fbpx
ದೇವರು

ಶ್ರಾವಣ ಮಾಸದಲ್ಲಿ ಶನಿದೇವರ ಪೂಜೆ ಮಾಡೋದ್ರಿಂದ ಯಾವ್ಯಾವ ಫಲಗಳನ್ನ ಪಡ್ಕೋಬೋದು ಗೊತ್ತಾ?

ಶ್ರಾವಣ ಮಾಸದಲ್ಲಿ ಶನಿದೇವರ ಪೂಜೆ ಮಾಡೋದ್ರಿಂದ ಯಾವ್ಯಾವ ಫಲಗಳನ್ನ ಪಡ್ಕೋಬೋದು ಗೊತ್ತಾ?

 

 

ಸೂರ್ಯನ ಚಲನೆಯ ಆಧಾರಧ ಮೇಲೆ ದಕ್ಷಿಣಾಯನ ಮತ್ತು ಉತ್ತರಾಯಣ ಪುಣ್ಯಕಾಲ ಎಂದು ಪರಿಗಣಿಸಲಾಗಿದೆ.ಸೂರ್ಯನ ಚಲನೆಯ ಆಧಾರಾದ ಮೇಲೆ ನಕ್ಷತ್ರಗಳ ಸಂಖ್ಯೆ 27 ಎಂದು ಮತ್ತು ಅವುಗಳ ಯಾವ ಸ್ಥಳದಲ್ಲಿ ಸ್ಥಿತರಿದ್ದಾರೆ ಎಂದು ಆಧರಿಸಿ ಪೂರ್ವದಲ್ಲಿಯೇ ನಮ್ಮ ಋಷಿಮುನಿಗಳು ಮತ್ತು ಖಗೋಳ ಶಾಸ್ತ್ರಜ್ಞರು 12 ರಾಶಿಗಳಿವೆ ಎಂದು ದೃಢಪಡಿಸಿದ್ದಾರೆ.ಸೂರ್ಯ, ಚಂದ್ರರು ಮತ್ತು ಗ್ರಹಗಳು ಈ ನಕ್ಷತ್ರಗಳಲ್ಲಿ ಹಾದು ಹೋಗುವಾಗ ಅವುಗಳ ಪ್ರಭಾವ ಭೂಮಿಯ ಮೇಲೆ ವಾಸಿಸುವ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ.ಗ್ರಹಗಳ ಚಲನೆಯ ಆಧಾರದ ಮೇಲೆ ಮತ್ತು ಸೂರ್ಯ ,ಚಂದ್ರರ ಚಲನೆಯ ಆಧಾರದ ಮೇಲೆ ಜ್ಯೋತಿಷಿಗಳು ಮತ್ತು ಶಾಸ್ತ್ರ ಹೇಳುವವರು ಭವಿಷ್ಯವನ್ನು ನುಡಿಯುತ್ತಾರೆ.

 

 

ಸೂರ್ಯ, ಚಂದ್ರ ಹಾಗೂ ಭೂಮಿ ಒಟ್ಟಿಗೆ ಎಲ್ಲರೂ ಸೇರಿ 12 ಗ್ರಹಗಳು ಎಂದು ಕಂಡುಹಿಡಿದ್ದಾರೆ.ಸೂರ್ಯನಿಂದ 11427 ಮಿಲಿಯನ್ ಕಿಲೋಮೀಟರ್ ದೂರದಲ್ಲಿ 14300 ಕಿಲೋಮೀಟರ್ ಸುತ್ತಳತೆಯುಳ್ಳ ಎರಡನೇ ಅತಿದೊಡ್ಡ ಗ್ರಹ ಶನಿ ಗ್ರಹ ಇದೆ. ಶನಿ ಗ್ರಹವು 16 ಚಂದಿರಗಳನ್ನು ಹೊಂದಿದೆ ಈ ಕಾರಣದಿಂದ ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಅತ್ಯಂತ ಎತ್ತರದ ಸ್ಥಾನವನ್ನು ಶನಿಗ್ರಹ ಪಡೆದುಕೊಂಡಿದೆ.

 

 

ಶ್ರಾವಣದ ವಿಶೇಷತೆ.

 

ಈ ವರ್ಷ 2017 ಜುಲೈ 24 ರಿಂದ ಆಗಸ್ಟ್ 20 ರವರೆಗೆ ಶ್ರಾವಣ ಮಾಸವಿದೆ.ಈ ಶ್ರಾವಣ ಮಾಸ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಶ್ರಾವಣ ಮಾಸದಲ್ಲಿ ಸೂರ್ಯನು ಜುಲೈ 24 ರಂದು 52 ಮಹಾ ನಕ್ಷತ್ರಗಳನ್ನು ಹೊಂದಿರುವ ಸಿಂಹ ರಾಶಿಗೆ ಪ್ರವೇಶಿಸುತ್ತಾನೆ.ಆಗಸ್ಟ್ 21 ರಂದು ಸೂರ್ಯ ಸಿಂಹರಾಶಿಯಿಂದ ಹೊರ ಬರುತ್ತಾನೆ.ಈ ಶ್ರಾವಣ ಮಾಸದಲ್ಲಿ ಪ್ರತಿಯೊಂದು ದಿನವೂ ಒಂದೊಂದು ಮಹತ್ವವನ್ನು ಪಡೆದಿವೆ. ಈ ಮಾಸದಲ್ಲಿ ಭೀಮನ ಅಮಾವಾಸ್ಯೆ,ವರ ಮಹಾಲಕ್ಷ್ಮೀ ವ್ರತ,ಮಂಗಳ ಗೌರಿ ವ್ರತ,ನಾಗರ ಪಂಚಮಿ, ಶ್ರಾವಣ ಏಕಾದಶಿ (ಪುತ್ರಡ ಏಕಾದಶಿ),ಬಲರಾಮ ಜಯಂತಿ,ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಶ್ರಾವಣ ಶನಿವಾರ ಶನೈಶ್ಚರ ದೇವರಿಗೆ ಮತ್ತು ವಿಶೇಷವಾಗಿ ನವಗ್ರಹಗಳಿಗೂ ಸಹ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ.

ರಾಶಿ ಫಲ.

ಶ್ರಾವಣ ಮಾಸ ಕಳೆದ ನಂತರ ಇದೇ ವರ್ಷ 2017 ರಲ್ಲಿಯೇ ಒಳ್ಳೆಯ ಯೋಗ ಫಲಗಳು ಪ್ರಾರಂಭವಾಗುತ್ತವೆ. ಜ್ಯೋತಿಷ್ಯ ಫಲಗಳನ್ನು ಪರಮರ್ಶೆ ಮಾಡಿ ಮನೋ ವೈಜ್ಞಾನಿಕ ಶಾಸ್ತ್ರ,ರಾಶಿ ಫಲ ಶಾಸ್ತ್ರ, ಸಂಖ್ಯಾ ಶಾಸ್ತ್ರ ಹೇಳುತ್ತಾರೆ. ಇದರಲ್ಲಿ ರಾಜಯೋಗ,ಗಜ ಕೇಸರಿ ಯೋಗ ಮತ್ತು ಅಮೃತ ಯೋಗಗಳನ್ನು ತಿಳಿಸಿದ್ದಾರೆ.ಸಿಂಹ,ಕನ್ಯಾ ಮತ್ತು ತುಲಾ ರಾಶಿ ಸೆಪ್ಟೆಂಬರ್ 23 ರಂದು ರಾಜಯೋಗ ಶುರುವಾಗುತ್ತದೆ.ಮೇಷ,ಮಕರ ಮತ್ತು ಕುಂಭ ರಾಶಿಗೆ ಡಿಸೆಂಬರ್ 24 ರಿಂದ.ವೃಷಭ,ಧನಸ್ಸು ಮತ್ತು ಮಿಥುನ ರಾಶಿಗೆ 2017 ಮಾರ್ಚ್ 21 ರಿಂದ.ಮೀನ,ಕಟಕ,ವೃಶ್ಚಿಕ ರಾಶಿಗೆ ಆಗಸ್ಟ್ 29 ರಿಂದ ಶನಿಮಹಾದೆಸೆ ರಾಜಯೋಗ,ಗಜಕೇಸರಿ ಯೋಗ ಮತ್ತು ಅಮೃತ ಯೋಗ ಶುರುವಾಗುತ್ತದೆ.

 

 

ಶ್ರಾವಣ ಮಾಸದಲ್ಲಿ ಬರುವ ಎಲ್ಲ ಶನಿವಾರಗಳು ಸಹ ಶನೈಶ್ಚರ ದೇವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ಒಳ್ಳೆಯ ಯೋಗ ಕೂಡಿ ಬರುತ್ತದೆ ಗ್ರಹ ದೋಷಗಳು ನಿವಾರಣೆಯಾಗುತ್ತವೆ.ಮುಖ್ಯವಾಗಿ ವ್ಯಾಪಾರಿಗಳಿಗೆ ರತ್ನ,ಬೆಳ್ಳಿ,ಬಂಗಾರ ವ್ಯಾಪಾರಿಗಳಿಗೆ,ಹಣದ ಲೇವಾದೇವಿ ವ್ಯಾಪಾರ ಮಾಡುವವರಿಗೆ ಶನೈಶ್ಚರನಿಗೆ ಪೂಜೆ ಸಲ್ಲಿಸುವುದರಿಂದ ಲಾಭದಾಯಕ ಎಂದು ಪರಿಗಣಿಸಿದ್ದಾರೆ.

 

 

ಮನೆಯಲ್ಲಿ ಶಾಂತಿ,ಆರೋಗ್ಯ ಭಾಗ್ಯ,ಕಂಕಣ ಬಲ, ವಿದೇಶ ವಾಸ,ಪ್ರೇಕ್ಷಣೀಯ ಸ್ಥಳಗಳ ಭೇಟಿ,ಸಾಲದ ಸುಳಿಯಿಂದ ಮುಕ್ತಿ,ಹೊಸ ಕೆಲಸಗಳ ಆರಂಭ,ದೂರವಾದ ದಂಪತಿಗಳು ಜೊತೆಯಾಗುತ್ತಾರೆ.ಚಲನಚಿತ್ರ, ಜವಳಿ,ಸಂಶೋಧನೆಯಲ್ಲಿ ಪ್ರಗತಿ,ಸಂಧಿವಾತ ,ಚರ್ಮರೋಗ,ಅರೆ ತಲೆನೋವಿನಂತಹ ಖಾಯಿಲೆಗಳಿಂದ ಬಳಲುತ್ತಿರುವವರು ಸ್ವಲ್ಪವಾದರೂ ಚೇತರಿಕೆಯಾಗುತ್ತಾರೆ.ಶನಿದೋಷ,ಕುಜದೋಷ,ಕಾಲಸರ್ಪ ದೋಷಗಳಂತಹ ದೋಷಗಳಿಂದಲೂ ಸಹ ಮುಕ್ತಿ ಹೊಂದಬಹುದು.ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ,ಹೀಗೆ ಶನಿದೇವನನ್ನು ಎಲ್ಲಾ ಶ್ರಾವಣ ಶನಿವಾರಗಳಂದು ಪೂಜಿಸುವುದರಿಂದ ಇಷ್ಟೆಲ್ಲಾ ಲಾಭಾಗಳನ್ನು ಕಾಣಬಹುದಾಗಿದೆ.ಆದ್ದರಿಂದ ಈ ಶ್ರಾವಣ ಮಾಸ ಎಲ್ಲಾ ರೀತಿಯಲ್ಲೂ ಒಳ್ಳೆಯದು ಎಂದು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top