fbpx
ಸಾಧನೆ

ಒಂದ್ ಟೈಮ್ ನಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಹುಡುಗಿ ಇಂದು ಸಾವಿರಾರು ಕೋಟಿ ವ್ಯವಹಾರ ಮಾಡುವ ಕಂಪನಿಯ ಒಡತಿ.

ಒಂದ್ ಟೈಮ್ ನಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಹುಡುಗಿ ಇಂದು ಸಾವಿರಾರು ಕೋಟಿ ವ್ಯವಹಾರ ಮಾಡುವ ಕಂಪನಿಯ ಒಡತಿ.

 

 

ಭಾರತದ ವ್ಯಾಪಾರ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಿದ ಶಿಮ್ಲಾದ ಮೂಕ ಬೆಟ್ಟಗಳಲ್ಲಿ ಬೆಳೆದ ಓರ್ವ ಹುಡುಗಿ ಮನಿಷಾ ಗಿರೋತ್ರ ಎಂಬುವವರ ಕುರಿತಾದ ಕತೆ ಇದಾಗಿದೆ. ಮನಿಷಾ ಅವರು ದೆಹಲಿ ಸ್ಕೂಲ್ ಆ ಎಕನಾಮಿಕ್ಸ್ ನಲ್ಲಿ ವ್ಯಾಸಂಗ ಮಾಡಿದ ಇವರು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

 

 

ಶಿಕ್ಷಣದ ನಂತರ ಮನಿಷಾ ಅವರು ಕಂಪೆನಿಗಳ ಸ್ಟಾಕ್ ಸ್ಟೇಟ್ ಮೆಂಟ್ ಗಳನ್ನು ತಯಾರಿಸುವ ಕೆಲಸಕ್ಕೆ ಸೇರಿಕೊಂಡರು.ಆದರೆ ಕಾರಣಾಂತರಗಳಿಂದ ಆ ಕೆಲಸವನ್ನು ಬಿಟ್ಟು ಅಲ್ಲೇ ಇದ್ದ ಒಂದು ಪಿಜ್ಜಾ ಅಂಗಡಿಯಲ್ಲಿ ಪಿಜ್ಜಾ ಡೆಲಿವರಿ ಗರ್ಲ್ ಆಗಿ ಕೆಲಸಮಾಡಿದಳು. ಪಿಜ್ಜಾ ಶಾಪ್ ಗೆ ಸೇರಿಕೊಂಡ ಮೊದಮೊದಲು ಅವಳು ಆ ಕೆಲಸದ ಬಗ್ಗೆ ಆಸಕ್ತಿಯನ್ನು ಹೊಂದಿರಲಿಲ್ಲ ಆದ್ರೆ ಕಾಲ ಕ್ರಮೇಣ ಆ ಕೆಲಸವನ್ನು ಹೆಚ್ಚು ಪ್ರೀತಿಸಲು ಶುರು ಮಾಡಿದಳು.ಇನ್ನೂ ಕೆಲವು ವರ್ಷಗಳವರೆಗೆ ಆ ಪಿಜ್ಜಾ ಅಂಗಡಿಯಲ್ಲೇ ಕೆಲಸ ಮಾಡಿದ ನಂತರ, ಅವಳು UBSಗೆ ಸೇರಿಕೊಂಡಳು, ಅಲ್ಲಿ ಅವಳು ಮುಂದಿನ 20 ವರ್ಷಗಳ ಜೀವನವನ್ನು ಕಳೆದರು, ಅಂತಿಮವಾಗಿ ಒಂದು ಪ್ರತಿಷ್ಠಿತ ಕಂಪೆನಿಯ ಸಿಇಒ ಆಗಿ ಹೊರಬಂದಳು.

 

 

ಅವರು ಕೇವಲ 33 ವರ್ಷದವಳಾಗಿದ್ದಾಗ ಒಂದು ಪ್ರತಿಷ್ಠಿತ ಕಂಪನಿಯ ಸಿಇಓ ಆಗಿ ಹೊರಹೊಮ್ಮಿದರು. ಅವರು ಕಂಪೆನಿಗಳಲ್ಲಿ ಮಹಿಳೆಯರು ಕೆಲಸ ಮಾಡಲು ಸೂಕ್ತವಲ್ಲ ಎಂಬ ವಾದವನ್ನು ನಿರಾಕರಿಸುತ್ತಾರೆ. ಏಕೆಂದರೆ ಅವರ ಪ್ರಕಾರ ಮಹಿಳೆಯರು ಸೂಕ್ಷ್ಮ ಸಂಭಾಷಣೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಹೆಚ್ಚಿನ ಸಮಯದವರೆಗೆ ಕಂಪನಿಗೆ ಹೆಚ್ಚು ನಿಷ್ಠಾವಂತರಾಗಿರುತ್ತಾರೆ.

 

 

ಅವಳು ಮೋಲೀಸ್(ನ್ಯೂ ಯಾರ್ಕ್ ಮೂಲದ ಒಂದು ಕಂಪನಿ) ಗೆ ಸೇರ್ಪಡೆಗೊಂಡಾಗ ಅವಳು ಮೊದಲಿನಿಂದ ಪ್ರಾರಂಭಿಸಬೇಕಾಯಿತು ಅವರು ಮೋಲೀಸ್ ಅನ್ನು ಇಂಡಿಯಾದಲ್ಲಿ ಸ್ಥಾಪಿಸಿ ಭಾರತದಲ್ಲಿನ ಕಾರ್ಯಾಚರಣೆಗಳಿಗೆ ನೇತೃತ್ವ ವಹಿಸಿದರು.15,000 ಉದ್ಯೋಗಿಗಳ ಕಂಪೆನಿಯತ್ತ ಹೆಜ್ಜೆ ಹಾಕಿದ ನಂತರ, ಹಣಕಾಸಿನ ಮಾರುಕಟ್ಟೆ ಕೆಟ್ಟ ಸಮಯದಲ್ಲಿ ಹಾದು ಹೋಗುವಾಗ ಮತ್ತು ಬ್ಯಾಂಕುಗಳು ಬದಲಾಗುತ್ತಿರುವ ಸಮಯವನ್ನು ಸರಿಹೊಂದಿಸುವಲ್ಲಿ ತೊಂದರೆ ಎದುರಿಸುತ್ತಾರೆ. ಅವಳು, ತನ್ನ ನಿರ್ಣಯ ಮತ್ತು ಕೌಶಲ್ಯದೊಂದಿಗೆ, ಮೋಲೀಸ್ ಮತ್ತು M&A ಅನ್ನು ಭಾರತದ ಅಗ್ರ 10 ಸಂಸ್ಥೆಗಳಲ್ಲಿ ಒಂದನ್ನಾಗಿ ಮಾಡಿದಳು. ಆ ಕಂಪನಿಗಳು ಇಂದು ಸಾವಿರಾರು ಕೋಟಿಯ ವ್ಯವಹಾರವನ್ನು ಮಾಡಿಸುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top