ಸಾಲವನ್ನು ನೀಡುತ್ತದೆ. ಅದರಿಂದ ಓಯೋ ಕಂಪನಿಯನ್ನು ಮತ್ತಷ್ಟ್ಟು ಎತ್ತರಕ್ಕೆ ಬೆಳೆಸುತ್ತಾರೆ.

 

 

ಥೈಲ್ ಫೆಲೋಷಿಪ್ ಪಡೆದ ಮೊದಲ ಭಾರತೀಯ. ಇತ್ತಿಚೆಗೆ ಫೊರ್ಬ್ಸ್ ಬಿಡುಗಡೆಗೊಳಿಸಿದ ಮೂವತ್ತರ ಒಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಓಯೊ ರೂಮ್ಸ್ ಭಾರತದ ಅತಿದೊಡ್ಡ ಹೊಟೆಲ್ ವಸತಿ ಜಾಲವಾಗಿದ್ದು, 160 ನಗರಗಳಲ್ಲಿ ತನ್ನ ಸೇವೆಯನ್ನು ಒದಗಿಸುತತ್ಇದೆ. 40,000 ಸಾವಿರ ರೂಮ್ ಗಳನ್ನು ಇದರ ಅಡಿಯಲ್ಲಿ ಕಾರ್ಯನಿರತವಾಗಿವೆ. ಹೊಟೆಲ್ ಮತ್ತು ಲಾಡ್ಜ್ ಗಳಲ್ಲಿ ಇರುವ ಸಮಸ್ಯೆ, ಸರಿಯಿರದ ಸೌಲಭ್ಯ ಪೂರೈಕೆ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲು ಓಯೊ ರೂಮ್ಸ್ ಪ್ರಾರಂಭಿಸಲಾಗಿದೆ ಎಂದು ರಿತೇಶ್ ಹೇಳುತ್ತಾರೆ. ಈಗ ಇವರ ಕಂಪನಿ 360 ಕೋಟಿ ವಹಿವಾಟು ಮಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top