fbpx
ದೇವರು

ಆಗಸ್ಟ್ 18 ಶ್ರಾವಣ ಶುಕ್ರವಾರ ಅನಂತ ಏಕಾದಶಿಯ ಆಚರಣೆಯ ಪ್ರಾಮುಖ್ಯತೆ ಏನು ಗೊತ್ತಾ?

ಆಗಸ್ಟ್ 18 ಶ್ರಾವಣ ಶುಕ್ರವಾರ ಅನಂತ ಏಕಾದಶಿಯ ಆಚರಣೆಯ ಪ್ರಾಮುಖ್ಯತೆ ಏನು ಗೊತ್ತಾ?.

 

 

ಆಗಸ್ಟ್ 18 ನೇ ತಾರೀಖು ಶ್ರಾವಣ ಮಾಸದ,ಕೃಷ್ಣ ಪಕ್ಷ,ಶುಕ್ರವಾರ, ಅರಿದ್ರ ನಕ್ಷತ್ರದಲ್ಲಿ ಅನಂತ ಏಕಾದಶಿ ವ್ರತ ಬಂದಿದ್ದು. ಈ ಏಕಾದಶಿಯನ್ನು ಅಜ ಏಕಾದಶಿ ,ಅನಂತ ಏಕಾದಶಿ ಮತ್ತು ಜಯ ಏಕಾದಶಿ ಎಂದು ಸಹ ಕರೆಯಲಾಗುತ್ತದೆ.

ಧರ್ಮ ಗ್ರಂಥಗಳ ಅನುಸಾರ ಸ್ವಯಂ ಶ್ರೀ ಕೃಷ್ಣನು ಧರ್ಮರಾಜನು ಈ ಏಕಾದಶಿಯನ್ನು ಹೇಗೆ ಆಚರಿಸಬೇಕು ಏನು ಫಲ ಎಂದು ಹೇಳಿದ್ದಾನೆ. ಈ ಮಹತ್ವಪೂರ್ಣವಾದ ಏಕಾದಶಿಯ ದಿನವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿದರೆ ಮನುಷ್ಯರು ಪೂರ್ವ ಜನ್ಮದಲ್ಲಿ ಮತ್ತು ಜನ್ಮ ಜನ್ಮಾಂತರದಲ್ಲಿ ಮಾಡಿದ ಪಾಪ ಕರ್ಮಗಳಿಂದ ಮುಕ್ತಿಯನ್ನು ಹೊಂದುತ್ತಾನೆ ಮತ್ತು ಈ ಜನ್ಮದಲ್ಲಿ ಎಲ್ಲ ಸುಖ,ಸಂತೋಷವನ್ನು ಪಡೆಯುತ್ತಾನೆ ಎಂದು ಗ್ರಂಥಗಳು ಹೇಳುತ್ತವೆ.
17 ನೆ ತಾರೀಖು ರಾತ್ರಿಯಿಂದಲೇ ಈ ವ್ರತವನ್ನು ಆಚರಿಸುವ ದಂಪತಿಗಳು ಬ್ರಹ್ಮಚಾರಿ ವ್ರತವನ್ನು ಪಾಲಿಸಬೇಕು.

 

 

ನಂತರ ಬೆಳಗ್ಗೆ ಎದ್ದು ನಿತ್ಯ ಕರ್ಮ ಸ್ನಾನಗಳನ್ನು ಮುಗಿಸಿ ವ್ರತ,ಪೂಜೆಯನ್ನು ಪ್ರಾರಂಭಿಸಿ. ಭಗವಂತನಾದ ಶ್ರೀ ವಿಷ್ಣುವಿನ ಮುಂದೆ ವ್ರತ ಸಂಕಲ್ಪ ಮಾಡಿ ಉಪವಾಸವನ್ನು ಪ್ರಾರಂಭಿಸಬೇಕು.ಪೂಜೆಯನ್ನು ಭಕ್ತಿ ,ಶ್ರದ್ಧೆಯಿಂದ ಮಾಡಬೇಕು.ಶ್ರೀ ವಿಷ್ಣುವನ್ನು ಪೂಜೆಯ ಎಲ್ಲ ವಿಧಿ ವಿಧಾನಗಳನ್ನು ಅನುಸರಿಸಿ ಶೋಡೋಪಚಾರ, ಪೂಜೆಯನ್ನು ಮಾಡಬೇಕು.

 

ಶ್ರೀ ವಿಷ್ಣುವಿಗೆ ಶುದ್ಧ ಜಲದಿಂದ ಅಭಿಷೇಕ ಮಾಡಿ.ನಂತರ ಪಂಚಾಮೃತ ದಿಂದ ಅಭಿಷೇಕ ಮಾಡಬೇಕು.ಅಭಿಷೇಕ ಮಾಡಿದ ನಂತರ ಪಂಚಾಮೃತವನ್ನು ಮನೆಯವರೆಲ್ಲರೂ ಪ್ರಸಾಧವಾಗಿ ಸ್ವೀಕರಿಸಬೇಕು. ಶ್ರೀ ವಿಷ್ಣುವನ್ನು ಗಂಧ,ಪುಷ್ಪ,ಧೂಪ,ದೀಪ,ನೈವೇದ್ಯ ಎಲ್ಲವನ್ನು ಅರ್ಪಿಸಿ ಪೂಜೆ ಸಲ್ಲಿಸಬೇಕು. ವಿಶೇಷವಾಗಿ ಹಳದಿ ಬಣ್ಣದ ಪುಷ್ಪವನ್ನು ಅರ್ಪಿಸಬೇಕು.

ನೈವೇದ್ಯವಾಗಿ ಖೀರನ್ನು ಅರ್ಪಿಸಬೇಕು ಖೀರಿನಲ್ಲಿ ತುಳಸಿ ದಳವನ್ನು ಹಾಕಿ ಸಮರ್ಪಿಸಿದರೆ ಅದು ವಿಷ್ಣುವಿಗೆ ಸಂಪೂರ್ಣ ಪ್ರಸಾಧವಾಗುತ್ತದೆ.ಪೂಜೆ ಮುಗಿದ ನಂತರ ಶ್ರೀ ವಿಷ್ಣು ಸಹಸ್ರನಾಮ ಪಠಿಸಬೇಕು,ವಿಷ್ಣುವಿನ ಕಥೆಯನ್ನು ಶ್ರವಣ ಮಾಡಬೇಕು, ವಿಷ್ಣುವಿನ ಹೆಸರನ್ನು ಜಪಿಸಬೇಕು.ಪೂರ್ತಿ ಉಪವಾಸ ಮಾಡಲು ಆಗದೆ ಹೋದರೆ ಹಣ್ಣು ಹಂಪಲುಗಳನ್ನು,ನೀರನ್ನು ಸೇವಿಸಬಹುದು.ಆದರೆ ಯಾವುದೇ ಕಾರಣಕ್ಕೂ ಅನ್ನವನ್ನು ಸೇವಿಸಬಾರದು.ಹೀಗೆ ಭಕ್ತಿಯಿಂದ ಪೂಜೆ ಸಲ್ಲಿಸಿ,ಉಪವಾಸ ಮಾಡಿದರೆ ನೀವು ಮಾಡಿದ ಎಲ್ಲ ಪಾಪ ಕರ್ಮಗಳಿಂದ ಮುಕ್ತಿ ಹೊಂದಬಹುದು ಮತ್ತು ಸಾವನ್ನಪ್ಪಿದ ನಂತರ ಸ್ವರ್ಗದ ಬಾಗಿಲು ತೆಗೆದಿರುತ್ತದೆ. ಈ ಏಕಾದಶಿಯ ವ್ರತವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿದರೆ ಅಶ್ವಮೇಧ ಯಾಗ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ.ನಿಮ್ಮ ಜನ್ಮ ಜನ್ಮದ ಪಾಪಗಳು ಕಳೆದು ಎಲ್ಲ ಆಸೆಗಳು ಈಡೇರುತ್ತವೆ.

 

 

ಮಾರನೆಯ ದಿನ ಅಂದರೆ ಶನಿವಾರ ಬ್ರಾಹ್ಮಣರನ್ನು ಮನೆಗೆ ಕರೆದು ಊಟ ಉಪಚಾರ ಅನ್ನದಾನ ಮಾಡಿ.ನಿಮ್ಮ ಅಗತ್ಯಕ್ಕೆ ತಕ್ಕಂತೆ ದಾನಾದಿಗಳನ್ನು ಮಾಡಬಹುದು.ಬ್ರಾಹ್ಮಣರು ಸಿಗದೇ ಹೋದರೆ ಕನ್ಯೆಯನ್ನು ಮನೆಗೆ ಕರೆದು ಸತ್ಕರಿಸಿ,ದಾನವನ್ನು ಮಾಡಬೇಕು.

 

 

ರಾಜ ಹರಿಶ್ಚಂದ್ರ ಕೂಡ ತನ್ನ ಪೂರ್ವ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಅವನನ್ನು ಈ ಜನ್ಮದಲ್ಲಿ ಕಷ್ಟಕ್ಕೆ ಸಿಲುಕಿಸಿದವು.ಹರಿಶ್ಚಂದ್ರನು ಕೂಡ ಈ ಅಜ ಏಕಾದಶಿಯ ವ್ರತವನ್ನು ಭಕ್ತಿ,ಶ್ರದ್ಧೆಯಿಂದ ಆಚರಿಸಿದ್ದರಿಂದಲೇ, ಅವನು ತನ್ನ ಸತ್ಯ ನಿಷ್ಠೆಯನ್ನು ಪಾಲಿಸಿ ಕೊನೆಗೆ ತನ್ನ ಹೆಂಡತಿ ಮಕ್ಕಳನ್ನು ಮತ್ತು ರಾಜ್ಯವನ್ನು ಮರಳಿ ಪಡೆದನು.ಎಲ್ಲ ಸುಖ ಸಂತೋಷವು ಮತ್ತೆ ಮರಳಿ ದೊರಕಿ ಸಂತೋಷದಿಂದ ಜೀವನ ನೆಡೆಸಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top