ಮಾಹಿತಿ

ಬಂದಿದೆ ಜಿಯೋ DTH ಒಂದು ವರ್ಷ ಸಂಪೂರ್ಣ ಉಚಿತ ಸೇವೆ?

ಬಂದಿದೆ ಜಿಯೋ DTH ಒಂದು ವರ್ಷ ಸಂಪೂರ್ಣ ಉಚಿತ ಸೇವೆ?

 

 

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿರುವ ರಿಲಯನ್ಸ್‌ ಜಿಯೋ ಸದ್ಯ ಗ್ರಾಹಕರಿಗೆ ಮತ್ತೊಂದು ಅದ್ಭುತ ಸೇವೆ ನೀಡಲು ಸಜ್ಜಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇತ್ತೀಚಿಗೆ ಫ್ರೀ ಜಿಯೋ ಫೋನ್ ಲಾಂಚ್ ಮಾಡಿರುವ ಬೆನ್ನಲ್ಲೇ ಜಿಯೋ ಬ್ರಾಡ್ ಬ್ಯಾಂಡ್ ಸಹ ಸೇವೆಯನ್ನು ಶುರುಮಾಡುವ ಸೂಚನೆ ಸಿಕ್ಕಿದೆ. ಆದ್ದರಿಂದ ಜಿಯೋಯಿಂದ DTH ಸೇವೆಯೂ ಕೂಡ ಬಹುಬೇಗ ಶುರುವಾಗಲಿದ್ದು, ಸೆಪ್ಟೆಂಬರ್ ಮೊದಲ ವಾರವೇ ಪ್ರಾರಂಭವಾಗುವ ಸಾಧ್ಯತೆ ಇದೆ.

 

 

DTH ಸೇವೆಯನ್ನು ಆರಂಭದಲ್ಲಿ ಉಚಿತವಾಗಿ ನೀಡಿ ಅನಂತರ ಜಿಯೋ ಮೊಬೈಲ್ ನಂತೆ DTH ಸೇವೆಗೂ ಕೂಡ ಅತಿ ಕಡಿಮೆ ಶುಲ್ಕ ವಿಧಿಸಲಿದೆ. ಮೂಲಗಳ ಪ್ರಕಾರ ಜಿಯೋ DTH ಸೆಟಪ್ ಬಾಕ್ಸ್ ಕೊಂಡರೆ ಆರು ತಿಂಗಳು ಉಚಿತ ಸೇವೆಯನ್ನು ಪಡೆಯಬಹುದು ಎಂದು ತಿಳಿದುಬಂದಿದೆ.

 

 

ಜಿಯೋ ಕಡಿಮೆ ಬೆಲೆಗೆ ಸ್ಮಾರ್ಟ್ ಸೆಟಪ್ ಬಾಕ್ಸ್ ನೀಡಲಿದ್ದು, ಇದು ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇಂಟರ್ನೆಟ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು. ಈ ಸೆಟಪ್ ಬಾಕ್ಸ್ ನಲ್ಲಿ ಅದರಲ್ಲಿ ಜಿಯೋ ಆಪ್ ಸೇವೆಗಳು ಕೂಡ ದೊರೆಯಲಿದೆ. ಜಿಯೋ DTH ಸ್ಮಾರ್ಟ್ ಸೆಟಪ್ ಬಾಕ್ಸ್ ನಲ್ಲಿ USB ಹಾಕುವ ಸೌಲಭ್ಯವಿದ್ದು ಈ ಮೂಲಕ ಪೆನ್‌ಡ್ರೈವ್ ಅಥವಾ ಸಿಡಿ ಯನ್ನು ಹಾಕಿ ಅದರಲ್ಲಿರುವ ವಿಡಿಯೋ ಮತ್ತು ಪೋಟೊಗಳನ್ನು ವೀಕ್ಷಿಸುವ ಅವಕಾಶವನ್ನು ನೀಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top