fbpx
ದೇವರು

ಮುರಿದು ಹೋದ ದೇವರ ವಿಗ್ರಹ ಅಥವಾ ಮೂರ್ತಿಗಳು ಮತ್ತು ಹರಿದು ಹೋದ ದೇವರ ಚಿತ್ರವಿರುವ ಫೋಟೋಗಳು ಹೇಗೆ ವಿಲೇವಾರಿ ಮಾಡಬೇಕು ತಿಳಿಯೋಣ

ಮುರಿದು ಹೋದ ದೇವರ ವಿಗ್ರಹ ಅಥವಾ ಮೂರ್ತಿಗಳು ಮತ್ತು ಹರಿದು ಹೋದ ದೇವರ ಚಿತ್ರವಿರುವ ಫೋಟೋಗಳು ಹೇಗೆ ವಿಲೇವಾರಿ ಮಾಡಬೇಕು. ಅವುಗಳನ್ನು ವಿಲೇವಾರಿ ಮಾಡುವ ಸರಿಯಾದ ಕ್ರಮ  ಯಾವುದು  ?  ಎಂದು ತಿಳಿಯೋಣ.

ಎಲ್ಲಾ ಮನೆಗಳಲ್ಲಿಯೂ ಆನೇಕ ದೊಡ್ಡ ಮತ್ತು ಸಣ್ಣ ದೇವರ ಚಿತ್ರವಿರುವ ಫೋಟೋಗಳು,ದೇವರ ಮೂರ್ತಿಗಳು ಇದ್ದೇ ಇರುತ್ತವೆ.ಇವು ಕ್ಯಾಲೆಂಡರ್, ಡೈರಿ ಮತ್ತು ಪುಸ್ತಕಗಳ ಮೇಲೆಯೂ ಮತ್ತು ಇನ್ನಿತರ ವಸ್ತುಗಳ ಮೇಲೂ ಇರುತ್ತವೆ.ಮನೆಯಲ್ಲಿ ಪೂಜೆ ಮತ್ತು ಇನ್ನಿತರ ಸಮಾರಂಭಗಳು ,ಮಂಗಳಕರವಾದ ಕಾರ್ಯಕ್ರಮಗಳು ಜರುಗಿದಾಗ ಅಂತಹ ಸಮಾರಂಭಗಳು ಮುಗಿದಾಗ ಅಲ್ಲಿ ಪೂಜೆ ಸಾಮಾನುಗಳು ಮತ್ತು ಇನ್ನಿತರೆ ಅನೇಕ ವಸ್ತುಗಳನ್ನು ಒಂದು ಕಡೆ ಮೂಲೆಯಲ್ಲಿ ಬಿಸಾಕಲಾಗುತ್ತದೆ.ಆದರೆ  ಪೂಜೆಗೆ ಉಪಯೋಗಿಸಿದ ವಸ್ತುಗಳನ್ನು ಹಾಗೆ  ಎಲ್ಲೆಂದರಲ್ಲಿ  ಎಸೆಯಬಾರದು ಅದಕ್ಕೆಂದೇ ಅವುಗಳನ್ನು ವಿಲೇವಾರಿ ಮಾಡಲು ಒಂದು ಸರಿಯಾದ ಕ್ರಮವಿದೆ. ಅವುಗಳನ್ನು ಇಂದು ನಿಮಗೆ ತಿಳಿಸುತ್ತೇವೆ.

 

 

ಹಿಂದೂಗಳ ಹಬ್ಬಗಳಾದ ದೀಪಾವಳಿ,ದುರ್ಗಾ ಪೂಜೆ,ಗಣೇಶ ಚತುರ್ಥಿ,ಸರಸ್ವತಿ ಪೂಜೆ  ಇನ್ನೂ ಮುಂತಾದ ಹಬ್ಬಗಳಲ್ಲಿ  ಬೇಡದೇಇರುವ  ಅನೇಕ ವಸ್ತುಗಳು ಉತ್ಪತ್ತಿಯಾಗುತ್ತವೆ.ಮುರಿದು ಹೋದ  ಮಣ್ಣಿನ,ಪ್ಲಾಸ್ಟಿಕನ ಮೂರ್ತಿಯನ್ನು ಅಲ್ಲಿಯೇ ಬಿಟ್ಟುಬಿಡುತ್ತಾರೆ.ಆದ್ದರಿಂದ ಮುರಿದು ಹೋದ ಮೂರ್ತಿಯನ್ನು ಏನು ಮಾಡುವುದು ? ಅವುಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂದು ?   ಅದಕ್ಕೆ ಇಲ್ಲಿದೆ ಸರಿಯಾದ ಮಾರ್ಗ…..

1.ಹೂವುಗಳು.

ದೇವರ ಫೋಟೋಗಳಿಗೆ ,ಮೂರ್ತಿಗಳಿಗೆ ಹಾಕಿದ ಹೂವುಗಳು ಪ್ರತಿದಿನ ಮನೆಯಲ್ಲಿ ಪೂಜಾ ಕೋಣೆಯಿಂದಲೂ ಉತ್ಪತ್ತಿಯಾಗುತ್ತವೆ. ಅವುಗಳನ್ನು  ವಿಲೇವಾರಿ ಮಾಡುವುದು ಬಹಳ ಸುಲಭ. ಹಿಂದೂ ಧರ್ಮದಲ್ಲಿ ಅರಳಿ ಮರವನ್ನು ಪವಿತ್ರವೆಂದು ಭಾವಿಸಲಾಗಿದೆ. ಒಣಗಿದ, ಬಾಡಿಹೋದ ಹೂವುಗಳನ್ನು ಮತ್ತು ಉಳಿದ ಸಿಹಿ ತಿಂಡಿಯನ್ನು ಅರಳಿ ಮರದ ಬುಡಕ್ಕೆ ಹಾಕಬೇಕು.

ಅಥವಾ ತೆಂಗಿನ ಮರದ ಬುಡಕ್ಕೆ ಹಾಕಿ ನೆನಪಿಡಿ ಯಾರು  ಆ ಹೂವುಗಳನ್ನು ತುಳಿಯದೇ ಇರುವ,ಓಡಾಡದೇ ಇರುವ  ಜಾಗದಲ್ಲಿ ಹಾಕಬೇಕು.

2.ಹರಿದು ಹೋದ ದೇವರ  ಚಿತ್ರವಿರುವ  ಫೋಟೋಗಳು.

ಬೆಂಕಿಯು ಅತ್ಯಂತ ಮಂಗಳಕರವಾದ ಅಂಶವೆಂದು ಪರಿಗಣಿಸಲಾಗಿದೆ.ಪಂಚಭೂತಗಳಲ್ಲಿ ಬೆಂಕಿಯು  ಸಹ ಒಂದು.(ಭೂಮಿ, ನೀರು,ಅಗ್ನಿ,ವಾಯು,ಆಕಾಶ)ನೀವು ಹರಿದು ಹೋದ ಫೋಟೋಗಳನ್ನು ಬೆಂಕಿಗೆ ಹಾಕಬಹುದು.

3.ಮದುವೆ ಲಗ್ನ ಪತ್ರಿಕೆಗಳು ದೊಡ್ಡ  ದೇವರ ಚಿತ್ರವಿರುವ ಫೋಟೋಗಳು.

 

ಕ್ಯಾಲೆಂಡರ್ ಜೊತೆಗೆ ದೇವರ ಚಿತ್ರವಿರುವ ಕಾಗದಗಳು,ಅಥವಾ ಹಳೆಯದಾದ ದೇವರ ಪುಸ್ತಕಗಳು, ಧರ್ಮ ಗ್ರಂಥಗಳು ಇದ್ದರೆ ಅವುಗಳನ್ನು ರದ್ದಿಗೆ ಹಾಕಬಹುದು.ಯಾಕೆಂದರೆ ಅವುಗಳು ಮತ್ತೆ ಪುನಃ .ಮರು ಉತ್ಪನ್ನ ಮಾಡಿ  ಮರುಬಳಕೆ ಮಾಡಲಾಗುತ್ತದೆ.ಅಥವಾ ನೀವೇ ಕ್ರಿಯಾತ್ಮಕವಾಗಿ ಯಾವುದಾದರೂ ಹೊಸ ರಚನೆಯನ್ನು ಮಾಡಬಹುದು.ದೇವರ ಚಿತ್ರವಿರುವ ಫೋಟೋಗಳನ್ನು ತೆಗೆದುಕೊಂಡು ಕತ್ತರಿಸಿ ಕ್ರಿಯಾಶೀಲವಾಗಿ ಅಂಟಿಸಿ  ಫೋಟೋ ಆಲ್ಬಮ್  ಕೂಡ ಮಾಡಬಹುದು ಮತ್ತು ಉಳಿದವುಗಳನ್ನು ಕಸದ ಬುಟ್ಟಿಗೆ ಹಾಕಬಹುದು.

4.ಮುರಿದು ಹೋದ ದೇವರ ವಿಗ್ರಹ ಅಥವಾ ಮೂರ್ತಿಗಳು.

 

ಯಾವುದಾದರೂ ಗಟ್ಟಿಯಾದ ದೇವರ ಮೂರ್ತಿಗಳು ,ವಿಗ್ರಹಗಳು ಮುರಿದು ಹೋದರೆ ಅವುಗಳನ್ನು ನದಿಯಲ್ಲಿ ಮುಳುಗಿಸಿ.ನಿಮ್ಮ ಮನೆ ಹತ್ತಿರದಲ್ಲಿ ಕೆರೆ,ಕಟ್ಟೆ,ಬಾವಿಗಳು ಇದ್ದರೆ ಇಲ್ಲಿ  ತೆಗೆದುಕೊಂಡು ಹೋಗಿ ವಿಸರ್ಜಿಸಿ.ನೀವು ವಿಗ್ರಹಗಳನ್ನು ಖರೀದಿಸಬೇಕೆಂದರೆ  ಜೇಡಿ ಮಣ್ಣಿನಿಂದ  ಮಾಡಿದ ವಿಗ್ರಹಗಳು ಉತ್ತಮ ಯಾಕೆಂದರೆ ಅವು ನೀರಿನಲ್ಲಿ ಮುಳುಗಿಸಿದರೆ ಸಾಕು ಕರಗಿ ಹೋಗುತ್ತವೆ.ಇವು ಮಾಲಿನ್ಯವನ್ನು ತಡೆಗಟ್ಟುತ್ತವೆ .ಆದರೆ ಪ್ಲಾಸ್ಟಿಕ್ ಕರಗುವುದಿಲ್ಲ ಬದಲಿಗೆ ಮಾಲಿನ್ಯವನ್ನು ಉಂಟುಮಾಡಿ ಪರಿಸರವನ್ನು ಹಾಳು ಮಾಡುತ್ತವೆ.

5.ಮುರಿದುಹೋದ ಮೂರ್ತಿಗಳು.

ಈ ಮೇಲೆ ಹೇಳಿದ ಹಾಗೆ ಎಲ್ಲಾ ನಿಯಮಗಳನ್ನು  ಪಾಲಿಸಿದರೆ ದೇವರನ್ನು ಪೂಜಿಸಬಹುದು,ಪೂಜೆ ಮಾಡಬಹುದು ಮತ್ತು ಅದೇ ಸಮಯದಲ್ಲಿ  ಪ್ರಕೃತಿಯನ್ನು ಸಹ   ಹಾಳು ಮಾಡದಂತೆ ರಕ್ಷಿಸಬಹುದು.ಅದೇ ಸಮಯದಲ್ಲಿ ಸಮಯವನ್ನು ಉಳಿಸಬಹುದು.ಆದ್ದರಿಂದ ಪೂಜಾ ಸಾಮಗ್ರಿಗಳನ್ನು  ಜಾಣ್ಮೆಯಿಂದ ಯೋಗ್ಯ ರೀತಿಯಲ್ಲಿ ಉಪಯೋಗಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top