ಮಾಹಿತಿ

ಬೀದಿಯಲ್ಲಿ ಓದಿಕೊಳ್ಳುತ್ತಿದ್ದ ಬಾಲಕನಿಗೆ ಸಿಎಂ ಕೊಟ್ಟ 5 ಲಕ್ಷ ರೂ. ಚೆಕ್ ಅನ್ನು ಬೇಡ ಅಂದಿದ್ದು ಯಾಕೆ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೀದಿಯಲ್ಲಿ ಓದಿಕೊಳ್ಳುತ್ತಿದ್ದ ಬಾಲಕನಿಗೆ ಸಿಎಂ ಕೊಟ್ಟ 5 ಲಕ್ಷ ರೂ. ಚೆಕ್ ಅನ್ನು ಬೇಡ ಅಂದಿದ್ದು ಯಾಕೆ?

ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾವುದಾದರೂ ವಿಷಯವನ್ನು ಬಹುಬೇಗ ವೈರಲ್ ಮಾಡಬಹುದು ಆ ವಿಷಯ ಸಾಮಾಜಿಕ ಕಳಕಳಿಯಾಗಿದ್ದರೆ ಸೋಷಿಯಲ್ ಮೀಡಿಯಾದ ಮೂಲಕ ಸಹಾಯ ಕೊರಳು ಒಂದು ಉತ್ತಮ ವೇದಿಕೆ. ಇದೇ ರೀತಿ ವಿಕಾಸ್ ಶಾರ್ದಾ ಎಂಬ ವ್ಯಕ್ತಿ ಕೆಲವು ತಿಂಗಳ ಹಿಂದೆ ಫೇಸ್‌ಬುಕ್‍ನಲ್ಲಿ ಹಾಕಿದ ಒಂದು ಪೋಸ್ಟ್ ವೈರಲ್ ಆಗಿ ಎಲ್ಲರ ದೃಷ್ಟಿ ಒಬ್ಬ ಬಾಲಕನ ಮೇಲೆ ಬೀಳುವಂತೆ ಮಾಡಿತು. ಆ ಹುಡುಗನ ಕತೆ ಏನು ಎಂದು ಮುಂದೆ ಓದಿ ತಿಳಿದುಕೊಳ್ಳಿ.

 

 

ಆ ಹುಡುಗನ ಹೆಸರು ಹರೇಂದ್ರ ಸಿಂಗ್ ಚೌಹಾಣ್. ವಯಸ್ಸು 13 ವರ್ಷ ಉತ್ತರ ಪ್ರದೇಶದ ನೋಯಿಡಾ ಸಿಟಿಯಲ್ಲಿ ವಾಸ ಮಾಡುತ್ತಿದ್ದಾನೆ. ತನ್ನ ತಂದೆ ಕೆಲಸ ಕಳೆದುಕೊಂಡ ಮೇಲೆ ಮನೆಯ ಪರಿಸ್ಥಿತಿ ಹದಗೆಟ್ಟಿತು.. ಇದರಿಂದ ಹರೇಂದ್ರ ವ್ಯಾಸಂಗಕ್ಕೂ ತೊಂದರೆಯಾಯಿತು. ಆದರೆ ಮಹೇಂದ್ರ ಮಾತ್ರ ಧೈರ್ಯ ಕಳೆದುಕೊಳ್ಳಲಿಲ್ಲ. ಓದನ್ನು ಮುಂದುವರಿಸಲು ನೋಯಿಡಾ ಸಿಟಿ ಸೆಂಟರ್ ಮೆಟ್ರೋ ರೈಲ್ವೇ ಸ್ಟೇಷನ್ ಬಳಿ ಇರುವ ರಸ್ತೆ ಪಕ್ಕ ಒಂದು ವೆಯಿಂಗ್ ಮೆಷಿನ್ ಇಟ್ಟುಕೊಂಡು ಓದಿಕೊಳ್ಳಲು ಆರಂಭಿಸಿದ. ತೂಕ ಚೆಕ್ ಮಾಡಿಕೊಳ್ಳುವವರು ಕೊಡುವ ಒಂದೊಂದು ರೂಪಾಯಿಗಳನ್ನು ಸಂಗ್ರಹಿಸಿ ಅದನ್ನು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ.

 

 

ವಿಕಾಶ್ ಶಾರ್ದಾ ಎಂಬುವವರು ಬೀದಿಯಲ್ಲಿ ವೆಯಿಂಗ್ ಮೆಷಿನ್ ಪಕ್ಕದಲ್ಲಿ ಓದಿಕೊಳ್ಳುತ್ತಿರುವ ಹರೇಂದ್ರ ಕಣ್ಣಿಗೆ ಬಿದ್ದ. ಇದಕ್ಕೆ ಸ್ಪಂದಿಸಿದ ವಿಕಾಸ್ ಆ ಬಾಲಕನಿಗೆ ಏನಾದರೂ ಸಹಾಯ ಮಾಡಬೇಕೆಂದು ತನ್ನ ಫೇಸ್‍ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ. ಆ ಪೋಸ್ಟ್ ಅತ್ಯಂತ ಕಡಿಮೆ ಅವಧಿಯಲ್ಲೇ ತುಂಬಾ ವೈರಲ್ ಆಯಿತು ಕೊನೆಗೆ ಅದು ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಅವರಿಗೂ ತಲುಪುತ್ತದೆ.ವಿಷಯ ತಿಳಿದ ಅಖಿಲೇಶ್ ಕೂಡಲೇ ಆ ಬಾಲಕನ ಸಹಾಯಕ್ಕಾಗಿ 5 ಲಕ್ಷ ರುಪಾಯಿಯ ಚೆಕ್ ಅನ್ನು ಕೊಟ್ಟರು. ಆದರೆ ಹಿರೇಂದ್ರ ಆ ಚೆಕ್ ಅನ್ನು ಸ್ವೀಕರಿಸಲಿಲ್ಲ ಏಕೆಂದರೆ ಅದಾಗಲೆ ಅವರ ತಂದೆಗೆ ಬೇರೆ ಕೆಲಸ ಸಿಕ್ಕಿತ್ತು. ತನಗೆ ಯಾರ ಸಹಾಯ ಬೇಡ ನಮ್ಮ ಅಪ್ಪನ ಹಣದಿಂದಲೇ ನಾನು ಓದುತ್ತೇನೆ ಎಂದು ಹೇಳಿದ. ಮುಖ್ಯ ಮಂತ್ರಿಗಳು ಇವನ ಮಾತುಗಳನ್ನು ಮೆಚ್ಚಿ ಸನ್ಮಾನ ಮಾಡಿದ್ದರು.

 

 

“ಶಾಲೆಯ ಹೋಮ್ ವರ್ಕ್ ಗಳನ್ನೂ ಮಾಡಲು ಪೇಪರ್, ಬಣ್ಣಗಳು ಹಾಗೂ ಫೈಲ್ ಗಳು ಬೇಕಾಗಿತ್ತು ಅದಕ್ಕೆ ನನಗೆ ಹಣದ ಅವಶ್ಯಕತೆಯಿತ್ತು.. ಆದರೆ ನನ್ನ ಬಳಿ ಹಣವಿರಲಿಲ್ಲ. ಆದ್ದರಿಂದ ತಂದೆಯ ತೂಕದ ಯಂತ್ರವನ್ನು ನಿಲ್ದಾಣಕ್ಕೆ ತೆಗೆದುಕೊಂಡು ಹೋದೆ. ಮೊದಲ ದಿನ 60 ರೂ. ಗಳಿಸಿದ್ದು, ನಂತರದ ದಿನಗಳಲ್ಲಿ 200 ರೂ.ನಷ್ಟು ಗಾಳಿಸುತ್ತಿದ್ದೆ.” ಎಂದು ಹರೇಂದ್ರ ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top