fbpx
ದೇವರು

ಭಗವಂತನಾದ ಗಣೇಶನು 8 ಅವತಾರಗಳನ್ನು ವಿಶೇಷವಾಗಿ ರಾಕ್ಷಸರನ್ನು ಸಂಹರಿಸಲೆಂದೇ ಅವತರಿಸಿದ್ದನು.ಅವು ಸಾಕ್ಷಾತ್ ಗಣೇಶನ ಪವಾಡಗಳು ತಿಳ್ಕೊಳ್ಳಿ

ಭಗವಂತನಾದ ಗಣೇಶನು  8 ಅವತಾರಗಳನ್ನು ವಿಶೇಷವಾಗಿ ರಾಕ್ಷಸರನ್ನು ಸಂಹರಿಸಲೆಂದೇ ಅವತರಿಸಿದ್ದನು.ಅವು  ಸಾಕ್ಷಾತ್ ಗಣೇಶನ ಪವಾಡಗಳೇ ಆಗಿವೆ.

 

ಧರ್ಮಗ್ರಂಥಗಳ ಪ್ರಕಾರ ಭಗವಂತನಾದ ಗಣೇಶನು  ಕಾಲ ಕಾಲಕ್ಕೆ ತಕ್ಕಂತೆ ವಿವಿಧ ಅವತಾರಗಳನ್ನು ತಳೆದಿದ್ದನು.ರಾಕ್ಷಸರು ಈ ಭೂಮಿಯ ಮೇಲೇ ನೆಲೆಸಿರುವ ಶಾಂತಿಯನ್ನು ಹಾಳು ಮಾಡುತ್ತಿದ್ದರು.ಆದ್ದರಿಂದ  ಆ ರಾಕ್ಷಸರನ್ನು ಸಂಹರಿಸಲು ಗಣೇಶ 8 ಅವತಾರಗಳನ್ನು ತಳೆದಿದ್ದನು.ಹಾಗೆ ಶ್ರೀ ವಿಷ್ಣು ಮತ್ತು ಶಿವ 24 ಅವತಾರಗಳನ್ನು ತಳೆದಿದ್ದರು.

ಗಣೇಶನ ಈ 8 ಅವತಾರಗಳು ಸಹ ಜನರನ್ನು ರಕ್ಷಿಸುವ ಸಂಕೇತವಾಗಿದ್ದು.ಅವು ಕಾಮ,ಕ್ರೋಧ,ಮದ,ಲೋಭ,ಮತ್ಸರ,ಮೋಹ, ಅಹಂಕಾರ, ಮತ್ತು ಅಜ್ಞಾನವಾಗಿವೆ.

1.ಏಕದಂತ.

 

ಈ ಅವತಾರವನ್ನು ಎತ್ತಿದ ಗಣೇಶನು ಮಾಧಾಸುರ ಎಂಬ ರಾಕ್ಷಸನನ್ನು ಕೊಂದನು.ಮಾಧಾಸುರನು ಶುಕ್ರಾಚಾರ್ಯರ ಆಶ್ರಯ ಪಡೆದ ನಂತರ ಅತ್ಯಂತ ಶಕ್ತಿಶಾಲಿಯಾಗಿ ಎಲ್ಲ ದೇವರನ್ನು ಹಿಂಸಿಸುತ್ತಿದ್ದನು.ಎಲ್ಲ ದೇವರುಗಳು ಸಹ ಜೊತೆ ಸೇರಿ ಗಣೇಶನನ್ನು ಪೂಜಿಸಿ ಪ್ರಾರ್ಥಿಸಿದ ನಂತರ ಗಣೇಶ ಏಕದಂತನ ಅವತಾರ ಪಡೆದನು.ಈ ಅವತಾರದಲ್ಲಿ ಗಣೇಶನಿಗೆ ನಾಲ್ಕು ಕೈಗಳು,ಒಂದು ಹಲ್ಲು,ದೊಡ್ಡ ಹೊಟ್ಟೆ ಮತ್ತು ಆನೆಯ ತಲೆಯನ್ನು ಹೊಂದಿರುವ ಗಣೇಶನ  ಒಂದು ಅವತಾರವಾಗಿತ್ತು.

2.ವಕ್ರತುಂಡ.

 

ಗಣೇಶನ ಈ ಅವತಾರವನ್ನು ಮತ್ಸಾಸುರ ಎನ್ನುವ ರಾಕ್ಷಸನನ್ನು ಕೊಲ್ಲಲ್ಲು  ಅವತರಿಸಿದ್ದನು.ಮತ್ಸಾಸುರನು ಶಿವನ ಭಕ್ತನಾಗಿದ್ದನು. ಆದ್ದರಿಂದ ಅವನಿಗೆ ಈ ಭೂಮಿಯ ಮೇಲಿರುವ  ಯಾವುದೇ ಜೀವಿಗೂ ಭಯ ಪಡದೆ ಇರುವಂತಹ ವರವನ್ನು ಪಡೆದಿದ್ದನು.ದೇವಗುರು ಶುಕ್ರಾಚಾರ್ಯರ  ಒಪ್ಪಿಗೆಯನ್ನು ಪಡೆದು ಮತ್ಸಾಸುರನು ದೇವರಿಗೆ ಹಿಂಸೆ ಕೊಡಲು ಪ್ರಾರಂಭಿಸಿದನು.

ಮತ್ಸಾಸುರನಿಗೆ ಇಬ್ಬರು  ಗಂಡು ಮಕ್ಕಳಿದ್ದರು.ಅವರು ಒಬ್ಬ ಸುಂದರಪ್ರಿಯ ಇನ್ನೊಬ್ಬ ವಿಶ್ವಪ್ರಿಯ. ಅವರಿಬ್ಬರು ಸಹ ತುಂಬಾ ದುಷ್ಟರಾಗಿದ್ದರು.

ಮತ್ಸಾಸುರನ ಹಿಂಸೆಯು ತಡೆದುಕೊಳ್ಳಲಾಗದಷ್ಟು ಅತಿಯಾದಾಗ ಎಲ್ಲ ದೇವರುಗಳು ಶಿವನನ್ನು  ಭೇಟಿ ಮಾಡಿ ವಿವರಿಸಿದರು. ನಂತರ ಶಿವನು  ಶಿವನನ್ನು ನೆನಪಿಸಿಕೊಂಡು ದೀರ್ಘವಾದ ಧ್ಯಾನ ಮಾಡುತ್ತಿದ್ದನು.  ಆಗ ವಕ್ರತುಂಡನ ಜನನವಾಯಿತು. ಮುಂದೆ ಅವನು ಮತ್ಸಾಸುರ ಮತ್ತು ಅವನ ಇಬ್ಬರು ಮಕ್ಕಳನ್ನು ಸಹ ಕೊಂದನು.

3.ಗಜಾನನ.

 

ಈ ಅವತಾರದ ಗಣೇಶನು ರಾಕ್ಷಸ ಲೋಭಾಸುರನನ್ನು ಸಂಹರಿಸಿದ. ಲೋಭಾಸುರನು ದೇವರುಗಳ ಮೇಲೆ ನಿರಂತರವಾಗಿ ದಬ್ಬಾಳಿಕೆಯನ್ನು ಮಾಡಿ ತಮ್ಮ ರಾಕ್ಷಸ ನಿಯಮಗಳನ್ನು ಪಾಲಿಸಬೇಕೆಂದು ಓತ್ತದ ಹೇರುತ್ತಿದ್ದ.ದೇವ ಸಮೂಹವು ಒಟ್ಟಾಗಿ ಸೇರಿ ರೈಭ್ಯ ಋಷಿಮುನಿಗಳನ್ನು ಭೇಟಿ ಮಾಡಿ ಎಲ್ಲವನ್ನು ವಿವರಿಸಿದರು,ರೈಭ್ಯ ಮಹಾ ಮುನಿಗಳು ಗಜಾನನನಿಗೆ ಪ್ರಾರ್ಥನೆ ಸಲ್ಲಿಸಲು ಹೇಳಿದರು .ನಂತರ ಶ್ರೀ ಹರಿ ವಿಷ್ಣುವು ಲೋಭಾಸುರನ ಬಳಿ ಗಜಾನನನ ಸಂದೇಶವನ್ನು ತುಲುಪಿಸಲು ಹೋದನು. ಗಜಾನನ ನನ್ನು ಹೊಗಳುತ್ತಾ ಅವನು ರಾಕ್ಷಸರನ್ನು ಸಂಹರಿಸುವ ಶಕ್ತಿಯನ್ನು ಪಡೆದಿದ್ದಾನೆ ಎಂದು ಹೇಳಿದನು .ನಂತರ ಲೋಭಾಸುರನು ಮರು ಮಾತನಾಡದೇ ಯಾವುದೇ ಯುದ್ಧವನ್ನು ಸಹ ಮಾಡದೇ ಶರಣಾದನು.

4.ಲಂಬೋಧರ.

 

ಸಮುದ್ರ ಮಂಥನದ ಸಮಯದಲ್ಲಿ ಭಗವಂತನಾದ ವಿಷ್ಣುವು ಹೆಣ್ಣಾಗಿ ಮೋಹಿನಿಯ ಅವತಾರವನ್ನು ತಳೆದಿದ್ದನು.ಭಗವಂತನಾದ ಶಿವನು ಮೋಹಿನಿಯನ್ನು ನೋಡಿ ಅವಳ ಕಡೆಗೆ ಆಕರ್ಷಿತವಾಗಿ ಶಿವನು ಆಗ ವೀರ್ಯವನ್ನು ಹೊರಹಾಕಿದನು.ಆ ವೀರ್ಯದಿಂದಲೇ ಕ್ರೋಧಾಸುರ ಎಂಬ ರಾಕ್ಷಸ ಹುಟ್ಟಿದನು.ನಂತರ ಕ್ರೋಧಾಸುರ ಸೂರ್ಯ ದೇವನಲ್ಲಿ ಪ್ರಾರ್ಥನೆ ಮಾಡಿ ಅವನ ಆಶೀರ್ವಾದವನ್ನು ಪಡೆದು ಈ ಜಗತ್ತನ್ನೇ ಆಳುವ ಅಧಿಕಾರ ಪಡೆದನು.

ಈ ಸಂಗತಿ ಎಲ್ಲ ದೇವರಲ್ಲಿಯೂ ಭಯವನ್ನು ಹುಟ್ಟಿಸಿತು ಗಣೇಶನು ಇವನ ಜೊತೆ ಯುದ್ಧವನ್ನು ಮಾಡಲು ಹೋಗುವಾಗ ಲಂಬೋಧರನ ಅವತಾರವನ್ನು ಪಡೆದನು . ಕ್ರೋಧಾಸುರನನ್ನು ಕೊಲ್ಲಲ್ಲು ಮುಂದಾದಾಗ ಕ್ರೋಧಾಸುರನು  ಪಾತಾಳಕ್ಕೆ ಹೊರಟುಹೋದನು.

5.ಮಹೋದರ.

 

ಕಾರ್ತಿಕೇಯನು ತಾರಕಾಸುರನನ್ನು ಕೊಂದಾಗ. ಆಗ ರಾಕ್ಷಸ ರಾಜನಾದ ಶುಕ್ರಾಚಾರ್ಯರು ಮೋಹಾಸುರನನ್ನು ಸೃಷ್ಟಿಸಿದರು.ನಂತರ ಎಲ್ಲ ದೇವರ ಸಮೂಹವೂ ಗಣೇಶನನ್ನು ಭಕ್ತಿಯಿಂದ ಪೂಜಿಸಿದರು.ಆ ಸಮಯದಲ್ಲಿ ಗಣಪತಿ 3ನೇ ಅವತಾರವನ್ನು ಪಡೆದ.ಅದೇ ಮಹೋದರನ ಅವತಾರ.ಮಹೋದರನಿಗೆ ದೊಡ್ಡದಾದ ಹೊಟ್ಟೆಯಿತ್ತು,ಇಲಿಯ ಮೇಲೆ ಕುಳಿತು ಸವಾರಿ ಹೊರಟ ಮಹೋದರ.ಇದನ್ನು ನೋಡಿದ ಮೋಹಾಸುರನು ಭಯಗೊಂದು  ಮಹೋದರನನ್ನೇ ತನ್ನ ಇಷ್ಟ ದೇವರಾಗಿ ಮಾಡಿಕೊಂಡನು.

6.ವಿಕಟ.

 

ಗಣೇಶನ ಅವತಾರವಾದ ಈ ವಿಕಟ ರೂಪವು ಕಾಮಾಸುರನನ್ನು ಕೊಂದಿತು.

7.ವಿಜ್ಞರಾಜ.

 

ಈ ಅವತಾರದಲ್ಲಿರುವ ಗಣೇಶ ದೇವನು “ ಮಮ್” ( ಪಾರ್ವತಿಯಿಂದ ಜನಿಸಿದ) ಅನ್ನು ಸಂಹಾರ ಮಾಡಿದನು.

8.ಧೂಮ್ರವರ್ಣ.

 

ಅಹಂ ಎನ್ನುವ ಹೆಸರಿನ   ಒಬ್ಬ ರಾಕ್ಷಸನಿದ್ದನು . ಅವನನ್ನು ಅಹಂ ಎಂದೇ  ಕರೆಯಲಾಗುತ್ತಿತ್ತು.ಧೂಮ್ರವರ್ಣ ಎನ್ನುವ  ಅವತಾರವನ್ನು ಪಡೆದ ಗಣೇಶ ಅಹಂ ಅನ್ನು ಸಂಹಾರ ಮಾಡಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top