fbpx
ಜೀವನ ಕ್ರಮ

ದೇವರೆಲ್ಲಿದ್ದಾನೆ ? ನಮ್ಮ ಸುತ್ತ ಮುತ್ತ ಇದಾನೆ ನೋಡೋ ಕಣ್ಣು ಬೇಕಷ್ಟೆ ಹೇಗೆ ಅಂತ ತಿಳ್ಕೊಳ್ಳಾಬೇಕಾದ್ರೆ ಈ ಕಥೆ ಓದಿ

ದೇವರೆಲ್ಲಿದ್ದಾನೆ ? ಒಂದು ಕಥೆ.

ಒಂದಾನೊಂದು ಕಾಲದಲ್ಲಿ ಪಶ್ಚಿಮ ಬಂಗಾಳದಲ್ಲಿ ಒಬ್ಬ ಸನ್ಯಾಸಿಯಿದ್ದರು.ಅವನೊಬ್ಬ ಧಾರ್ಮಿಕ ಮೂನುಷ್ಯನಾಗಿದ್ದನು.ಅವನಿಗೆ ಅನೇಕ ಶಿಷ್ಯರಿದ್ದರು.ಅವನು ಪ್ರತಿದಿನ ಮುಂಜಾನೆ ಆಶ್ರಮದ ಹೊರಗೆ ಇದ್ದ ಮರದ ಕೆಳಗೆ ಕುಳಿತು,ತನ್ನ ಶಿಷ್ಯರಿಗೆ ಬೋಧನೆ ಮಾಡುತ್ತಿದ್ದನು.

 

ಪ್ರತಿದಿನವೂ ಅವನ ಶಿಷ್ಯರಲ್ಲಿ ಒಬ್ಬನಾದ ಮದನ್ , “ಸ್ವಾಮಿ,ದೇವರೆಲ್ಲಿದ್ದಾನೆ ?” ಎಂದು ಕೇಳುತ್ತಿದ್ದನು.ಆಗ ಸನ್ಯಾಸಿಯು ‘ನೀನು ನಿನ್ನ ಸುತ್ತ ನೋಡು, ಆಗ  ದೇವರು  ನಿನಗೆ ಕಾಣಿಸುತ್ತಾನೆ ” ಎಂದು ಹೇಳುತ್ತಿದ್ದನು.

ಆದರೆ ಮದನ್ ಗೆ ಒಂದೂ ಸಹ ಅರ್ಥವಾಗುವುತ್ತಿರಲಿಲ್ಲ.ಕೊನೆಗೆ ಒಂದು ದಿನ ಮದನ್, “ಸ್ವಾಮಿ,ನೀವು ನನಗೆ ಯಾವಾಗಲೂ ಸುತ್ತಲೂ ನೋಡಲು ಹೇಳುತ್ತೀರ. ನಾನು ಸುತ್ತಲೂ ನೋಡುತ್ತಿದ್ದೆ. ಆದರೆ ಇದುವರೆಗೂ ದೇವರನ್ನು ನಾನು ನೋಡಿಲ್ಲ!”ಎಂದನು.

ಸನ್ಯಾಸಿಯು ನಕ್ಕು “ಮದನ್ ದೇವರು ಎಲ್ಲಾ ಕಡೆ ಇದ್ದಾನೆ.ಅವನು ಎಲ್ಲದರಲ್ಲಿ,ಹಾಗೂ ಎಲ್ಲರಲ್ಲಿಯೂ ಇದ್ದಾನೆ.ದೇವರು ನಿನ್ನಲ್ಲಿಯೂ ಇದ್ದಾನೆ, ಪ್ರತಿಯೊಂದು ಪ್ರಾಣಿ,ಪಕ್ಷಿ,ಹೂವಿನಲ್ಲಿಯೂ ಇದ್ದಾನೆ,ನೀನು ಎಚ್ಚರಿಕೆಯಿಂದ ಗಮನಿಸು,ಕಾಣಿಸುತ್ತದೆ” ಎಂದನು.

ಮದನ್ ಗೆ ಆಶ್ಚರ್ಯವಾಯಿತು, ಅವನು ಎಚ್ಚರದಿಂದ ಗಮನಿಸಲು ನಿರ್ಧರಿಸಿದನು.

ಅಂದು ಸಂಜೆ ಅವನು ತನ್ನ ಮನೆಗೆ ಹಿಂತಿರುಗುತ್ತಿದ್ದನು.ಆಗ ಅವನು ಸನ್ಯಾಸಿಯ ಮಾತುಗಳ ಬಗ್ಗೆ ಯೋಚಿಸಿದನು.  “ದೇವರು ಎಲ್ಲದರಲ್ಲಿಯೂ ಇದ್ದಾನೆ ? ಅವನು ನನ್ನಲಿಯೂ ಇದ್ದಾನೆ ? ಅದು ಹೇಗೆ ಸಾಧ್ಯ ?”

ತಕ್ಷಣ ಅವನ ಹಿಂದೆ ಏನೋ ಸದ್ದು ಕೇಳಿಸಿತು.ಮದನ್ ಹೆದರಿಕೆಯಿಂದ ಜಿಗಿದನು.ಅವನು ಹಿಂದೆ ತಿರುಗಿ ನೋಡಿದಾಗ ಒಂದು ಆನೆ ವೇಗವಾಗಿ ಓಡಿ ಬರುತ್ತಿದ್ದುದ್ದನ್ನು ಕಂಡನು.ಅದು ತನ್ನನ್ನೇ ಅಟ್ಟಿಸಿಕೊಂಡು ಬರುತ್ತಿತ್ತು.

ಮಾವುತನು, “ದಾರಿ ಬಿಡು ಆನೆಗೆ ಹುಚ್ಚು ಹಿಡಿದಿದೆ! ದೂರ ಹೋಗು!” ದೂರ ಹೋಗು!” ಎಂದ ಕಿರುಚಿದನು.

“ದೇವರು ಎಲ್ಲರಲ್ಲೂ ಇದ್ದಾನೆ,ಅಂದರೆ ಆನೆಯಲ್ಲೂ ದೇವರಿದ್ದಾನೆ. ದೇವರು ನನ್ನಲ್ಲಿಯೂ ಇರುವುದರಿಂದ ನನಗೆ ತೊಂದರೆ ಮಾಡುವುದಿಲ್ಲ.ನನಗೆ ಆನೆಯು ತೊಂದರೆ ಮಾಡದಿರುವುದರಿಂದ ನಾನು ಇಲ್ಲೇ ಇರುತ್ತೇನೆ!” ಹೀಗೆ ಯೋಚಿಸಿ ಮದನ್ ರಸ್ತೆಯ ಮಧ್ಯದಲ್ಲಿಯೇ ನಿಂತನು.

ಆನೆಯು ಮದನ್ ನನ್ನು  ಸಮೀಪಿಸುತ್ತಿದ್ದಂತೆ ಅವನನ್ನು ಎತ್ತಿಕೊಂಡು ಎಸೆಯಿತು.ಅದೃಷ್ಟವಶಾತ್ ಮದನ್ ಹುಲ್ಲಿನ ಮೇಲೆ ಬಿದ್ದಿದ್ದರೂ ಕೆಲವು ಗಾಯಗಳಾದವು.ಆನೆಯು ಅವನನ್ನು ಏಕೆ ಅಟ್ಟಿಸಿಕೊಂಡು ಬಂದಿತೆಂದು ಅವನಿಗೆ ಅರ್ಥವಾಗಲಿಲ್ಲ.

ಮಾರನೆಯ ದಿನ ಮದನ್ ಎಂದಿನಂತೆ ಸನ್ಯಾಸಿಯನ್ನು ನೋಡಲು ಹೋದನು.ಅವನು ನೆಡೆದಿದ್ದೆಲ್ಲವನ್ನು ಹೇಳಿದನು. “ಸ್ವಾಮಿ,ದೇವರು ಎಲ್ಲಾ ಕಡೆಯೂ ಇದ್ದಾನೆಂದು ನೀವು ಹೇಳಿದಿರಿ, ಮತ್ತೆ ಆನೆಯು ನನ್ನನ್ನು ಏಕೆ ಅಟ್ಟಿಸಿಕೊಂಡು ಬಂದಿತು ?”ಎಂದು ಹೇಳಿದನು.

ಸನ್ಯಾಸಿಯು ನಕ್ಕು,  “ದೇವರು ಆನೆಯಲ್ಲಿಯೂ ಇರುವನೆಂದು ನೀನು ಸರಿಯಾಗಿ ಯೋಚಿಸಿದೆ. ಆದರೆ ಅವನು ನಿನಗೆ ದೂರ ಹೋಗಲು ಹೇಳಿದ. ಮಾವುತನಲ್ಲಿಯೂ ಇದ್ದಾನೆಂದು ನೀನು ಮರೆತೆ!” ಎಂದು ಉತ್ತರಿಸಿದನು.

ಆನೆಗೆ ಅವನು ನಿನಗೆ ದೂರ ಹೋಗಲು ಹೇಳಿದ.ಮಾವುತನಲ್ಲಿಯೂ ಇದ್ದಾನೆಂದು ನೀನು ಮರೆತೆ!”ಎಂದು ಮಾವುತ ಹೇಳಿದಾಗ ನೀನೇಕೆ ಅವನ ಮಾತು ಕೇಳಲಿಲ್ಲ ?”ಎಂದು ಸನ್ಯಾಸಿಯು ಹೇಳಿದನು.

ಮದನ್ ಗೆ ಏನು ಹೇಳಲೂ ತಿಳಿಯಲಿಲ್ಲ.ಅವನು ತನ್ನ ಪಾಠವನ್ನು ಕಲಿತಿದ್ದನು.ದೇವರು ಎಲ್ಲಾ ಕಡೆ ಇದ್ದರೂ ಅವನು ಎಲ್ಲದಕ್ಕೂ ಸ್ವಂತ ಬುದ್ಧಿಯನ್ನು ಕೊಟ್ಟಿದ್ದಾನೆ ಎಂದು ಅರಿತನು.

ಆನೆಗೆ ಅವನನ್ನು ಅಟ್ಟಿಸಿಕೊಂಡು ಹೋಗಬೇಕು ಎಂದಿತ್ತು.ಅದಕ್ಕೆ ಹಾಗೆ ಮಾಡಿತು ಮಾವುತ ಅವನಿಗೆ ಸಹಾಯ ಮಾಡಬೇಕೆಂದು ಕೊಂಡನು. ಅದಕ್ಕೆ ಎಚ್ಚರಿಸಿದನು.ಅವನು ರಸ್ತೆಯ ಮದ್ಯದಲ್ಲಿ ನಿಂತಿರಬೇಕೆಂದು ಕೊಂಡನು.ಅದಕ್ಕೆ ಹಾಗೇ ಮಾಡಿದನು ಆದರೆ ಅವನನ್ನು ಎಷ್ಟು ಎಚ್ಚರಿಸಿದರೂ ಅವನು ಅಲ್ಲೇ ನಿಂತು ಗಾಯಗೊಂಡನು.ಆತನಿಗೆ ತನ್ನ ತಪ್ಪಿನ ಅರಿವಾಯಿತು.

 

ಹೀಗೆ ದೇವರು ಎಲ್ಲಿದ್ದಾನೆ  ? ಎಂದರೆ ದೇವರು ಎಲ್ಲಾ ಕಡೆ ಇದ್ದಾನೆ ಎಂದು  ಅವನಿಗೆ ತಿಳಿಯಿತು.ಆದರೆ ನಾವು ನಮ್ಮ ಕಣ್ಣ ತೆರೆದು ಗಮನವಿಟ್ಟು ನೋಡಬೇಕು ಅಷ್ಟೇ.ಆಗ ದೇವರು ಕಾಣಿಸುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top