fbpx
ಸಿನಿಮಾ

ಅನಂತ್ ನಾಗ್ ಪ್ರಕಾರ ಈ ನಟ ಬಿಲ್ಡಪ್, ಶೋ ಆಫ್ ,ಆರೋಗೆಂಟ್ ಅಂತೇ !

‘ಸೂಪರ್ ಟಾಕ್ ಟೈಮ್’ ಅಕುಲ್ ಬಾಲಾಜಿ ನಡೆಸಿಕೊಡುವ ಅತಿ ಹೆಚ್ಚು ವಿವಾದಗಳನ್ನು ಉಂಟು ಮಾಡುವ ಈ ಕಾರ್ಯ ಕ್ರಮ ಒಂದಲ್ಲ ಒಂದು ವಿವಾದದಲ್ಲಿ ಬಹಳ ಪ್ರಚಲಿತವಾಗಿರುತ್ತದೆ , ಕಳೆದ ಬಾರಿ bigboss ಸಂಜನಾಗೆ ಆದ ಗತಿ ಇನ್ನು ಜನರು ಮರೆತೇ ಇಲ್ಲ , ಇಷ್ಟರ ಮಧ್ಯೆ ಮೊನ್ನೆ ಅನಂತ್ ನಾಗ್ ರವರನ್ನು ಹಾಟ್ ಸೀಟ್ ಗೆ ಅಕುಲ್ ಬಾಲಾಜಿ ಕರೆದುಕೊಂಡು ಬಂದಿದ್ದರು .

 

ವಿವಾದಗಳಿಗೂ ಅನಂತ್ ನಾಗ್ ರವರಿಗೂ ಬಹಳ ದೂರ , ಹೀಗಿರುವಾಗ ಎಲ್ಲರು ಕಾಯುತ್ತಿದ್ದ ಪ್ರಶ್ನೆಗಳಿಗೆ ಬಹಳ ನಾಜೂಕಾಗಿಯೇ ಉತ್ತರ ಕೊಡಲು ಸಿದ್ದವಾದ ಅನಂತ್ ನಾಗ್ ರವರು  ವಿಶೇಷವೇನೆಂದರೆ ಅನಂತ್ ರವರ ಜೊತೆ ನಟಿ ಗೀತಾ ಕೂಡ ಇದ್ದರು .

ಅಕುಲ್ ತಮ್ಮ ರಾಪಿಡ್ ಫೈರ್ ಸುತ್ತಿನಲ್ಲಿ ತಮ್ಮ ಪ್ರಶ್ನೆಗಳ ಮೂಲಕ ಅನಂತ್ ನಾಗ್ ರವರನ್ನು ಸುತ್ತುವರಿದರು ನಿರೂಪಕ ಅಕುಲ್ ಬಾಲಾಜಿ ಇಟ್ಟ ಪ್ರಶ್ನೆಗಳು ಹೀಗಿದ್ದವು “ನಿಮಗೆ ಈ ಪದಗಳನ್ನು ಕೇಳಿದರೆ ಯಾವ ನಟರು ಅನಿಸುತ್ತದೆ ಎಂದು ಹೇಳಬೇಕು ” ಎಂದು ಅವುಗಳು
”ಬಿಲ್ಡಪ್, ಶೋ ಆಫ್, ಡೌನ್ ಟು ಅರ್ಥ್, ಸೆಲ್ಫಿಶ್, ಹೈ ಇನ್ ಆಟಿಟ್ಯೂಡ್, ಆರೋಗೆಂಟ್” ಇವೆಲ್ಲವಕ್ಕೂ ಅನಂತ್ ತಮ್ಮ ಹೆಸರನ್ನೇ ಹೇಳಿದರು .

 


ಪ್ರತಿ ಪ್ರಶ್ನೆಗೂ ಅನಂತ್ ಎನ್ನುವ ಹೆಸರನ್ನು ಕೊಟ್ಟು ಯಾವುದೇ ವಿವಾದಗಳಿಗೆ ಎಡೆ ಮಾಡಿಕೊಡಲಿಲ್ಲ ,.

ಯಾಕೆ ನಿಮ್ಮ ಹೆಸರನ್ನೇ ಹೇಳಿಕೊಂಡಿದ್ದೀರಿ ಎಂದು ಅಕುಲ್ ಎಂದದ್ದಕ್ಕೆ ಆ ಗುಣಗಳೆಲ್ಲವೂ ನನ್ನಲೇ ಇವೆ ಅದಕ್ಕೆ ನಾನು ನನ್ನ ಹೆಸರನ್ನೇ ಕೊಟ್ಟೆ ಎಂದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top