fbpx
ಭವಿಷ್ಯ

ನೀವು ಹುಟ್ಟಿರೋ ತಿಂಗಳು ನಿಮ್ಮ ಭವಿಷ್ಯನ ಸಕ್ಕಾತ್ತಾಗಿ ಹೇಳ್ತವೆ!

ನೀವು ಹುಟ್ಟಿರೋ ರಾಶಿ ನಕ್ಷತ್ರ ತರಾನೇ ನಿಮ್ಮ ಹುಟ್ಟಿದ ತಿಂಗಳು ಸಹ ನಿಮ್ಮ ಗುಣಗಳನ್ನ ಸಕ್ಕತ್ತಾಗಿ ಹೇಳುತ್ತಂತೆ .

ಅದು ಹೇಗೆ ಅಂತೀರಾ ಮುಂದೆ ಓದಿ ನಿಮ್ಮ ಗುಣಕ್ಕೆ 85 ಪರ್ಸೆಂಟ್ ಹೊಂದೆ ಹೊಂದುತ್ತೆ .

ಹುಟ್ಟಿರೋ ತಿಂಗ್ಳು ಮತ್ತೆ ನಿಮ್ಮ ಗುಣಗಳು ಹೀಗಿದೆ ನೋಡ್ಕೊಳ್ಳಿ

ಜನವರಿ :

ನೀವು ಜನವರಿಲಿ ಹುಟ್ಟಿದ್ರೆ ಸಂಖ್ಯೆ ಒಂದು ನಿಮ್ಮನ್ನ ಆಳುತ್ತೇ , ಯಾರ ಮಾತು ಕೇಳಲ್ಲ ನಿಂದೆ ನಿರ್ಧಾರ , ಒಳ್ಳೆ ಲೀಡರ್ ಗುಣ ನಿಮಗೆ ಇರುತ್ತೆ ,
ಬೇರೆ ಯವರಿಗೆ ಹೋಲಿಸಿಕೊಂಡರೆ ನೀವು ತುಂಬ ಮೇಲ್ಮಟ್ಟಕ್ಕೆ ಯೋಚ್ನೆ ಮಾಡ್ತೀರಾ , ಮಕ್ಕದ್ ಮೇಲೆ ಹೊಡ್ದನ್ಗೆ ಮಾತಾಡ್ತೀರಾ , ನಿಮ್ಮ ಸ್ಟ್ರೇಟ್ ಫಾರ್ವರ್ಡ್ ಗುಣ ನ ನಿಮ್ಮ ಪ್ಲಸ್ ಮತ್ತೆ ಅದೇ ನಿಮ್ಮ ಮೈನಸ್ .
ನಿಮ್ಮನ್ನ ಯಾರು ಪ್ರಶ್ನೆ ಮಾಡಾಕೆ ಹೋಗಲ್ಲ ಯಾಕಂದ್ರೆ ನಿಮ್ಮ ನಿರ್ಧಾರ ಪರ್ಫೆಕ್ಟ್ ಆಗಿರುತ್ತೆ , ಆದರೆ ಅದ್ಯಾಕೋ ಹೆಣ್ಣುಮಕ್ಕ್ಳು ನಿಮಗೆ ಸಹಾಯ ಮಾಡಲ್ಲ ನಿಮ್ಮ ಸಹಾಯಕ್ಕೆ ಬರೋರೆ ಗಂಡು ಮಕ್ಳು ಅಂತೇ . ನೀವು ಇತರರಿಗಿಂತ ಹೆಚ್ಚು ಭಿನ್ನವಾಗಿ ಬದುಕ್ತಿರಾ ಅಂತೇ ,ಹಠಮಾರಿ , ಹಿಡಿದ ಕೆಲಸ ಸಾಧಿಸೋವರ್ಗು ಬಿಡಲ್ಲ , ದುಡ್ಡು ಕಾಸಿನ ವಿಷ್ಯದಲ್ಲಿ ಬಹಳ ಹುಷಾರು ನೀವು ,ಕಷ್ಟ ಪಡೋ ಜೀವ ನೀವು ,ಯಾವಾಗ್ಲೂ ಏನಾದ್ರು ಕಲಿಬೇಕು ಅನ್ನೋ ಆಸಕ್ತಿ ಇರುತ್ತೆ .

ಫೆಬ್ರವರಿ :

ಬಹಳ ಸೆಂಟಿಮೆಂಟಲ್ , ಎಮೋಷನಲ್ , ಭಾವಜೀವಿಗಳು ಯಾರ್ನಾದ್ರು ಹಚ್ಚ್ಕೊಂಡ್ಬಿಟ್ರೆ ಸಾಕು ಜೀವನ ಪರ್ಯಂತ ಇಷ್ಟಪಡ್ತಿರಾ , ಜೀವನ ಪರ್ಯಂತ ಪ್ರೀತಿಗಾಗಿ ಹುಡುಕುತ್ತಾ ಇರ್ತೀರಾ ,
ವಿಶೇಷವಾದ ಪ್ರೀತಿಸುವ ವ್ಯಕ್ತಿ ಸಿಗದೇ ಹೋದ್ರೆ ಮಾನಸಿಕವಾಗಿ ಬಹಳ ಕುಗ್ಗಿ ಹೋಗ್ತೀರಾ ,ಬಹಳ ಬೇಗ ಡೆಪ್ರೆಸ್ಸ್ ಆಗೋ ಚಾನ್ಸ್ ಜಾಸ್ತಿ , ಒಳ್ಳೆ ತಂದೆ ಅಥವಾ ತಾಯಿ ಆಗೋಕೆ ಹೇಳಿ ಮಾಡಿಸ್ದನ್ಗೆ ನಿಮ್ಮ ಗುಣ ಆದಷ್ಟು ಎಮೋಷನ್ಸ್ ಕಡಿಮೆ ಮಾಡ್ಕೊಳ್ಲಿಲ್ಲ ಅಂದ್ರೆ ಕಣ್ಣೀರಲ್ಲೇ ಕೈ ತೊಳಿಬೇಕಾಗುತ್ತೆ .

ಬೇಡವಾಗಿರೋದರ ಬಗ್ಗೆ ಚಿಂತೆ ಜಾಸ್ತಿ , ಅತಿ ಬುದ್ಧಿವಂತರು , ಇಮ್ಯಾಜಿನೇಶನ್ ನಲ್ಲೆ ಕಾಲ ಕಳಿತ ಇರ್ತಾರೆ , ಉದ್ವಿಗ್ನತೆ. ಶಾಂತಿಯುತ, ನಾಚಿಕೆ ಮತ್ತು ವಿನಮ್ರ. ಪ್ರಾಮಾಣಿಕ ಮತ್ತು ನಿಷ್ಠಾವಂತ , ಸ್ವಾತಂತ್ರ್ಯವನ್ನು ಪ್ರೀತಿಸುವ ,ಬಹಳ ಬೇಗ ಕೋಪ ಮಾಡ್ಕೊಳ್ಳೋ , ಧೈರ್ಯಶಾಲಿ , ಹಠಮಾರಿ. ಮಹತ್ವಾಕಾಂಕ್ಷೆಯ. ಕನಸುಗಳು ಹೊತ್ತಿರೋರು , ರೋಮ್ಯಾಂಟಿಕ್. ಮತ್ತೆ ಬಹಳ ಹಣ ಖರ್ಚು ಮಾಡೋ ವ್ಯಕ್ತಿ
ಎಲ್ಲರನ್ನು ಬೇಗ ನಂಬಿಡೊ ಸ್ವಭಾವ.

ಮಾರ್ಚ್ :

ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ನಿಮಗೆ ಯಶಸ್ಸು ಸಿಗುತ್ತೆ , ನಿಮ್ಮದು ಬಹಳ ಚಂಚಲ ಮನಸ್ಸು ಬಹಳ ಜನಕ್ಕೆ ಅವರ ಪ್ರೀತಿ ಪ್ರೇಮ ಹೆಚ್ಚು ದಿನ ನಿಲ್ಲೋಲ್ಲ , ನೀವು ಬಹಳಷ್ಟು ಹಣವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ, ಆದರೆ ಅದನ್ನು ತ್ವರಿತವಾಗಿ ಕಳೆದುಕೊಳ್ಳುತ್ತೀರಿ ,ನಂಬಿದೋರೆ ಮೋಸ ಮಾಡೋದು ಜಾಸ್ತಿ ನಿಮಗೆ ಆದರೆ ನಿಮ್ಮನ್ನ ನೀವು ಬಹಳ ಪ್ರೀತಿ ಮಾಡ್ತೀರಾ

ಆಕರ್ಷಕ ವ್ಯಕ್ತಿತ್ವ , ನಾಚಿಕೆ ಸ್ವಭಾವ , ರಹಸ್ಯ ಮಾಡೋ ,ಪ್ರಾಮಾಣಿಕ, ಉದಾರ , ಸಹಾನುಭೂತಿ. ಶಾಂತಿ ಮತ್ತು ಪ್ರಶಾಂತತೆಯನ್ನು ಪ್ರೀತಿಸುತ್ತಾರೇ
ಬಹಳ ಸೂಕ್ಷ್ಮ ಸ್ವಭಾವದ ಇವರು ಬೇಗ ಕೋಪ ಮಾಡ್ಕೋತಾರೆ , ಅಲಂಕಾರಿಕ ವಸ್ತುಗಳನ್ನ ಜಾಸ್ತಿ ಪ್ರೀತಿ ಮಾಡ್ತಾರೆ , ನಂಬಿಕಸ್ತರು , ಬೇರೆಯವರನ್ನ ಹಂಗೆ ಅಳೆದು ತೂಗಿ ಬಿಡ್ತಾರೆ ಇವರಿಗೆ ಮೋಸ ಮಾಡೋದು ಬಹಳ ಕಷ್ಟ , ಕನಸು ಕಾಣೋದು , ಟ್ರಿಪ್ ಮಾಡೋದು ಬಹಳ ಇಷ್ಟ , ಕೆಟ್ಟ ಸಹವಾಸಗಳು ಹಂಗೆ ಆಗೋಯ್ತವೆ .,ಬಹಳ ಮೂಡಿ ಇವ್ರು .

ಏಪ್ರಿಲ್ :

ಮೊಂಡುತನ, ಹಠಮಾರಿ ಗುಣ ಜಾಸ್ತಿ  , ನೀವು ಹೇಳಿದಂಗೆ ಜನ ಕೇಳ್ಬೇಕು ಅನ್ಕೊಂಡಿರ್ತೀರಾ , ಸೃಜನಾತ್ಮಕ, ಮಾದಕ ಮತ್ತು ಬುದ್ಧಿವಂತ ಗುಣಗಳು ನಿಮ್ಮನ್ನ ಎಲ್ಲರಿಗು ಇಷ್ಟ ಆಗೋ ತರ ಮಾಡುತ್ತೆ .
ಬಹಳ ಮಹತ್ವಾಕಾಂಕ್ಷಿ ಅನ್ಕೊಂಡಿದ್ದು ಮಾಡ್ಲೆ ಬೇಕು ಅನ್ನೋ ಗುಣ , ನೀವು ಜನರನ್ನು ದೂರವಿಡುವುದಿಲ್ಲ ಅನೇಕ ಸ್ನೇಹಿತರನ್ನ ಆಕರ್ಷಣೆ ಮಾಡ್ತೀರಾ .
ನಿಮ್ಮ ನಾನ್ ಹೇಳಿದಂಗೆ ಜನ ಕೇಳ್ಬೇಕು ಅನ್ನೋ ದನ್ನು ಬಿಟ್ರೆ ಒಳ್ಳೆದಾಗುತ್ತೆ.

ಸಕ್ರಿಯ, ಸೌಹಾರ್ದ ,ಉದಾರ. ಭಾವನಾತ್ಮಕ, ಆಕ್ರಮಣಕಾರಿ. ಮತ್ತು ಕ್ರಿಯಾತ್ಮಕ. ನಿರ್ಣಾಯಕ ಗುಣಗಳನ್ನು ಹೊಂದಿದ್ದು ಕೆಲವು ಸಾರಿ ಮಾಡೋ ನಿರ್ಧಾರಗಳಿಗೆ ಬಹಳ ಪಶ್ಚಾತಾಪ ಪಟ್ಕೋತೀರಾ . ಬಹಳ ಆಕರ್ಷಕವಾಗಿರೋ ನಿಮಗೆ ಪ್ರೀತಿ ಜಾಸ್ತಿ , ನೀವು ತುಂಬ ಸ್ಟ್ರಾಂಗು .
ಜನಗಳ ಕಷ್ಟಗಳಿಗೆ ಆಗ್ತೀರಾ ಒಳ್ಳೆ ಒಳ್ಳೆ ಸಲಹೆಗಳು ಕೊಡ್ತೀರಾ .

ಮೇ

ನಿಮ್ಮ ಅಭಿಪ್ರಾಯ ತಿಳ್ಸೋದು ನಿಮಗೆ ಬಹಳ ಮುಖ್ಯ ಆಗಿರುತ್ತೆ , ಕಲೆಗಳಲ್ಲಿ ಆಸಕ್ತಿ ಹೊಂದಿರ್ತೀರಾ , ಒಳ್ಳೆಯ ಪ್ರತಿಭಾನ್ವಿತ ಸಂಗೀತಗಾರ, ನಟ, ಅಥವಾ ಬರಹಗಾರರಾಗಿರಬಹುದು.
ಹೆಚ್ಚಿನ ಗೌರವ ಬೇಕು ಅನ್ಕೋತೀರಾ , ಮದುವೆಯ ಪವಿತ್ರತೆಯ ಬಗ್ಗೆ ಬಹಳ ನಂಬಿಕೆ ಇಟ್ಕೊಂಡಿರ್ತಿರಾ .ಕಷ್ಟ ಪಡೋ ಜೀವಿ ನೀವು.
ಸ್ನೇಹಿತರೆಂದರೆ ಪ್ರಾಣ ಬಹಳಷ್ಟು ಸಮಯ ಅವರ ಜೊತೇನೆ ಕಳೆಯೋಕೆ ಇಷ್ಟ ಪಡ್ತಿರಾ , ಪ್ರಕೃತಿ ಮಧ್ಯೆ ಕಾಲ ಕಳೆಯೋಕೆ ಇಷ್ಟ ಪಡ್ತಿರಾ , ಒಂದೊಂದ್ಸಾರಿ ಒಬ್ಬರೇ ಇರೋಕೆ ಇಷ್ಟ ಪಡ್ತಿರಾ .
ಮೊಂಡುತನದ , ಕಠೋರ ಹೃದಯ ಬೇಗ ಕೋಪ ಮಾಡ್ಕೊಳ್ಳೋ ಬುದ್ದಿ ದೇವ್ರು ನಿಮಗೆ ಕೊಟ್ರನು ಬೇಗ ಸಮಾಧಾನ ಮಾಡಬಹುದು .
ಕನಸುಗಳು ಬಹಳ ಇಷ್ಟ , ಕಿವಿ ಮತ್ತೆ ಕುತ್ತಿಗೆ ಸಮಸ್ಯೆ ಬರೋ ಸಾಧ್ಯತೆ ಇದೆ .

 

ಜೂನ್

ಬಹಳ ರೋಮ್ಯಾಂಟಿಕ್ ವ್ಯಕ್ತಿ, ಆದರೆ ಬೇರೆಯವರನ್ನ ಕಂಡ್ರೆ ಹೊಟ್ಟೆ ಕಿಚ್ಚು ಪಡ್ತಿರಾ ,ಪ್ರೀತಿ ಜೀವನ ಅಷ್ಟು ಚೆನ್ನಾಗಿ ಇರಲ್ವೇನೋ ಆದರೆ ನೀವೊಬ್ಬರು ಅದ್ಬುತ ಪ್ರೇಮಿ ಅನ್ನೋದ್ರಲ್ಲಿ ಡೌಟ್ ಇಲ್ಲ, ಹಳೆ ವಿಷಯಗಳನ್ನ ನೆನಪಿಸಿಕೊಂಡು ಕೊರಗುತ್ತಾಇರ್ತೀರಾ .
ಗಾಳಿ ಸುದ್ದಿಗಳು ಕೇಳೋದು ಮತ್ತೆ ಹೇಳೋದು ಜಾಸ್ತಿ ಅದೇ ನಿಮಗೆ ಮೈನಸ್ , ಜನರನ್ನ ಪ್ರೀತಿಸೋ ವ್ಯಕ್ತಿ , ಮಕ್ಕಳು ಅಷ್ಟೊಂದು ಇಷ್ಟ ಆಗೋಲ್ಲ ಆದರೆ ನಿಮ್ಮ ಕುಟುಂಬ ಅಂದ್ರೆ ನಿಮಗೆ ಪ್ರಾಣ .
ಸಂಕೋಚದ ಸ್ವಭಾವ , ಆದಷ್ಟು ಬೇಗ ಯಾರ್ನಾದ್ರು ಹಚ್ಕೊಂಡ್ಬಿಡೋ ಬುದ್ದಿ , ಮುಂದೆ ಬರೋದನ್ನ ಮೊದಲೇ ಹೇಳೋ ಬುದ್ದಿ , ಬಹಳ ಸೂಕ್ಷ್ಮ , ಯಾವಾಗೂ ಬೆಸ್ಟ್ ಇರ್ಬೇಕು ಅಂತ ಅನ್ಕೋತೀರಾ ,
ಖುಷಿ ಖುಷಿಯಾಗಿ ಓಡಾಡ್ಕೊಂಡು ಇರ್ತೀರಾ , ಜಾಸ್ತಿ ಮಾತು ,ಹಗಲು ಕನಸು ಕಾಣೋದು , ಬೇಗ ಸ್ನೇಹಿತರನ್ನ ಮಾಡಿಕೊಳ್ಳೋ ಗುಣ , ಬಹಳ ಬೇಗ ಬೇಜಾರು ಮಾಡ್ಕೊಳ್ಳೋ ಗುಣ , ನಿಮಗೆ ಬೇಗ ಬೋರ್ ಆಗುತ್ತೆ , ನೆಗಡಿ ಹೆಚ್ಚಿಗೆ ಬರೋ ಚಾನ್ಸಸ್ ಇದೆ .

 

ಜುಲೈ

ಪ್ರಾಮಾಣಿಕ , ಸಹಾನುಭೂತಿಯ ವ್ಯಕ್ತಿ. ನಿಮ್ಮ ಕುಟುಂಬಕ್ಕೆ ನೀವು ಆಳವಾಗಿ ಕಾಳಜಿಯನ್ನು ಹೊಂದಿದ್ದೀರಿ ಮತ್ತು ನಿಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ರಕ್ಷಿಸಲು ಸಾಹಸ ಮಾಡ್ತೀರಾ. ಬಹಳ ಕೊಂಕು ಮಾತಾಡೋ ಗುಣ ಹೊಂದಿರ್ತೀರಾ ,
ನೀವು ಬಳಸೋ ಬಟ್ಟೆ , ಮೇಕ್ ಅಪ್ ,ಕಾರು ,ಜೀವ ಶೈಲಿ ಎಲ್ಲ ಸಕತ್ ಅಚ್ಚುಕಟ್ಟಾಗಿ ಇರುತ್ತೆ ,ಬಹಳ ಬುದ್ದಿವಂತ್ರು ,ಮೃದು ಸ್ವಭಾವ , ಎಲ್ಲರಿಗು ಇಷ್ಟ ಆಗ್ತೀರಾ ಆದ್ರೆ ಶತ್ರುಗಳು ಜಾಸ್ತಿ . ಸೂಕ್ಷ್ಮ ಮತ್ತು ಖಿನ್ನತೆಗೆ ಒಳಗಾಗುವ ಚಾನ್ಸಸ್ ಜಾಸ್ತಿ .
ಜೊತೆ ಇರಲು ಜನ ಬಹಳ ಇಷ್ಟ ಪಡ್ತಾರೆ , ಅರ್ಥ ಮಾಡ್ಕೊಳ್ಳೋಕೆ ತುಂಬ ಕಷ್ಟ , ಪ್ರಾಮಾಣಿಕ , ಜಾಣ್ಮೆಯ. ಸೌಹಾರ್ದ ,ಭಾವನೆಗಳಿಗೆ ಹೆಚ್ಚು ಬೆಲೆ ಕೊಡ್ತಾರೆ .
ಬೇಗ ಮನಸಿಗೆ ನೋವಾಗುತ್ತೆ , ಪ್ರತಿಕಾರ ತಿರಿಸ್ಕೊಬೇಕು ಅಂತ ಕಾಯುತ್ತ ಇರ್ತೀರಾ ,ಮೂಡಿ , ಬೇರೆ ಯವರು ಏನೇ ತೊಂದ್ರೆ ಕೊಟ್ರು ಕ್ಷಮೆ ಕೊಡ್ತೀರಾ ಆದ್ರೆ ಮರೆಯೋಲ್ಲ . ಹೆಚ್ಚಿಗೆ ಜನರನ್ನ ನಂಬೋಲ್ಲ , ಜನರ ಬಗ್ಗೆ ಒಂದು ಅಭಿಪ್ರಾಯ ಇಟ್ಕೊಂಡೇ ಇರ್ತಾರೆ , ಹಳೇದನ್ನು ಯೋಚ್ನೆ ಮಾಡೋದು ಬಿಡೋಲ್ಲ , ಒಂಟಿ ಯಾಗಿ ಹೆಚ್ಚಿಗೆ ಇರೋಕೆ ಇಷ್ಟ ಪಡ್ತಾರೆ .

 

ಆಗಸ್ಟ್

ಸಮಾಜಕ್ಕೋಸ್ಕರ ದುಡಿಯೋ ವ್ಯಕ್ತಿ ನೀವು , ಎಲ್ಲರಲ್ಲೂ ಒಳ್ಳೇದನ್ನೇ ನೋಡೋ ವ್ಯಕ್ತಿ , ಹೆಚ್ಚಿಗೆ ಕೆಲಸ ಮಾಡಿ ಮಾಡಿ ಇಲ್ಲದೆ ಇರೋ ಖಾಯಿಲೆ ಎಲ್ಲ ಮೈ ಮೇಲೆ ಎಳ್ಕೊತೀರಾ , ಬೇರೆಯವರಿಗೆ ಸ್ಪೂರ್ತಿ ತುಂಬೋ ಕೆಲಸ ಮಾಡ್ತೀರಾ , ಹಣವು ನಿಮಗೆ ಸುಲಭವಾಗಿ ಬರುತ್ತದೆ.

ಜೋಕ್ ಮಾಡಲು ಇಷ್ಟಪಡುತ್ತಾರೆ. ಆಕರ್ಷಕವಾಗಿ ಇರ್ತಾರೆ , ದೃಢತೆ ಮತ್ತು ನಾಯಕತ್ವ ಗುಣ ಇರುತ್ತೆ , ಯಾರಿಗೂ ಹೆದ್ರೋಲ್ಲ ,ಉದಾರ ಮತ್ತು ಅಹಂಕಾರ
ಸುಲಭವಾಗಿ ಕೋಪ ಮಾಡ್ಕೊಳ್ಳೋ ವ್ಯಕ್ತಿ , ಬಹಳ ಹೊಟ್ಟೆ ಉರಿ ಇರೋ ವ್ಯಕ್ತಿ . ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿ, ಶೀಘ್ರವಾಗಿ ಯೋಚಿಸುತ್ತಾರೇ . ಸ್ವತಂತ್ರ ಆಲೋಚನೆಗಳು. ಮುನ್ನಡೆಸುವ ಗುಣ ಇವರದ್ದು .ಆಶಾದಾಯಕ ಮತ್ತು ವಿಶ್ವಾಸಾರ್ಹ. ರೋಮ್ಯಾಂಟಿಕ್, ಸ್ನೇಹಿತರನ್ನು ಇಷ್ಟಪಡುತ್ತಾರೆ.

ಸೆಪ್ಟೆಂಬರ್

ಜೀವಿತಾವಧಿಯಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಲು ನೀವು ಉದ್ದೇಶಿಸಲಾಗಿದ್ದೀರಿ ಏಕೆಂದರೆ ನೀವು ಬುದ್ಧಿವಂತ ಮತ್ತು ಹೊಂದಿಕೊಳ್ಳುವಿರಿ.
ಬಹಳ ಅಚ್ಚುಕಟ್ಟಾದ ಮನುಷ್ಯರು ನೀವು , ನೀವು ಹೆಚ್ಚು ಬುದ್ಧಿವಂತ ಮತ್ತು ಆಧ್ಯಾತ್ಮಿಕ ಚಿಂತನೆ ಇರುವ ವ್ಯಕ್ತಿ , ನಿಮ್ಮ ದೊಡ್ಡ ದೌರ್ಬಲ್ಯ ಖಿನ್ನತೆಗೆ ಒಳಗಾಗುವುದು ,
ನೀವು ಜೀವನದಲ್ಲಿ ಉದ್ದಾರ ಆಗ್ಬೇಕು ಅಂತಿದ್ರೆ ಮೊದಲು ಆಡೋರ ಮಾತಿಗೆ ಬೆಲೆ ಕೊಡೋದು ನಿಲ್ಲಿಸಿ ,ಅಗತ್ಯಕ್ಕಿಂತ ಜಾಸ್ತಿ ಯೋಚ್ನೆ ಮಾಡ್ಬೇಡಿ .

ಸೌಹಾರ್ದ , ಎಚ್ಚರಿಕೆಯಿಂದ ಹೆಜ್ಜೆ ಇಡೋ ವ್ಯಕ್ತಿ , ಸಹಾನುಭೂತಿ ಉಳ್ಳವರು , ನಿಷ್ಠಾವಂತ , ಸೂಕ್ಷ್ಮ. ಉದಾರ , ಸ್ವತಃ ಪ್ರೇರೇಪಿಸುವ ಸಾಮರ್ಥ್ಯ ,ಒಳ್ಳೆಯ ನೆನಪು. ಬುದ್ಧಿವಂತ ಮತ್ತು ಜ್ಞಾನ ಹೊಂದಿರೋ ವ್ಯಕ್ತಿ ,ಕ್ರೀಡೆಯಲ್ಲಿ ಆಸಕ್ತಿ ಜಾಸ್ತಿ ಮತ್ತೆ ಭಾವಾನಾತ್ಮಕ ಗುಣಗಳು ಕಡಿಮೆ ಇರುತ್ತೆ .

 

ಅಕ್ಟೋಬರ್

ಅಯ್ಯೋ ಏನ್ ಅದೃಷ್ಟ ರೀ ನಿಮ್ದು ಅನ್ಕೊಂಡಿದ್ದನ್ನ ಸಾಧಿಸಿಯೇ ಬಿಡ್ತೀರಾ ..
ಬಹಳ ವಾದ ಮಾಡಿ ಗೆಲ್ಲಲೇ ಬೇಕು ಅನ್ನೋ ಗುಣ ಹೊಂದಿರ್ತೀರಾ , ಮತ್ತೆ ಸೇಡು ಪ್ರತಿಕಾರ ಅಂದ್ರೆ ಎತ್ತಿದ ಕೈ ,
ಒಳ್ಳೆ ಲೀಡರ್ ಗುಣಗಳು ನಿಮಗಿದೆ ಆದರೆ ಅತಿಯಾದ ವಾದ ಮಾಡೋದು ಮತ್ತೆ ಸೇಡಿನ ಗುಣ ಬಿಟ್ರೆ ಜೀವನದಲ್ಲಿ ಬಹಳ ಯಸಹಸ್ಸು ಸಿಗುತ್ತೆ ,

ಒಳ್ಳೆ ಮಾತುಗಾರರು , ಪ್ರೀತಿಸೋರನ್ನ ಬಹಳ ಪ್ರೀತಿ ಮಾಡ್ತೀರಾ ದ್ವೇಷ ಮಾಡೋರನ್ನ ಬಹಳ ದ್ವೇಷ ಮಾಡ್ತೀರಾ ,
ಒಳ್ಳೆಯ ನಿಯತ್ತಿನ ಮನುಷ್ಯರು ನೀವು , ಸ್ನೇಹಿತರು ಅಂದ್ರೆ ಬಹಳ ಇಷ್ಟ ,ಸ್ನೇಹಿತರನ್ನ ಮಾಡ್ಕೊಳ್ಳೋದು ಅಂದ್ರುನು ತುಂಬ ಇಷ್ಟ ,
ತುಂಬ ಎಮೋಷನಲ್ , ಕಲೆ ಗಳಲ್ಲಿ ಆಸ್ಕತಿ ಜಾಸ್ತಿ , ತುಂಬ ಸುತ್ತಾಡೋದು ಇಷ್ಟ , ಮಕ್ಕಳಂದ್ರೆ ಇಷ್ಟ , ಎರಡೆರಡು ಮಾತಾಡೋಕೆ ನಿಮಗೆ ಬರೋಲ್ಲ ,
ಬೇಗ ಆತ್ಮ ವಿಶ್ವಾಸ ಕಳೆದುಕೊಂಡುಬಿಡ್ತೀರಾ ಅದೇ ನಿಮ್ಮ ವೀಕ್ ನೆಸ್ .

ನವೆಂಬರ್

ಒಳ್ಳೆ ಪಾಸಿಟಿವ್ ಆಲೋಚನೆಗಳು ಇರ್ತವೆ , ಕರುಣೆ ,ಪ್ರೀತಿ , ಯಾರನ್ನಾದ್ರೂ ಬೇಗ ಹಚ್ಕೊಂಡ್ಬಿಡ್ತೀರಾ ,
ಬೇಗ ಎಕ್ಸೈಟ್ ಆಗೋ ಬುದ್ದಿ , ಒತ್ತಡಕ್ಕೆ ಒಳಗಾಗೋ ಗುಣ , ಮಾನಸಿಕ ವೇದನೆ ಬಹಳ ಅನುಭವಿಸುತ್ತೀರಾ ,ಬೇರೆ ಅವ್ರು ನಿಮ್ಮನ್ನ ನೋಡಿ ಕಲಿಬೇಕು ಆತರ ನೀವು ಇರ್ತೀರಾ.

ಬಹಳ ಯೋಚನೆ ಮಾಡ್ತೀರಾ , ನೀವು ಒಂತರ ಮಾಸ್ಟರ್ ಪೀಸ್ ಇದ್ದಂಗೆ , ಬುದ್ದಿವಂತರು , ವೇಗ ವಾದ ಯೋಚನೆ , ಮುಂದಿನ ಬಗ್ಗೆ ಬಹಳ ಯೋಚನೆ ಮಾಡೋ ಗುಣ ಇರುತ್ತೆ ,
ಬಹಳ ರಹಸ್ಯಗಳನ್ನ ನಿಮ್ಮಲ್ಲೇ ಇಟ್ಕೊಂಡಿರ್ತಿರಾ , ಹೆಚ್ಚಿಗೆ ಮಾತಾಡೋಕೆ ಇಷ್ಟ ಪಡೋಲ್ಲ ,ಕೋಪ ಕಮ್ಮಿ ಬರುತ್ತೆ , ಅನ್ಕೊಂಡಿದ್ದನ್ನ ಪಟ್ಟು ಹಿಡಿದು ಸಾಧನೆ ಮಾಡ್ತೀರಾ , ಸ್ನೇಹಪರ , ಧೈರ್ಯವಂತರು ,ಉದಾರಿಗಳು ,ಹೆಚ್ಚಿಗೆ ಒಂಟಿಯಾಗಿರೋಕೆ ಇಷ್ಟ ಪಡ್ತಿರಾ ,ಪ್ರೀತಿಸುವ ಭಾವನಾತ್ಮಕ ವ್ಯಕ್ತಿ ,ಕೆಲವು ಕೆಟ್ಟ ಸಂಬಂಧಗಳು ಬಂದು ಹೋಗಬಹುದು , ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲದವರು .

ಡಿಸೆಂಬರ್

ಬಹಳ ಪ್ರಾಕ್ಟಿಕಲ್ ಮನುಷ್ಯ , ತತ್ವ ಜ್ಞಾನದಲ್ಲಿ ಆಸಕ್ತಿ ಜಾಸ್ತಿ , ಸ್ಥಿರವಾದ ಜೀವನಶೈಲಿ ನಡೆಸ್ತೀರಾ , ಅದೃಷ್ಟವಂತರು ಪ್ರೀತಿ ನಿಮ್ಮನ್ನ ಹುಡುಕಿಕೊಂಡು ಬರುತ್ತೆ ,
ಹಣಕ್ಕೆ ಬಹಳ ಪ್ರಾಮುಖ್ಯತೆ ಕೊಡ್ತೀರಾ , ಸಕ್ರಿಯ ಸಾಮಾಜಿಕ ಜೀವನವನ್ನು ಹೊಂದಿರ್ತಿರಾ , ನಿಮ್ಮ ಜವಾಬ್ದಾರಿಗಳನ್ನು ಕೆಲವೊಮ್ಮೆ ನಿರ್ಲಕ್ಷಿಸಿರಬಹುದು ,
ನೀವು ಅಪಾಯಕಾರಿ ನಿರ್ಧಾರಗಳನ್ನ ತೆಗೆದುಕೊಳ್ತೀರಾ ,ನೀವು ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂತಿದ್ರೆ ಮೊದಲು ಯಾವುದು ಶಾಶ್ವತ ಅಲ್ಲ ಅಂತ ಅರ್ಥ ಮಾಡ್ಕೊಳ್ಳಿ .

ನಿಷ್ಠಾವಂತ ಮತ್ತು ಉದಾರ., ದೇಶಭಕ್ತಿ , ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರ್ತೀರಾ , ತಾಳ್ಮೆ , ಅವಸರದ, ಮಹತ್ವಾಕಾಂಕ್ಷೆ ಹೊಂದಿರೋ ಮನುಷ್ಯರು , ಬೇರೆಯವ್ರು ಜೊತೆ ಇರಲು ಬೆರೆಯಲು  ಇಷ್ಟಪಡುತ್ತಾರೆ , ಪ್ರಾಮಾಣಿಕ ಮತ್ತು ವಿಶ್ವಾಸಾರ್ಹತೆ , ಕೆಲವೊಮ್ಮೆ ಅಹಂಕಾರಿ , ನಾನೊಬ್ಬನೇ ಸರಿ ಅನ್ನೋ ಹೆಮ್ಮೆ , ನಿರ್ಬಂಧಗಳನ್ನು ಸಹಿಸೋಲ್ಲ .

ಸ್ವಲ್ಪ ನಾನೇ ಸರಿ ಅನ್ನೋ ಗುಣ ಬದಲಾಯಿಸಿಕೊಂಡರೆ ಒಳ್ಳೇದು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top