fbpx
ಭವಿಷ್ಯ

ಈ ಮೂರು ರಾಶಿಗಳಲ್ಲಿ ಹುಟ್ಟಿರೋರು ಸಕ್ಕತ್ ಬುದ್ದಿವಂತರಾಗಿರ್ತಾರೆ.

ಈ ಮೂರು ರಾಶಿಗಳಲ್ಲಿ ನಿಮ್ಮದೂ ಒಂದಾಗಿದ್ದರೆ,ನೀವು ಆ ರಾಶಿಗಳಲ್ಲಿ ಹುಟ್ಟಿದವರಾಗಿದ್ದರೆ,  ಬೇರೆ ಎಲ್ಲರಿಗಿಂತಲೂ ನೀವೇ ಬುದ್ಧಿವಂತರೂ ಎಂದು ನಿಮಗೆ ಗೊತ್ತೇ ?

ವಿಜ್ಞಾನದ ಪ್ರಕಾರ ಬುದ್ಧಿವಂತಿಕೆಯಲ್ಲಿ ಎರಡು ವಿಧಗಳಲ್ಲಿವೆ.  ಅವು ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ. ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯನ್ನು ಬುದ್ಧಿಮತ್ತೆಯ ಪ್ರಮಾಣದಿಂದ ಅಳತೆ ಮಾಡಿ ಪರೀಕ್ಷೆ ಮಾಡಲಾಗುತ್ತದೆ. ಇದಾದ ನಂತರ ಭಾವನಾತ್ಮಕ ಬುದ್ಧಿವಂತಿಕೆಯ ಅಂತರ್ಬೋದನೆಯ ಸಾಮಾರ್ತ್ಯವನ್ನು ಕೂಡ   ಎಷ್ಟಿದೆ ಎಂದು ಅದು  ಸೂಚಿಸುತ್ತದೆ.

ಜ್ಯೋತಿಶ್ಶಾಸ್ತ್ರಾದಲ್ಲಿ ಒಟ್ಟು ಹನ್ನೆರಡು ರಾಶಿಗಳಿವೆ,ಆ ಹನ್ನೆರಡು ರಾಶಿಗಳಲ್ಲಿ ,ಕೇವಲ ಮೂರು ರಾಶಿಗಳು  ಮಾತ್ರ ಈ ಮೇಲೆ ಹೇಳಿರುವ ಲಕ್ಷಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಪ್ರದರ್ಶಿಸುತ್ತವೆ.

ಇದರ ಆಧಾರದ ಮೇಲೆ,ಅವರನ್ನು ತುಂಬಾ ಬುದ್ಧಿವಂತರು ತೀಕ್ಷ್ಣವಾದ ಸ್ವಭಾವವನ್ನು ಹೊಂದಿರುವವರು ಎಂದು ಉಲ್ಲೇಖಿಸಲಾಗಿದೆ. ಯಾವ ಯಾವ ವ್ಯಕ್ತಿಗಳು ಈ ರಾಶಿಗಳಲ್ಲಿ ಹುಟ್ಟಿರುತ್ತಾರೋ ಅವರು ಇವೆಲ್ಲಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ.ಅವರು ಯಾವುದೇ ವಿದ್ಯಾಮಾನವನ್ನು ಅವರ ಸುತ್ತ ಮುತ್ತ ನೆಡೆಯಲಿರುವುದನ್ನು ಸುಲಭವಾಗಿ ಅರ್ಥಮಾಡಿಕೊಂಡು ವಿಷಯವನ್ನು ಬೇಗನೆ ಗ್ರಹಿಸುತ್ತಾರೆ.

ಅಂದರೆ ಇದರ ಅರ್ಥ ಬೇರೆ ರಾಶಿಗಳಲ್ಲಿ ಹುಟ್ಟಿದವರು ಮೂರ್ಖರು,ಡದ್ದರು ಎಂದಲ್ಲ,ಇದು ಕೇವಲ ಕೆಲವೇ  ಕೆಲವು ಗ್ರಹಗಳ ಪರಿಣಾಮವಾಗಿ  ನಿರ್ದಿಷ್ಟ ಲಕ್ಷಣವನ್ನು ಆಯಾ ರಾಶಿಗಳಲ್ಲಿ   ಪ್ರಭಾವಿಸುತ್ತವೆ.ಅವೆ ಮಿಥುನ,ವೃಶ್ಚಿಕ, ಕುಂಭ ರಾಶಿ.

1.ಮಿಥುನ ರಾಶಿ:-

ಇದು ಸಂವಹನಾ ಗ್ರಹವಾಗಿದ್ದು.ಬುಧ ಗ್ರಹವು ಈ ರಾಶಿಯನ್ನು ಆಳುತ್ತದೆ.ಅವಳಿಗಳ  ಚಿತ್ರವಿರುವ ಈ ರಾಶಿವರನ್ನು ಉತ್ತಮ ಭಾಷಣಕಾರರು,ತ್ವರಿತ ಬುದ್ಧಿವಂತರಾದ ಮತ್ತು ಸಾಕಷ್ಟು ಬುದ್ಧಿವಂತಿಕೆ ಇರುವವರು  ಎಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ  ಮಿಥುನ ರಾಶಿಯವರಿಗೆ ಗಣಿತ ಶಾಸ್ತ್ರದಲ್ಲಿ  ಬುದ್ದಿ ಚೆನ್ನಾಗಿದ್ದು, ಬ್ಯಾಂಕನಲ್ಲಿ ಸಮರ್ಥ ವ್ಯವಸ್ಥಾಪಕರ ಹುದ್ದೆಯನ್ನು ನಿರ್ವಹಿಸಬಲ್ಲ ಸಾಮರ್ಥ್ಯ ಇವರಿಗೆ ಇರುತ್ತದೆ.ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಹುಟ್ಟಿದವರು  ಸಂಖ್ಯಾಶಾಸ್ತ್ರಜ್ಞರು ಮತ್ತು ಭೌತಶಾಸ್ತ್ರಜ್ಞರು ಆಗುವ ಸಾಧ್ಯತೆ ಸಹ ಹೆಚ್ಚು.

ಮಿಥುನ ರಾಶಿಯಲ್ಲಿರುವ ಹೆಸರಾಂತ ವ್ಯಕ್ತಿಗಳು:-

ಡೇನಿಯಲ್ ಫೆರನ್ ಹೀಟ್ -ಇವರು ದೇಹದ ಉಷ್ಣಾಂಶವನ್ನು ಅಳತೆ ಮಾಡುವ ಮಾಪನವನ್ನು ಕಂಡು ಹಿಡಿದವರು.

ಫ್ರಾನ್ಸಿಸ್ ಚಿಕ್-ಡಿ .ನ್ .ಎ.  ರಚನೆಯನ್ನು ಪತ್ತೆ ಹಚ್ಚಿದವರು.

ಮೇರಿ ಎನ್ನಿಂಗ್-ಹೆಸರಾಂತ ಪಳೆಯುಳಿಕೆ ತಜ್ಞರು.

ಜೇಮ್ಸ್ ಕ್ಲರ್ಕ್ ವೆಲ್-  ಆಧುನಿಕ ಬೌತಶಾಸ್ತ್ರದ ತಂದೆ,ಮತ್ತು ವಿದ್ಯುತ್ ಕಾಂತಿಯತೆಯನ್ನು ಪತ್ತೆ ಹಚ್ಚಿದವರು.

2.ವೃಶ್ಚಿಕ ರಾಶಿ:-

ಆಶ್ಚರ್ಯ ಪಡಬೇಡಿ.ಮೊಸಗಾರರಾದ ವೃಶ್ಚಿಕ ರಾಶಿಯವರು ತಮ್ಮ ಇನ್ನೊಂದು ಮುಖವಾದ ಕತ್ತಲೆಯ ಭಾಗವನ್ನು ಹೊಂದಿದ್ದು  ವಿವೇಚನೆಯಿಲ್ಲದ ನಿರ್ದಾರಗಳನ್ನು  ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ ಹಾಗೆ ಅವುಗಳನ್ನು ಕಂದ್ರೀಕರಿಸಿ ಪ್ರೇರೇಪಿಸಲಾಗುತ್ತದೆ.ಇವರು ಸದಾ ಬಹಳ ಉತ್ಸಾಹದಿಂದ ಕೂಡಿದ್ದು ತೀಕ್ಷ್ಣವಾದ ಬುದ್ಧಿಯಿಂದ ಜೀವನದ ರಸ್ತೆಯಲ್ಲಿ ಸಾಗುತ್ತಾರೆ.

ವೃಶ್ಚಿಕ ರಾಶಿಯಲ್ಲಿರುವ ಹೆಸರಾಂತ ವ್ಯಕ್ತಿಗಳು:- ಹೋಮಿ ಜೆ ಬಾಬಾ, ಸರ್ ಸಿ. ವಿ .ರಾಮನ್, ಮೇಡಂ ಕ್ಯೂರಿ, ಬಿಲ್ ಗೇಟ್ಸ್.

3.ಕುಂಭ ರಾಶಿ:-

ಶನಿ ಗ್ರಹವು. ಕುಂಭ ಮತ್ತು ಮಕರ ರಾಶಿಯನ್ನು ಆಳುತ್ತದೆ. ಇವರ ಸ್ವತಂತ್ರತ್ಯವಾದ ಸ್ವಭಾವವು ಮೂಲ ಆಲೋಚನೆಗಳನ್ನು  ಸರ್ಷ್ಟಿಸುತ್ತದೆ.ಇವರು ಏನೇ ಹೇಳಿದರು  ಹೆಚ್ಚು ಅರ್ಥ ಗರ್ಭಿತವಾಗಿದ್ದು ಮತ್ತು ಪ್ರತಿಫಲಿತವಾದದ್ದು ಕೂಡ. ಇವರು ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದ್ದು ಇವರ ದೃಷ್ಟಿಯ ಚಿಂತನೆಯಿಂದಾಗಿ ಸಮಾಜಕಾರಿ ಸವಾಲುಗಳನ್ನು ಎದುರಿಸುವ  ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಇವರನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಕುಂಭ ರಾಶಿಯಲ್ಲಿ ಹುಟ್ಟಿರುವ  ಹೆಸರಾಂತ ವ್ಯಕ್ತಿಗಳು- ಚಾರ್ಲ್ಸ್ ಡಾರ್ವಿನ್ ಜೀವಶಾಸ್ತ್ರಜ್ಞರು,ಗೆಲಿಲಿಯೋ  ಗೆಲಿಲಿ ವಿಜ್ಞಾನಿ ಮತ್ತು ಥೋಮಸ್ ಆಳ್ವ ಎಡಿಸನ್ ವಿದ್ಯುತ್  ಬಲ್ಬನ್ನು  ಕಂಡುಹಿಡಿದವರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top