fbpx
ಸಮಾಚಾರ

ಉಪ್ಪಿಯ ಪ್ರಜಾಕಾರಣದ ಬಗ್ಗೆ ಅಭಿಮಾನಿಯೊಬ್ಬ ಬರೆದಿರುವ ರಿಯಲ್ ಕವನವನ್ನೊಮ್ಮೆ ಓದಿ.! ಚೆನ್ನಾಗಿದೆ.

ಉಪ್ಪಿಯ ಪ್ರಜಾಕಾರಣದ ಬಗ್ಗೆ ಅಭಿಮಾನಿಯೊಬ್ಬ ಬರೆದಿರುವ ರಿಯಲ್ ಕವನವನ್ನೊಮ್ಮೆ ಓದಿ ಚೆನ್ನಾಗಿದೆ.

 

 

 

ದೇಶದಲ್ಲಿ ರಾಜಕಾರಣ,ರಾಜನೀತಿ, ರಾಜಕೀಯ ಇರಬಾರದು ಪ್ರಜಾಕಾರಣ, ಪ್ರಜಾನೀತಿ ಮತ್ತು ಪ್ರಜಾಕೀಯ ಎಂಬ ವಿಷಯದಡಿ ನಾವು ಈ ಪಕ್ಷವನ್ನು ಕಟ್ಟುತ್ತಿದ್ದೇವೆ. ಎಂದು ಉತ್ತಮ ಪ್ರಜಾ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹಲವು ಪ್ರಯೋಗಗಳ ಮೂಲಕ ಹೊಸತನವನ್ನು ತಂದ ಉಪೇಂದ್ರ, ಸಮಾಜದಲ್ಲಿಯೂ ಕೂಡ ಹೊಸ ಬದಲಾವಣೆ ತರುತ್ತಾರೆ ಎಂಬ ವಿಶ್ವಾಸದಲ್ಲಿ ಹಲವಾರು ಇದ್ದಾರೆ. ಈ ರಿಯಲ್ ಸ್ಟಾರ್ ಉಪೇಂದ್ರ ರವರಿಗೆ ಸಪೋರ್ಟ್ ಮಾಡುವವರ ಸಂಖ್ಯೆ ದಿನೇ ದಿನೇಜಾಸ್ತಿಯಾಗುತ್ತಿದೆ.

ಉಪೇಂದ್ರ ಮತ್ತು ಅವರ ಪ್ರಜಾಕೀಯವನ್ನು ಹೊಗಳುತ್ತಾ ಬ್ಯಾಡರಹಳ್ಳಿಯ ನಾಗೇಶ್ ಎಂಬುವರು ‘ಪ್ರಜಾಕೀಯ’ದ ಬಗ್ಗೆ ಒಂದು ಕವನ ಬರೆದಿದ್ದಾರೆ. ಆ ಕವನ ಈ ಕೆಳಗಿದೆ ಓದಿ.

https://twitter.com/nimmaupendra/status/900649855881592832

ಬಂದ ಬಂದ ಉಪ್ಪಿ ಬಂದ
ಪ್ರಜಾಕೀಯ ಹೊತ್ತು ತಂದ
ಜನ ಸಾಮಾನ್ಯರನ್ನು ಅಸಮಾನ್ಯರು ಎಂದ
ಹಣವಿಲ್ಲದೇ ಸ್ವಚ್ಛ ಪ್ರಜಾಕೀಯ ಕಟ್ಟುವೆನೆಂದ
||ಬಂದ ಬಂದ ಉಪ್ಪಿ ಬಂದ||
||ಪ್ರಜಾಕೀಯ ಹೊತ್ತು ತಂದ||

ರಾಜನು ನಾನಲ್ಲ
ರಾಜಕೀಯ ಬೇಕಿಲ್ಲ
ಜಾತಿ ಮತ ನಮಗಿಲ್ಲ
ಪ್ರಾಮಾಣಿಕವಾಗಿ ಬದುಕೋಣ ಎಲ್ಲ
||ಬಂದ ಬಂದ ಉಪ್ಪಿ ಬಂದ||
||ಪ್ರಜಾಕೀಯ ಹೊತ್ತು ತಂದ||

ಭ್ರಷ್ಟಾಚಾರ ನಿರ್ಮೂಲನೆ ಮಾಡುವೆನೆಂದು
ನಾಡಿನ ಜನತೆಯ ಸಲಹೆ ಪಡೆಯುವೆನೆಂದು
ಸ್ವಚ್ಛತೆಯ ನಾಡಿನ ಭವಿಷ್ಯದ ಕನಸನ್ನ ಕಂಡ
ಸಮಸ್ಯೆ ಪರಿಹಾರಕ್ಕೆಂದು ರಚಿಸಿದ್ದಾನೆ ತಂಡ
||ಬಂದ ಬಂದ ಉಪ್ಪಿ ಬಂದ||
||ಪ್ರಜಾಕೀಯ ಹೊತ್ತು ತಂದ||

ಯುವ ಪೀಳಿಗೆ ಬಡಿದೆಚ್ಚರಿಸಿದ
ಪ್ರಜಾಕೀಯದ ಭಾಮದವ್ಯ ಸೃಷ್ಟಿಸಿದ
ಪ್ರಜೆಗಳನ್ನು ಒಗ್ಗೂಡಿಸಿದ
ಜನ ಸಾಮಾನ್ಯರಿಗೆ ಅರಿವು ಮೂಡಿಸಿದ
||ಬಂದ ಬಂದ ಉಪ್ಪಿ ಬಂದ||
||ಪ್ರಜಾಕೀಯ ಹೊತ್ತು ತಂದ||

– ನಾಗೇಶ್, ಬ್ಯಾಡರಹಳ್ಳಿ

ನಾಗೇಶ್, ಬ್ಯಾಡರಹಳ್ಳಿ ಯವರ ಈ ಕವನವನ್ನು ಟ್ವಿಟ್ಟರ್ ನಲ್ಲಿ ಸ್ವತಃ ಓದಿ ಖುಷಿಪಟ್ಟಿರುವ ಉಪೇಂದ್ರ ನಾಗೇಶ್ ಅವರಿಗೆ ಸೂಪರ್ ಎಂದು ರಿಪ್ಲೈ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top