fbpx
ಜೀವನ ಕ್ರಮ

ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ನರಕದಲ್ಲಿ ವಿಧಿಸುವ ಶಿಕ್ಷೆಗಳು ಗೊತ್ತಾ!

 

ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ನರಕದಲ್ಲಿ ವಿಧಿಸುವ ಶಿಕ್ಷೆಗಳು ಗೊತ್ತಾ!

ಗರುಡ ಪುರಾಣದ ಪ್ರಕಾರ, ಮನುಷ್ಯ ಭೂಮಿಯ ಮೇಲೆ ಮಾಡುವ ಅತ್ಯಾಚಾರ,ಅನಾಚಾರ ಮತ್ತು ಅಪರಾಧಗಳಿಗೆ ಪ್ರತ್ತೇಕವಾದ ಶಿಕ್ಷೆಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಅಂತಹ ಕೆಲವು ಶಿಕ್ಷೆಗಳ ಬಗ್ಗೆ ಇಲ್ಲಿ ಕೊಡಲಾಗಿದೆ.

ಜನನ ಕ್ರಿಯೆಯ ಅಂಗಾಗಗಳನ್ನೂ ಕತ್ತರಿಸುವುದರಿಂದ ಹಿಡಿದು,ಕಾದು ಸುಡುತ್ತಿರುವ ಎಣ್ಣೆಯಲ್ಲಿ ಮನುಷ್ಯರನ್ನು ಕಾಯಿಸುತ್ತಾರೆ.ಇಷ್ಟು ಭಯಾನಕ ಮತ್ತು ಕ್ರೂರವಾದ ವಿವಿಧ ಬಗೆಯ ಶಿಕ್ಷೆಗಳು ಪಾಪಿಗಳಿಗೋಸ್ಕರ ನರಕದಲ್ಲಿ ಕಾಯುತ್ತಿವೆ.ನೀವು ಮಾಡುವ ಕೆಲಸಗಳ ಬಗ್ಗೆ ನಿಮಗೆ ತಿಳಿದಿರಲಿ ಮತ್ತು ಅವುಗಳ ಬಗ್ಗೆ ಅರಿವಿರಲಿ.ಎಚ್ಚರ!

ಯಾವುದೇ ಕೆಲಸ ಮಾಡುವುದಕ್ಕಿಂತ ಮುಂಚೆ ಅದು ಒಳ್ಳೆಯದೋ ಕೆಟ್ಟದೋ ಎಂಬ ಯೋಚನೆ ಮಾಡಿ ತಿಳಿದು ಮಾಡಿ.ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ,ಯಾರಿಗೂ ಮೋಸ ಮಾಡಬೇಡಿ,ಎಲ್ಲರಿಗೂ ವಳಿತನ್ನೇ ಮಾಡಿ ಇಲ್ಲದಿದ್ದರೆ ನಿಮಗೆ ಅತ್ಯಂತ ಭಯಾನಕ ಮತ್ತು ಅಷ್ಟೇ ಕ್ರೂರವಾದ ಶಿಕ್ಷೆಗಳು ಯಮನ ಲೋಕದಲ್ಲಿ ಕಾಯುತ್ತಿವೆ. ಯಾವ ತಪ್ಪಿಗೆ ಯಾವ ಶಿಕ್ಷೆ ಎಂದು ಇಲ್ಲಿವೆ ನೋಡಿ ಪಾಪಿಗಳಿಗೋಸ್ಕರನೇ ಕಾದು ಕುಳಿತಿವೆ..


1.ತಮ್ಮ ಕರ್ತವ್ಯಗಳನ್ನು ನಿರ್ಲಕ್ಷಿಸುವ ರಾಜರಿಗೆ , ದುಷ್ಕೃತ್ಯದ ಮೂಲಕ ತಮ್ಮ ಪ್ರಜೆಗಳನ್ನು ದುರ್ಬಲಗೊಳಿಸಿ ,ಚಿತ್ರಹಿಂಸೆ ನೀಡಿ ಭಯಂಕರವಾಗಿ ಹೊಡೆದು ಬೀಳಿಸಿ ತಿರುಳಿನೊಳಗೆ ನುಗ್ಗಿಸಲಾಗುತ್ತದೆ.


2.ಯಾರು ಜನರ ಸಂಪತ್ತನ್ನು ಕದಿಯುತ್ತಾರೋ ಅಂದರೆ ಹಣ,ಒಡವೆ,ಅಸ್ಥಿ ಇನ್ನು ಅನೇಕ ಅಂತಹವರನ್ನು ಹಗ್ಗದಲ್ಲಿ ಕಟ್ಟಿ ಹಾಕಿ ಅವರಿಗೆ ರಕ್ತಸ್ರಾವವಾಗಿ ,ತಲೆಸುತ್ತು ಬರುವ ತನಕ ಹೊಡೆಯಲಾಗುತ್ತದೆ.


3.ಯಾರೆಲ್ಲಾ ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲುತ್ತಾರೋ, ಅವರ ಕೈ , ಕಾಲುಗಳನ್ನು ತುಂಡು,ತುಂಡಾಗಿ ಕತ್ತರಿಸಿ ಚೂಪಾದ ಆಯುಧಗಳಿಂದ ಚುಚ್ಚಿ,ಗಂಭೀರವಾದ ಗಾಯಗಳನ್ನು ಮಾಡಲಾಗುತ್ತದೆ.


4.ಯಾರೆಲ್ಲಾ ಜನರು ಲೈಂಗಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೋ,ವ್ಯಭಿಚಾರ ಮಾಡುತ್ತಾರೋ ನರಕದಲ್ಲಿ ಅಂತವರಿಗೆ ಚಿತ್ರಹಿಂಸೆ ನೀಡಿ ಯಮರಾಜನ ಸೇವಕರು ಆ ಪಾಪಿಗಳ ಜನನಾಂಗವನ್ನು ಕತ್ತರಿಸಿ ಹಾಕುತ್ತಾರೆ.


5.ಯಾವ ಜನಗಳು ಮದ್ಯ,ಹೆಂಡ,ಸಾರಾಯಿ ಇಂತಹವುಗಳನ್ನು ಸೇವಿಸುತ್ತಾರೋ ಮತ್ತು ಇದರ ಜೊತೆಗೆ ಮಾದಕ ದ್ರವ್ಯ, ಪಾನೀಯಗಳನ್ನು ಸೇವಿಸುತ್ತಾರೋ ಅವರಿಗೆ ಕರಗಿಸಿದ ಕಬ್ಬಿಣವನ್ನು ದ್ರವ ರೂಪದಲ್ಲಿ ಬಲವಂತವಾಗಿ ಕುಡಿಸುತ್ತಾರೆ.


6.ಯಾವ ಪಾಪಿಗಳು ಹಸಿವಿನಿಂದ ಬಳುತ್ತಿರುವ ವ್ಯಕ್ತಿಗಳಿಗೆ ಆಹಾರವನ್ನು ನೀಡುವುದಿಲ್ಲವೋ ,ನಿರ್ಲಕ್ಷಿಸುತ್ತಾರೋ, ಅಂತಹವರನ್ನು ನಿಂದನೆಗೆ ವಳಪಡಿಸಿ, ಕ್ರೂರ ಮತ್ತು ಮಾರಕ ಪಕ್ಷಿಗಳಿಂದ ಚುಚ್ಚಿಸಿ ಅಂತಹ ಘೋರ ಪಕ್ಷಿಗಳು ಇರುವ ಸ್ಥಳಕ್ಕೆ ನಿಮ್ಮನ್ನು ಜೀವ ಇರುವಾಗಲೇ ಎಸೆಯಲಾಗುತ್ತದೆ.


7.ಯಾರೆಲ್ಲಾ ತಮ್ಮ ಸ್ವಂತ ಸುಖಕ್ಕೋಸ್ಕರ ಪ್ರಾಣಿಗಳನ್ನು ಸಾಯಿಸುತ್ತಾರೋ,ಅವರನ್ನು ಕಾದ ಎಣ್ಣೆಯಲ್ಲಿಟ್ಟು ತೇಲಿಸಿ ಬೃಹತ್ ದೊಡ್ದದಾದ ಪಾತ್ರೆಗಳಲ್ಲಿಟ್ಟು ತದನಂತರ ಕಾದ ಎಣ್ಣೆಯ ವಳಗೆ ಮುಳುಗಿಸಿ ಸ್ವಲ್ಪ ಹೊತ್ತಿನ ನಂತರ ಹೊರಗೆ ತೆಗೆಯಲಾಗುತ್ತದೆ.


8.ಪಾಪಿಗಳು ಯಾರು ಜನರಿಗೆ ಮೋಸ ಮಾಡುತ್ತಾರೋ,ನಿರಂತರವಾಗಿ ಉಪಯೋಗಕ್ಕೆ ಬಾರದ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಾರೋ,ಅವರನ್ನು ತಲೆ ಕೆಳಗಾಗಿ ಮಾಡಿ, ಕಟ್ಟಿ ನೇತು ಹಾಕಿ ಅನೇಕ ವಿಧಗಳಲ್ಲಿ ಕ್ರೂರ ಮೃಗಗಳಿಂದ ಚಿತ್ರಹಿಂಸೆಗೆ ಒಳಪಡಿಸಲಾಗುತ್ತದೆ.


9.ರಾಜರುಗಳು ಅಥವಾ ದೊಡ್ಡ ಹುದ್ದೆಯಲ್ಲಿ ಇರುವವರು ಯಾರೆಲ್ಲಾ ತಮ್ಮ ಅಧಿಕಾರದ ದುರ್ಭಳಕೆ ಮತ್ತು ದುರುಪಯೋಗ ಮಾಡಿಕೊಳ್ಳುತ್ತಾರೋ ಅಂತವರನ್ನು ಮನುಷ್ಯರ ಮಲ,ಮೂತ್ರ,ರಕ್ತ,ಮೆದುಳು ಮತ್ತು ಎಲ್ಲಾ ತರದ ಕೊಳಕು ಪದಾರ್ಥಗಳು ಇರುವ ನದಿಯಲ್ಲಿ ಎಸೆಯುತ್ತಾರೆ ಅಲ್ಲಿ ಪಾಪಿಗಳು ಇದನ್ನೇ ಆಹಾರವನ್ನಾಗಿ ತ್ತಿನ್ನಬೇಕಾಗುತ್ತದೆ.


10.ಶ್ರೀಮಂತರ ಬಳಿ ಅಧಿಕ ಸಂಪನ್ಮೂಲಗಳು ಇದ್ದರೂ ಒಳ್ಳೆಯ ಜನರಿಗೆ ಯಾರು ಸಹಾಯ ಮಾಡುವುದಿಲ್ಲವೋ ಅಂತವರನ್ನು ಬಾವಿಗೆ ನೂಕಲಾಗುತ್ತದೆ. ಆ ಬಾವಿಯಲ್ಲಿ ಮೃಗಗಳು ಮತ್ತು ವಿಷಭರಿತ ಜೀವಿಗಳಾದ ಸಿಂಹ, ಹದ್ದು, ಚೇಳುಗಳು ಇವರನ್ನು ಕಚ್ಚಿ ಚಿತ್ರಹಿಂಸೆ ಮಾಡುತ್ತವೆ.


11.ವಯಸ್ಸಿನಲ್ಲಿ ತಮಗಿಂತ ದೊಡ್ಡವರಿಗೆ ಅಪ್ಪ-ಅಮ್ಮ,ಅಣ್ಣ-ಅಕ್ಕ,ತಾತ,ಅಜ್ಜಿ ಯಾರೇ ಆಗಲಿ ಹಿರಿಯರಿಗೆ ಗೌರವ, ಮರ್ಯಾದೆ ಕೊಡದ್ದಿದ್ದರೆ ಅಂತಹವರನ್ನು ಭಯಾನಕತೆಯಿಂದ ಸುಡುವ ನರಕಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಯೇ ಅವರನ್ನು ಪ್ರಜ್ಞೆ ತಪ್ಪಿ ಮೂರ್ಛೆ ಹೋಗುವ ತನಕ ಓಡಿಸುತ್ತಾರೆ.


12ಸುಳ್ಳು ಸಾಕ್ಷಿ ಮತ್ತು ಸುಳ್ಳು ಪ್ರಮಾಣ ವಚನ, ಸುಳ್ಳು ಪುರಾವೆಗಳಿಗೆ ಶಿಕ್ಷೆ :ಸೀನಿಯರ್ಗಳು ಮುಳುಗಿದ ಮತ್ತು ಕಿರುಕುಳಕ್ಕೊಳಗಾದ ನೇರ ದೇಹದಲ್ಲಿ ದೊಡ್ಡ ಎತ್ತರದಿಂದ ಬಿಸಾಡಲ್ಪಟ್ಟವರು ಮತ್ತು ಅವುಗಳು ಧೂಳಿನಲ್ಲಿ ಅವು ಹೊಡೆದುಹೋಗಿವೆ, ಅವಧಿ ಮುಗಿದ ತನಕ ಅ ಶಿಕ್ಷೆಯನ್ನು ಪುನರಾವರ್ತಿಸಲಾಗುತ್ತದೆ.


13.ತಪ್ತಮೂರ್ತಿ ಅಗ್ನಿಕುಂಡ
ಶಿಕ್ಷೆ : ಕದಿಯುವುದು, ಬಲದ ಮೂಲಕ ಇತರ ಆಸ್ತಿಯನ್ನು ಕಸಿದುಕೊಂಡು, ಚಿನ್ನದ ಮತ್ತು ಆಭರಣಗಳ ಆರೈಕೆಯನ್ನು ಕದಿಯಲು ಈ ನರಕದ ಕುಲುಮೆಗಳಲ್ಲಿ ಎರಕಹೊಯ್ದ ಮತ್ತು ಅನಪೇಕ್ಷಿತ ಪ್ರಯೋಜನವನ್ನು ಪಡೆಯುವುದು ಮತ್ತು ಕಾನೂನುಬಾಹಿರವಾಗಿ ವಿಶ್ವದ ಎಲ್ಲವನ್ನೂ ಈ ಶಿಕ್ಷೆಯಲ್ಲಿ ಬರುತ್ತತೆ.ಬೆಂಕಿಯ ಮೇಲೆ ಕಟ್ಟಿರುವ ಕಾಲುಗಳು ಮತ್ತು ಕಾಲುಗಳೊಂದಿಗೆ ತಲೆಕೆಳಗಾದ ಸ್ಥಾನಗಳಲ್ಲಿ ಸಿನ್ನರ್ಗಳನ್ನು ಸುಡಲಾಗುತ್ತದೆ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top