fbpx
ದೇವರು

ಕೆಟ್ಟದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಒಂದೇ ಒಂದು ನಿಂಬೆಹಣ್ಣು ಇದ್ರೆ ಸಾಕು! ಹೇಗೆ ಅಂತೀರಾ ಇಲ್ಲಿ ಓದಿ .

ಕೆಟ್ಟದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಒಂದೇ ಒಂದು ನಿಂಬೆಹಣ್ಣು ಇದ್ರೆ ಸಾಕು! ಹೇಗೆ ಅಂತೀರಾ ಇಲ್ಲಿ ಓದಿ.

ನರದೃಷ್ಟಿಯು ತುಂಬ ಕೆಟ್ಟದ್ದು ಎಂತಹ ಕಲ್ಲು ಬಂಡೆಯನ್ನು ಬೇಕಾದರೂ ಸಹ ಒಡೆದು ಚುರು ಚೂರಾಗಿಸಿ ಬಿಡುತ್ತದೆ.ದೃಷ್ಟಿ ದೋಷವನ್ನು ಹೋಗಲಾಡಿಸಲು ನಿಂಬೆಹಣ್ಣು ಎಷ್ಟು ಸಹಾಯಕಾರಿ ಎಂಬುದನ್ನು ಇಂದು ತಿಳಿದುಕೊಳ್ಳೋಣ.

 

 

ಕೆಟ್ಟದೃಷ್ಟಿ ಬಿದ್ದರೆ ಅವರ ಹೆಸರು ಸಹ ಉಳಿಯದಂತೆ ನಿರ್ನಾಮ ಅಂದರೆ ಸರ್ವನಾಶ ಮಾಡುವಂತಹ ಗುಣ ಈ ನರ ದೃಷ್ಟಿಗೆ ಇದೆ.ಎಂತಹ ಕೆಟ್ಟ ದೃಷ್ಟಿಯನ್ನು ನಾಶ ಮಾಡಬಲ್ಲ ಶಕ್ತಿ ಈ ನಿಂಬೆಹಣ್ಣಿನಲ್ಲಿ ಇದೆ ಎಂದು ನಮ್ಮ ಹಿರಿಯರು ನಮಗೆ ತೋರಿಸಿಕೊಟ್ಟಿದ್ದಾರೆ.ಇಂತಹ ನರದೃಷ್ಟಿ ಯಾವ ಮನುಷ್ಯರ ಕಣ್ಣಿನ ದೃಷ್ಟಿ ಕೆಟ್ಟದ್ದು ಎಂದರೆ ಅದು ಆಶ್ಲೇಷಾ ನಕ್ಷತ್ರದವರ ಕಣ್ಣಿನ ದೃಷ್ಟಿ ತುಂಬಾ ಕೆಟ್ಟ ದೃಷ್ಟಿ ಅವರ ಕಣ್ಣಿನ ದೃಷ್ಟಿ ಮನುಷ್ಯರಿಗಾಗಾಲಿ ,ಪ್ರಾಣಿ ಪಕ್ಷಿಗಳಿಗಾಗಲಿ ಬೇಗ ತಗಲುತ್ತದೆ. ಹಿರಿಯರಿಗಾಗಲಿ,ಕಿರಿಯರಿಗಾಗಲಿ ,ಪ್ರಾಣಿ ಪಕ್ಷಿಗಳಿಗಾಗಲಿ ಅಥವಾ ವಾಹನ ,ವ್ಯಾಪಾರ ಹೊಸಮನೆ ಹೀಗೆ ಎಲ್ಲ ಕಡೆಗೂ ಸಹ ಕೆಟ್ಟ ಕಣ್ಣಿನ ನರ ದೃಷ್ಟಿ ಬಿದ್ದೆ ಬೀಳುತ್ತದೆ.ಅಂತಹ ಕೆಟ್ಟ ದುಷ್ಟ ಶಕ್ತಿಯನ್ನು ಹೋಗಲಾಡಿಸಲು ಈ ಒಂದು ನಿಂಬೆಹಣ್ಣು ಬಹಳ ಪ್ರಯೋಜನಕಾರಿ.

 

 

ನಿಂಬೆ ಹಣ್ಣು ದೃಷ್ಟಿ ದೋಷವನ್ನು ಕೆಟ್ಟ ಶಕ್ತಿಗಳನ್ನು ತೊಲಗಿಸುವ ಮಹಾಶಕ್ತಿ. ಈ ನಿಂಬೆಹಣ್ಣಿನಲ್ಲಿ ಇದೆ ಎಂದು ತುಂಬ ಜನ ನಂಬುತ್ತಾರೆ.ಆದ್ದರಿಂದ ವ್ಯಾಪಾರಿಗಳು ಇದನ್ನು ಅಂಗಡಿಗಳ ಮುಂದೆ ನೇತು ಹಾಕಿರುತ್ತಾರೆ .ಮಂತ್ರ ತಂತ್ರಗಳಂತಹ ದುಷ್ಟ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡಲು ನಿಂಬೆಹಣ್ಣು ತುಂಬ ಪ್ರಮುಖ ಪಾತ್ರ ವಹಿಸುತ್ತದೆ.

ಗುರುವಾರದ ದಿನ ಅಂಜನೇಯಸ್ವಾಮಿ ದೇವಸ್ಥಾನಕ್ಕೆ ನಾಲ್ಕು ನಿಂಬೆಹಣ್ಣು ಮತ್ತು ಲವಂಗವನ್ನು ತೆಗೆದುಕೊಂಡು ಹೋಗಿ ಕೊಟ್ಟು ಪೂಜೆ ಮಾಡಿಸಿ ಬರಬೇಕು.
ವ್ಯಾಪಾರ ನಷ್ಟದಲ್ಲಿ ಸಾಗುತ್ತಿದ್ದರೆ ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ನಾಲ್ಕು ಮೂಲೆಗಳಿಗೂ ಒಂದೊಂದು ಬಾರಿ ಮುಟ್ಟಿಸಿ ನಂತರ ಆ ನಿಂಬೆಹಣ್ಣನ್ನು ನಾಲ್ಕು ತುಂಡುಗಳಾಗಿ ಮಾಡಿ ನಾಲ್ಕು ದಿಕ್ಕಿನಲ್ಲಿ ಇಡಬೇಕು.ಇದರಿಂದ ಶನಿದೋಷ ಇದ್ದರೆ ದೂರವಾಗುತ್ತದೆ.

ಕಣ್ಣಿನ ದೃಷ್ಟಿ ಬಿದ್ದರೆ ಅವರಿಗೆ ಒಂದು ನಿಂಬೆಹಣ್ಣಿನಿಂದ ಕೆಳಗಿನಿಂದ ಮೇಲಕ್ಕೆ ಮತ್ತೆ ಮೇಲಿನಿಂದ ಕೆಳಗೆ ಮೂರು ಬಾರು ನಿವಾಳಿಸಿ ಆ ನಿಂಬೆಹಣ್ಣನ್ನು ನಾಲ್ಕು ಹೋಳಾಗಿ ಕತ್ತರಿಸಿ ಯಾರು ಇಲ್ಲದ ಜಾಗದಲ್ಲಿ ಮೂರು ದಾರಿ ಕೂಡಿರುವ ಸ್ಥಳದಲ್ಲಿ ಯಾರಿಗೂ ಕಾಣಿಸದಂತೆ ಎಸೆದು ಹಿಂದೆ ತಿರುಗಿ ನೋಡದೆ ಬಂದುಬಿಡಿ.

 

ನಿಮ್ಮ ಮನೆಯ ಮುಂದೆ ಒಂದು ನಿಂಬೆಹಣ್ಣಿನ ಗಿಡ ಇದ್ದರೆ ಅದು ದುಷ್ಟ ಶಕ್ತಿಯನ್ನು ಮನೆಯ ಹತ್ತಿರ ಬರದಂತೆ ಸುಳಿಯದಂತೆ ಆ ಮನೆಯನ್ನು,ಮನೆಯಲ್ಲಿ ವಾಸಿಸುವರನ್ನು ರಕ್ಷಿಸುತ್ತದೆ.ಅಷ್ಟೇ ಅಲ್ಲ ಒಂದು ನಿಂಬೆ ಹಣ್ಣಿನ ಗಿಡ ಮನೆಯಲ್ಲಿ ಯಾವುದೇ ಕಚೇರಿ ಯಂತಹ ಸ್ಥಳದಲ್ಲಿ ವಾಸ್ತು ದೋಷಗಳು ಇದ್ದಲ್ಲಿ ಅವುಗಳನ್ನು ದೂರವಾಗಿಸುತ್ತದೆ.

 

 

ಮನೆಯಲ್ಲಿ ,ಕಚೇರಿಯಲ್ಲಿ ನೀವು ಕೆಲಸ ಮಾಡುವ ಜಾಗದಲ್ಲಿ ಒಂದು ಗಾಜಿನ ಲೋಟವನ್ನು ತೆಗೆದುಕೊಂಡು ಅದರೊಳಗೆ ಅರ್ಧ ಲೋಟ ಶುದ್ದವಾದ ನೀರು ತುಂಬಿಸಿ ಅದರೊಳಗೆ ಒಂದು ನಿಂಬೆಹಣ್ಣನ್ನು ಹಾಕಿ ಇಡಿ. ಆಗ ಅದು ಆ ಸ್ಥಳಗಳಲ್ಲಿ ನಾಕಾರಾತ್ಮಕ ಮತ್ತು ದುಷ್ಟ ಶಕ್ತಿಗಳು ವಾಸ ಮಾಡುತ್ತಿದ್ದರೆ ಅದನ್ನು ದೂರ ಮಾಡುತ್ತದೆ.ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಶಿಸುತ್ತದೆ ,ಸಿರಿವಂತರಾಗಿ ಧನವಂತರಾಗುತ್ತೀರ.ಆ ನೀರನ್ನು ಮತ್ತು ನಿಂಬೆಹಣ್ಣನ್ನು ವಾರಕ್ಕೆ ಅಥವಾ 15 ದಿನಕ್ಕೆ ಒಮ್ಮೆಯಾದರೂ ಬಡಳಿಸುತ್ತಾ ಬನ್ನಿ ಹೀಗೆ ಮಾಡುತ್ತಾ ಇದ್ದರೆ ಎಲ್ಲ ಕೆಟ್ಟ ಶಕ್ತಿಯೂ ಆ ಸ್ಥಳದಿಂದ ಹೊರಟು ಹೋಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top