fbpx
ಸಮಾಚಾರ

ಮೋದಿ ಕುರಿತು ಮತ್ತೊಂದು ಅವಹೇಳನಕಾರಿ ಟ್ವೀಟ್ ಮಾಡಿದ ಮೋಹಕತಾರೆ ರಮ್ಯಾ!

ಮೋದಿ ಕುರಿತು ಮತ್ತೊಂದು ಅವಹೇಳನಕಾರಿ ಟ್ವೀಟ್ ಮಾಡಿದ ಮೋಹಕತಾರೆ ರಮ್ಯಾ!

 

ಸ್ಯಾಂಡಲ್ ವುಡ್ ಕ್ವೀನ್ ಎಂದೇ ಹೆಸರು ಪಡೆದಿರುವ ನಟಿ ಹಾಗೂ ಕಾಂಗ್ರೆಸ್ ನ ಸೋಷಿಯಲ್‌ ಮೀಡಿಯಾ ವಿಭಾಗದ ಮುಖ್ಯಸ್ಥೆ, ರಮ್ಯಾ ಟ್ವಿಟ್ಟರ್ ನಲ್ಲಿ ಮತ್ತೆ ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಒಂದನ್ನ ಮಾಡಿದ್ದಾರೆ.

 

 

ಒಂದು ಹಳೆಯ ರತ್ನ, ಇನ್ನೂ ಪ್ರಕಾಶಮಾನ- ಎಂದು ಸ್ಟೇಟಸ್ ಆಕಿ ಮಾಡಿರುವ ಈ ಟ್ವೀಟ್ ನಲ್ಲಿ ಮೋದಿಯವರನ್ನು ಅಣಕಿಸುವ ರೀತಿಯಲ್ಲಿ ಕಾರ್ಟೂನ್ ಚಿತ್ರವನ್ನು ಅಪ್ಲೋಡ್ ಮಾಡಿದ್ದಾರೆ. ಈ ಚಿತ್ರದಲ್ಲಿ ಒಬ್ಬ ಮುದುಕ ಒಂದು ಮಹಿಳೆಯನ್ನು “ಏನು ನಿನ್ನ ಗಂಡ ನಿನ್ನನ್ನು ಬಿಟ್ಟಿದ್ದಾನೆಯೇ? ಇದು ಘನ ಘೋರ ಅನ್ಯಾಯ ಅವ್ನಿಗೆ ಶಿಕ್ಷೆ ಆಗಲೇಬೇಕು, ಅವನ್ಯಾರು ಹೇಳು ಎಂದು ಕೇಳಿದ್ದಾನೆ” ಅದಕ್ಕೆ ಆ ಮಹಿಳೆ “ನರೇಂದ್ರ ಮೋದಿ” ಎಂದು ಉತ್ತರ ನೀಡುವಂತೆ ಈ ಚಿತ್ರದಲ್ಲಿ ಬಿಂಬಿಸಿದ್ದಾರೆ.

 

 

ರಮ್ಯರವರ ಈ ಟ್ವೀಟ್ ಕಂಡು ಮೋದಿ ಅಭಿಮಾನಿಗಳು ರಮ್ಯಾ ವಿರುದ್ಧ ಟ್ವೀಟ್ ವಾರ್ ನಡೆಸುತ್ತಿದ್ದಾರೆ. ರಮ್ಯಾ ಇತ್ತೀಚಿಗೆ ಮೋದಿಯನ್ನು ಪದೇ ಪದೇ ಕೆಣಕುತ್ತಿದ್ದು ಮೋದಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿರುವ ಫೋಟೋ ಹುಡುಕಿ ಕೊಟ್ಟರೆ 25 ಸಾವಿರ ಕೊಡುವುದಾಗಿ ಹೇಳಿ ಸಾವಾಲು ಹಾಕಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top