fbpx
ಸಮಾಚಾರ

ಅಯ್ಯೋ ಪಾಪ ಹೀಗಾಗಬಾರದಿತ್ತು. ಭೀಕರ ಅಪಘಾತದಲ್ಲಿ ಮಹಾನದಿ ಧಾರಾವಾಹಿಯ ನಟಿ ರಚನಾ ದುರ್ಮರಣ.

ಅಯ್ಯೋ ಪಾಪ ಹೀಗಾಗಬಾರದಿತ್ತು. ಭೀಕರ ಅಪಘಾತದಲ್ಲಿ ಮಹಾನದಿ ಧಾರಾವಾಹಿಯ ನಟಿ ರಚನಾ ದುರ್ಮರಣ.

 

 

ನೆಲಮಂಗಲ ಸಮೀಪದ ಸೋಲೂರು ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಮತ್ತು ಸಹನಟ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಬೆಂಗಳೂರಿಗೆ ವಾಪಸ್ ಬರುವಾಗ ವಾಹನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಮಹಾನದಿ ಸೀರಿಯಲ್ ಖ್ಯಾತಿಯ ರಚನಾ ಹಾಗೂ ಸಹನಟ ಜೀವನ್ ಮೃತಪಟ್ಟಿದ್ದಾರೆ.

 

 

ಅವರಿದ್ದ ಟಾಟಾ ಸಫಾರಿ ಕಾರು ರಸ್ತೆಬದಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್ ಎಂಬ ಸಹ ನಟರಿಗೆ ಗಾಯಗಳಾಗಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ಘಟನೆ ಸಂಬಂಧ ಮಾಗಡಿಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೆಳೆಯ ಕಾರ್ತಿಕ್ ಅವರ ಹುಟ್ಟುಹಬ್ಬ ಆಚರಿಸಲೆಂದು ಕುಕ್ಕೆ ಸುಬ್ರಮಣ್ಯ ಹೋಗಿ ಬೆಂಗಳೂರಿಗೆ ಹಿಂತಿರುಗುವಾಗ ಎದುರುಗಡೆ ಬಸ್ ಬಂದರಿಂದ ಕಾರು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆಯಿತು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹ ಕಲಾವಿದರು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top