fbpx
ರಾಜಕೀಯ

ಬಿಜೆಪಿ ಕೇವಲ 5-10 ವರ್ಷ ಅಲ್ಲ; ಕನಿಷ್ಠ 50 ವರ್ಷ ಆಡಳಿತ ನಡೆಸುತ್ತೆ: ಅಮಿತ್ ಷಾ

ಬಿಜೆಪಿ ಕೇವಲ 5-10 ವರ್ಷ ಅಲ್ಲ; ಕನಿಷ್ಠ 50 ವರ್ಷ ಆಡಳಿತ ನಡೆಸುತ್ತೆ: ಅಮಿತ್ ಷಾ

ಬಿ ಜೆ ಪಿ ಪಕ್ಷವು ಕೇವಲ ಐದು ಅಥವಾ ಹತ್ತು ವರ್ಷಗಳ ಕಾಲ ಆಡಳಿತ ನಡೆಸಲಿರುವ ಪಕ್ಷವಲ್ಲ, ಅದರ ಬದಲಾಗಿ 50 ವರ್ಷಕ್ಕಿಂತಲೂ ಹೆಚ್ಚು ಕಾಲ ಬಿ ಜೆ ಪಿ ಪಕ್ಷ ದೇಶದಲ್ಲಿ ಆಡಳಿತ ನಡೆಸಲಿದೆ. ಹಾಗಾಗಿ ಈ ಕಾರಣಕ್ಕಾಗಿ ಎಲ್ಲಾ ಕಾರ್ಯಕರ್ತರು ಕೂಡಾ ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಸಹಕರಿಸಬೇಕು. ಬಿಜೆಪಿಯು ರಾಷ್ಟ್ರದ ಮೂಲೆಮೂಲೆಗೂ ತಲುಪುವಂತೆ ಮಾಡಬೇಕು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.

ಸದ್ಯ ಇಡೀ ದೇಶದಲ್ಲಿ ಬಹುಮತ ಹೊಂದಿದ ಪಕ್ಷವೆಂದರೆ ಬಿಜೆಪಿ ಪಕ್ಷ ಮಾತ್ರ. ನಾವು ಇದೀಗ ನಮ್ಮ ಸಾಧನೆಯ ಉತ್ತುಂಗದಲ್ಲಿದ್ದೇವೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರದ ಆಡಳಿತವಿದೆ. ವಿವಿಧ ರಾಜ್ಯಗಳಲ್ಲಿ 1387 ಶಾಸಕರಿದ್ದಾರೆ. 330 ಸಂಸದರಿದ್ದಾರೆ. ನಾವು ಸದ್ಯ ಸಾಧನೆಯ ಉತ್ತುಂಗವೇರಿದ್ದರೂ ಇದರ ಹಿಂದಿರುವ ಸುಮಾರು 12ಕೋಟಿ ಕಾರ್ಯಕರ್ತರ ಅವಿರತವಾದ ಶ್ರಮವನ್ನು ಮೆಚ್ಚಲೇ ಬೇಕು. ನಾವಿನ್ನೂ ಸಾಧನೆ ಮಾಡಬೇಕಾದುದು ತುಂಬಾ ಇದೆ ಎಂದು ಅಮಿತ್ ಶಾ ಹೇಳಿದರು.

 

 

ಮಧ್ಯ ಪ್ರದೇಶದಲ್ಲಿ ನಡೆದ ಬಿಜೆಪಿ ಪದಾದಿಕಾರಿಗಳ ಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ, ನಮ್ಮ ಪಕ್ಷ ಮತ್ತಷ್ಟು ಬೆಳೆಯಬೇಕು ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿದೆ. ನಾವು 5, 10 ವರ್ಷ ಅಧಿಕಾರ ಮಾಡಲು ಬಂದಿಲ್ಲ. ಕನಿಷ್ಠ ಪಕ್ಷ 50 ವರ್ಷವಾದರೂ ಅಧಿಕಾರ ನಡೆಸಬೇಕು. ಅದಕ್ಕಾಗಿಯೇ ನಾವು ಬಂದಿರುವುದಾಗಿ ಹೇಳಿದ್ದಾರೆ.
ಅಧಿಕಾರದ ಮೂಲಕ ದೇಶದಲ್ಲಿ ಮಹತ್ವದ ಬದಲಾವಣೆಗಳನ್ನು ತರಬೇಕು. ಪ್ರತಿ ಮನೆ ಮನೆಯ, ಮೂಲೆ ಮೂಲೆಯಲ್ಲೂ ಬಿಜೆಪಿ ಧ್ವಜ ರಾರಾಜಿಸುವಂತೇ ಮಾಡಬೇಕು ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top