fbpx
ಆರೋಗ್ಯ

ಕೆಟ್ಟ ಅನುಭವ ಕೊಡೊ ಹೆಣ್ಮಕ್ಳಲ್ಲಿ ಕಂಡು ಬರೋ ಬಿಳಿ ಮುಟ್ಟು ಹೋಗ್ಬೇಕಂದ್ರೆ ಹೀಗ್ ಮಾಡಿ ಅನ್ನುತ್ತೆ ಆಯುರ್ವೇದ !

ಬಿಳಿ ಮುಟ್ಟು ಎಂದರೇನು ? ಇದಕ್ಕೆ ಸುಲಭವಾದ ಮನೆಮದ್ದುಗಳು

ಗರ್ಭಕೋಶದಲ್ಲಿನ ಸತ್ತ ಜೀವಕೋಶಗಳನ್ನು ಹೆಣ್ಣಿನ ಜನನೇಂದ್ರಿಯದ ಮೂಲಕ ದೇಹದ ಹೊರಹಾಕುವ ಪ್ರಕ್ರಿಯೆಗೆ ಬಿಳಿ ಮುಟ್ಟು ಅಥವಾ ಬಿಳಿ ಸೆರಗು ಎನ್ನಲಾಗುತ್ತದೆ,ಯೋನಿಯಲ್ಲಿ ತೀರಾ ವಾಸನೆ ಅಥವಾ ತುರಿಕೆ ಇದ್ದರೆ ಯಾವುದೊ ಸೋಂಕು ಉಂಟಾಗಿರುವ ಲಕ್ಷಣಗಳು ಎನ್ನಬಹುದು.
ಬಾರ್ಥೊಲಿನ್ ಎಂಬ ಗ್ರಂಥಿಗಳಿಂದ ಬಿಳಿ ಮುಟ್ಟು ಉತ್ಪತ್ತಿಯಾಗುತ್ತದೆ. ತಿಂಗಳು ಪೂರಾ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಗಟ್ಟಿ ನೀರಿನಂತೆ ಅಥವಾ ಲೋಳೆಯಂತೆ ಕಾಣಿಸಿಕೊಂಡರೆ ಅಲ್ಲಿ ಖಂಡಿತ ಸಮಸ್ಯೆ ಇರಬಹುದು .

ಋತು ಸ್ರಾವದ ಮೂರು ನಾಲ್ಕು ದಿನಗಳ ಮುಂದೆ ಮತ್ತು ನಂತ್ರ ಕಾಣಿಸಿಕೊಂಡರೆ ಅದೇನು ಅಷ್ಟು ದೊಡ್ಡ ಸಮಸ್ಯೆಯಲ್ಲ

ಬಿಳಿ ಮುಟ್ಟು ಅಥವಾ ಬಿಳಿ ಸೆರಗಿಗೆ ಆಯುರ್ವೇದದ ಮನೆಮದ್ದುಗಳು :

3 ಗ್ರಾಂ ಆಮ್ಲಾ ಪುಡಿ ಮತ್ತು 6 ಗ್ರಾಂ ಜೇನುತುಪ್ಪ ಮಿಶ್ರಣ ಮಾಡಿ 30 ದಿನಗಳ ಕಾಲ ತೆಗೆದುಕೊಂಡರೆ ಬಿಳಿ ಸೆರಗು ಗುಣಪಡಿಸಲು ಸಹಾಯ ಮಾಡುತ್ತದೆ.


ಉದ್ದಿನ ಹಿಟ್ಟು, ಅತಿಮಧುರ, ಕುಂಬಳದ ಬೇರು ಹಾಗೂ ಅಶ್ವಗಂಧ, ಇವುಗಳನ್ನು ಸಮನಾಗಿ ಕುಟ್ಟಿ ಶೋಧಿಸಿಟ್ಟುಕೊಂಡು ಹಲವು ದಿನಗಳವರೆಗೆ ಬಿಡದೆ ಒಂದೊಂದು ಚಮಚದಂತೆ ಜೇನುತುಪ್ಪದೊಡನೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಬಿಳಿ ಮುಟ್ಟು ಗುಣವಾಗುತ್ತದೆ.

ಹೊಲ ಗದ್ದೆಗಳಲ್ಲಿ ಬೆಳೆಯೋ ಈ ಕಳೆ ಸಸ್ಯ ಅಕ್ಕಿಗಿಡ ಇದರ ಎಲೆಗಳನ್ನು ಪೇಸ್ಟ್ ಮಾಡಿ ಮಜ್ಜಿಗೆಯೊಂದಿಗೆ ಕುಡಿದರೆ ೩-೪ ದಿನದಲ್ಲಿ ಮಹಿಳೆಯರ ಬಿಳಿ ಮುಟ್ಟು ಗುಣವಾಗುತ್ತದೆ.

ಹತ್ತು ಬಿಳಿ ದಾಸವಾಳದ ಹೂವನ್ನು ಚೆನ್ನಾಗಿ ತೊಳೆದು ಅರೆದು ಒಂದು ಲೋಟ ಹಾಲಿನಲ್ಲಿ ಹಾಕಿ ದಿನಕ್ಕೆ ಮೂರು ಬಾರಿ ಏಳು ದಿನಗಳು ಕುಡಿಯಬೇಕು .
ಬೆಳಗ್ಗೆ ಸೇವಿಸುವಾಗ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .

ಹತ್ತು ಬಿಳಿ ದಾಸವಾಳದ ಒಂದು ಹಿಡಿ ಹೂವು ಮತ್ತು ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿ ಅರೆದು ಬೆಲ್ಲದ ಜೊತೆ ಅಥವಾ ಕಲ್ಲು ಸಕ್ಕರೆಯ ಜೊತೆ ಸೇರಿಸಿ ದಿನಕ್ಕೆ ಮೂರು ಬಾರಿ ಏಳು ದಿನಗಳು ಕುಡಿಯಬೇಕು . ಬೆಳಗ್ಗೆ ಸೇವಿಸುವಾಗ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .

ಬಿಳಿ ದಾಸವಾಳದ ಹೂವನ್ನು ( 4 – 6 ) ಸಕ್ಕರೆ ಬೆರೆಸಿ ಅರೆದು ಸೇವಿಸಿದರೆ ಸ್ತ್ರೀಯರ ಬಿಳಿ ಮುಟ್ಟಿನ ಸ್ರಾವ ನಿವಾರಣೆಯಾಗುತ್ತದೆ.

ಅಶೋಕ ಮರದ ತೊಗಟೆಯನ್ನು ಸಂಗ್ರಹಿಸಿ ಪುಡಿ ಮಾಡಿ ,ಶೋಧಿಸಿಕೊಳ್ಳಿ , ಇದರ ಎರಡು ಚಮಚ ಚೂರ್ಣವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರುಬಾರಿ 21 ದಿನಗಳು ಕುಡಿಯಬೇಕು .


30 ತಾಜಾ ದಾಳಿಂಬೆ ಎಲೆಗಳನ್ನು 10 ಕಪ್ಪು ಮೆಣಸು ಗಳನ್ನು ಸೇರಿಸಿ ಜಜ್ಜಿ ಅರ್ಧ ಗ್ಲಾಸ್ ನೀರಿನಲ್ಲಿ ಮಿಶ್ರಣ ಮಾಡಿ ಮೂರು ವಾರಗಳ ಕಾಲ ಸೇವಿಸಬೇಕು.

2 ಟೀ ಚಮಚ ಒಣ ಶುಂಠಿ ಪುಡಿ ತೆಗೆದುಕೊಂಡು 250 ಮಿ ಲಿ ನೀರಿನಲ್ಲಿ ಬೇರೆಸಿ ಕುಡಿಯಬೇಕು.

ಮೆಂತ್ಯೆಯನ್ನು ರಾತ್ರಿ ಇಡೀ ನೀರಿನಲ್ಲಿ ನೆನೆಸಿ , ಬೆಳಗ್ಗೆ 2 ಚಮಚ ಮೆಂತ್ಯೆಗೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಕೆಂಪು ಅಕ್ಕಿಯನ್ನು ಮೊದಲ ಸಲ ತೊಳೆದ ನೀರನ್ನು ಚೆಲ್ಲಿ, ಎರಡನೇ ಸಲ ತೊಳೆದ ನೀರಿಗೆ ಸ್ವಲ್ಪ ಬೆಲ್ಲ, ಚಿಟಿಕೆ ಉಪ್ಪು, ಎರಡು ಹನಿ ತುಪ್ಪ ಹಾಕಿ ಪ್ರತಿ ದಿನ ಸೇವಿಸುವುದರಿಂದ ಬಿಳಿ ಸೆರಗು ನಿವಾರಣೆಯಾಗುತ್ತದೆ.

ಪ್ರತಿ ದಿನ ಯೋಗ ಹಾಗು ಪ್ರಾಣಾಯಾಮ ಮಾಡಬೇಕು.

ಮೂರು -ನಾಲ್ಕು ಬೆಂಡೆ ಕಾಯಿಯನ್ನು ಬಿಸಿ ನೀರಿನಲ್ಲಿ ಬೇಯಿಸಿ ಒಂದು ವಾರ ಕುಡಿದರೆ ಒಳ್ಳೆಯದು.

 

ಜಿಡ್ಡು ಪದಾರ್ಥಗಳಾದ ಮೊಸರು , ಮೀನನ್ನು ತಿನ್ನಬಾರದು, ಸಿಹಿ ಹಾಗು ಎಣ್ಣೆ ಪದಾರ್ಥಗಳನ್ನು ತಿನ್ನಬಾರದು.

ಉತ್ತಮ ವಿಟಮಿನ್ ಯುಕ್ತ ಆಹಾರ , ಹಸಿ ತರಕಾರಿ ,ಹಣ್ಣುಗಳು, ಸೊಪ್ಪು ,ಹೆಚ್ಚು ನೀರು , ಮಿನರಲ್ ಯುಕ್ತ ಆಹಾರ ಸೇವಿಸಬೇಕು.

ಬೇರೆಯವರ ಸೋಪು, ಟವೆಲ್ಲು, ಒಳ ಉಡುಪು, ಹಾಗು ವಸ್ತ್ರಗಳನ್ನು ಉಪಯೋಗಿಸಬಾರದು ಹಾಗು ನೆನೆದ ಒಳಉಡುಪುಗಳನ್ನು ಬಳಸಬಾರದು .

ಊಟದನಂತರ ವೀಳ್ಯದೆಲೆ ಅಡಿಕೆ ತಿಂದರೆ ಒಳ್ಳೆಯದು.

ಮಲ ಮೂತ್ರದ ನಂತರ ಹಾಗು ಋತು ದಿನಗಳಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡಬೇಕು.

ಕುಡಿಯುವುದು ಸಿಗರೇಟ್ ಸಿಡುವುದು ಬಿಡಬೇಕು.

ಗರ್ಭನಿರೋಧಕ ಮಾತ್ರೆ ಹಾಗು ಜಂತು ಹುಳುಗಳು ಸಹ ಬಿಳಿ ಮುಟ್ಟಿಗೆ ಕಾರಣವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top