fbpx
ಉಪಯುಕ್ತ ಮಾಹಿತಿ

5 ಆಂಡ್ರಾಯ್ಡ್ ಸೀಕ್ರೆಟ್ ಆಗಿ ಮಾಡೋ ಕೆಲ್ಸಗಳು 90% ಬಳಕೆದಾರರು ತಿಳ್ಕೊಂಡಿರಲ್ಲ ತಿಳ್ಕೊಬೇಕಾದ್ರೆ ಮುಂದೆ ಓದಿ:

5 ಆಂಡ್ರಾಯ್ಡ್ ಸೀಕ್ರೆಟ್ ಆಗಿ ಮಾಡೋ ಕೆಲ್ಸಗಳು 90% ಬಳಕೆದಾರರು ತಿಳ್ಕೊಂಡಿರಲ್ಲ ತಿಳ್ಕೊಬೇಕಾದ್ರೆ ಮುಂದೆ ಓದಿ:

ಈಗಿನ ಕಾಲದಲ್ಲಿ ಸ್ಮಾರ್ಟ್ಫೋನ್ ಉಪಯೋಗಿಸದೆ ಇರುವ ವ್ಯಕ್ತಿಯು ಬಹುಶಃ ಇಲ್ಲ. ಈ ಸತ್ಯದ ಹೊರತಾಗಿಯೂ, ಅನೇಕರಿಗೆ ಅದರ ಉಪಯೋಗಗಳು ಅಷ್ಟು ಸರಿಯಾಗಿ ಗೊತ್ತಿರುವುದಿಲ್ಲ.

ನಾವು ಆಂಡ್ರಾಯ್ಡ್ನ 5 ವೈಶಿಷ್ಟ್ಯಗಳ ಬಗ್ಗೆ ಹೇಳಲು ಬಯಸುತ್ತೇವೆ:

1.ನಿಮ್ಮ ಫೋನ್ನ ಬ್ಯಾಟರಿ ಉಳಿಸಲು ಸುಲಭ ಮಾರ್ಗ:

 

ನಿಮ್ಮ ಫೋನ್ನ ಬ್ಯಾಕ್ಗ್ರೌಂಡನ ಪರದೆಯನ್ನು ಕಪ್ಪು ಅಥವಾ ಸರಳ ಗಾಢ ಬಣ್ಣದ ಬ್ಯಾಕ್ಗ್ರೌಂಡನ ಆರಿಸಿ,ಸ್ವಯಂಚಾಲಿತವಾಗಿ ಪಿಕ್ಸೆಲ್ ಹೈಲೈಟ್ ಆಫ್ ಆಗುತ್ತದೆ, ಮತ್ತು ನಿಮ್ಮ ಸಾಧನವು ಹೆಚ್ಚು ಸಮಯದವರೆಗೆ ಅದರ ಚಾರ್ಜ್ ಅನ್ನು ಉಳಿಸುತ್ತದೆ.. ಒಮ್ಮೆ ಪ್ರಯತ್ನಿಸಿ!

2. ಟೆಕ್ಸ್ಟ್ ಟು ಸ್ಪೀಚ್:

 

ಆಂಡ್ರಾಯ್ಡ್ ಸಾಧನವನ್ನು ಹೊಂದಿದ್ದರೆ ಒಳಬರುವ ಮಾಹಿತಿಯನ್ನು ಓದುವ ಬದಲು ನೀವು ಕೇಳಲು ಬಯಸಿದರೆ, ಸೆಟಿಂಗ್ಸ್->ಆಕ್ಸೆಸ್ ಅಬಿಲಿಟಿ ಅಲ್ಲಿ ಟೆಕ್ಸ್ಟ್ ಟು ಸ್ಪೀಚ್ ಆಯ್ಕೆ ಮಾಡಿಕೊಳ್ಳಿ.

3. ಸ್ಮಾರ್ಟ್ಫೋನ್ ರಿಮೋಟ್ ಕಂಟ್ರೋಲ್

 

ಸೆಟ್ಟಿಂಗ್ಸ್>ಸೆಕ್ಯೂರಿಟಿ >ಡಿವೈಸ್ ಅಡ್ಮಿನಿಸ್ಟ್ರೇಟರ್ಸ್ ,ಡಿವೈಸ್ ಮ್ಯಾನೇಜರ್ ,ರೆಮೋಟೆಲ್ಯ್ ಲೋಕೇಟೆಡ್ ದಿಸ್ ಡಿವೈಸ್ ನಂತರ ಇರುವ ಚೆಕ್ ಬಾಕ್ಸ್ ಆಯ್ಕೆಮಾಡಿ,ಅಲ್ಲಿ ರಿಮೋಟ್ ಲಾಕ್ ಅಂಡ್ ಎರಸ್ ಆಯ್ಕೆ ಮಾಡಿ.
ಇದರಿಂದ ನೀವು ನಿಮ್ಮ ಸ್ಮಾರ್ಟ್ಫೋನ್ ಅನ್ನು ಕಳೆದುಕೊಂಡರೆ, ವೆಬ್ಸೈಟ್ ಮೂಲಕ ನಿಮ್ಮ ಡೇಟಾವನ್ನು ಕಳೆದುಕೊಳ್ಳದೆ ನೀವು ಸ್ಮಾರ್ಟ್ಫೋನ್ನ್ನು ಹುಡುಕಬಹುದು ಮತ್ತು ಅದರ ಉಪಯೋಗವನ್ನು ನಿರ್ಬಂಧಿಸಬಹುದು.

4. ಹಾಟ್ಸ್ಪಾಟ್ ಮೋಡ್

 

ನೀವು ಪ್ರತ್ಯೇಕ 3G ಮೋಡೆಮ್ ಅಥವಾ ರೂಟರ್ ಖರೀದಿಸದೆ ನಿಮ್ಮ ಸ್ಮಾರ್ಟ್ಫೋನ್ಗಳಿಂದ ಬೇರೆ ಸಾಧನಗಳಲ್ಲಿನ ಇಂಟರ್ನೆಟ್ ಅನ್ನು ಸುಲಭವಾಗಿ ಬಳಸಬಹುದು. ಸೆಟ್ಟಿಂಗ್ಗಳು -> ಟೆಥರಿಂಗ್ ಮತ್ತು ಪೋರ್ಟಬಲ್ ಹಾಟ್ಸ್ಪಾಟ್ಗೆ ಹೋಗಿ ಮತ್ತು ಪೋರ್ಟಬಲ್ WLAN ಹಾಟ್ಸ್ಪಾಟ್ ಅನ್ನು ಆನ್ ಮಾಡಿ.

5. ಸೀಕ್ರೆಟ್ ಗೇಮ್:

 

ಆಂಡ್ರಾಯ್ಡ್ 2.3 ಜಿಂಜರ್ಬ್ರೆಡ್ನ ರಹಸ್ಯ ಜಿಸ್ಟಾರ್ಟಿಂಗ್ ನಿಂದ ಇದು ಶುರುವಾಯಿತ್ತು, ಗೂಗಲ್ ತಮ್ಮ ಎಲ್ಲ ಸಾಧನಗಳಲ್ಲಿ ಬಳಕೆದಾರರಿಗೆ ಸಣ್ಣ ರಹಸ್ಯವನ್ನು ಪ್ರಸ್ತುತಪಡಿಸುತ್ತದೆ. ಆದಾಗ್ಯೂ, ಅದನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ . ಮೊದಲು, ಸೆಟ್ಟಿಂಗ್ಗಳಿಗೆ ಹೋಗಿ ಮತ್ತು ಅಬೌಟ್ ಫೋನ್ ಬಗ್ಗೆ ಅಥವಾ ಅಬೌಟ್ ಟ್ಯಾಬ್ಲೆಟ್ ಆಯ್ಕೆಮಾಡಿ. ಆಂಡ್ರಾಯ್ಡ್ ವರ್ಷನ್ (ಆವೃತ್ತಿಯನ್ನು) ಶೀಘ್ರವಾಗಿ ಟ್ಯಾಪ್ ಮಾಡಿ, ಮತ್ತು ಮಾರ್ಷ್ಮ್ಯಾಲೋ ಪರದೆ ಬಂದಾಗ ಅದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ ನಂತರ ವಿಶೇಷ ಮಿನಿ ಗೇಮ್ ತೆರೆದುಕೊಳ್ಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top