fbpx
ಸಮಾಚಾರ

ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕನ ಪೋಷಕರನ್ನು ಈ ಗ್ರಾಮದ ಜನರು ಬಹಿಷ್ಕಾರ ಹಾಕಿರೋದು ಏಕೆ ಗೊತ್ತಾ?

ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕನ ಪೋಷಕರನ್ನು ಈ ಗ್ರಾಮದ ಜನರು ಬಹಿಷ್ಕಾರ ಹಾಕಿರೋದು ಏಕೆ ಗೊತ್ತಾ?

ಶ್ರೀನಗರದ ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜವಾನ್ ವಿಠ್ಠಲ್ ಕಡಕೊಳ್ ಅವರ ಹಿರಿಯ ಪೋಷಕರು ಬೆಳಗಾವಿಯ ಒಂದು ಗ್ರಾಮದಿಂದ ಬಲವಂತವಾಗಿ ಬಹಿಷ್ಕರಿಸಲ್ಪಟ್ಟಿದ್ದಾರೆ. ಊರಿನಲ್ಲಿ ಅಂಗನವಾಡಿಯನ್ನು ನಿರ್ಮಿಸುವುದಕ್ಕೆ ಜಮೀನನ್ನು ಕೊಡಬೇಕೆಂದು ಅವರಿಗೆ ಕೆಲವು ರಾಜಕೀಯ ಪ್ರೇರಿತ ಗೂಂಡಾಗಳು ಹೆದರಿಸಿದ್ದಾರೆ. ಇವರು ಜಮೀನನ್ನು ಕೊಡಲು ನಿರಾಕರಿಸಿದ್ದಕ್ಕೆ ಆ ಹಿರಿಯ ಪೋಷಕರನ್ನು ಆ ಊರಿನಿಂದಲೇ ಹೊರಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

 

 

ಆ ಊರಿನ ಜನರು ಅವರನ್ನು ಮಾತನಾಡಿಸುತ್ತಿಲ್ಲ ಅವರಿಗೆ ಬಾವಿಯಲ್ಲಿ ನೀರು ತೆಗೆದುಕೊಳ್ಳಲು ಅವಕಾಶ ನೀಡುತ್ತಿಲ್ಲ. ಫ್ಲೋರ್ ಮಿಲ್ ನಲ್ಲಿ ಅವರ ದಾನ್ಯಗಳನ್ನು ಪುಡಿಮಾಡಿಕೊಡುತ್ತಿಲ್ಲ. ಯಾರಾದರೂ ಅವರರೊಡನೆ ಮಾತಾಡಿದರೆ ಶಿಕ್ಷೆ ನೀಡಲಾಗುವುದೆಂದು ಊರಿನ ಜನರನ್ನು ಹೆದರಿಸಿದ್ದಾರೆ. ಇದರಿಂದ ಆ ದಂಪತಿಗಳು ಸೋತುಹೋಗಿ ಕಂಗಾಲಾಗಿದ್ದಾರೆ.ವಿಠ್ಠಲ್ ಕಡಕೊಳ್ ಅವರ ತಂದೆ ಮಲ್ಲಿಕಾರ್ಜುನಯ್ಯ ಅವರ ಹೆಸರಿನಲ್ಲಿ ಒಂದು ಎಕರೆ ಎಂಟು ಕುಂಟೆ ಜಮೀನಿದ್ದು ಅದನ್ನು ಕೊಡಬೇಕೆಂದು ಕೆಲ ಕಿಡಿಗೇಡಿಗಳು ಹೆದರಿಸಿದ್ದಾರೆ ಹಾಗಾಗಿ ಪುಡಾರಿಗಳಿಂದ ಕಾಪಾಡಿಕೊಳ್ಳಲು ಪೋಲೀಸರ ಮೊರೆ ಹೋಗಿದ್ದಾರೆ. ಈ ವಿಷಯವನ್ನು ತಿಳಿದ ಕಡಕೊಳ್ ಅವರು ಅವರು ತುರ್ತು ರಜೆಯನ್ನು ತೆಗೆದುಕೊಂಡು ಅವರ ಪೋಷಕರಿಗೆ ಆಸರೆಯಾಗಿದ್ದಾರೆ.

 

 

“ತಸೀಲ್ದಾರ್ ಮತ್ತು ಪೊಲೀಸ್ ಸಬ್-ಇನ್ಸ್ಪೆಕ್ಟರ್ ಊರಿನವರ ಜೊತೆ ರಾಜಿ ಮಾಡಿಮಾಡಿಸಲು ಪ್ರಯತ್ನಿಸಿದರು ಆದರೆ ಗ್ರಾಮಸ್ಥರು ರಾಜಿಕೊಳ್ಳಲು ಮನಸ್ಸು ಮಾಡುತ್ತಿಲ್ಲ ಎಂದು ” ಎಂದು ಕಡಕೊಳ್ ಅವರು ಹೇಳಿದ್ದಾರೆ.ಸೇನೆಯಿಂದ ತುರ್ತು ರಜೆಯನ್ನು ತೆಗೆದುಕೊಂಡು ಬಂದಿರುವ ಕಡಕೊಳ್ ಅವರು ಆಗಸ್ಟ್ 25 ರ ಒಳಗೆ ಸೇನೆಗೆ ವಾಪಾಸ್ ಆಗಬೇಕಾಗಿದೆ. ಇತ್ತ ಇನ್ನು ಬಗೆಹರಿಯದ ಸಮಸ್ಯೆಗೆ ಪೊಲೀಸರಿಗೆ ಲಿಖಿತ ದೂರನ್ನು ನೀಡಿರುವ ಅವರ ಪೋಷಕರು ಸಮಸ್ಯೆಯನ್ನು ಬಗೆಹರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆ ಲಿಖಿತ ದೂರಿನಲ್ಲಿ ಹೇಳಿಕೊಂಡಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top