fbpx
ಸಮಾಚಾರ

ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಜುಬಸಯ್ಯ ವಿರುದ್ಧ FIR ದಾಖಲಿಸಲು ಮುಂದಾದ ಸಾಮಾನ್ಯ ಕನ್ನಡಿಗ ತಂಡ!

ಶಿವರಾಜ್ ಕೆ ಆರ್ ಪೇಟೆ ಮತ್ತು ಸಂಜು ಬಸಯ್ಯ ವಿರುದ್ಧ ಎಫ್ ಐ ಆರ್ ದಾಖಲಿಸಲು ಮುಂದಾದ ಸಾಮಾನ್ಯ ಕನ್ನಡಿಗ ತಂಡ!

 

 

 

ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳೋದಿಲ್ಲ ಎಂದು ಅಧಿಕೃತವಾಗಿ ಹೇಳಿದ ದುರಹಂಕಾರಿ ಜೀ ಕನ್ನಡ.

ಹಿಂದೂ ಮತ್ತು ಜೈನ ಧರ್ಮದವರು ಆರಾಧಿಸುವ ಗೊಮ್ಮಟೇಶ್ವರನನ್ನು ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಕಿಲಾಡಿ ಕುಟುಂಬ ಕಾರ್ಯಕ್ರಮದ ಕಲಾವಿದರಾದ ಶಿವರಾಜ್ ಕೆ ಆರ್ ಪೇಟೆ ಮತ್ತು ಸಂಜು ಬಸಯ್ಯ ಹಾಗು ಝೀ ಕನ್ನಡ ಚಾನೆಲ್ ನ ವಿರುದ್ಧ ಎಫ್ ಐ ಆರ್ ದಾಖಲಿಸಲು ಸಾಮಾನ್ಯ ಕನ್ನಡಿಗ ಪ್ರತಿಷ್ಠಾಪನಾ ತಂಡ ನಿರ್ಧರಿಸಿದೆ.

 

ಕನ್ನಡದ ಝೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಕಿಲಾಡಿ ಕುಟುಂಬ ಎಂಬ ಕಾರ್ಯಕ್ರಮದ ಜಾಹಿರಾತಿನ ಭರದಲ್ಲಿ ಕರ್ನಾಟಕದ ಹೆಮ್ಮೆಯ ಕಿರೀಟವಾದ ಶ್ರಾವಣ ಬೆಳಗೊಳದ ಗೊಮ್ಮಟೇಶ್ವರನಿಗೆ ಕಳೆದ ವಾರ ಅಪಹಾಸ್ಯ ಮಾಡಿ ಲೇವಡಿ ಮಾಡಿದ್ದರು ಅದರ ವಿರುದ್ಧ ಸಾಮಾನ್ಯ ಕನ್ನಡಿಗ ಪ್ರತಿಷ್ಠಾಪನ ತಂಡ ಝೀ ವಾಹಿನಿಯ ವಿರುದ್ಧ ಪ್ರತಿಭಟನೆ ಮಾಡಿತ್ತು. ಈ ಕುರಿತು ಕ್ಷಮೆ ಕೇಳಬೇಕು ಎಂದು ಕೇಳಿಕೊಂಡಾಗ ಮೊದಲು ಕ್ಷಮೆ ಕೇಳುವುದಾಗಿ ಒಪ್ಪಿಕೊಂಡಿದ್ದರು.

 

ಕರ್ನಾಟಕದ ಹೆಮ್ಮೆಯ ಕೀರ್ತಿ ಕಿರೀಟವಾದ ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ ಝೀ ಕನ್ನಡ!

 

ಗೊಮ್ಮಟೇಶ್ವರನಿಗೆ ಅವಮಾನ ಮಾಡಿರುವ ವಿಡಿಯೋವನ್ನು ಇಲ್ಲಿ ನೋಡಿ.

 

 

ಈ ಘಟನೆ ನಡೆದು ಒಂದು ವಾರ ಕಳೆದರೂ ಕ್ಷಮೆಕೇಳದ ಕಾರಣ ಸಾಮಾನ್ಯ ಕನ್ನಡಿಗ ಪ್ರತಿಷ್ಠಾಪನ ಟೀಮ್ ನ ಅಧ್ಯಕ್ಷರಾದ ಸಂದೀಪ್ ಪಾರ್ಶ್ವನಾಥ್ ಅವರು ಕ್ಷಮೆ ಕೇಳಬೇಕು ಎಂದು ಮತ್ತೆ ಕೇಳಿಕೊಂಡಾಗ “ಇದನ್ನು ನೀವು ಹಾಸ್ಯದ ದೃಷ್ಟಿಯಿಂದ ನೋಡಬೇಕು ಬೇರೆ ದೃಷ್ಟಿಕೋನಗಳಿಂದ ನೋಡಬಾರದು ಎಂದು ಹೇಳಿ ಯಾವುದೇ ಕಾರಣಕ್ಕೂ ಈ ಕುರಿತು ನಾವು ಕ್ಷಮೆ ಕೇಳೋದಿಲ್ಲ” ಎಂದು ಝೀ ಕನ್ನಡ ಚಾನೆಲ್ ನ ಅಧಿಕಾರಿಗಳು ದುರಹಂಕಾರದಿಂದ ಹೇಳಿದ್ದಾರೆ.

 

ಹಿಂದೂ ಮತ್ತು ಜೈನರ ಎರಡೂ ಧರ್ಮದ ಸಮಾಗಮ ಸ್ಥಳ ಎಂದು ಪ್ರಖ್ಯಾತಿಪಡೆದಿರುವ ಸರ್ವ ಸಂಘಗಳ ಪರಿತ್ಯಾಗವನ್ನು ಮಾಡಿರುವ ಗೊಮ್ಮಟೇಶ್ವರನಿಗೆ ಅವಮಾನ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.ಇತ್ತೀಚಿಗೆ ಇದೆ ಜೀ ಕನ್ನಡ ಚಾನೆಲ್ ನಲ್ಲಿ  ಪ್ರಸಾರವಾಗುವ  ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವಂತಹ ಕಾರ್ಯಕ್ರಮ ಮಾಡಿದ್ದರು.ಆಗಲೂ ಜನ ವಿರೋಧ ಮಾಡಿದ್ದರು ಆದರೂ ಎಚ್ಚೆತ್ತುಕೊಳ್ಳದ ಜೀ ಕನ್ನಡ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿದೆ.

 

ಹಾಗಾಗಿ ಇಂತಹ ತಪ್ಪುಗಳು ಪುನಾರಾವರ್ತನೆ ಆಗಬಾರದೆಂದು ಕಿಲಾಡಿ ಕುಟುಂಬ ಕಾರ್ಯಕ್ರಮದ ಕಲಾವಿದರಾದ ಶಿವರಾಜ್ ಕೆ ಆರ್ ಪೇಟೆ ಮತ್ತು ಸಂಜು ಬಸಯ್ಯ ಹಾಗು ಝೀ ಕನ್ನಡ ಚಾನೆಲ್ ನ ವಿರುದ್ಧ ಎಫ್ ಐ ಆರ್ ದಾಖಲಿಸಲು ಸಾಮಾನ್ಯ ಕನ್ನಡಿಗ ಪ್ರತಿಷ್ಠಾಪನಾ ತಂಡ ನಿರ್ಧರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top