fbpx
ದೇವರು

ಗಣೇಶನಿಗೆ ಆನೆ ಮುಖ ಯಾಕಿದೆ ಗೊತ್ತಾ ? ಅದರ ಹಿಂದೆ ಒಂದು ದೊಡ್ಡ ಕಥೆ ಇದೆ ಏನು ಅಂತ ಓದಿ ನಾವು ಹೇಳ್ತೀವಿ

ಗಣೇಶನಿಗೆ ಗಜಮುಖ ಎಂಬ ಹೆಸರು ಬಂದಿದ್ದು ಹೇಗೆಂಬುದರ ಕುರಿತ ಕಥೆ.

ಗಣೇಶನನ್ನು ಗಜಮುಖ,ಪಂಚಹಸ್ತ,ವಿಜ್ಞೇಶ್ವರ, ಮೂಷಿಕ ವಾಹನ ಎಂಬ ಅನೇಕ  ಹೆಸರುಗಳಿವೆ. ಇದು ಎಲ್ಲರೂ ಅತ್ಯಂತ ಪ್ರೀತಿಯಿಂದ ಪೂಜಿಸುವ ಗಣೇಶನ ವಿವಿಧ ಹೆಸರುಗಳು.

ಒಂದು ಬಾರಿ ಪಾರ್ವತಿಯು ಸ್ನಾನ ಮಾಡುವಾಗ ನಂದಿಯನ್ನು ಕರೆದು ಹೀಗೆ ಹೇಳಿದಳು ನಾನು ಸ್ನಾನ ಮಾಡಲು ಹೋಗುತ್ತೇನೆ ಯಾರು ಬಂದರು ಅರಮನೆಯೊಳಗೆ ಬಿಡಬೇಡ  ಬಾಗಿಲ ಬಳಿಯೇ ನಿಲ್ಲು ಎಂದು ಹೇಳಿ ಹೋದಳು.ಆದರೆ ಶಿವನು ಬಂದು ಒಳನುಗ್ಗಿದನು.ಪಾರ್ವತಿಯು ನಾಚಿಕೆಯಿಂದ ತಲೆ ತಗ್ಗಿಸಿದಳು.

ಶಿವ ಗಣಗಳು ಶಿವನಿಗೆ ಮಾತ್ರ ಗೌರವ ಕೊಡುತ್ತಾರೆ. ನನಗೆ ಗೌರವ ಕೊಡುವುದಿಲ್ಲವೆಂದು ಪಾರ್ವತಿ ಒಬ್ಬ ಬಾಲಕನನ್ನು ತನಗೆಂದೇ ಅರಿಶಿನದಿಂದ  ಸೃಷ್ಟಿಸಲು   ನಿರ್ಧರಿಸಿದಳು.

ಪರಶಿವ  ಮತ್ತು  ಪಾರ್ವತಿಯರಿಬ್ಬರು ಕೈಲಾಸ ಪರ್ವತದಲ್ಲಿ ನೆಲೆಸಿದ್ದಾಗ ಮತ್ತೊಂದು  ದಿನ ಶಿವ ಇಲ್ಲದೆ ಇರುವ ಸಂದರ್ಭದಲ್ಲಿ ಪಾರ್ವತಿ ಸ್ನಾನಕ್ಕೆ ಅಣಿಯಾಗುತ್ತಿದ್ದಳು. ಆಗ “ನಾನು ಸ್ನಾನ ಮಾಡುತ್ತಿರುವಾಗ ಯಾರಾದರೂ ಬಂದರೆ ?” ಎಂಬ ಆತಂಕವೂ ಅವಳ ಮನಸ್ಸಿನಲ್ಲಿ ಸುಳಿಯಿತು. ತನಗೆಂದೇ ಒಬ್ಬರನ್ನು ನೇಮಿಸಬೇಕೆಂದು ಒಬ್ಬ ಬಾಲಕನನ್ನು ಸೃಷ್ಟಿಸಲು ಯೋಜನೆ ರೂಪಿಸಿದಳು.

ಸ್ವಲ್ಪ  ಹೊತ್ತು ಯೋಚಿಸಿ ಬಳಿಕ ಪಾರ್ವತಿ ಅದಕ್ಕೊಂದು ಪರಿಹಾರ ಕಂಡುಕೊಂಡಳು. ಸ್ನಾನಕ್ಕೆ ಹೋಗುವ ಮೊದಲು ತನ್ನ ದೇಹಕ್ಕೆ ಲೇಪಿಸಲಾಗಿದ್ದ ಅರಿಶಿನವನ್ನು  ತೆಗೆದು ಒಂದು ಬಟ್ಟಲಿನಲ್ಲಿ ತುಂಬಿಟ್ಟಳು.ಆ ಅರಿಶಿನದ ಪುಡಿಯಿಂದ ಬಾಲಕನೊಬ್ಬನ ಮೂರ್ತಿಯೊಂದನ್ನು ನಿರ್ಮಿಸಿದಳು.

ಬಳಿಕ ಆ ಮೂರ್ತಿಗೆ ಪಾರ್ವತಿ ಪ್ರಾಣವನ್ನು ತುಂಬಿದಳು ನೋಡು ನೋಡುತ್ತಿದ್ದಂತೆಯೇ ಮೂರ್ತಿ ಸುಂದರ ಬಾಲಕನಾಗಿ ಜೀವ ತಳೆಯಿತು. ಪಾರ್ವತಿ ಹೆಮ್ಮೆಯಿಂದ ನುಡಿದಳು, “ನೀನು ನನ್ನ ಮಗ ನನ್ನವನು ಮಾತ್ರ!”

ಅವಳ ಮಗ ಕೇಳಿದ “ಅಮ್ಮ ,ನನ್ನಿಂದ ಏನು ಸೇವೆಯಾಗಬೇಕು?”

ಪಾರ್ವತಿ ತನ್ನ ಮಗನನ್ನು ಅರಮನೆಯ ಮುಂಬಾಗಕ್ಕೆ ಕರೆದೊಯ್ದಳು. ಅವನ ಕೈಗೆ ಕಬ್ಬಿಣದ ಸಲಾಕೆಯೊಂದನ್ನು ಕೊಟ್ಟು ಹೀಗೆ ಹೇಳಿದಳು, “ಮಗನೇ,ಇಲ್ಲಿಯೇ ಕಾವಲು ಕಾಯುತ್ತಿರು ನನ್ನ ಅನುಮತಿ ಇಲ್ಲದೆ ಯಾರನ್ನೂ ಒಳಗೆ ಬಿಡಬೇಡ” ಇಷ್ಟು ಹೇಳಿದ ಪಾರ್ವತಿ ಒಳ ನಡೆದಳು.

ಕೊಂಚ ಸಮಯದ ಬಳಿಕ ಅಲ್ಲಿಗೆ ಒಬ್ಬ ವ್ಯಕ್ತಿ ಬಂದ.ಅವನು ಬೇರೆ ಯಾರು ಅಲ್ಲ,ಪರಶಿವ ಬಂದವನೇ ಎಂದಿನಂತೆ ಅರಮನೆಯೊಳಗೆ ಹೊರಟ. ಅಲ್ಲಿಯೇ ಕಾವಲಿಗೆ ನಿಂತಿದ್ದ ಬಾಲಕ ಶಿವನನ್ನು ತಡೆದು ನಿಲ್ಲಿಸಿದ. “ಯಾರನ್ನೂ ಒಳಗೆ ಬಿಡಬೇಡ ಎಂದು ನನ್ನ ತಾಯಿ ,ಪಾರ್ವತಿ ಹೇಳಿದ್ದಾಳೆ” ಎಂದ.

ಶಿವನಿಗೆ ನಗು ತಡೆಯಲಾಗಲಿಲ್ಲ “ಹ,ಹ,ಹ ,ಪಾರ್ವತಿಗೂ ಈಗ ಮಗ ಹುಟ್ಟಿರುವನೇ, ಅದೂ ನನಗೆ ತಿಳಿಯದಂತೆ” ಬಾಲಕನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಶಿವ ಒಳಗೆ ನೆಡೆದ.ಊಹಿಸಲಾಗದ ಸಂಗತಿಯೊಂದು ಜರುಗಿತು. ಆಗ! ಬಾಲಕನ ಕೈಯಲ್ಲಿದ್ದ ಕಬ್ಬಿಣದ ಸಲಾಕೆ ಶಿವನ ಮೇಲೆ ಅಪ್ಪಳಿಸಿತು, “ನಾನು ಹೇಳಳಿಲ್ಲವೇ,ಒಳಗೆ ಕಾಲಿಡ ಬೇಡ ಎಂದು?”

ಪರಶಿವ ಆಕ್ರೋಶದಿಂದ ಕಿಡಿ ಕಿಡಿಯಾದ ಸ್ವಲ್ಪ ಹೊತ್ತು ಯೋಚಿಸಿ ಬಳಿಕ ಅಲ್ಲಿಂದ ಹೊರಡಲು ನಿರ್ಧರಿಸಿದ.ಹೊರಡುವ ಮೊದಲು,ಬಾಲಕನಿಗೆ ಶಿವ, “ಎಷ್ಟು ಅಹಂಕಾರ ನಿನಗೆ! ನಿನ್ನಂಥ ಬಾಲಕನನ್ನು ವಿಚಾರಿಸಿಕೊಳ್ಳಲು ನನ್ನ  ಗಣಗಳೇ ಸಾಕು”ಎಂದ.

ಶಿವ ಆಗಲೇ ತನ್ನ ಗಣಗಳನ್ನು ಆಹ್ವಾನಿಸಿದ. “ಹೋಗಿ,ಅಲ್ಲಿ ನಿಂತಿದ್ದಾನಲ್ಲ, ಅರಮನೆ ಕಾಯುವ ನೆಪದಲ್ಲಿ ಉದ್ಧಟತನ ತೋರಿದ ಆ ಬಾಲಕ, ಅವನಿಗೆ ಸರಿಯಾದ ಪಾಠ ಕಲಿಸಿ,” ಎಂದು ಅವರ ಗಣಗಳಿಗೆ ಶಿವ  ಅಜ್ಞಾಪಿಸಿದನು.

ಶಸ್ತ್ರ ಸಜ್ಜಿತವಾದ ಗಣಗಳು ಅರಮನೆಯ ಪ್ರವೇಶ ಬಾಗಿಲಿನೆಡೆಗೆ ನುಗ್ಗಿದ್ದರು.ಈ ಶಕ್ತಿ ಪ್ರದರ್ಶನದಿಂದ ಪಾರ್ವತಿಯ ಮಗನಿಗೆ ಕಿಂಚಿತ್ತೂ ಹೆದರಿಕೆಯಾಗಲಿಲ್ಲ ಗಣಗಳ ಮುಂದೆ, “ಎಷ್ಟು ಧೈರ್ಯ ನಿನಗೆ ? ಪರಶಿವನನ್ನೇ ಎದುರು ಹಾಕಿಕೊಳ್ಳುತ್ತಿಯಾ ? ನಿನ್ನ ಸರ್ವನಾಶ ಶತಃಸಿದ್ದ ಎಂದು ಅಬ್ಬರಿಸಿದರು.

ಪಾರ್ವತಿ ಪುತ್ರ ಮಾತ್ರ ನಿಂತಲ್ಲಿಂದ ಕದಲಲಿಲ್ಲ. ನಿರ್ಭಯದಿಂದ ಉತ್ತರಿಸಿದ  “ನೀನು ಹೇಗೆ ನಿನ್ನ ಯಜಮಾನನ ಆಜ್ಞೆಯನ್ನು ಪಾಲಿಸುತ್ತಿದ್ದಿಯೋ , ಹಾಗೆ ನಾನು ನನ್ನ ತಾಯಿ ಪಾರ್ವತಿಯ ಆಜ್ಞೆಯಂತೆ ನಡೆಯುತ್ತಿದ್ದೇನೆ.ಹಾಗಾಗಿ,ನಾನು ಶರಣಾಗುವ ಮಾತೇ ಇಲ್ಲ”.

ಪಾರ್ವತಿಯ ಮಗನ ಮೇಲೆ ಆಕ್ರಮಣ ಮಾಡುವುದು ಸರಿಯೇ ?ಗಣಗಳಿಗೆ ಗೊಂದಲ ಉಂಟಾಯಿತು.ನಿಧಾನವಾಗಿ ಹಿಮ್ಮೆಟ್ಟಿದ್ದರು.

ಈ ನಡುವೆ ಸ್ನಾನ ಮುಗಿಸಿ ಬಂದ ಪಾರ್ವತಿಗೆ ನೆಡೆದ ಸಂಗತಿ ಅರ್ಥವಾಯಿತು. “ಶಿವ ನನ್ನ ಪತಿಯೇ ಇರಬಹುದು. ಆದರೆ , ಪೂರ್ವಾಪರ ವಿಚಾರಿಸದೆ ನನ್ನ ಮಗನ ಮೇಲೆಯೇ ಆಕ್ರಮಣ ಮಾಡಿದ್ದು ಸರಿಯೇ ? ನನ್ನ ಪುತ್ರನ ಗೌರವ ರಕ್ಷಣೆ ನನ್ನ ಹೊಣೆ”ಎಂಬ ತೀರ್ಮಾನಕ್ಕೆ ಬಂದಳು.

ಗಣಗಳು ಶಿವನ ಬಳಿ ಹೋಗಿ ನೆಡೆದ ಸಂಗತಿಯನ್ನೆಲ್ಲಾ ತಿಳಿಸಿದರು. ಗಣಗಳು ಹೇಳಿದ್ದನ್ನೆಲ್ಲಾ ಕೇಳಿದ  ಶಿವ “ಈ ಹೆಜ್ಜೆ ಹಿಂದಿಟ್ಟರೆ,ಆ ಬಾಲಕ ನಾವು ಸೋತೆವು ಎಂದುಕೊಳ್ಳುತ್ತಾನೆ.ಹೋಗಿ ಅವನನ್ನು ಮಟ್ಟ ಹಾಕಿ ಬನ್ನಿ. “ಎಂದು ಆಜ್ಞಾಪಿಸಿದ.

ಬ್ರಹ್ಮ ನಾನು ಆ ಬಾಲಕನೊಂದಿಗೆ ಮಾತನಾಡುತ್ತೇನೆ ಎಂದು ಬಂದಾಗ ಬ್ರಹ್ಮನ ಬಾಯಿ ತೆಗೆಯಲು ಸಹ ಬಿಡಲಿಲ್ಲ ಆ ಬಾಲಕ.ಬ್ರಹ್ಮನು ಆ ಹುಡುಗನನ್ನು ಹೊಡೆಯಲು  ನೋಡಿದನು.ಬ್ರಹ್ಮನಿಗೆ ತಿರುಗಿ ಏಟು ಕೊಡಲು ಬ್ರಹ್ಮನು ಸಹ ಅಲ್ಲಿಂದ ಒಡಬೇಕಾಯಿತು.

ಒಂದು ದೊಡ್ಡ ಯುದ್ಧವೇ ನಡೆಯಿತು ಹೊರಗೆ ನೆಡೆಯುತ್ತಿದ್ದ ವಿಷಯವನ್ನು ತಿಳಿದುಕೊಂಡ ಪಾರ್ವತಿ.ಕಾಳಿ ಮತ್ತು ದುರ್ಗಿಯನ್ನು ತನ್ನ ಶಕ್ತಿಯಿಂದ ಬರಮಾಡಿಕೊಂಡು  ಇಬ್ಬರನ್ನು ತನ್ನ ಪುತ್ರನಿಗೆ ಸಹಾಯ ಮಾಡುವಂತೆ ಕೇಳಿಕೊಂಡಳು.

ಅವರಿಬ್ಬರು ಪುತ್ರನ ಜೊತೆ ನಿಂತು ಎಲ್ಲ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿದರು  ಯುದ್ಧ ಮಾಡಲು ಬಂದ ಗಣಗಳ  ಸೈನ್ಯಕ್ಕೆ ಬಾಲಕನನ್ನು ಎದುರಿಸಲು ಸಾಧ್ಯವಾಗಲಿಲ್ಲ.ಬ್ರಹ್ಮನು ಆ ಬಾಲಕನೊಂದಿಗೆ ಕಾದಾಡುವಾಗ ಹಿಂದಿನಿಂದ ಪರಶಿವನು ಬಂದು  ಆ ಬಾಲಕನನ್ನು ಕೊಂದುಬಿಟ್ಟನು.

ಹೊರಗೆ ಬಂದು ಇದನ್ನು ನೋಡಿದ ಪಾರ್ವತಿ ಅತ್ಯಂತ ಕೋಪೋದ್ರಿಕ್ತಳಾಗಿ ಕಾಳಿ ಮತ್ತು ದುರ್ಗಿಯನ್ನು ಕರೆದು ತನ್ನ ಮಗನನ್ನು ಕೊಂದ ಯಾರನ್ನೂ ಬಿಡಬೇಡಿ.ಎಲ್ಲರನ್ನೂ ಕೊಂದು ಬಿಡಿ ಎಂದಳು. ಇದನ್ನು  ನೋಡಿದ ಬ್ರಹ್ಮ ಮತ್ತು ವಿಷ್ಣು, ಹೀಗೆ ಹೇಳಿದರು.

ತಾಯಿ ನಮ್ಮನ್ನು ಕ್ಷಮಿಸು,ದಯೆ ತೋರಿಸು ಕಾಳಿ ಮತ್ತು ದುರ್ಗಿಯನ್ನು ಹಿಂದಕ್ಕೆ ಕರೆಯಿರಿ. ನಾನು ಅವರನ್ನು ಹಿಂದೆ ಕರೆಯುತ್ತೇನೆ. ಆದರೆ ಅದಕ್ಕೂ ಮೊದಲು ನನ್ನ ಮಗ ಜೀವಂತವಾಗಬೇಕು. ಅವನಿಗೆ ಗೌರವ ಸಿಗಬೇಕು.ಒಂದು ಪದವಿಯನ್ನು ನೀಡಬೇಕು.ಇದನ್ನು ಬ್ರಹ್ಮ ಮತ್ತು ವಿಷ್ಣು ಶಿವನಿಗೆ ತಿಳಿಸಿದರು. ಶಿವನಿಗೂ ಸಹ ದುಃಖವಾಗಿತ್ತು.ಇದಕ್ಕೆ ಶಿವನೂ ಒಪ್ಪಿದನು.

ನಂತರ ಶಿವನು ಹೀಗೆ ಹೇಳಿದನು “ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಒಂದು ಜೀವಂತ ಪ್ರಾಣಿಯ ತಲೆಯನ್ನು ಕಡಿದು ತನ್ನಿ ಎಂದನು.ಎಲ್ಲರೂ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಪ್ರಾಣಿಯನ್ನು ಹುಡುಕುತ್ತಾ ಹೋದರು.ಅವರಿಗೆ  ಆನೆಯೊಂದು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವುದು ಕಂಡು ಬಂತು.ಅದರ ತಲೆಯನ್ನು ಕಡಿದು ತಂದರು. ನಂತರ ಆ ಬಾಲಕನಿಗೆ ಆ ಆನೆಯ ತಲೆಯನ್ನು ಜೋಡಿಸಿ ಜೀವ ಬರಿಸಿದರು.ಪಾರ್ವತಿ ಅತ್ಯಂತ ಆನಂದದಿಂದ ತನ್ನ ಪುತ್ರನನ್ನು ನೋಡಿ ಆಲಂಗಿಸಿದಳು.

ಶಿವ ಪಾರ್ವತಿ ನನ್ನನ್ನು ಕ್ಷಮಿಸು ಇಂದಿನಿಂದ ಕಾರ್ತಿಕೇಯನಂತೆ ಇವನು ನಮ್ಮ ಮಗನೇ.ಎಲ್ಲ ಶುಭಕಾರ್ಯಗಳಲ್ಲಿಯೂ ಸಹ ಮೊದಲ ಪೂಜೆ ಇವನಿಗೆ ಸಲ್ಲಬೇಕು.ಆದ್ದರಿಂದ ಮೊದಲ ಪೂಜೆಯ ಹಕ್ಕು ಇವನಿಗೆ ಇರುತ್ತದೆ.ಇಂದಿನಿಂದ ಇವನ ಹೆಸರು ‘ವಿಜ್ಞೇಶ್ವರ’.ಇವನೇ ಎಲ್ಲ ಗಣಗಳಿಗೂ ಅಧಿಪತಿ.

ಹೀಗೆ ಗಣೇಶನಿಗೆ ಆನೆಯ ಮುಖ ಹೊಂದಿರುವ ಕಾರಣದಿಂದ ಗಜಮುಖ ಎಂಬ ಹೆಸರು ಬಂತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top