ಜಾಗೃತಿ

ಒಂದು ಕಾಲದಲ್ಲಿ ದೇಶಕ್ಕಾಗಿ ಹೋರಾಡಿದ ವೀರ ಸೈನಿಕ ಇಂದು ಊಟಕ್ಕಾಗಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಒಂದು ಕಾಲದಲ್ಲಿ ದೇಶಕ್ಕಾಗಿ ಹೋರಾಡಿದ ವೀರ ಸೈನಿಕ ಇಂದು ಊಟಕ್ಕಾಗಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

 

 

ನಮ್ಮ ದೇಶಕ್ಕೆ ಸ್ವತಂತ್ರ ಬಂದು 70 ವರ್ಷಗಳೇ ಕಳೆದಿವೆ. ಇದರ ನೆನಪಿಗೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನೂ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತೇವೆ ಆದರೆ ಅಂತಹ ಸ್ವತಂತ್ರ ಹೋರಾಟದ ಕೆಲವು ವೀರ ಸೇನಾನಿಯನ್ನು ಮರೆತಿದ್ದೇವೆ. ಇನ್ನು ಸರ್ಕಾರಗಳು ಅಂತಹವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಅವರಿಗೆ ಜನರ ಸಮಸ್ಯೆಗಳೇ ನೆನಪಿರಲ್ಲ. ಇನ್ನು ಆ ರೀತಿಯ ಹೋರಾಟದ ಯೋಧರು ಹೇಗೆ ನೆನಪಿರುತ್ತದೆ. ಒಂದು ಕಾಲದಲ್ಲಿ ದೇಶಕ್ಕಾಗಿ ಹೋರಾಡಿದ ವೀರ ಸೈನಿಕನ ಪರಿಸ್ಥಿತಿಯು ಇಂತದ್ದೇ ಬನ್ನಿ ಅವರ ಬಗ್ಗೆ ತಿಳಿಯೋಣ.

 

 

ಅವರ ಹೆಸರು ಶ್ರೀಪಜಿತ್ ವಯಸ್ಸು ತೊಂಬತ್ತು ವರ್ಷ. ಉತ್ತರಪ್ರದೇಶದಲ್ಲಿನ ಝಾನ್ಸಿಯಲ್ಲಿ ಇರುತ್ತಾರೆ. ಒಂದು ಕಾಲದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಸೇರಿ ಸ್ವತಂತ್ರ ಹೋರಾಟವನ್ನು ಮಾಡಿದ್ದರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಪೀಮುಡಿಪಿಟ್ಟು ಹೋರಾಡಿದ್ದಾರೆ. ಆದರೆ ಈಗ ಅವರ ಸ್ಥಿತಿ ಘನಘೋರವಾಗಿದೆ ಒಂದು ಕಾಲದಲ್ಲಿ ದೇಶಕ್ಕಾಗಿ ಹೋರಾಡಿದ ವ್ಯಕ್ತಿ, ಸೈನಿಕನಾಗಿದ್ದಂತಹ ವ್ಯಕ್ತಿ ಇಂದು ತಿನ್ನಲು ಊಟವಿಲ್ಲದೆ ಇಲ್ಲದೆ,ಇರಲು ಮನೆ ಇಲ್ಲದೆ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ರಾತ್ರಿ ಹೊತ್ತು ರಸ್ತೆ, ಬಸ್ ಸ್ಟಾಪ್ ಪಾರ್ಕ್ ಹೀಗೆ ಎಲ್ಲಿ ಜಾಗವಿರುತ್ತೋ ಅಲ್ಲೇ ಮಲಗುತ್ತಿದ್ದಾರೆ.

 

 

ಆಗ ಶ್ರಿಪಜಿತ್ ಕುಟುಂಬ ಉತ್ತಮವಾಗಿತ್ತು ಚೆನ್ನಾಗಿದ್ದವರು. ಆದರೆ ಶ್ರಿಪಜಿತ್ ಮಗನ ದುಶ್ಚಟಗಳ ಕಾರಣ ಇರುವ ಜಮೀನು, ಮನೆಯನ್ನು ಕಳೆದುಕೊಳ್ಳಬೇಕಾಯಿತು. ಹಾಗಾಗಿ ಮಗನನ್ನು ನಿಯಂತ್ರಿಸುವ ಸಲುವಾಗಿ ಆತ ಮಾಡಿದ ಪ್ರಯತ್ನಗಳು ವಿಫಲವಾದವು. ಇದರಿಂದ ಕುಟುಂಬದ ಭಾರವೆಲ್ಲಾ ಶ್ರಿಪಜಿತ್ ಮೇಲೆ ಬಿತ್ತು. ಹಾಗಾಗಿ ಆತ ತನ್ನ ಇಳಿವಯಸ್ಸಿನಲ್ಲಿ ಕುಟುಂಬದ ಭಾರವನ್ನು ಹೊರಲಾರದೆ ಇಂದು ಭಿಕ್ಷುಕನಾಗಿ ಬದಲಾಗಿದ್ದಾನೆ.

 

 

ದೇಶಕ್ಕಾಗಿ ಹೋರಾಡಿದ ಇಂತವರನ್ನು ರಕ್ಷಿಸುವ ಜವಾಬ್ದಾರಿ ಸರಕಾರದ ಮೇಲಿದೆ ಇಲ್ಲದಿದ್ದರೆ ನಮಗೆ ಸ್ವಾತಂತ್ರ್ಯ ಸಿಕ್ಕಿದಕ್ಕೆ ಅರ್ಥ ಇರೋದಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top