fbpx
ದೇವರು

ಗಣೇಶನ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ 13 ಆಶ್ಚರ್ಯಕಾರಿ ವಿಷಯಗಳು.ತುಂಬಾ ಕುತೂಹಲವಾಗಿವೆ ಓದಿ ತಿಳ್ಕೊಳ್ಳಿ…

ಗಣೇಶನ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ 13 ಆಶ್ಚರ್ಯಕಾರಿ ವಿಷಯಗಳು,ತುಂಬಾ ಕುತೂಹಲವಾಗಿವೆ  ಓದಿ ತಿಳ್ಕೊಳ್ಳಿ…

ಜಗದೊಡನೆಯಾದ ಶಿವ ಮತ್ತು ಪಾರ್ವತಿಯ ಪುತ್ರ ಗಣೇಶ ಆವನಿಗೆ  ಆನೆಯ ಸೊಂಡಿಲು, ದೊಡ್ಡ ಕಿವಿ,ಆನೆಯ ದಂತ,ಡೊಳ್ಳು  ಹೊಟ್ಟೆಯ  ದೇಹವನ್ನು ಹೊಂದಿರುವ ಮನುಷ್ಯ ಜೀವಿ.ಅವನೇ ವಿಜ್ಞೇಶ್ವರ,ಗಜಾನನ, ವಿಜ್ಞ ವಿನಾಶಕ  ಮತ್ತು  ಯಶಸ್ಸಿನ ದೇವರು  ವಿಜ್ಞಗಳನ್ನು, ತೊಂದರೆಗಳನ್ನು ನಿವಾರಿಸುವವನು.

ಗಣೇಶನನ್ನು ವಿದ್ಯಾ,ಬುದ್ದಿ ಜ್ಞಾನ ಕೊಡುವ ದೇವರೆಂದು ಸಹ ಪೂಜಿಸಲಾಗುತ್ತದೆ.ನಿಜ ಗಣೇಶ ಹಿಂದೂಗಳ ಐದು ಮುಖ್ಯ ದೇವರುಗಳಲ್ಲಿ ಗಣೇಶನು ಸಹ ಒಬ್ಬರಾಗಿದ್ದಾರೆ (ಬ್ರಹ್ಮ, ವಿಷ್ಣು,ಶಿವ,ಮತ್ತು ದುರ್ಗಿ ಇವರ ಜೊತೆ ಗಣೇಶ).ಪಂಚಯಾತನ ಪೂಜೆಯಲ್ಲಿ ಈ ಐದು ವಿಗ್ರಹವನ್ನು ವೈಭವೀಕರಿಸಲಾಗುತ್ತದೆ.

ಗಣೇಶನ ಬಗ್ಗೆ ತಿಳಿಯದೇ ಇರೋ 13 ಆಶ್ಚರ್ಯಕಾರಿ ವಿಷಯಗಳು.

1.ಶಿವ ಪುರಾಣದ ಪ್ರಕಾರ ಪಾರ್ವತಿಯ  ಸ್ನೇಹಿತರಾದ ಜಯ ಮತ್ತು ವಿಜಯರು ಗಣೇಶನನ್ನು ನಿರ್ಮಿಸಲು ನಿರ್ದಾರ ಮಾಡುತ್ತಾರೆ.ಅವರು ಪಾರ್ವತಿಗೆ ಒಂದು ಸಲಹೆ ನೀಡುತ್ತಾರೆ.ನಂದಿ ಮತ್ತು ಇತರ ದೇವಗಣಗಳು ಶಿವನ ಆಜ್ಞೆಯನ್ನು ಪಾಲಿಸುತ್ತಾರೆ. ಆದ್ದರಿಂದ ಪಾರ್ವತಿಯ ಆಜ್ಞೆಯನ್ನು ಪಾಲಿಸಲು ಒಬ್ಬರು ಇರಬೇಕು.ಆದ್ದರಿಂದ ಪಾರ್ವತಿ ಸ್ನಾನಕ್ಕೆ ಮುಂಚೆ ಗಂಧವನ್ನು ಮೈಗೆ ಲೇಪಿಸಿದ್ದನ್ನು ತೆಗೆದುಕೊಂಡು ಅದರಿಂದ ಗಣೇಶನನ್ನು ಮಾಡಿದಳು.

2.ಶಿವ ಪುರಾಣದ ಪ್ರಕಾರ ಗಣೇಶನ ಮೈ ಬಣ್ಣ ಹಸಿರು ಅಥವಾ ಕೆಂಪು.

 

3.ಬ್ರಹ್ಮಾವವರ್ತ ಪುರಾಣದ ಪ್ರಕಾರ ದೇವಿ ಪಾರ್ವತಿಯು ಒಬ್ಬ ಗಂಡು ಮಗನನ್ನು ಪಡೆಯಲು  ಪುಣ್ಯಕ ಉಪವಾಸ (ಪುತ್ರಡ ಏಕಾದಶಿ) ವ್ರತವನ್ನು ಆಚರಿಸಿದ್ದಳು. ಆದ್ದರಿಂದ ಉಪವಾಸ ವ್ರತದ ಪಲಿತಾಂಶವಾಗಿಯೇ ಭಗವಂತನಾದ ಶ್ರೀ ಕೃಷ್ಣನೇ ಮಾರುವೇಶದಲ್ಲಿ  ಗಂಡು ಮಗುವಾಗಿ ಪಾರ್ವತಿಗೆ ಜನಿಸಿದನು ಎಂದು ಹೇಳಲಾಗಿದೆ.

 

4.ಬ್ರಹ್ಮಾವವರ್ತ ಪುರಾಣದ ಪ್ರಕಾರ ಎಲ್ಲಾ ದೇವರುಗಳು ಗಣೇಶನನ್ನು ಹರಸುತ್ತಿರುವಾಗ,ಶನಿದೇವನು ಮಾತ್ರ ತಲೆಯನ್ನು ಬಗ್ಗಿಸಿಕೊಂಡು ನಿಂತಿದ್ದನು.ಪಾರ್ವತಿಯು ಯಾಕೆ ಹೀಗೆ ನಿಂತಿದ್ದೀಯಾ ಎಂದು ಕೇಳಿದಾಗ ಶನಿಯು ಉತ್ತರಿಸಿದ ನೇರವಾಗಿ ನಾನು ಗಣೇಶನನ್ನು ನೋಡಿದರೆ ಗಣೇಶ ತನ್ನ ತಲೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಾನು ಹೀಗೆ ನಿಂತಿದ್ದೇನೆ ಎಂದನು. ಆದರೆ ಪಾರ್ವತಿಯು  ಶನಿ ದೇವನು ಗಣೇಶನನ್ನು  ನೋಡು ಎಂದು ಒತ್ತಾಯ ಮಾಡಿದರು. ಆಗ ಶನಿಯು ಗಣೇಶನನ್ನು ನೇರವಾಗಿ ನೋಡಿದನು.ಇದೇ ಕಾರಣಕ್ಕಾಗಿ ಗಣೇಶನು ತನ್ನ ತಲೆಯನ್ನು ಕಳೆದುಕೊಂಡು ತನ್ನ ತಲೆಯು  ತನ್ನ ದೇಹದಿಂದ ಬೇರೆಯಾಗುವ ಪರಿಸ್ಥಿತಿ ಬಂದೊದಗಿತು.

 

5.ಬ್ರಹ್ಮಾವವರ್ತ ಪುರಾಣದ ಪ್ರಕಾರ ಗಣೇಶನ ತಲೆಯು ತನ್ನ ಶರೀರದಿಂದ ಬೇರೆಯಾಗಲು ಕಾರಣ ಶನಿದೇವನು ಗಣೇಶನನ್ನು ನೇರವಾಗಿ ನೋಡಿರುವುದು.ಆ ಸಮಯದಲ್ಲಿ ಭಗವಂತನಾದ ಶ್ರೀ ಹರಿಯು ಒಂದು ಗರುಡವನ್ನು ಉತ್ತರ ದಿಕ್ಕಿಗೆ ಹಾರಿ ಬಿಟ್ಟನು .ಆ ಗರುಡ ವಿಷ್ಣುವಿನ ಆಜ್ಞೆಯಂತೆ  ಪುಷ್ಪಭದ್ರ ನದಿಯ ದಂಡೆಯನ್ನು ಸೇರಿತು.ಅಲ್ಲಿ  ಹೋಗಿ ನೋಡಿದಾಗ ಒಂದು ಆನೆಯು ಆಗ ತಾನೇ ಒಂದು ಹೆಣ್ಣು ಆನೆ ಮರಿಗೆ ಜನ್ಮ ನೀಡಿತ್ತು ಅದು ಸಹ  ಅಲ್ಲಿಯೇ  ಮಲಗಿತ್ತು.  ಹೊಸದಾಗಿ ಜನ್ಮ ಪಡೆದ ಹೆಣ್ಣು ಆನೆಯ ತಲೆಯನ್ನೇ ಕಡಿದು ತಂದು ಗಣೇಶನ ದೇಹಕ್ಕೆ ಜೋಡಿಸಿ ಪುನಃ ಜೀವ ನೀಡಿದರು.

 

6.ಬ್ರಹ್ಮಾವವರ್ತ ಪುರಾಣದ ಪ್ರಕಾರ ಶಿವ ದೇವನು ಒಂದು ಬಾರಿ ಕೋಪದಲ್ಲಿ ಸೂರ್ಯ ದೇವನನ್ನು ತನ್ನ ತ್ರಿಶೂಲದಿಂದ ಆಕ್ರಮಣ ಮಾಡಿದನು.ಇದನ್ನು ಕಂಡ ಸೂರ್ಯ ದೇವನ ತಂದೆಯು ಸಿಟ್ಟಾಗಿ ಶಿವನಿಗೆ ಶಾಪವನ್ನು ನೀಡಿದನು.ನೀನು ಇಂದು ನನ್ನ ಮಗನ ದೇಹವನ್ನು ಗಾಯಗೊಳಿಸಿದ್ದೀಯಾ ಆದ ಕಾರಣ  ಒಂದು ದಿನ ನಿನ್ನ ಮಗನ ದೇಹವನ್ನೇ ನೀನು ಕತ್ತರಿಸುವಂತವನಾಗು ಎಂದು ಶಾಪ ನೀಡಿದನು.

 

7.ಬ್ರಹ್ಮಾವವರ್ತ ಪುರಾಣದ ಪ್ರಕಾರ ಒಂದು ದಿನ ತುಳಸಿ ದೇವಿಯು ಗಂಗಾ ನದಿಯನ್ನು ದಾಟಿ ಹೋಗುವಾಗ ಗಣೇಶ ಅಲ್ಲಿಯೇ  ನದಿಯ ದಡದಲ್ಲಿ ಕುಳಿತು ಧ್ಯಾನ ಮಗ್ನನಾಗಿದ್ದನು.ತುಳಸಿ ದೇವಿಯು ಗಣೇಶನನ್ನು ನೋಡಿ ಆಕರ್ಷಿತವಾದಳು.ತುಳಸಿ ದೇವಿಯು ಗಣೇಶನಿಗೆ ನನ್ನನ್ನು ಮದುವೆಯಾಗು ಎಂದಳು ಆದರೆ ಗಣೇಶ ನಿರಾಕರಿಸಿದನು. ನಂತರ ಕೋಪಗೊಂಡ ತುಳಸಿ ದೇವಿಯು  ಗಣೇಶನನ್ನು ನಿನಗೆ ಶೀಘ್ರದಲ್ಲೇ ಮದುವೆಯಾಗಲಿ ಎಂದು ಶಪಿಸಿದಳು.ಇದಕ್ಕೆ ಪ್ರತಿಯಾಗಿ ಗಣೇಶನು ತುಳಸಿಗೆ  ನೀನು ಗಿಡವಾಗಲಿ ಎಂದು ಶಪಿಸಿದನು.

 

8.ಶಿವ ಮಹಾ ಪುರಾಣದ ಪ್ರಕಾರ ಗಣೇಶನ  ಮದುವೆ  ರಿದ್ದಿ ಮತ್ತು ಸಿದ್ದಿಯ ಜೊತೆ ನಿಶ್ಚಯವಾಗಿ ಮದುವೆಯಾಯಿತು.ನಂತರ ಈ ಮೂವರು ದಂಪತಿಗಳಿಗೆ  ಇಬ್ಬರು ಗಂಡು ಮಕ್ಕಳು ಸಹ ಜನಿಸಿದರು ಅವರೇ ಶೇತ್ರ ಮತ್ತು ಲಾಭ.

 

9.ಶಿವ ಮಹಾ ಪುರಾಣದ ಪ್ರಕಾರ ಶಿವ ದೇವನು ತ್ರಿಪುರನನ್ನು ನಾಶ ಪಡಿಸುವನು ಎಂದು ಒಂದು ಅಕಾಶವಾಣಿಯು ನುಡಿಯಿತು.ತ್ರಿಪುರನು ಗಣೇಶನನ್ನು ಪೂಜಿಸುವ ತನಕ ಇದು ಅಸಂಭವವೆಂದು ತಿಳಿದು ಮತ್ತು ತ್ರಿಪುರನನ್ನು ನಾಶ ಪಡಿಸಲು ಸಾಧ್ಯವಿಲ್ಲ ಎಂದು ತಿಳಿದು  ನಂತರ ಶಿವನು ಭದ್ರಕಾಳಿಯನ್ನು ಕರೆದು ಗಜಾನನ ಪೂಜೆಯನ್ನು ಮಾಡಿಸಿದ ನಂತರ ಯುದ್ದವನ್ನು ಶಿವನೇ ಗೆದ್ದನು.

 

10.ಬ್ರಹ್ಮಾವವರ್ತ ಪುರಾಣದ ಪ್ರಕಾರ ಪರಶುರಾಮ ಕೈಲಾಸ ಪರ್ವತಕ್ಕೆ ಶಿವನನ್ನು ಭೇಟಿ ಮಾಡಲು ಹೋದಾಗ.ಶಿವನು ಧ್ಯಾನ ಮಗ್ನನಾಗಿದ್ದನು.ಗಣೇಶ ಪರಶುರಾಮನಿಗೆ ಶಿವನನ್ನು ಭೇಟಿಮಾಡಲು ಬಿಡಲಿಲ್ಲ.ಇದರಿಂದ ಕೋಪಗೊಂಡ ಪರಶುರಾಮ ತನ್ನ ಪರಶು ಅಸ್ತ್ರದಿಂದ ಗಣೇಶನನ್ನು ಆಕ್ರಮಣ ಮಾಡಿದನು.ಪರಶು ಅಸ್ತ್ರವು ಸ್ವತಃ  ಶಿವನ ಕೊಡುಗೆ ಯಾದ್ದರಿಂದ   ಅದು ವ್ಯರ್ಥವಾಗಬಾರದು ಎಂದು ಪರಶು ಅಸ್ತ್ರವನ್ನು ತನ್ನ ದಂತದ ಮೇಲೆ ಬೀಳುವಂತೆ ಮಾಡಿಕೊಂಡನು.ಆದ್ದರಿಂದ ಗಣೇಶನ ಒಂದು ದಂತ ಮುರಿದುಹೋಯಿತು. ಆದ್ದರಿಂದ  ಒಂದೇ ಒಂದು ದಂತ ಇರುವ ಕಾರಣ  ಗಣೇಶನಿಗೆ ಏಕದಂತ  ಎನ್ನುವ ಹೆಸರು ಬಂತು.

 

11.ಮಹಾಭಾರತದ ಪೌರಾಣಿಕ ಕಥೆಯು ರಚಿತವಾಗಿದ್ದು ಗಣೇಶ ದೇವನಿಂದಲೇ.

 

12.ಗಣೇಶ ಪುರಾಣದ ಪ್ರಕಾರ ಎಂಟು ಗಣಗಳು ಇವೆ. ಚಂದ್ರಪುರಾಣದಲ್ಲಿಯೂ ಸಹ ಇವೆ ಅವು   ಮಗಣ, ನಗಣ,ಯಾಗಣ,ಜಗಣ,ಬಗಣ,ರಗಣ, ಸಗಣ ಮತ್ತು ತಗಣ. ಅಕ್ಷರ ಮಾಲೆಯನ್ನು ಸಹ ಗಣ ಎಂದು ಕರೆಯಲಾಗುವುದು.

 

13.ಗಣೇಶ ಪುರಾಣದ ಪ್ರಕಾರ ಮನುಷ್ಯರ ದೇಹದಲ್ಲಿ ಮೂಲಾಧಾರ ಚಕ್ರವನ್ನು ಸಹ ಗಣೇಶ ಎಂದೇ ಕರೆಯುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top