fbpx
ದೇವರು

ಕನ್ನಡ ನಾಡಿನ ಜೀವನದಿ ‘ಕಾವೇರಿ’ ಭಾಗಮಂಡಲದಲ್ಲಿ ಹುಟ್ಟೋದಕ್ಕೆ ಗಣೇಶ ಕಾರಣ ಅಂತೇ ಹೇಗೆ ಅಂತ ಈ ಪುರಾಣದ ಕಥೆ ಓದಿ !

ಕಾವೇರಿ ನದಿಯು ಭಾಗಮಂಡಲದಲ್ಲಿ  ಹುಟ್ಟುವುದಕ್ಕೆ ಕಾರಣ  ಪಾರ್ವತಿ ಪರಮೇಶ್ವರರ ಪುತ್ರ ಗಣೇಶ.

ಸುಬಾತ್ಮ ಎಂಬ ಅಸುರನಿಗೆ ವರಗಳ ವರಪ್ರದಾನವಾಗಿತ್ತು.ಅವನು ದೇವರುಗಳನ್ನು ಬಂದಿಸುತ್ತಿದ್ದನು.ಎಲ್ಲರೂ ಈ ಅಸುರನ ಕೈಯಲ್ಲಿ ಚಿತ್ರಹಿಂಸೆ ಪಡುತ್ತಿದ್ದರು.ಇಂದ್ರನು ಮಾತ್ರ ಶೀರ್ಗಾಳಿ ಎಂಬ ಸ್ಥಳದಲ್ಲಿ ಬಚ್ಚಿಟ್ಟುಕೊಂಡನು.

 

 

ಇಂದ್ರ ಪರಮಶಿವನನ್ನು ಪೂಜಿಸಲು ಒಂದು ತೋಟವನ್ನು ರಚಿಸಬೇಕು ಎಂದುಕೊಂಡನು.ಇದನ್ನು ತಿಳಿದ ಸುಬಾತ್ಮನು. ಹೇ , ಇಂದ್ರ ನೀನು ನನ್ನಿಂದ ಬಚ್ಚಿಟ್ಟುಕೊಳ್ಳುವೆಯಾ ? ನಿನಗೆ ನನ್ನ ಶಕ್ತಿಯನ್ನು ತೋರಿಸುತ್ತೇನೆ.

ಸುಬಾತ್ಮ ವರುಣನನ್ನು ಕರೆದನು.ವರುಣ ಇಂದಿನಿಂದ ದಕ್ಷಿಣ ಭಾರತದ  ಕ್ಷೇತ್ರದಲ್ಲಿ ಮಳೆ ಬೀಳಬಾರದು.ಇದು ನನ್ನ ಆಜ್ಞೆ.ವರುಣನು ಚಿಂತೆಗೀಡಾದನು.ಅವನ ಆಜ್ಞೆ ಪಾಲಿಸಲು ಅಸಾಧ್ಯ ಎಂದೆನಿಸಿತು.ಆದರೂ ಸಹ ವರುಣ ಹಾಗೆ ಹಾಗಲಿ ಎಂದು ಹೇಳಿದನು.

ಅಂದಿನಿಂದ ಮಳೆಯಿಲ್ಲದಂತಾಯಿತು,ಹಾಗಾಗಿ ಭೂಮಿ ಒಣಗಿತು, ಬೆಳೆ, ಪೈರು, ಎಲ್ಲಾ ಒಣಗಿತು.ಮರ ಗಿಡಗಳು ಎಲ್ಲಾ ಒಣಗಿ ಹೋದವು.ಪ್ರಾಣಿ ,ಪಕ್ಷಿಗಳು ಸತ್ತವು.ಎಲ್ಲೆಲ್ಲೂ ದುರ್ಭಿಕ್ಷ ಮನೆ ಮಾಡಿತು.

ಅದೇ ಸಮಯದಲ್ಲಿ  ಅಗಸ್ತ್ಯ ಮಹರ್ಷಿಗಳು ಅಲ್ಲಿಗೆ ಬಂದರು.ಇದೇನಿದು ಯಾಕೆ ಇಲ್ಲಿ ಮಳೆಯಿಲ್ಲ.ಇದರ ಬಗ್ಗೆ ಏನಾದರೂ ಮಾಡಲೇಬೇಕು. ಮಹರ್ಷಿಗಳು ಬ್ರಹ್ಮದೇವನಿಗೆ ಪ್ರಾರ್ಥನೆ ಮಾಡಿದರು.ಬ್ರಹ್ಮ ದೇವನು ಪ್ರತ್ಯಕ್ಷನಾದನು.

ಬ್ರಹ್ಮ ದೇವನು-‘ಅಗಸ್ತ್ಯ ನಿನ್ನ ಇಚ್ಚೆಯೇನು’ ಎಂದು ಕೇಳಿದನು ? ಅಗಸ್ತ್ಯ  ಮಹರ್ಷಿಗಳು ದಯವಿಟ್ಟು ಮಳೆ ಬರುವಂತೆ  ಮಾಡಿ ಎಂದು ಕೇಳಿಕೊಂಡರು.

ಬ್ರಹ್ಮ ದೇವರು ಶಿವನಲ್ಲಿ ಪ್ರಾರ್ಥಿಸಿರಿ,ಸ್ವಲ್ಪ ಗಂಗಾಜಲವನ್ನು ತಂದು ಇಲ್ಲಿ ಸುರಿಯಿರಿ ಒಂದು ನದಿ ಉಗಮಿಸುತ್ತದೆ ಎಂದು ಹೇಳಿದರು.

ಅಗಸ್ತ್ಯ ಮಹರ್ಷಿಗಳು ಹಾಗೆ ಮಾಡುತ್ತೇನೆ ಗುರುಗಳೇ ಎಂದರು . ಅಗಸ್ತ್ಯರು  ತಪ್ಪಸ್ಸನ್ನು ಮಾಡಿದರು. ಆಗ ಶಿವನು ಪ್ರತ್ಯಕ್ಷನಾದನು.

ಶಿವನು ಪ್ರತ್ಯಕ್ಷವಾಗಿ ‘ಅಗಸ್ತ್ಯ  ನಿನಗೆ ಏನು ಬೇಕು ?  ಕೇಳು.’

ಅಗಸ್ತ್ಯ ಮಹರ್ಷಿಗಳು ಪ್ರಭುಗಳೇ ದಕ್ಷಿಣ ಭಾರತದಲ್ಲಿ ದುರ್ಭಿಕ್ಷ ಮನೆ ಮಾಡಿದೆ.ದಯವಿಟ್ಟು ಸ್ವಲ್ಪ ಗಂಗಾಜಲವನ್ನು ಪ್ರಸಾಧಿಸಿ.ಸಹಾಯ ಮಾಡಿ.

ಪರಮ ಶಿವನು ಅಗಸ್ತ್ಯ ಋಷಿಗಳ ಕಮಂಡಲವನ್ನು ನೀರಿನಿಂದ ತುಂಬಿದರು.ಅಗಸ್ತ್ಯ ಇದನ್ನು ತೆಗೆದುಕೊಂಡು ಪೂರ್ವ ದಿಕ್ಕಿನಲ್ಲಿ ನೆಡೆದು ಹೋಗು.ಈ ನೀರನ್ನು ಸರಿಯಾದ ಸ್ಥಳದಲ್ಲಿ ಸುರಿ, ಅಲ್ಲಿಂದ ಒಂದು ನದಿ  ಹರಿಯುತ್ತದೆ.

 

ಅಗಸ್ತ್ಯರು ಧನ್ಯವಾದಗಳು ಪ್ರಭು ಎಂದು ಹೇಳಿ.ಕಮಂಡಲವನ್ನು ಹಿಡಿದು ನಡೆದರು.ಎಷ್ಟೋ ಸ್ಥಳಗಳನ್ನು ದಾಟಿದರು.ಬಹಳ ದಿನಗಳು ಕಳೆದವು.ಜನರು ದುರ್ಭಿಕ್ಷ ಕಾಲದಲ್ಲಿ ಅತ್ಯಂತ ಕಷ್ಟಕ್ಕೀಡಾದರು. ಗಣೇಶನು ಇವೆಲ್ಲವನ್ನು ಗಮನಿಸುತ್ತಲೇ  ಇದ್ದನು. ಅಗಸ್ತ್ಯ ಮಹರ್ಷಿ ಭಾಗಮಂಡಲ ಎನ್ನುವ ಸ್ಥಳವನ್ನು ತಲುಪಿದರು.ಅಬ್ಬಾಬ್ಬ ಎಂತಹ ಬಿಸಿಲು ನಾನು ಸ್ವಲ್ಪ ಹೊತ್ತು ವಿಶ್ರಮಿಸುತ್ತೇನೆ ಎಂದು ಅಲ್ಲಿ ಕುಳಿತುಕೊಂಡರು.

 

 

ಅಗಸ್ತ್ಯರು ಗಂಗಾ ಜಲ ತುಂಬಿದ ಕಮಂಡಲವನ್ನು ಕೆಳಗೆ ಇಟ್ಟರು. ಕೂಡಲೇ ಒಂದು ಕಾಗೆ ಹಾರುತ್ತಾ ಬಂದು ತನ್ನ ರೆಕ್ಕೆಯಿಂದ ಆ ಕಮಂಡಲವನ್ನು ಕೆಳಗೆ ಬೀಳಿಸಿತು.ಅಲ್ಲಿ ನೀರು ಬಿದ್ದ ತಕ್ಷಣ ಒಂದು ನದಿ ಹರಿಯ ತೊಡಗಿತು.ಆ ಕಾಗೆ ಏನು ನಡೆಯಲಿಲ್ಲ ಎನ್ನುವಂತೆ ಕುಳಿತುಕೊಂಡಿತು.

ಅಗಸ್ತ್ಯರು- ಏನು ಮಾಡಿದ್ದೀಯ ನೀನು ? ನಿನಗೆ ಶಾಪ ನೀಡುತ್ತೇನೆ.ಮರುಕ್ಷಣ ಒಂದು ಹೊಳಪು ತೋರಿತು.ಅಲ್ಲಿ ಕಾಗೆಯ ರೂಪದಲ್ಲಿದ್ದ ಗಣೇಶನು ಪ್ರತ್ಯಕ್ಷನಾದನು.

 

ಗಣೇಶ- ನನಗೆ ಶಾಪ ನೀಡುವಿರೇ ?ಮುನಿಯೇ ನೋಡಿರಿ.ನಾನು ಮಾಡಿರುವುದು ಎಲ್ಲರ ಹಿತಕ್ಕಾಗಿ.ಅಗಸ್ತ್ಯ ಮಹರ್ಷಿಗಳು ನೋಡುತ್ತಿದ್ದಂತೆಯೇ ನೀರು ಎಲ್ಲ ಕಡೆಯಲ್ಲೂ ರಭಸವಾಗಿ ಹರಿಯಿತು.ದುರ್ಭಿಕ್ಷವಾಗಿದ್ದ ಭೂಮಿಗೆ ನೀರು ದೊರೆಯಿತು.ಪ್ರಾಣಿಗಳು,ಪಕ್ಷಿಗಳು, ನೀರು ಕುಡಿದು ತೃಪ್ತರಾದರು. ಕಾವೇರಿ ಅಂದವಾಗಿ ಹರಿಯುತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸಿದಳು.

 

ಅಗಸ್ತ್ಯರು-ಗಣೇಶನಿಗೆ ಕೈ ಮುಗಿದು ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು.

 

 

ಹೀಗೆ ಗಣೇಶನು ಕಾಗೆಯ ರೂಪದಲ್ಲಿ ಬಂದು ಭಾಗಮಂಡಲದಲ್ಲಿ ಗಂಗಾಜಲ ತುಂಬಿದ ಕಮಂಡಲವನ್ನು  ನೆಲಕ್ಕೆ ಉರುಳಿಸಿದಕ್ಕೆ  ಕಾವೇರಿ ನದಿಯ ಉಗಮಸ್ಥಾನವಾಗಿ ಕಾವೇರಿ ಅಲ್ಲಿಯೇ ಹುಟ್ಟಿ ಹರಿಯ ತೊಡಗಿದಳು.ಹೀಗೆ ಕಾವೇರಿ ನದಿ ದರೆಗಿಳಿಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top