fbpx
ಆರೋಗ್ಯ

ಆಗಸ್ಟ್ 18 ಅನಂತ ಏಕಾದಶಿಯ ದಿನ ಈ ನಿಯಮಗಳನ್ನು ಪಾಲಿಸುದ್ರೆ ಜೀವನದಲ್ಲಿ ಸುಖ,ಶಾಂತಿ,ನೆಮ್ಮದಿ ನೆಲೆಸುತ್ತದೆ.

ಆಗಸ್ಟ್ 18 ಅನಂತ ಏಕಾದಶಿಯ ದಿನ ಈ ನಿಯಮಗಳನ್ನು ಪಾಲಿಸುದ್ರೆ ಜೀವನದಲ್ಲಿ  ಸುಖ,ಶಾಂತಿ,ನೆಮ್ಮದಿ ನೆಲೆಸುತ್ತದೆ..

 

 

ಆಗಸ್ಟ್ 18 ಶ್ರಾವಣ ಶುಕ್ರವಾರ ಅನಂತ ಏಕಾದಶಿಯ ವ್ರತವನ್ನು ಆಚರಿಸಿ ಭಕ್ತಿ,ಶ್ರದ್ಧೆಯಿಂದ ವ್ರತ,ಪೂಜೆ ಸಲ್ಲಿಸಿದರೆ ಎಲ್ಲ ಪಾಪ ಕರ್ಮಗಳಿಂದ ಮುಕ್ತಿಯನ್ನು ಗಳಿಸಿ ಸುಖ,ಸಂತೋಷವನ್ನು ಹೊಂದಬಹುದು ಎಂದು ಧರ್ಮ ಗ್ರಂಥಗಳು ಹೇಳುತ್ತವೆ.

ಏಕಾದಶಿ ವ್ರತವನ್ನು ಆಚರಿಸಿ ಭಗವಂತನಾದ ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗುವುದರ ಜೊತೆಗೆ ಲಕ್ಷ್ಮೀಯ ಅನುಗ್ರಹ ಮತ್ತು ಆಶೀರ್ವಾದವೂ ಸಹ ದೊರೆಯಬೇಕು ಎಂದರೆ ಇಲ್ಲಿ ಹೇಳುವ ಉಪಾಯಗಳನ್ನು ಪಾಲಿಸಿ.ಸುಖ ಸಮೃದ್ಧಿ ಅಷ್ಟ ಐಶ್ವರ್ಯವನ್ನು ಸಹ ಜೀವನದಲ್ಲಿ ಗಳಿಸಬಹುದು.

 

 

1.ಅಜ ಏಕಾದಶಿಯ ದಿನದಂದು ಭಗವಂತನಾದ ಶ್ರೀ ವಿಷ್ಣುವನ್ನು ಪೂಜಿಸಲಾಗುತ್ತದೆ. ಅರಳಿ ಮರದಲ್ಲಿ ಸಾಕ್ಷಾತ್ ಶ್ರೀ ವಿಷ್ಣುವೇ ವಾಸ ಮಾಡುತ್ತೇನೆ.ಆದ್ದರಿಂದ ಏಕಾದಶಿಯ ದಿನ ಸಂಜೆಯ ಸಮಯದಲ್ಲಿ ಅರಳಿ ಮರದ ಬಳಿ ಹೋಗಿ ನೀರನ್ನು ಅರ್ಪಿಸಿ ,ಹಳದಿ ಪುಷ್ಪಗಳನ್ನು ಅರ್ಪಿಸಿ ,ಪೂಜೆ ಸಲ್ಲಿಸಿ,ಒಂದು ತುಪ್ಪದ ದೀಪವನ್ನು ಹಚ್ಚಿ ನಂತರ 11 ಬಾರಿ ವಿಷ್ಣುವನ್ನು ಸ್ಮರಿಸಿ ಪ್ರದಕ್ಷಿಣೆಯನ್ನು ಹಾಕುವುದರಿಂದ ವಿಷ್ಣುವನ್ನು ಪ್ರಸನ್ನನಾಗುತ್ತಾನೆ.

 

 

2.ಶುದ್ಧ ತಾಜಾ ಹಸುವಿನ ಹಾಲಿಗೆ ಕೇಸರಿಯನ್ನು ಮಿಶ್ರಣ ಮಾಡಿ,ಶ್ರೀ ವಿಷ್ಣುವಿಗೆ ಅಭಿಷೇಕ ಮಾಡಬೇಕು.ಇದು ನಿಮ್ಮ ಮನೆಯಲ್ಲಿ ಸುಖ,ಸಮೃದ್ಧಿ ಸಂತೋಷವನ್ನು ವೃದ್ಧಿಸುತ್ತದೆ.

 

 

3.ಏಕಾದಶಿಯ ದಿನ ಸಾಯಂಕಾಲದ ಸಮಯದಲ್ಲಿ ತುಳಸಿ ಗಿಡದ ಮುಂದೆ ಶುದ್ಧ ಹಸುವಿನ ತುಪ್ಪವನ್ನು ಬಳಸಿ ಒಂದು ತುಪ್ಪದ ದೀಪವನ್ನು ಹಚ್ಚಬೇಕು.ಹಾಗೆ ಪೂಜೆ ಮತ್ತು ಪ್ರಾರ್ಥನೆಯನ್ನು ಸಲ್ಲಿಸಿ 108 ಪ್ರದಕ್ಷಿಣೆ ಹಾಕಬೇಕು.108 ಪ್ರದಕ್ಷಿಣೆ ಮಾಡಲು ಆಗದೇ ಹೋದಲ್ಲಿ ಕನಿಷ್ಠ 11 ಬಾರಿಯಾದರೂ ಪ್ರದಕ್ಷಿಣೆಯನ್ನು ಮಾಡಬೇಕು.

 

 

4.ಬಡವರಿಗೆ ಅನ್ನದಾನ ಮಾಡಬೇಕು.ನಿಮ್ಮ ಕೈಲಾದರೆ ಬಟ್ಟೆ, ಹಣವನ್ನು ಸಹ ನಿಮ್ಮ ಶಕ್ತಿಯನುಸಾರ ದಾನ ಮಾಡಬಹುದು.

 

 

5.ದಕ್ಷಿಣಾವರ್ತಿ ಶಂಖದಲ್ಲಿ ಹಾಲು ತುಂಬಿಸಿ ಅದರಿಂದ ವಿಷ್ಣುವಿಗೆ ಮೂರ್ತಿಗೆ ಹಾಲಿನ ಅಭಿಷೇಕ ಮಾಡಬೇಕು.ನಂತರ 108 ಬಾರಿ “ ಓಂ ವಾಸುದೇವಾಯ ನಮಃ” ಎಂದು ಅಥವಾ “ಓಂ ನಮೋ ಭಗವತೆ ವಾಸುದೇವಾಯ ನಮಃ” ಎಂದು ಜಪಿಸಬೇಕು.

 

 

 

 

6.ಉತ್ತರ ದಿಕ್ಕಿಗೆ ಮುಖ ಮಾಡಿ ಭಗವಂತನಾದ ಶ್ರೀ ವಿಷ್ಣು ಮತ್ತು ದೇವಿ ಲಕ್ಷ್ಮೀಯನ್ನು ನೆನೆದು ತುಪ್ಪದ ದೀಪವನ್ನು ಸಂಜೆಯ ಸಮಯದಲ್ಲಿ ವಿಷ್ಣು ಮತ್ತು ದೇವಿ ಲಕ್ಷ್ಮೀಯ ಫೋಟೋಗಳ ಮುಂದೆ ಹಚ್ಚಬೇಕು.

 

 

6.ಏಕಾದಶಿಯ ದಿನ ಸಂಜೆ ಶ್ರಾವಣ ಶುಕ್ರವಾರ ಒಳ್ಳೆಯ ದಿನ, ಲಕ್ಷ್ಮೀಗೆ ಪ್ರಿಯವಾದ ದಿನ ಅನಂತ ಏಕಾದಶಿ ಬಂದಿರುವುದರಿಂದ, ಅಂದು ಸಂಜೆ ಮುತೈದೆಯರನ್ನು ಮನೆಗೆ ಕರೆದು ಮಂಗಳಕರ (ಹರಿಷಿನ,ಕುಂಕುಮ,ಹೂವು, ಎಲೆ,ಅಡಿಕೆ, ಸಾಧ್ಯವಾದರೆ ಸೀರೆ,ಕುಪ್ಪಸ, ಸಿಹಿ ಭಕ್ಷ್ಯಗಳನ್ನು ) ವಸ್ತುಗಳನ್ನು ದಾನ ನೀಡಿದರೆ ಲಕ್ಷ್ಮೀಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬಹುದು ಹಾಗೆ ಮುತೈದೆ ಸ್ತ್ರೀಯರ ಆಶೀರ್ವಾದವನ್ನು ಸಹ ಪಡೆಯಬಹುದು.ಹೀಗೆ ಏಕಾದಶಿಯ ದಿನ ಈ ಎಲ್ಲಾ ಉಪಾಯಗಳನ್ನು ಸಾಧ್ಯವಾದರೆ ಮಾಡಬಹುದು ಇಲ್ಲವಾದರೆ ಯಾವುದಾದರೂ ಒಂದನ್ನು ಮಾತ್ರ ಮಾಡಿದರೂ ಸಾಕು ನೀವು ವಿಷ್ಣುವನ್ನು ಪೂಜಿಸುವುದರ ಜೊತೆಗೆ ಲಕ್ಷ್ಮೀಯ ಕೃಪೆಗೂ ಸಹ ಪಾತ್ರರಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top