fbpx
ದೇವರು

ಶ್ರೀ ಕೃಷ್ಣ ಮತ್ತು ದೇವಿ ರಾಧೆಯ ಪ್ರೀತಿ-ಪ್ರೇಮದ ಕಥೆ.

 ಶ್ರೀ ಕೃಷ್ಣ  ಮತ್ತು ದೇವಿ ರಾಧೆಯ ಪ್ರೀತಿ-ಪ್ರೇಮದ ಕಥೆ.

 

 

ಶ್ರೀ ಕೃಷ್ಣ ಮತ್ತು ದೇವಿ ರಾದೆಯ ಪರಸ್ಪರ ಪ್ರೀತಿಯು ರಾದೆ ಸಾವನ್ನಪ್ಪುವ ಮೂಲಕ ಇವರಿಬ್ಬರ ಪ್ರೀತಿಯೂ ಕೊನೆಯಾಯಿತು.ಇವರಿಬ್ಬರ ಪ್ರೀತಿಯ ಮನ ಮಿಡಿಯುವ ಕರುಣಾಜನಕ ಕಥೆ .ಕೃಷ್ಣ ಮತ್ತು ರಾಧೆ ಇಬ್ಬರು ಶಾಶ್ವತ ಸಂಗಾತಿಗಳು.ಹಿಂದೂ ಗ್ರಂಥಗಳ ಪ್ರಕಾರ ಇವರಿಬ್ಬರ ಪರಿಶುದ್ಧವಾದ ಪ್ರೀತಿಯು ಯಾವುದೇ ಶರತ್ತುಗಳಿಲ್ಲದ,ಕೊನೆಯಿಲ್ಲದ ಪ್ರೀತಿಯನ್ನು ನಿರೂಪಿಸುತ್ತದೆ. ನಮಗೆಲ್ಲರಿಗೂ ಕೃಷ್ಣ ಮತ್ತು ರಾಧೆಯ ಜನನದ ಕಥೆ ಬಗ್ಗೆ ತಿಳಿದಿದೆ.ಅವರು ಸ್ನೇಹಿತರಾದ ಕಥೆ.ಅವರು ಒಬ್ಬರನ್ನು ಇನ್ನೊಬ್ಬರು ಅನುಸರಿಸಿ ಹೊಂದಿಕೊಂಡು ಬಾಳುವುದು ಮತ್ತು ಅವರ ಕೊನೆಯಿಲ್ಲದ ಪ್ರೀತಿ .ಆದರೆ ಆಶ್ಚರ್ಯವೇನೆಂದರೆ ಇವರಿಬ್ಬರ ಪ್ರೀತಿ ಕೊನೆಯಾಗಿದ್ದು ರಾದೆಯ ಸಾವಿನಲ್ಲಿ.ಹಾಗೆ ರಾಧೆಯ ಆತ್ಮ ಕೃಷ್ಣನನ್ನು ಬಿಟ್ಟು ಈ ಭೂಮಿಯನ್ನು ಬಿಟ್ಟು ದೂರವಾಯಿತು.

 

 

ಕೃಷ್ಣನು ವೃಂದಾವನಕ್ಕೆ ಹೊರಡುವ ಸಮಯವಾದಾಗ. ಮಥುರಾ ನಗರಕ್ಕೆ ಬಂದು ಅವನ ಇಚ್ಛೆಯಂತೆ ದೈವೀಕ ಧರ್ಮ ಪ್ರಚಾರದ ಗುರಿಯನ್ನು ಇಟ್ಟುಕೊಂಡು ಮಥುರಾ ನಗರಕ್ಕೆ ಬಂದು ಕೃಷ್ಣನು ಇಲ್ಲಿಯೇ ವೃಂದಾವನದಲ್ಲಿ ನೆಲೆಸಿದನು .ಆಗ ರಾಧೆಯ ಜೀವನ ಒಂದು ವಿಬ್ಬಿನ್ನ ತಿರುವನ್ನು ಪಡೆಯಿತು.ಅವಳು ಒಬ್ಬ ಯಾದವ ಕುಟುಂಬದ ವ್ಯಕ್ತಿಯನ್ನು ಮದುವೆಯಾಗಿದ್ದಳು.ಹಾಗೆ ವರ್ಷಗಳು ಉರುಳಿದಂತೆ,ರಾಧೆ ತನ್ನ ಮನೆಯ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾದಳು. ಆದರೆ ಇದೆಲ್ಲಾ ಆದ ನಂತರ ಅವಳ ಆತ್ಮ ಕೃಷ್ಣನ ಭಕ್ತಿಯಿಂದ ತುಂಬಿಹೋಗಿತ್ತು.

 

 

1.ಕೃಷ್ಣನಿಗೋಸ್ಕರ ರಾಧೆಯು ಕೊರಗಿದಳು.
ರಾಧೆಯು ತನ್ನ ಜೀವನದ ಕೊನೆಯ ಹಂತದಲ್ಲಿ ಅವಳು ಅವಳ ಗಂಡನ ಮನೆಯನ್ನು ಬಿಟ್ಟು ಕೃಷ್ಣನನ್ನು ಭೇಟಿಯಾಗಲು ದ್ವಾರಕೆಗೆ ಬಂದಳು.ಇಬ್ಬರು ಭೇಟಿ ಮಾಡಿದ ನಂತರ ಅವರಿಬ್ಬರ ಸಂಭಂದದ ಬಗ್ಗೆ ಹೇಳಲು ಪದಗಳೇ ಸಾಕಾಗುವುದಿಲ್ಲ.ಅವರು ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಇಬ್ಬರು ಜೊತೆಯಲ್ಲಿದ್ದರು.ಕೃಷ್ಣನು ಅವಳ ಅರಮನೆಯಲ್ಲಿ ಕೃಷ್ಣನ ಸೇವಕಿಯಾಗಿ ಸೇರಿಕೊಂಡಳು. ಯಾರು ಸಹ ಅವಳು ಯಾರು ಎಂಬ ಗುರುತನ್ನು ಕಂಡು ಹಿಡಿಯಲಿಲ್ಲ ಹಾಗೆ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ.

 

 

2.ರಾಧೆ ಕೃಷ್ಣನ ಜೊತೆ ಆಧ್ಯಾತ್ಮಿಕವಾಗಿ ಹತ್ತಿರವಾಗಬೇಕೆಂದು ಬಯಸಿದಳು.
ಇಷ್ಟೆಲ್ಲಾ ಆದರೂ ಸಹ ರಾಧೆಗೆ ಬೇಗನೆ ಅರಿವಾಯಿತು ದೈಹಿಕವಾಗಿ ಕೃಷ್ಣನಿಗೆ ಹತ್ತಿರವಾಗುವುದು ಏನೇನು ಅಲ್ಲ ಆಧ್ಯಾತ್ಮಿಕವಾಗಿ ಹತ್ತಿರವಾಗಬೇಕು ಎಂದು ಬಯಸಿದಳು. ಆದ್ದರಿಂದ ಅವಳು ಅರಮನೆಯನ್ನು ಬಿಟ್ಟು ಯಾರಿಗೂ ತಿಳಿಯದಂತೆ ದೂರ ಹೊರಟು ಹೋದಳು ಕೃಷ್ಣನಿಗೂ ಕೂಡ ಹೇಳದೇ ಹೊರಟು ಹೋದಳು ಆದರೆ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಪರಮಾತ್ಮ ಅವಳು ಎಲ್ಲೇ ಹೋದರು ಅವಳನ್ನು ಹಿಂಬಾಲಿಸುತ್ತಾನೆ ಆದರೆ ಅದು ರಾಧೆಗೆ ತಿಳಿಯುವುದಿಲ್ಲ.

 

 

3.ರಾಧೆಯು ತನ್ನ ಕೊನೆ ಆಸೆಯನ್ನು ಕೃಷ್ಣನ ಬಳಿ ಹೇಳಿಕೊಂಡಳು.
ರಾಧೆಯ ಜೀವನದ ಅಂತಿಮ ಕ್ಷಣಗಳಲ್ಲಿ ಅವಳು ತುಂಬಾ ನಿಶ್ಶಕ್ತಳಾಗಿದ್ದಳು.ಇನ್ನೇನು ಅವಳ ಆತ್ಮ ಅವಳ ದೇಹವನ್ನು ಬಿಟ್ಟು ಹೋಗುವದರಲ್ಲಿತ್ತು. ಆಗ ಶ್ರೀ ಕೃಷ್ಣನು ಅವಳ ಮುಂದೆ ಪ್ರತ್ಯಕ್ಷವಾಗಿ ಅವಳ ಕೊನೆಯ ಬಯಕೆ (ಕೊನೆಯ ಆಸೆ) ಏನೆಂದು ಕೇಳಿದಾಗ . ರಾಧೆ ಹೇಳಿದಳು “ಕೃಷ್ಣನನ್ನು ಬಿಟ್ಟು ಬೇರೆ ನನಗೆ ಏನು ಬೇಡ ಎಂದಳು.ಕೊನೆಗೆ ಕೃಷ್ಣನನ್ನು ಕೇಳಿದಳು ಕೃಷ್ಣನ ಕೊಳಲಿನಿಂದ ಒಂದು ಬಾರಿ ಕೊಳಲನ್ನು ನುಡಿಸಬೇಕಾಗಿ ಕೇಳಿಕೊಂಡಳು.

 

 

4.ಕೃಷ್ಣನು ಕೊಳಲನ್ನು ಮುರಿದು ಗಿಡಗಳ ಪೊದೆಗಳಲ್ಲಿ ಎಸೆದುಬಿಟ್ಟನು.
ಕೃಷ್ಣನು ಅತ್ಯಂತ ಮಧುರವಾದ ರಾಗವನ್ನು ನುಡಿಸಿದನು.ಇಂದೆಂದೂ ಅವನು ನುಡಿಸಿರದಂತಹ ಮಧುರವಾದ,ಇಂಪಾದ ದ್ವನಿಯನ್ನು ನುಡಿಸಿದನು.ಅದನ್ನು ಕೇಳುತ್ತಾ ರಾಧೆಯು ಆಧ್ಯಾತ್ಮಿಕವಾಗಿ ಕೃಷ್ಣನಲ್ಲಿಯೇ ಮುಳುಗಿಹೋದಳು.ಹಾಗೆ ಕೃಷ್ಣನ ತೊಡೆಯ ಮೇಲೆ ಮಲಗಿ ಪ್ರಾಣ ಬಿಟ್ಟಳು.ನಂತರ ಕೃಷ್ಣ ನಿರ್ಧರಿಸಿದ ಇದೇ ಕೊನೆ ಇನ್ನೆಂದು ನಾನು ಈ ಕೊಳಲನ್ನು ನುಡಿಸುವುದಿಲ್ಲವೆಂದು.ಹೀಗೆ ಕೃಷ್ಣನು ಯೋಚಿಸಿ ಕೊಳಲನ್ನು ಮುರಿದು ಹಾಕಿ ತುಂಡರಿಸಿ ಗಿಡಗಳ ಪೊದೆಯೊಳಗೆ ಎಸೆದು ಬಿಟ್ಟನು.
ಹೀಗೆ ರಾಧ ಕೃಷ್ಣನ ಪ್ರೀತಿಯು ಕೊನೆಯಾಗುವ ಮೂಲಕ ಕೃಷ್ಣನ ಕೊಳಲನ್ನು ಉದುವುದು ಕೊನೆಯಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top