fbpx
ಜೀವನ ಕ್ರಮ

ನೀವು ಯಶಸ್ವಿ ವ್ಯಕ್ತಿ ಆಗಬೇಕೆಂದರೆ ನಿಮ್ಮಲ್ಲಿ ಈ ೭ ಅಭ್ಯಾಸಗಳನ್ನು ಬಿಟ್ಟುಬಿಡಿ

ನೀವು ಯಶಸ್ವಿ ವ್ಯಕ್ತಿ ಆಗಬೇಕೆಂದರೆ ನಿಮ್ಮಲ್ಲಿ ಈ ೭ ಅಭ್ಯಾಸಗಳನ್ನು ಬಿಟ್ಟುಬಿಡಿ
ನಿಮ್ಮಲ್ಲಿ ಈ 7 ಅಭ್ಯಾಸಗಳಿಗೆದ್ದರೆ.. ಕೂಡಲೆ ಬಿಟ್ಟುಬಿಡಿ! ಇಲ್ಲದಿದ್ದರೆ ನೀವು ಯಶಸ್ವಿ ವ್ಯಕ್ತಿ ಆಗಲ್ಲ
ಭೂಮಿ ಮೇಲೇ ಜನಿಸಿದ ಮಾನವರೆಲ್ಲರ ವ್ಯಕ್ತಿತ್ವಗಳು ಒಂದೇ ತರಹ ಇರಲ್ಲ. ಬೇರೆಬೇರೆ ತರಹ ಇರುತ್ತವೆ. ಅದೇ ರೀತಿ ಒಬ್ಬೊಬ್ಬ ಮನುಷ್ಯನಿಗೆ ಇರುವ ಅಭಿರುಚಿ, ಇಷ್ಟಗಳು, ಅಭಿಪ್ರಾಯಗಳು ಸಹ ಬದಲಾಗುತ್ತವೆ.
ಅದೇ ರೀತಿ ಮನುಷ್ಯನ ಬಾಡಿ ಲಾಂಗ್ವೇಜ್ ಸಹ ಇದೇವರ್ಗಕ್ಕೆ ಸೇರುತ್ತದೆ. ಯಾರೇ ಇಬ್ಬರು ವ್ಯಕ್ತಿಗಳನ್ನು ತೆಗೆದುಕೊಂಡರೂ ಅವರ ಬಾಡಿ ಲಾಂಗ್ವೇಜ್ ಒಂದೇ ತರಹ ಇರುವುದಿಲ್ಲ. ಅದರೆ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ವ್ಯಕ್ತಿಗೆ ಮಾತ್ರ ವಿಶೇಷವಾಗಿ ಒಂದು ಬಾಡಿ ಲಾಂಗ್ವೇಜ್ ಇರುತ್ತದೆ. ಅವರಿಗೆ ಕೆಲವೊಂದು ವಿಶೇಷ ಹಾವಭಾವಗಳು, ಲಕ್ಷಣ, ನಡತೆ, ಇರುತ್ತವೆ, ಅವು ಏನು ಹೇಗಿರುತ್ತವೆ ಎಂದು ತಿಳಿಯೋಣ..
*1ಒರಗಿ ಕುಳಿತುಕೊಳ್ಳುವುದು : ಆಫೀಸಲ್ಲಿ ಮೇಜಿನ ಮೇಲೆ ಒರಗಿಕೊಳ್ಳುವುದು, ಡೆಸ್ಕ್ ಮೇಲೆ ಮೊಳಕೈಗಳನ್ನು ಇಟ್ಟು ಕುಳಿತುಕೊಳ್ಳುವುದು, ಕೈಗಳಿಂದ ಮುಖವನ್ನು ಕವರ್ ಮಾಡಿಕೊಳ್ಳುವಂತಹವು ಅಗೌರವ ಸೂಚಕ ಕೆಲಸಗಳಡಿ ಬರುತ್ತವೆ. ಆ ರೀತಿ ಅಲ್ಲದೆ ಕುರ್ಚಿ ಮೇಲೆ ನೇರವಾಗಿ ಕುಳಿತುಕೊಳ್ಳಬೇಕು. ಬಾಗಿರಬಾರದು. ಮುಂದೆ ಬಗಬಾರದು. ನೇರವಾಗಿ ಕುಳಿತರೆ ಅದನ್ನು ಪವರ್ ಪೊಸಿಷನ್ ಅಂತಾರೆ. ಆ ರೀತಿ ಕೂತರೇನೇ ಯಾರೇ ಆಗಲಿ ಸಕ್ಸಸ್’ಫುಲ್ ವ್ಯಕ್ತಿಯಾಗಿ ಮುನ್ನುಗ್ಗುತ್ತಾರಂತೆ.
*ಅತಿಶಯೋಕ್ತಿ ಸಂಜ್ಞೆಗಳು: ಅತಿಶಯೋಕ್ತಿ ಉಂಟು ಮಾಡುವಂತೆ ಯಾರೂ ಸಂಜ್ಞೆಗಳನ್ನು ಮಾಡಬಾರದು. ಅವು ಅತ್ಯಂತ ಸಾಮಾನ್ಯವಾಗಿರಬೇಕು. ಆ ರೀತಿ ಇದ್ದರೇನೇ ಇತರರು ಓಪನ್ ಮೈಂಡ್ ವ್ಯಕ್ತಿಯಾಗಿ ಕಾಣಿಸುತ್ತಾರೆ. ಇದು ಯಶಸ್ವಿ ವ್ಯಕ್ತಿಗಳಿಗೆ ಇರುವ ಬಾಡಿ ಲಾಂಗ್ವೇಜ್’ಗಳಲ್ಲಿ ಒಂದು. ಇದನ್ನು ಯಾರೇ ಆಗಲಿ ಅಳವಡಿಸಿಕೊಂಡರೆ ಯಶಸ್ಸು ಪಡೆಯಬಹುದು.
*ಕೈ ಕಟ್ಟಿ ನಿಲ್ಲುವುದು: ಕೈಗಳನ್ನು ಕಟ್ಟಿಕೊಂಡು ಇರುವುದು, ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದು ಸೂಕ್ತವಾದ ಬಾಡಿ ಲಾಗ್ವೇಜ್ ಅಲ್ಲ. ಕಾಲು ಕೇಗಳನ್ನು ಯಾವಾಗಲೂ ಓಪನ್ ಆಗಿ ಇಟ್ಟುಕೊಳ್ಳಬೇಕು. ಅದು ಯಶ್ವಸ್ಸಿಗೆದಾರಿ ಇದ್ದಂತೆ. ಯಾರೇ ಆಗಲಿ ಇದೆ ಪದ್ಧತಿಯನ್ನು ಫಾಲೋ ಆಗಬೇಕು. ಆಗ ಸಕ್ಸಸ್ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
*ಕೂದಲ ಜೋತೆಗೆ ಆಟವಾಡುವುದು: ಬಹಳಷ್ಟು ಮಂದಿ ಇತರರ ಜತೆಗೆ ಮಾತನಾಡುವಾಗ ಅಥವಾ ಉಳಿದ ಸಮಯಗಳಲ್ಲಿ ಸಹ ಕೂದಲ ಜತೆಗೆ ಆಟವಾಡುತ್ತಿರುತ್ತಾರೆ. ಆದರೆ ಆ ರೀತಿ ಮಾಡಬಾರದು. ಅದು ಎದುರುಗಿನ ವ್ಯಕ್ತಿಯಲ್ಲಿ ಸಂಪೂರ್ನವಾಗಿ ಇನ್’ಸೆಕ್ಯೂರಿಟಿ ಫೀಲಿಂಗ್ ಉಂಟಾಗುತ್ತದೆ. ಒಳ್ಳೆಯ ಬಾಡಿ ಲಾಂಗ್ವೇಜ್ ಸಹ ಅಲ್ಲ. ಆದಕಾರಣ ಈ ಅಭ್ಯಾಸ ಬಿಡುವುದು ಉತ್ತಮ.
*ಕೆಲಸಕ್ಕೆ ಬಾರದ ವಿಷಯಗಳಿಗೆ ನಗುವುದು: ಯಾವಾಗ, ಯಾವ ಸಮಯದಲ್ಲಿ, ಯಾವ ಸಂದರ್ಭದಲ್ಲಿ ನಗಬೇಕು ಆಗ ಡೀಸೆಂಟ್ ಆಗಿ ನಗಬೇಕು. ಅಷ್ಟೇ ಹೊರತು ಪದೇ ಪದೇ ಕೆಲಸಕ್ಕೆ ಬಾರದ ವಿಷಯಗಳಿಗೆ ಸಹ ನಗಬಾರದು. ಅದು ಸೂಕ್ತ ಬಾಡಿ ಲಾಂಗ್ವೇಜ್ ಅಲ್ಲ. ಸಕ್ಸಸ್ ಆದವರಿಗೆ ಯಾವುದೇ ಕಾರಣಕ್ಕೂ ಈ ಬಾಡಿ ಲಾಂಗ್ವೇಜ್ ಇರುವುದಿಲ್ಲವಂತೆ. ಆದಕಾರಣ ಯಾರೇ ಆಗಲಿ ಯಶಸ್ಸು ಸಾಧಿಸಬೇಕಾದರೆ ಈ ಅಭ್ಯಾಸ ಬಿಡಬೇಕು.
*ತದೇಕ ದೃಷ್ಟಿ: ಕೆಲವರು ಎದುರಿಗಿನ ವ್ಯಕ್ತಿಗಳ ಕಣ್ಣಲ್ಲಿ ಅದೇ ಕೆಲಸವಾಗಿ ನೋಡುತ್ತಾ ಮಾತನಾಡಲ್ಲ. ಇನ್ನೂ ಕೆಲವರು ಯಾವುದೇ ಕಾರಣಕ್ಕೂ ಕಣ್ಣಲ್ಲಿ ಕಣ್ಣಿಟ್ಟು ನೋಡಲ್ಲ. ಎತ್ತಲೋ ನೋಡುತ್ತಾ ಮಾತನಾಡುತ್ತಾರೆ. ಆದರೆ ಈ ಎರಡು ಬಾಡಿ ಲಾಂಗ್ವೇಜ್ ಸರಿಯಲ್ಲ. ಅಗತ್ಯ ಸಮಯದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮಾತನಾಡಬೇಕು.
ಬೇಡ ಎಂದುಕೊಂಡರೆ ನೋಡದೆ ಮಾತನಾಡಬೇಕು. ಇದೇ ಸೂಕ್ತವಾದ ಬಾಡಿ ಲಾಂಗ್ವೇಜ್. ಹಾಗಾಗಿ ಇದನ್ನು ಅಭ್ಯಾಸ ಮಾಡಿಕೊಂಡರೆ ಉತ್ತಮ.
*ಹಿಂಜರಿಯುತ್ತಾ ಹ್ಯಾಂಡ್ ಶೇಕ್ ಮಾಡುವುದು.ಇತರರನ್ನು ಬೇಟಿಯಾದಾಗ ಹಿಂಜರಿಯುತ್ತಾ ಅಥವಾ ಇಷ್ಟವಿಲ್ಲದಿದ್ದರೂ ಏನೋ ಶೇಕ್ ಹ್ಯಾಡ್ ಕೊಡಬೇಕು ಎಂಬ ಕಾರಣಕ್ಕೆ ನಿರಾಸಕ್ತಿಯಿಂದ ಹ್ಯಾಂಡ್ ಶೇಕ್ ಕೊಡಬಾರದು. ಹ್ಯಾಂಡ್ ಶೇಕ್ ಕೊಟ್ಟರೆ ಪರ್’ಫೆಕ್ಟಾಗಿ ಇರಬೇಕು. ಅದೇ ಖಚಿತವಾದ, ಕರೆಕ್ಟ್ ಆದ ಬಾಡಿ ಲಾಂಗ್ವೇಜ್ ನಿದರ್ಧನಾಗುತ್ತದೆ.
ಯಶಸ್ವಿ ವ್ಯಕ್ತಿಗಳು ಇದೇ ರೀತಿ ಮಾಡುತ್ತಾರೆ. ಹಾಗಾಗಿ ಈ ರೀತಿಯ ಸರಿಯಾದ ಹ್ಯಾಂಡ್ ಶೇಕ್ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top