fbpx
ಸಾಧನೆ

ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದು ದೇಶದ ಮೊಟ್ಟ ಮೊದಲ ಮಂಗಳಮುಖಿ ‘ಪೊಲೀಸ್ ಅಧಿಕಾರಿ’ ಎಂದೆನಿಸಿಕೊಂಡ ಪ್ರತೀಕಾ!

ದೇಶದ ಮೊಟ್ಟ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ ಈ ಪ್ರತೀಕಾ!

 

 

ಕೆಲಸಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ಮಂಗಳಮುಖಿ ಪ್ರೀತಿಕಾ ಯಾಶಿನಿ ಈಗ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಳ್ಳುವ ಮೂಲಕ ದೇಶದ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ಪ್ರೀತಿಕಾ ಪಾತ್ರರಾಗಿದ್ದಾರೆ. ಚೆನ್ನೈ ಸಮೀಪದ ವಂಡಲೂರಿನಲ್ಲಿ 1028 ಜನ ಅಭ್ಯರ್ಥಿಗಳ ಜೊತೆ ಪ್ರೀತಿಕಾ 1 ವರ್ಷ ತರಬೇತಿಯನ್ನು ಪಡೆದು ಈಗ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.

 

 

ಗಂಡು ಮಗುವಾಗಿ ಹುಟ್ಟಿದ ಪ್ರದೀಪ್ ಕುಮಾರ್ ಬೆಳೆದ ನಂತರ ಲಿಂಗ ಬದಲಾವಣೆ ಆಗಿ ಪ್ರೀತಿಕಾ ಆಗಿ ಬದಲಾದರು. ಮಗ ಲಿಂಗಪರಿವರ್ತನೆಯಾಗಿದ್ದನ್ನು ನೋಡಿ ಪೋಷಕರು ಶಾಕ್ ಆಗಿದ್ದರು. ಮಗನನ್ನ ಮತ್ತೆ ಗಂಡಾಗಿಸಲು ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದರು. ಆಗ ತನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರೀತಿಕಾ ತನ್ನ ಪೋಷಕರನ್ನು ಬಿಟ್ಟು ಬಂದು ಮಂಗಳಮುಖಿಯರ ಜೊತೆ ಸೇರಿಕೊಂಡಿದ್ದರು. ಇವರು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಗ್ರಿ ಮಾಡಿದ್ದರಿಂದ ಮಹಿಳೆಯರ ಹಾಸ್ಟೆಲ್‍ನಲ್ಲಿ ವಾರ್ಡನ್ ಆಗಿ ಕೆಲಸ ಮಾಡಿಕೊಂಡಿದ್ದರು.

ಪ್ರತೀಕಾ ಪ್ರಕರಣ ಏನು ಗೊತ್ತಾ?

 

 

2015ರಲ್ಲಿ ಪ್ರೀತಿಕಾ ಪೊಲೀಸ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು.ಆದ್ರೆ ಲಿಂಗ ಎಂಬ ಕಾಲಂ ಭರ್ತಿ ಮಾಡಲು ಹೆಣ್ಣು ಅಥವಾ ಗಂಡು ವಿಭಾಗಕ್ಕೆ ಸೇರದೇ ಇರುವ ಕಾರಣ ಪ್ರತೀಕಾ ಅವರ ಅರ್ಜಿ ತಿರಸ್ಕೃತಗೊಂಡಿತ್ತು. ಅರ್ಜಿ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಪ್ರೀತಿಕಾ ಮದ್ರಾಸ್ ಹೈಕೋರ್ಟ್ ಮೊರೆ ಹೋದರು. ಮದ್ರಾಸ್ ಹೈಕೋರ್ಟ್ ಮುಂಗಳಮುಖಿಯರಿಗೆ ಅವಕಾಶ ನೀಡಬೇಕೆಂದು ತೀರ್ಪು ನೀಡಿ ತಮಿಳುನಾಡು ಸರ್ಕಾರಕ್ಕೆ ಆದೇಶವನ್ನು ನೀಡಿತ್ತು. ಈ ಆದೇಶದ ಪ್ರಕಾರ 2016 ಫೆ. 15ರಂದು ಸಿಟಿ ಪೊಲೀಸ್ ಕಮಿಷನರ್ ಸ್ಮಿತ್ ಸರನ್ ಪ್ರೀತಿಕಾ ಸೇರಿದಂತೆ ಇತರ ಮಂಗಳಮುಖಿಯರಿಗೂ ಪೊಲೊಸ್ ಅಧಿಕಾರಿ ಹುದ್ದೆಗೆ ನೇಮಕಮಾಡುವಂತೆ ಸೂಚನೆ ನೀಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top