ಉಪಯುಕ್ತ ಮಾಹಿತಿ

ಬುದ್ಧನ ಕಾಲದ ಈ ಜ್ಞಾನಿ ಹೇಳಿರೋ 10 ಮಾತುಗಳನ್ನ ತಿಳ್ಕೊಂಡ್ರೆ ನಿಮ್ ಜೀವನವನ್ನೇ ಬದಲಿಸಬಹುದು.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬುದ್ಧನ ಕಾಲದ ಈ ಜ್ಞಾನಿ ಹೇಳಿರೋ 10 ಮಾತುಗಳನ್ನ ತಿಳ್ಕೊಂಡ್ರೆ ನಿಮ್ ಜೀವನವನ್ನೇ ಬದಲಿಸಬಹುದು.

 

 

ಗೌತಮ ಬುದ್ಧನ ಕಾಲದಲ್ಲೇ ಮಹಾನ್ ಚಿಂತಕ ಎಂದು ಹೆಸರು ವಾಸಿಯಾಗಿದ್ದ ಮಾನ ಜ್ಞಾನಿಯ ಈ ಹತ್ತು ಮಾತುಗಳನ್ನು ಕೇಳಿದರೆ ನಿಮ್ಮ ಜೀವನಕ್ಕೆ ಸರಿಯಾದ ದಾರಿಯನ್ನು ತೋರಿಸಬಹುದು. ಆ ಮಹಾನ್ ಚಿಂತಕ ಯಾರು ಅಂದ್ರೆ ಅವರೇ ಕನ್ಫ್ಯೂಷಿಯಸ್. ಉತ್ತಮ ಜೀವನದ ಸಾಗುವಿಕೆಗಾಗಿ ಕನ್ಫ್ಯೂಷಿಯಸ್ ಹೇಳಿರುವ 10 ಮಾತುಗಳನ್ನು ಈ ಕೆಳಗೆ ಓದಿ ತಿಳಿದುಕೊಳ್ಳಿ.

1.ನಿಲ್ಲುವ ಯೋಚನೆ ನಿಮ್ಮ ತಲೆಯಲ್ಲಿ ಇಲ್ಲದಿದ್ದರೆ ನೀವು ಎಷ್ಟು ನಿಧಾನವಾಗಿ ನಡೆದರೂ ಪರವಾಗಿಲ್ಲ. ಒಟ್ನಲ್ಲಿ ನಿಲ್ಲುವ ಮನಸ್ಸು ಮಾಡಬಾರದಷ್ಟೇ.

 

 

2.ಯಾವುದೇ ಸಾಧನೆಯಲ್ಲೇ ನಿಮ್ಮನ್ನು ಮೀರಿಸಲು ಪ್ರಯತ್ನ ಪಡುವಂತವರ ಮತ್ತು ಆ ಸಾಮರ್ಥ್ಯ ಇರುವಂತವರ ಜೊತೆ ಗೆಳೆತನ ಮಾಡಿಕೊಳ್ಳಿ. ಇದು ಸಾಧ್ಯವಾಗದಿದ್ದರೂ ಪರವಾಗಿಲ್ಲ ಆದ್ರೆ ನಿಮ್ಮನ್ನು ಮೀರಿಸದಿರುವವರ ಜೊತೆ ಮಾತ್ರ ಗೆಳೆತನ ಮಾಡಿಕೊಳ್ಳಬೇಡಿ.

 

3.ಯಾವುದೇ ಒಬ್ಬ ವ್ಯಕ್ತಿಯ ಮೇಲೆ ತುಂಬಾ ಕೋಪ ಮಾಡಿಕೊಳ್ಳುವುದಕ್ಕೆ ಮುಂಚೆ, ಅದರಿಂದಾಗುವ ಕೆಟ್ಟ ಪರಿಣಾಮಗಳ ಕುರಿತು ಒಮ್ಮೆ ಯೋಚನೆ ಮಾಡಿ.

4. ನಿಮ್ಮ ಕೆಲಸದಲ್ಲಿ ಗುರಿ ಮುಟ್ಟುವುದಕ್ಕೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ನಿಮಗೆ ತಿಳಿದರೆ ಗುರಿಯನ್ನು ಬದಲಾಯಿಸಬೇಡಿ. ಅದರ ಬದಲು ನೀವು ಮಾಡುವ ಕೆಲಸದ ವಿಧಾನವನ್ನು ಬದಲಾಯಿಸಿ ನಿಮ್ಮ ಕೆಲಸವನ್ನು ಮತ್ತೆ ಶುರುಹಚ್ಕೋಳಿ.

 

 

5. ಯಾರನ್ನೂ ದ್ವೇಷಿಸಲು ಹೋಗಬೇಡಿ ಏಕೆಂದರೆ ನೀವು ಯಾರನಾದರೂ ದ್ವೇಷಿಸಿದರೆ ಅವರು ನಿಮ್ಮನ್ನು ಸೋಲಿಸದಂತೆ ಆಗುತ್ತದೆ.

 

 

6. ತನ್ನ ಕೈಯಲ್ಲಿ ಮಾಡಲಾಗದವನು(ಅಧಮ) ಬೇರೆಯವರಲ್ಲಿ ಏನನ್ನು ಹುಡುಕುತ್ತಾನೋ, ಅದನ್ನು ಉತ್ತಮನಾದವನು ತನ್ನಲ್ಲೇ ಹುಡುಕುತ್ತಾನೆ. ಈ ಮಾತನ್ನು ಯಾವಾಗಲೂ ಮನಸ್ಸಿನಲ್ಲಿ ಇಟ್ಟುಕೊಳ್ಳಿ.

 

 

7.ನೀವು ಯಾವ ಸ್ಥಳಕ್ಕಾದರೂ ಹೋಗಬೇಕೆಂದೆನಿಸಿದರೆ ಪೂರ್ತಿ ಮನಸ್ಸಿನಿಂದ ಹೋಗಿ. ಹೊಗ್ಲೊ ಬೇಡ್ವೋ ಅಂತ ಎರಡೆರಡು ಮನಸ್ಸಿನಿಂದ ಹೋಗ್ಬೇಡಿ.

8. ಅವರವರ ಅಜ್ಞಾನವನ್ನು ತಾವೇ ಕಂಡುಕೊಂಡು ಯಾರು ಜ್ಞಾನವನ್ನು ಪಡೆಯಲು ಹಂಬಲಿಸುತ್ತಿರುತ್ತಾರೋ ಅಂತಹವರ ಜೊತೆ ಮಾತ್ರ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಿ.

 

 

9.ಚಿಕ್ಕ ಉಪಯೋಗಗಳ ಸುಲಿಗೆ ಸಿಕ್ಕಿಕೊಂಡರೆ ದೊಡ್ಡ ಕೆಲಸಗಳು ಈಡೇರಲು ಬಹಳ ಕಷ್ಟಕರವಾಗುತ್ತವೆ. ಎನ್ನುವ ಮಾತನ್ನು ಮರೆಯಬೇಡಿ.

 

 

 

10.ಅವರು ನಿಮ್ಮ ಬೆನ್ನ ಮೇಲೆ ಉಗಿದರೆ ನೀವು ಅವರಿಗಿಂತ ಮುಂದೆ ಇದ್ದೀರಿ ಅಂತ ಅರ್ಥ. ಅಂದರೆ ನಿಮ್ಮ ಹಿಂದೆ ಮುಂದೆ ನೀವಿಲ್ಲದಿರುವ ಸಮಯದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡೋ ಅಥವಾ ನಿಮಗೆ ಬಯ್ಯೋ ಜನರು ಜೀವನದಲ್ಲಿ ನಿಮಗಿಂತ ಹಿಂದಿರುತ್ತಾರೆ ಎಂದರ್ಥ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top