fbpx
ಆರೋಗ್ಯ

ಕೊಡಗಿನೋರು ವೈನ್ ಕುಡಿಯೋದ್ರ ಹಿಂದೆ ಇಷ್ಟು ಲಾಭಗಳು ಇವೆ ಅಂತ ತಿಳ್ಕೊಂಡ್ರೆ ಆಶ್ಚರ್ಯ ಆಗ್ದೇ ಇರಲ್ಲ !

ವೈನ್ ಕುಡಿದ್ರೆ ಈ 9 ಲಾಭಗಳನ್ನು ಪಡ್ಕೊಬಹುದು ಹಾಗಂತ ದಿನ ಕುಡಿದ್ರೆ ಆಪತ್ತು ..

1. ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು:

ರೆಡ್ ವೈನ್ ಪಾಲಿಫಿನಾಲ್ನ ಮೂಲವಾಗಿದ್ದು ರೆಸ್ವೆರಾಟ್ರೊಲ್ ಎಂಬ ಸಂಯುಕ್ತವನ್ನು ಹೊಂದಿದೆ
ಇದು ದೇಹದ ಆಂಟಿಆಕ್ಸಿಡೆಂಟ್ ರೀತಿ ವರ್ತಿಸುತ್ತದೆ ಅಷ್ಟೇ ಅಲ್ಲದೆ ದೇಹದಲ್ಲಿನ ಕೋಶಗಳನ್ನು ಹಾನಿಯಾಗದಂತೆ ಕಾಪಾಡಿ ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ಕೋಲೋರೆಕ್ಟಲ್ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಪ್ರಮುಖ ಕ್ಯಾನ್ಸರ್ಗಳನ್ನ ತಡೆಗಟ್ಟುವ ಉತ್ತಮ ಮದ್ದು

2. ವಯಸ್ಸಿನ ಸಂಬಂಧಿತ ಜ್ಞಾಪಶಕ್ತಿ ಸಮಸ್ಯೆ ತಡೆಯುತ್ತದೆ:

ಕೆಂಪು ವೈನ್ ಮತ್ತು ಕೆಂಪು ದ್ರಾಕ್ಷಿಯಲ್ಲಿ ಕಂಡುಬರುವ ರೆಸ್ವೆರಾಟ್ರೊಲ್ ವಯಸ್ಸಿನ ಸಂಬಂಧಿತ ಜ್ಞಾಪಶಕ್ತಿ ಸಮಸ್ಯೆ ತಡೆಗಟ್ಟುವಲ್ಲಿ ನೆರವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ .

3. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ :

ವೈನ್ ನಲ್ಲಿ ಹೆಚ್ಚಿನ ಪ್ರಮಾಣದ ಪ್ರೊಸಯಾನಿಡಿನ್ಗಳಿವೆ ಇದು ಫಿನಾಲ್ಗಳ ಒಂದು ವರ್ಗಕ್ಕೆ ಸೇರಿದ್ದು ,ಎಲ್ಡಿಎಲ್ (ಕೆಟ್ಟ) ಕೊಲೆಸ್ಟರಾಲ್ನ ಆಕ್ಸಿಡೀಕರಣಗೊಳಿಸಿ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

4. ರಕ್ತ ಹೆಪ್ಪುಗಟ್ಟುವಿಕೆಗೆ ಸಹಕಾರಿ :

ವೈನ್ ನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಂಶವಿದ್ದು ಅಧಿಕ ರಕ್ತಸ್ರಾವ ತಡೆಯುತ್ತದೆ .

5. ಡಿಮೆನ್ಶಿಯಾ ಮತ್ತು ಆಲ್ಝೈಮರ್ನ ತಡೆಗಟ್ಟುವಿಕೆ:

ವೈನ್ನಲ್ಲಿ ರೆಸ್ವೆರಾಟ್ರೊಲ್ ಹೆಚ್ಚಿದ್ದು ಇದು ನರ-ರಕ್ಷಣಾತ್ಮಕ ಪಾತ್ರವನ್ನು ವಹಿಸುತ್ತದೆ ಮತ್ತು ಆಲ್ಝೈಮರ್ನ ಉಂಟುಮಾಡುವ ಪ್ಲೇಕ್ಗಳ ಅವನತಿಯನ್ನು ಹೆಚ್ಚಿಸುತ್ತದೆ.

6. ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ:

ಹಾರ್ವರ್ಡ್ ಮೆಡಿಕಲ್ ಸ್ಕೂಲ್ ದೀರ್ಘಾವಧಿಯ ಆರೋಗ್ಯಕರ ಜೀವನಕ್ಕಾಗಿ ರೆಸ್ವೆರಾಟ್ರೊಲ್ನ ದೈನಂದಿನ ಕ್ರಮದಲ್ಲಿ ಸೇರಿಸಿ ಎಂದು ಶಿಫಾರಸು ಮಾಡುತ್ತದೆ ಹಾಗು ರೆಡ್ ವೈನ್ ನಲ್ಲಿ ಇದರ ಅಂಶ ಹೆಚ್ಚಿದೆ .

7. ಮಧುಮೇಹವನ್ನು ತಡೆಗಟ್ಟುತ್ತದೆ:

ಟೈಪ್ 2 ಮಧುಮೇಹ ರೋಗಿಗಳಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

8. ಮೂಳೆ ಸಾಂದ್ರತೆ ಹೆಚ್ಚಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ನ ತಡೆಗಟ್ಟುತ್ತದೆ :

ಕೆಂಪು ವೈನ್ ನ ಹೆಚ್ಚಿನ ಸಿಲಿಕಾನ್ ಅಂಶವು ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ , ಫೈಟೊಸ್ಟ್ರೋಜನ್ಗಳ ಕಾರಣದಿಂದ ಮುಟ್ಟು ನಿಂತಿರುವ ಮಹಿಳೆಯರಿಗೂ ಇದು ಸಹಾಯಕ.

9. ಪಿತ್ತಗಲ್ಲು ಮತ್ತು ಕಿಡ್ನಿ ಕಲ್ಲಿನ ಅಪಾಯ ಕಡಿಮೆ ಮಾಡುತ್ತದೆ :

ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಡೆಸಿದ ಅಧ್ಯಯನಗಳ ಪ್ರಕಾರ ಪ್ರತಿ ದಿನದ ವೈನ್ ಕುಡಿಯುವವರಲ್ಲಿ ಪಿತ್ತಗಲ್ಲು ಮತ್ತು ಕಿಡ್ನಿ ಕಲ್ಲಿನ ಅಪಾಯ ಕಡಿಮೆ ಎಂದು ಹೇಳಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top