fbpx
Health

ಈ ಗಿಡದಲ್ಲಿ ತಾಯಿ ಹಾಲಿನಷ್ಟೆ ಸಮಾನ ಪೋಷಕಾಂಶವಿದೆ

ಈ ಗಿಡಲ್ಲಿ ತಾಯಿ ಹಾಲಿನಷ್ಟೆ ಸಮಾನ ಪೋಷಕಾಂಶವಿದೆ
ಮಕ್ಕಳಿಗೆ ನೀಡುತ್ತಿರುವ ಶ್ರೇಷ್ಠ ಆಹಾರಗಳಲ್ಲಿ ತಾಯಿಹಾಲು ಮೊದಲ ಸ್ಥಾನದಲ್ಲಿದೆ. ಯಾವುದೇ ರೀತಿ ಕಲುಷಿತವಲ್ಲದ ಹಾಲು ಸಹ ತಾಯಿಹಾಲು ಪ್ರತಿಯೊಂದು ಆಹಾರ ಸೇವಿಸುವಾಗ ಕಲುಷಿತ ಎಂದು ಸಂದೇಹ ಪಡುವ ನಾವು ಸಣದೇಹವಿಲ್ಲದೆ ಇರುವ ಆಹಾರ ವೆಂದರೆ ತಾಯಿಯ ಹಾಲು. ಈ ತಾಯಿಯ ಹಾಲಿನಲ್ಲಿ ಸಿಗುವ ಪೋಷಕಾಂಶದ ಬೇರೆವುದರಲ್ಲಿ ಸಿಗುವುದಿಲ್ಲ ಆದರೆ ಈ ತಾಯಿ ಹಾಲಿನಂತೆ ಸಿಗುವ ಪೋಷಕಾಂಶ ಈ ಸ್ಪಿರುಲಿನಾ (Spirulina)ಎಲೆಗಳಲ್ಲಿ ಇದೆ ಎಂದು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಇದು ಸಮುದ್ರದ ತಳ ಭಾಗದಲ್ಲಿ ಬೆಳೆಯುತ್ತದೆ.


ಈ ಎಲೆಯಿಂದ ಉಂಟಾಗುವ ಪ್ರಯೋಜನಗಳು:
*ಸ್ಪಿರುಲಿನಾ ಗಿಡದ ಎಲೆಗಳ ಪುಡಿಯಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುತ್ತದೆ. ಎಷ್ಟೆಂದರೆ ಸಾಮಾನ್ಯ ಹಾಲಿಗಿಂತಲೂ 26 ಪಟ್ಟು ಅಧಿಕ. ಹಾದು ಇದರಿಂದ ಮೂಳೆಗಳು ದೃಢವಾಗುತ್ತವೆ.


*ದೇಹದ ನಿರ್ಮಾಣಕ್ಕೆ ಕಣಗಳ ಬೆಳವಣಿಗೆಗೆ ಪ್ರೋಟೀನ್ ಹೆಚ್ಚಾಗಿ ಬೇಕಾಗುತ್ತದೆ ಎಂದು ಎಲ್ಲರಿಗೂ ಗೊತ್ತು ಇದರಿಂದ ಸ್ಪಿರುಲಿನಾ ಪುಡಿಯಲ್ಲಿ ಸುಮಾರು ಶೇ.60 ರಷ್ಟು ಪ್ರೋಟೀನ್ ಇರುತ್ತದೆ.


*ನಮಗೆ ಲಭಿಸುತ್ತಿರುವ ಎಲ್ಲಾ ಆಹಾರ ಪದಾರ್ಥಗಳಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಪ್ರೋಟೀನ್ ಇರುವ ಆಹಾರ ಇದಾಗಿದೆ. ಸಸ್ಯಾಹಾರಿಗಳು ಇದನ್ನು ತೆಗೆದುಕೊಂಡರೆ ಸಾಕು. ಅಧಿಕ ಪ್ರೋಟೀನುಗಳು ದೇಹಕ್ಕೆ ದೊರಕುತ್ತದೆ.
*ದೇಹದ ಬೆಳವಣಿಗೆಗೆ ಅಗತ್ಯವಾದ ಅಮೈನೋ ಆಮ್ಲಗಳು, ಐರನ್, ಆಂಟಿ ಆಕ್ಸಿಡೆಂಟ್ ಗಳು, ಕ್ಲೋರಿಫಿಲ್ ಸಮೃದ್ಧಿಯಾಗಿರುತ್ತದೆ.


*ರಕ್ತವನ್ನು ಶುದ್ಧಿಕರಿಸುವಲ್ಲಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕ್ಲೋರೋಫಿಲ್ ಸಹಕಾರಿಯಾಗಿದೆ.


*ಹಲವು ವಿಧದ ಕ್ಯಾನಸ್ ಗಳು ಬರದಂತೆ ತಡೆಯುತ್ತದೆ. ನರಗಳ ದೌರ್ಬಲ್ಯ ನಿವಾರಣೆಯಾಗುತ್ತದೆ.


* ಲಿವರನ್ನು ಸ್ವಚ್ಛಗೊಳಿಸುತ್ತದೆ. ಮಧುಮೇಹಿಗಳಿಗೆ ಉತ್ತಮ. ಅವರ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.


*ಹೃದಯ ಸಂಬಂಧಿ ರೋಗಗಳು ಬರಲ್ಲ. ಊತ, ನೋವುಗಳು ಕಡಿಮಡಯಾಗುತ್ತದೆ.


*ಜೀರ್ಣ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ದೇಹದಲ್ಲಿನ ಹಾರ್ಮೋನ್’ಗಳ ಕೆಲಸ ಉತ್ತಮಗೊಳ್ಳುತ್ತದೆ.


*ರಕ್ತದಲ್ಲಿರುವ ಕೆಟ್ಟಕೊಲೆಸ್ಟ್ರಾಲ್ಕಡಿಮೆಯಾಗುತ್ತದೆ. ಅಧಿಕವಾಗಿರುವ ಕೊಬ್ಬನ್ನು ಕರಿಗಿಸುತ್ತದೆ. ಇದು ತೂಕ ಕಡಿಮೆ ಆಗಬೇಕು ಎನ್ನುವವರಿಗೆ ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ.
*ದೇಹದಲ್ಲಿನ ವ್ಯರ್ಥಗಳೆಲ್ಲಾ ಹೊರಗೆ ಹೋಗುತ್ತವೆ.
*ವಿಟಮಿನ್ ಎ, ಕೇ1, ಕೆ2, ಐರನ್, ಮೆಗ್ನಿಷಿಯಂ, ಕ್ರೋಮಿಯಂ, ಫಟೋ ನ್ಯೂಟ್ರಿಯಂಟ್’ಗಳು, ಕೆರೋಟಿನಾಯಿಡ್ಸ್ ಮೊದಲಾದ ವಿಟಮಿನ್ ಗಳು ದೊರೆಯುತ್ತದೆ.
*ಇದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಒ)ಸಹ ತಾಯಿಹಾಲಿಗೆ ಸಮಾನವಾದ ಪೋಷಕಗಳಳ್ಳ ಆಹಾರ ಪಟ್ಟಿಯಲ್ಲಿ ಸೇರಿಸಿದೆ. ಈ ಸ್ಪಿರುಲಿನಾ ಗಿಡದ ಎಲೆಗಳ ಪುಡಿ ಮಾರುಕಟ್ಟೆಯಲ್ಲಿ ಸಿಗುತ್ತದೆ.ಈ ಪುಡಿ ಟ್ಯಾಬ್ಲೆಟ್’ಗಳ ರೂಪದಲ್ಲಿ ಲಭಿಸುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top