fbpx
ಸಮಾಚಾರ

ಇತಿಹಾಸದಲ್ಲೇ ಮೊದಲ ಬಾರಿಗೆ ಆರ್‌ಬಿಐನಿಂದ Rs 200 ನೋಟು ಬಿಡುಗಡೆ. ಇಂದಿನಿಂದ ಚಲಾವಣೆ!

ಇತಿಹಾಸದಲ್ಲೇ ಮೊದಲ ಬಾರಿಗೆ ಆರ್‌ಬಿಐನಿಂದ Rs 200 ನೋಟು ಬಿಡುಗಡೆ. ಇಂದಿನಿಂದ ಚಲಾವಣೆ!

ಕಡಿಮೆ ಮುಖ ಬೆಲೆಯ ನೋಟುಗಳ ಕೊರತೆಯನ್ನು ನಿವಾರಿಸಲು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ 200 ರೂಪಾಯಿ ನೋಟು ಚಲಾವಣೆಗೆ ತರಲು ತೀರ್ಮಾನಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದಿನಿಂದ(ಆಗಸ್ಟ್ 25) ಚಲಾವಣೆಗೆ ತರುತ್ತಿದೆ.

 

 

‘100 ಮತ್ತು 500 ರೂ.ಗಳ ಮಧ್ಯೆ ಯಾವುದೇ ಮುಖಬೆಲೆಯ ನೋಟುಗಳು ಲಭ್ಯವಿಲ್ಲದ ಕಾರಣ 2000 ನೋಟಿಗೆ ಚಿಲ್ಲರೆ ಸಮಸ್ಯೆ ಹೆಚ್ಚಾಗಿ ಕಾಡುತಿತ್ತು ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು 200ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ,

 

 

ಇಂದು ಚಲಾವಣೆಗೊಳ್ಳಲಿರುವ 200 ರೂಪಾಯಿಯ ಮುಖಬೆಲೆಯ ಹೊಸ ನೋಟು ಗಾಢ ಹಳದಿ ಬಣ್ಣದಿಂದ ಕೂಡಿದ್ದು. ನೋಟಿನ ಮುಂಭಾಗದಲ್ಲಿ ಎಂದಿನಂತೆ ಮಹಾತ್ಮ ಗಾಂಧಿ ಚಿತ್ರವಿದೆ. ಹಿಂಭಾಗದಲ್ಲಿ ಸಾಂಚಿಯ ಸ್ತೂಪದ ಚಿತ್ರವಿದೆ.ಕುರುಡರು ನೋಟನ್ನು ಸುಲಭವಾಗಿ ಗುರುತಿಸುವುದಕ್ಕಾಗಿ ನೋಟಿನ ಮುಂಭಾಗದಲ್ಲಿರುವ ಅಶೋಕ ಸ್ತಂಭದ ಚಿತ್ರದ ಮೇಲ್ಭಾಗದಲ್ಲಿ H ಆಕಾರದ ಚಿಹ್ನೆ ಮುದ್ರಿಸಲಾಗಿದೆ ಇದು ಸ್ಪರ್ಶಕ್ಕೆ ಗೋಚರವಾಗುತ್ತದೆ.. H ಆಕಾರದೊಳಗೆ ₹ 200 ಎಂದು ಸಣ್ಣ ಅಕ್ಷರಗಳಲ್ಲಿ ಮುದ್ರಿಸಲಾಗಿದೆ.

 

 

ನೋಟಿನ ಮುಂಭಾಗ ಎಡ ಮತ್ತು ಬಲ ಭಾಗದಲ್ಲಿ ಎರಡೆರಡು ಗೆರೆಗಳ ಮಧ್ಯೆ ಎರಡು ಸಣ್ಣ ಸೊನ್ನೆಗಳನ್ನು ಮುದ್ರಿಸಲಾಗಿದೆ. ಇತ್ತೀಚೆಗಷ್ಟೇ ಆರ್‌ಬಿಐ 50ರೂ ನೋಟನ್ನು ಸಹ ಪರಿಚಯಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top