fbpx
ಸಾಧನೆ

ಡಾಕ್ಟರ್ ಆಗಿದ್ದ ಸಾಧಾರಣ ಹಳ್ಳಿ ಹುಡುಗ ಮುಂದೆ ಚಿನ್ನದಂತ ಕಾರ್ಪೊರೇಟ್ ಕೆಲಸವನ್ನು ತೊರೆದು ಶಾಸಕನಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡ ಕಥೆ

ಡಾಕ್ಟರ್ ಆಗಿದ್ದ ಸಾಧಾರಣ ಹಳ್ಳಿ ಹುಡುಗ ಮುಂದೆ ಚಿನ್ನದಂತ ಕಾರ್ಪೊರೇಟ್ ಕೆಲಸವನ್ನು ತೊರೆದು ಶಾಸಕನಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡ ಕಥೆ

ನೋಡಲು ಸ್ಪುರದ್ರೂಪಿ ,ಕೈಯಲ್ಲಿ ಇದ್ದ ಡಾಕ್ಟರ್ ವೃತ್ತಿ, ಹಾಗೆ ಕೈ ಬಿಸಿ ಕರೆದದ್ದು ಕಾರ್ಪೊರೇಟ್ ಕ್ಷೇತ್ರ ,ಕೈಯಲ್ಲಿ ಇದ್ದ ಚಿನ್ನದಂತಹ ಅವಕಾಶ ಬಿಟ್ಟು ಆಯ್ಕೆ ಮಾಡಿದ್ದು ಮಾತ್ರ ಸೇವಾ ಕ್ಷೇತ್ರ ,ಇದು ಡಾಕ್ಟರ್ ಆಗಿದ್ದ ಯುವಕರೊಬ್ಬರು ತಮ್ಮ ಲಕ್ಷಾಂತರ ರೂಪಾಯಿ ದುಡಿಯುವ ಕೆಲಸವನ್ನು ಬಿಟ್ಟು ಜನರ ಸೇವೆ ಮಾಡುತ್ತೇನೆ ಎಂದು ಸೇವಾ ರಂಗಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಕಥೆ .

ಅಪ್ಪ ಕೇಶವ ರೆಡ್ಡಿ ಮೂಲತ ಚಿಕ್ಕಬಳ್ಳಾಪುರದ ಜಮೀನ್ದಾರರ ಮನೆತನದವರು , ಕೃಷಿಕ ಕುಟುಂಬವಾದರೂ ಸಹ ಆಯ್ಕೆ ಮಾಡಿದ್ದು ಶಿಕ್ಷಕ ವೃತ್ತಿಯನ್ನು ,ಆಗಿನ ಕಾಲ ಹೇಗಿತ್ತೆಂದರೆ ಜಮೀನ್ದಾರರೆಂದರೆ ಮೈಗೊಬ್ಬ ಕಾಲಿಗೊಬ್ಬ ಆಳನ್ನು ಇಟ್ಟುಕೊಂಡಿರುತ್ತಿದ್ದರು ಆದರೂ ಸಹ ಕೇಶವ ರೆಡ್ಡಿಯವರಿಗೆ ತಮಗೆ ತಿಳಿದಿರುವ ಜ್ಞಾನವನ್ನು ಇತರರಿಗೂ ಹಂಚಬೇಕೆಂಬ ಹಂಬಲ ಬಹಳವಾಗಿತ್ತು , ‘ಮಾತಾಡುವ ಮಂದಿ ಸಾವಿರಾರು ತಲೆ ಕೆಡಿಸಿಕೊಳ್ಳುವುದು ಬೇಡ’ ಎಂದು ತಮ್ಮ ಆತ್ಮಸಾಕ್ಷಿಗೆ ಸರಿ ಅನಿಸಿದ ಕೆಲಸ ಮಾಡಿ ತೃಪ್ತಿ ಪಡೆದರು .
ತಾತ ಆವಲ ರೆಡ್ಡಿಯವರು ಚಿಕ್ಕಬಳ್ಳಾಪುರದ ಪೆರೇಸಂದ್ರದವರು, ಸ್ವಾತಂತ್ರ್ಯ ಹೋರಾಟಗಾರರು ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಅಂದೊಂದಿತ್ತು ಕಾಲ ಪ್ಲೇಗ್ ಮಹಾ ಮಾರಿ ಇಡೀ ಊರನ್ನೇ ಬಲಿ ತೆಗೆದುಕೊಳ್ಳಲು ತನ್ನ ರಕ್ಕಸ ನಾಲಿಗೆ ಚಾಚಿ ಕೂತ್ತಿತ್ತು ,ಇಡೀ ಊರೇ ಅನ್ನ ಊಟ ಇಲ್ಲದೆ ಪರದಾಡಿತ್ತು ,ಆಗ ಆವಲ ರೆಡ್ಡಿಯವರು ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದ ನಾಲ್ಕು ದೊಡ್ಡ ಕಣಜ ಭತ್ತವನ್ನು ಅಂದರೆ ಸುಮಾರು 30 -40 ಊರಿಗೆ ಹಂಚುವಷ್ಟು ಭತ್ತವನ್ನು ಜನರಿಗೆ ದಾನವಾಗಿ ನೀಡಿದ್ದರು !

ಇದಲ್ಲವೇ ಹಂಚಿಕೊಂಡು ತಿನ್ನುವುದು ?

ಅಷ್ಟೇ ಅಲ್ಲ ತಮ್ಮ ಜಮೀನಿನ ಎಷ್ಟೋ ಎಕರೆ ಭೂಮಿಯನ್ನು ಸರ್ಕಾರಿ ಆಸ್ಪತ್ರೆ , ಪೋಸ್ಟ್ ಆಫೀಸ್ ,ನಿರ್ಗತಿಕರ ಹಾಗು ಹಿಂದುಳಿದ ವರ್ಗದವರ ವಸತಿ ವ್ಯವಸ್ಥೆಗೆ ಹೀಗೆ ಇನ್ನು ಅನೇಕ ಸಮಾಜಮುಖಿ ಕೆಲಸಗಳಿಗೆ ದಾನ ಮಾಡಿದರು.

ಈ ಮಹಾನುಭಾವರ ಮನೆಯಲ್ಲಿ ಹುಟ್ಟಿದ ಹುಡುಗನೇ ಸುಧಾಕರ್ , ಓದಿದ್ದು ಎಂ.ಬಿ.ಬಿ.ಎಸ್ ನಂತರ ತುಮಕೂರಿನ ಅನೇಕ ಹಳ್ಳಿಗಳಲ್ಲಿ ತಮ್ಮ ಸೇವೆ ಮುಂದುವರಿಸಿ , ಬೆಂಗಳೂರಿನ ಬೋರಿಂಗ್ ಹಾಸ್ಪಿಟಲ್ನಲ್ಲಿ ವೃತ್ತಿ ಮುಂದುವರಿಸಿ ನಂತರ ಬಣ್ಣದ ಕಾರ್ಪೊರೇಟ್ ಜೀವನಕ್ಕೆ ಕಾಲಿಟ್ಟು ಪ್ರತಿಷ್ಠಿತ ‘ಫಾರ್ಚುನರ್ 500 ‘ ಸಂಸ್ಥೆಯೊಂದರಲ್ಲಿ ಅತಿ ಕಡಿಮೆ ವಯಸ್ಸಿನ ವಿ .ಪಿ ಎನಿಸಿಕೊಂಡರು .

ನಂತರ ಈ ಕ್ಷೇತ್ರ ನನಗಲ್ಲ ಎಂದೆನಿಸಿ ನಾಗರೀಕ ಕ್ಷೇತ್ರವಾದ ಬೆಂಗಳೂರಿನಲ್ಲಿ ಶ್ರೀಲಂಕಾದ ದೂತಾವಾಸ ಕಚೇರಿಯಲ್ಲಿ ಗೌರವಾನ್ವಿತ ಸಲಹೆಗಾರರಾಗಿ ತಮ್ಮ ಕೆಲಸ ಶುರು ಮಾಡಿದರು , ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮದೇ ಹುಟ್ಟೂರಿನಲ್ಲಿ ತಮ್ಮ ಟ್ರಸ್ಟ್ ‘ಶ್ರೀ ಸಾಯಿ ಕೃಷ್ಣ ದತ್ತಿ ಟ್ರಸ್ಟ್’ ನ ಅಡಿಯಲ್ಲಿ ಹಳ್ಳಿ ಮಕ್ಕಳಿಗೆ ಅನುಕೂಲವಾಗುವಂತೆ  ‘ಶಾಂತ ವಿದ್ಯಾ ನಿಕೇತನ ಟ್ರಸ್ಟ್’ ಸುಸಜ್ಜಿತ ಶಾಲೆ ಹಾಗು ಕಾಲೇಜನ್ನು ಸ್ಥಾಪನೆ ಮಾಡಿದರು ಈ ಕಟ್ಟಡ ಹಾಗು ಸಿಬ್ಬಂದಿ ವರ್ಗ ನಗರದ ಯಾವುದೇ ಶಾಲೆ ಅಥವಾ ಕಾಲೇಜು ನಾಚುವಂತಿದೆ ,ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಈ ಶಾಲೆ ವರದಾನ .

ತಮ್ಮ ತಲೆಯಲ್ಲಿರುವ ಎಲ್ಲಾ ಯೋಜನೆಗಳನ್ನು ಹೇಗಾದರೂ ಮಾಡಿ ಜಾರಿಗೆ ತಂದು ಬರದ ನಾಡು ಚಿಕ್ಕಬಳ್ಳಾಪುರಕ್ಕೆ ತಮ್ಮ ಕೈ ಮೀರಿ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಧೀಮಂತ ನಾಯಕ ಎಸ್ .ಎಂ ಕೃಷ್ಣ ರ ಯೋಜನೆಗಳಿಂದ ಪ್ರೇರಣೆಗೊಂಡು ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡರು , ಶಾಲಾ ಸಮಯದಿಂದಲೂ ನಾಯಕತ್ವ ಗುಣ ಹೊಂದಿದ್ದ ಡಾ .ಸುಧಾಕರ್.ಕೆ ರವರಿಗೆ ತಮ್ಮ ಸಾಮಾಜಿಕ ಕೆಲಸಗಳಿಗೆ ತಾವು ಹರಸದೆ ಬಂದ ಚಿಕ್ಕಬಳ್ಳಾಪುರ ಶಾಸಕ ಸ್ಥಾನ ಪ್ರಮುಖ ಪಾತ್ರವನ್ನೇ ವಹಿಸಿತ್ತು .

 

ಬರದ ಚಿಕ್ಕಬಳ್ಳಾಪುರಕ್ಕೆ ನೀರು ಹರಿಸಿದ ಭಗೀರಥ !

ಬರದ ಬವಣೆಯಿಂದ ಬತ್ತುಹೋಗಿದ್ದ ಚಿಕ್ಕಬಳ್ಳಾಪುರ ತಾಲೂಕಿಗೆ ಬೆಂಗಳೂರಿನಲ್ಲಿ ಬಳಕೆಯಾದ ನೀರನ್ನು ಸಂಸ್ಕರಿಸಿ , ಚಿಕ್ಕಬಳ್ಳಾಪುರದ 44 ಬೃಹತ್ ಟ್ಯಾಂಕ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 14 ಬೃಹತ್ ಟ್ಯಾಂಕ್ ಗಳಲ್ಲಿ ಶೇಖರಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಬಳಸಲಾಗುತ್ತದೆ ಈ ಯೋಜನೆ ಇಡೀ ಭಾರತ ದೇಶದಲ್ಲೇ ಮೊದಲು ಇದರ ರೂವಾರಿ ಕೂಡ ಡಾ .ಸುಧಾಕರ್.ಕೆ ರವರು , ಈ ಯೋಜನೆಯಿಂದ ಚಿಕ್ಕಬಳ್ಳಾಪುರ ಹಾಗೂ ಸುತ್ತ ಮುತ್ತಲಿನ ಎಷ್ಟೋ ರೈತರ ಪಾಲಿಗೆ ಆಶಾಕಿರಣವೊಂದು ಮೂಡಲಿದೆ .

ಡಾ .ಸುಧಾಕರ್.ಕೆ ಜನಪರ ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ ಅಂತಹ ಕೆಲವೇ ಕೆಲವು ವಿಷಯಗಳನ್ನು ನಿಮ್ಮ ಮುಂದೆ ನಾವು ಪ್ರಸ್ತುತ ಪಡಿಸುತ್ತಿದ್ದೇವೆ .

ಚಿಕ್ಕಬಳ್ಳಾಪುರದ ಸುತ್ತ ಮುತ್ತಲಿನ ಹಳ್ಳಿ ಮಕ್ಕಳಿಗೆ ಉಚಿತವಾಗಿ 85000 ಬಸ್ ಪಾಸ್ಗಳನ್ನು ನೀಡಿದ್ದಾರೆ .

ಸ್ವಾಮಿ ವಿವೇಕಾನಂದರು ಹೇಳುವಂತೆ ಪಕ್ಷಿಗೆ ಎರಡು ರೆಕ್ಕೆಗಳು ಹೇಗೆ ಮುಖ್ಯವೋ ಹಾಗೆ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ನೀಡಬೇಕು ಮತ್ತು ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸಬಲಗೊಳಿಸಲು 1800 ಗ್ರಾಮಗಳ ಮಟ್ಟದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲವನ್ನು ನೀಡಲು ಶ್ರಮಿಸಿದ್ದಾರೆ , ಅಷ್ಟೇ ಅಲ್ಲದೆ ಇನ್ನು ಹೆಚ್ಚು ಪ್ರೋತ್ಸಾಹ ನೀಡಲು ಈ ಗುಂಪುಗಳನ್ನು 5000 ಕ್ಕೆ ಹೆಚ್ಚಿಸಲು ಪ್ರಯತ್ನವನ್ನು ಮಾಡುತ್ತಿದ್ದಾರೆ , ಒಟ್ಟಿನಲ್ಲಿ ಈ ಆರ್ಥಿಕ ಸಬಲೀಕರಣ 50 ,000 ಮಹಿಳೆಯರಿಗೆ ಸಹಾಯವಾಗಿದೆ .

ಮೂಲತ ಆರೋಗ್ಯ ಕ್ಷೇತ್ರದಿಂದ ಬಂದವರಾಗಿದ್ದರಿಂದ ಒಳ ಚರಂಡಿ ,ರಸ್ತೆ ಯೋಜನೆಗಳಿಗೆ ವೈಜ್ಞಾನಿಕ ರೂಪು ರೇಷೆಗಳನ್ನು ಕೊಡಲು ಶ್ರಮಿಸಿದ್ದಾರೆ ಅಷ್ಟೇ ಅಲ್ಲದೆ ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದಲ್ಲಿರುವ ಹಾಗು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷದ ಪ್ರಯಾಣದ ದೂರದಲ್ಲಿರುವ ಚಿಕ್ಕಬಳ್ಳಾಪುರಕ್ಕೆ ‘ಉಪಗ್ರಹ ನಗರ ‘ , ‘ಶೈಕ್ಷಣಿಕ ನಗರ ‘ ,’ಸಣ್ಣ ಕೈಗಾರಿಕೆಗಳ ನಗರ’ , ‘ ಕೈಗಾರಿಕಾ ಉತ್ಪಾದನೆ ನಗರ’ ಹೀಗೆ ಪ್ರಖ್ಯಾತಿ ಗೊಳಿಸಬೇಕೆಂಬ ಆಶಯವನ್ನು ಹೊಂದಿದ್ದಾರೆ .

ನಂದಿ ಬೆಟ್ಟದ ಪ್ರವಾಸೋದ್ಯಮದ ಬೆಳವಣಿಗೆ ಇವರ ಪ್ರಮುಖ ಸಾಧನೆ .

ಹೆಚ್ಚು ಓದಿರುವ ಹಾಗು ಕಾರ್ಪೊರೇಟ್ ಕೆಲಸಗಳಲ್ಲಿ ತೊಡಗಿಕೊಂಡಿರುವ ಯುವಕರು ರಾಜಕೀಯದಲ್ಲಿ ಆಸಕ್ತಿ ತೋರುವುದೇ ಬಹಳ ಕಡಿಮೆ ,

ಡಾ .ಸುಧಾಕರ್.ಕೆ ರವರಿಂದ ಸ್ಫೂರ್ತಿಪಡೆದ ಎಷ್ಟೋ ಯುವಕರು ಅವರ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ,

ಡಾ .ಸುಧಾಕರ್ ರವರು ಹೇಳುವ ಪ್ರಕಾರ

” ದೇಶದ ಆರ್ಥಿಕ ,ಸಾಮಾಜಿಕ ,ಶೈಕ್ಷಣಿಕ ಬದಲಾವಣೆಗಳನ್ನು ತರಲು ವಿವಿಧ ಕ್ಷೇತ್ರಗಳಲ್ಲಿ

ಪರಿಣಿತಿ ಹೊಂದಿರುವ ಯುವಕರಿಂದ ಮಾತ್ರ ಸಾಧ್ಯ , ಹಿರಿಯರು ಸಂವಿಧಾನವನ್ನು ಬರೆದಿದ್ದಾರೆ

ಅದರ ಆಶಯಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಪ್ರತಿ ನಾಗರೀಕನ ಕರ್ತವ್ಯ ಇದರಲ್ಲಿ

ಯುವಕರ ಪಾತ್ರ ಬಹಳ ಮುಖ್ಯ, ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಂದಿ ತ್ಯಾಗ ಬಲಿದಾನಗಳನ್ನೂ

ಮಾಡಿದ್ದಾರೆ ಈ ಹೋರಾಟಗಳಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿತ್ತು ಆದ್ದರಿಂದ ಯುವಕರು

ಹೆಚ್ಚಾಗಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಬೇಕು ” 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

ಸೂಪರ್ ಅಣ್ಣ

He is man only will develop the chickballapur other wise we will lose his leadership

To Top