fbpx
ದೇವರು

ಗಣೇಶ ಚತುರ್ಥಿಯ ಹಬ್ಬವನ್ನು ಶಾಸ್ತ್ರದ ಪ್ರಕಾರ ಹೇಗೆ ಆಚರಿಸಬೇಕು ತಿಳ್ಕೊಳ್ಳಿ

ಗಣೇಶ ಚತುರ್ಥಿಯ ಹಬ್ಬವನ್ನು ಹೇಗೆ ಆಚರಿಸಬೇಕು.

ಈ ವರ್ಷ 2017 ಗಣೇಶ ಚತುರ್ಥಿ ಹಬ್ಬವು ಆಗಸ್ಟ್ ತಿಂಗಳಿನ 25 ನೇ ತಾರೀಖು ಶುಕ್ರವಾರ, ಭಾದ್ರಪದ ಮಾಸದ,ಶುಕ್ಲ ಪಕ್ಷದ, ಚತುರ್ಥಿ ತಿಥಿಯ ದಿನ ಹಸ್ತ ನಕ್ಷತ್ರದಲ್ಲಿ  ಬಂದಿದೆ.

ಗಣೇಶನಿಗೆ ಇರುವ ವಿವಿಧ ಹೆಸರುಗಳು ವಿಜ್ಞೇಶ್ವರ,ಗಜಾನನ,ಗಜಮುಖ, ಗಣೇಶ, ಏಕದಂತ,ಮೂಷಿಕ ವಾಹನ ಎಂದು ಹೀಗೆ ಅನೇಕ ಹೆಸರುಗಳಿವೆ.

ವಿಜ್ಞ ವಿನಾಶಕ ಗಣೇಶನಿಗೆ ಪೂಜೆ ಪರಂಪರೆಯಲ್ಲಿ ಹಿಂದಿನಿಂದಲೂ ಪ್ರಮುಖ ಸ್ಥಾನವಿದೆ.ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಪೂಜೆ,ಶುಭ ಕಾರ್ಯಗಳಲ್ಲಿಯೂ ಸಹ ಮೊದಲಿಗೆ ಆರಾಧಿಸುವುದು ವಿಜ್ಞ ವಿನಾಶಕ  ವಿಜ್ಞೇಶ್ವರನನ್ನೇ.ಅಂತಹ ಗಣಪತಿಯನ್ನು ಪೂಜೆ ಮಾಡಿ ಒಲಿಸಿಕೊಳ್ಳಲು,ಭಾದ್ರಪದ ಮಾಸ ತುಂಬಾ ಶ್ರೇಷ್ಟವಾದದ್ದು.ಗಣೇಶನ ವ್ರತವನ್ನು ಶುಕ್ಲಪಕ್ಷದ ಭಾದ್ರಪದ ಮಾಸ ಚತುರ್ತಿಯ ದಿನದಂದು ಆಚರಿಸಲಾಗುತ್ತದೆ. ಈ ವ್ರತವನ್ನು  ಪ್ರತಿ ವರ್ಷ ಅತ್ಯಂತ ಸಡಗರ,ಸಂಭ್ರಮ ಮತ್ತು ವಿಜೃಂಭಣೆಯಿಂದ ದಕ್ಷಿಣ ಭಾರತದಲ್ಲಿ  ಆಚರಿಸಿ ಸಂಭ್ರಮಿಸುತ್ತಾರೆ .

ಗಣಗಳ ಅಧಿಪತಿ ಮತ್ತು ಮೊದಲು ಅಗ್ರ ಪೂಜೆಗೆ ಅರ್ಹನಾದ ಶ್ರೀ ಗಣೇಶನನ್ನು ಕೈಲಾಸದಿಂದ ಭೂಲೋಕಕ್ಕೆ ಬಂದು ತನ್ನ ತಾಯಿಯನ್ನು ಮರಳಿ ಕರೆದುಕೊಂಡು ಹೋಗಲು ತನ್ನ ಅಜ್ಜಿಯ ಮನೆಗೆ ಬಂದ ದಿನವನ್ನೇ ಗಣೇಶ ಚತುರ್ಥಿಯೆಂದು ಆಚರಣೆ ಮಾಡಲಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಇಂತಹ ಗಣೇಶನನ್ನು ಶ್ರದ್ದೆ,ಭಕ್ತಿಯಿಂದ, ಪೂಜೆ ಮಾಡಬೇಕು. ಅದು ಹೇಗೆ  ಎಂದು ಈಗ ನಾವು  ತಿಳಿಯೋಣ.

ಗಣೇಶ ಚತುರ್ಥಿ ಹಬ್ಬದಂದು ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆ ಎದ್ದು ಮನೆಯನ್ನು ಸ್ವಚ್ಛ ಮಾಡಬೇಕು.

ನಂತರ ಹಾಲು ಅಥವಾ  ಎಣ್ಣೆಯನ್ನು  ಹಚ್ಚಿಕೊಂಡು ತಲೆಗೆ  ಸ್ನಾನ ಮಾಡಬೇಕು.ವ್ರತ ಮಾಡುವವರು ಮಡಿವಸ್ತ್ರ ಧರಿಸಬೇಕು.  ವ್ರತದ ಸಮಯದಲ್ಲಿ ಪ್ರತಿ ಕ್ಷಣ ಗಣೇಶನ ಜಪವನ್ನು ಮಾಡುತ್ತಾ ಇರಬೇಕು.

ಈ ದಿನ ಗಣಪತಿ ವ್ರತ ಮಾಡುವವರು ದೇವರ ಬಳಿ ತಮ್ಮ ಆಸೆಯನ್ನು ಹೇಳಿಕೊಂಡು ಗಣಪತಿಗೆ ಸಂಕಲ್ಪ ಮಾಡಿಕೊಳ್ಳಬೇಕು.ಹಬ್ಬದ ದಿನ ಗಣಪನ ಮೂರ್ತಿಯನ್ನು ಸ್ಥಾಪನೆ ಮಾಡುವಾಗ ಮೊದಲಿಗೆ ಮಣೆಯ ಮದ್ಯ ಭಾಗದಲ್ಲಿ ಒಂದು ಮುಷ್ಟಿ ಅಕ್ಷತೆಯನ್ನು ಇಟ್ಟು  ಇದರ ಮೇಲೆ ,ಅರಿಶಿನ, ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು  ರಂಗೋಲಿಯ ಪುಡಿಯಲ್ಲಿ  ಬಿಡಿಸಬೇಕು.

ಹೊಸ ಕೆಂಪು ವಸ್ತ್ರವನ್ನು ಮಣೆಯ ಮೇಲೆ ಹಾಸಬೇಕು.ಇದರ ಮೇಲೆ ತಟ್ಟೆ ಅಥವಾ ಬಾಳೆ ಎಲೆಯನ್ನು ಇಟ್ಟು ಅದರಲ್ಲಿ ಅಕ್ಕಿ ಹಾಕಬೇಕು ನಂತರ ಗಣೇಶನನ್ನು ಸ್ಥಾಪಿಸಬೇಕು.

ಗಣಪತಿ ಮೂರ್ತಿಯನ್ನು ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ  ಮೇಲೆ ಗರಿಕೆಯನ್ನಿಟ್ಟು ಅದನ್ನ ಪಿಳ್ಳೆರಾಯನೆಂದು ಪೂಜೆ ಮಾಡಬೇಕು.ಮೊದಲಿಗೆ ನಾವು ತಂದ ಗಣೇಶನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು.ಪ್ರತಿಷ್ಠಾಪನೆ ಮಾಡುವಾಗ ಕೈಯಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ತೆಗೆದುಕೊಂಡು ಗಣಪನ ನಾಮವನ್ನು ಹೇಳುತ್ತಾ ಶರಣಾಗತ ಭಾವದಿಂದ ಮಾಡುವ ಪೂಜೆಯನ್ನೇ ಪ್ರಾಣ ಪ್ರತಿಷ್ಠಾಪನೆ  ಪೂಜೆ ಎಂದು ಕರೆಯಲಾಗುತ್ತದೆ.

ಗಣೇಶನು  ಭಕ್ಷ್ಯ, ಭೋಜನ ಪ್ರಿಯ ಆದ್ದರಿಂದ ಈತನನ್ನು ಒಲಿಸಿಕೊಳ್ಳಲು ಮೊದಲೇ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ತಯಾರು ಮಾಡಿಕೊಂಡಿರಬೇಕು.

ಹೂ,ಹಣ್ಣುಗಳಿಂದ ದೇವರನ್ನು ಅಲಂಕರಿಸಿದ ಬಳಿಕ ವಿನಾಯಕನಿಗೆ ಷೋಡೋಶೋಪಚಾರ ಪೂಜೆಯನ್ನು ಮಾಡಿ ದೀಪಾರಾಧನೆ ಮಾಡಬೇಕು ನಂತರ ಗಣೇಶನ ಕಥೆಯನ್ನು ಕೇಳಬೇಕು ಅಥವಾ ಓದಬೇಕು.

ಸಹಜವಾಗಿ ಗಣೇಶನನ್ನು ಒಂದು ,ಮೂರು ಮತ್ತು ಐದು ದಿನಗಳ ಕಾಲ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತೇವೆ,ಬಳಿಕ ಒಳ್ಳೆಯ ದಿನ ಹಾಗೂ ಸಮಯ ನೋಡಿಕೊಂಡು ಗಣಪನ ಮೂರ್ತಿಯನ್ನು ಶ್ರದ್ದೆ,ಭಕ್ತಿಯಿಂದ, ಹರಿಯುವ ನೀರಿನಲ್ಲಿ ವಿಸರ್ಜಿಸಿದರೆ ಉತ್ತಮ.ಹೀಗೆ ಮಾಡಿದರೆ ಪೂರ್ಣ ಫಲ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top