fbpx
ದೇವರು

ಕುಂಚಿಟಿಗ ಒಕ್ಕಲಿಗ ಗೌಡರ ಆರಾಧ್ಯ ದೈವ ಬೆಂಗಳೂರಿನ ಕಿಲಾರಿ ರಸ್ತೆಯಲ್ಲಿರುವ ಈ ಆಂಜನೇಯ ಸ್ವಾಮಿ.

ಕುಂಚಿಟಿಗ ಒಕ್ಕಲಿಗ ಗೌಡರ ಆರಾಧ್ಯ ದೈವ  ಬೆಂಗಳೂರಿನ ಕಿಲಾರಿ ರಸ್ತೆಯಲ್ಲಿರುವ ಈ ಆಂಜನೇಯ ಸ್ವಾಮಿ.

ಕುಂಚಿಟಿಗ ಒಕ್ಕಲಿಗ ಗೌಡರು ಆಂದರೆ ಯಾರು ?

ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ ಅದರಲ್ಲಿ ಒಂದು ಜಾತಿ ಒಕ್ಕಲಿಗರು ಅಂದರೆ ಇವರು ಒಕ್ಕಲಿಗ  ಗೌಡರು ಅದೇ ರೀತಿಯಲ್ಲಿಯೇ ಕುಂಚಿಟಿಗ ಒಕ್ಕಲಿಗ ಗೌಡರು ಎನ್ನುವ ಇನ್ನೊಂದು ಜಾತಿ ಇದೆ . ಈ ಕುಂಚಿಟಿಗ ಒಕ್ಕಲಿಗ ಗೌಡರು ಆಂಧ್ರ ಪ್ರದೇಶ,ತಮಿಳು ನಾಡು ಮತ್ತು ಕರ್ನಾಟಕದ ತುಮಕೂರು,ಬೆಂಗಳೂರು,ಮೈಸೂರು ಜಿಲ್ಲೆಯಲ್ಲಿ ಅಧಿಕವಾಗಿ ವಾಸವಾಗಿದ್ದಾರೆ. ಕುಂಚಿಟಿಗ  ಒಕ್ಕಲಿಗರ ಸಂಖ್ಯೆ ಮೂವತ್ತರಿಂದ ನಲವತ್ತು ಲಕ್ಷ  .ಅಂತಹ ಕುಂಚಿಟಿಗ ಒಕ್ಕಲಿಗರು ಬೆಂಗಳೂರಿನಲ್ಲಿ  ತಮ್ಮ ಆರಾಧ್ಯ ದೈವ ಆಂಜನೇಯ ಸ್ವಾಮಿಯನ್ನು ಪೂಜಿಸಲು ಪ್ರಾರಂಭಿಸಿದರು.

“ಶ್ರೀ ರಾಮ ಜಯ ರಾಮ ಜಯ ಜಯ ರಾಮ”

ಬೆಂಗಳೂರಿನಲ್ಲಿ ಕುಂಚಿಟಿಗರ ಪೇಟೆಯ,ಕಿಲಾರಿ ರಸ್ತೆಯಲ್ಲಿದೆ ಕುಂಚಿಟಿಗರ ಶ್ರೀ ಅಂಜನೆಯಸ್ವಾಮಿಯ ದೇವಸ್ಥಾನ. ಈ ದೇವಸ್ಥಾನಕ್ಕೆ ಸರಿ ಸುಮಾರು  300 ವರ್ಷಗಳ ಇತಿಹಾಸವಿದೆ.ಹಿಂದಿನ ಕಾಲದಲ್ಲಿ ಈ ಸ್ಥಳದಲ್ಲಿ ಕುಂಚಿಟಿಗರೇ ಹೆಚ್ಚು ಸಂಖ್ಯೆಯಲ್ಲಿ ವಾಸವಿದ್ದರು.ಆದ್ದರಿಂದ ಕುಂಚಿಟಿಗ ಒಕ್ಕಲಿಗ ಸಮುದಾಯದವರೇ ಹೆಚ್ಚು ಪೂಜಿಸುತ್ತಾರೆ.ಆದ್ದರಿಂದ ಈ ಆಂಜನೇಯಸ್ವಾಮಿಗೆ ಕುಂಚಿಟಿಗ ಶ್ರೀ  ಆಂಜನೇಯ ಸ್ವಾಮಿ ಎಂದೇ ಪ್ರಸಿದ್ದಿ ಪಡೆದಿದೆ.

ಇತಿಹಾಸ.

300 ವರ್ಷಗಳ ಹಿಂದೆ ದೊಡ್ಡಬಳ್ಳಾಪುರ  ತಾಲ್ಲೂಕಿನ ಒಂದು ಊರಿನಲ್ಲಿ ಮಾರುತಿಯ ವಿಗ್ರಹ ಕಂಡು ಬಂತು.ಇದನ್ನು ತಿಳಿದ ಯಜಮಾನ ಗುಜ್ಜಾರಪ್ಪ ಮತ್ತು ವೊದೇ ಮನೆತನದವರು ಎತ್ತಿನ ಗಾಡಿಯ ಮೂಲಕ ವಿಗ್ರಹವನ್ನು ಸಾಗಿಸಿದರು.ಈಗ ದೇವಸ್ಥಾನವಿರುವ ಸ್ಥಳದಲ್ಲಿ ಸ್ಥಾಪಿಸಿದ್ದಾರೆ ಮತ್ತು ಆಗಿನ ಕಾಲದಲ್ಲಿ ಚಪ್ಪಡಿ ಕಲ್ಲುಗಳಿಂದ ಚಿಕ್ಕ ಗುಡಿಯನ್ನು ನಿರ್ಮಿಸಿದ್ದರು.

1901 ರಲ್ಲಿ   ಕಲಿಯುಗದ ದೈವ ,ಚಿರಂಜೀವ  ಹನುಮನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದು ನಿರ್ಧರಿಸಲಾಯಿತು. ಜಿ.ಕೆ ಗುರುಡಾಚಾರ್ ಮತ್ತು ಇನ್ನೂ ಮುಂತಾದವರ ನೇತೃತ್ವದಲ್ಲಿ 1973 ರಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ.1942 ರಲ್ಲಿ ಸರಕಾರದ ನೆರವಿನಿಂದ ದೇವಸ್ಥಾನವನ್ನು ಸಂಪೂರ್ಣವಾಗಿ ನಿರ್ಮಿಸಿದ್ದಾರೆ.

ವಿಶೇಷವಾಗಿ ಇಲ್ಲಿ ಶ್ರಾವಣ ಮಾಸದಲ್ಲಿ.5 ದಿನಗಳ ಕಾಲ ಪೂಜೆ ನೆಡೆಸಲಾಗುತ್ತದೆ.ಆಗ ಶ್ರೀ ಮಹಾ ಸುದರ್ಶನ ಹೋಮ,ಶತಕಳಾಭಿಷೇಕ,ಲಕ್ಷಾರ್ಚನೆ, ಕಲ್ಯಾಣೋತ್ಸವ ನೆಡೆಯುತ್ತದೆ.ಮೂರು ಅಮಾವಾಸ್ಯೆಯಂದು   ಈ ದೇವಸ್ಥಾನಕ್ಕೆ ಬಂದು  21 ಪ್ರದಕ್ಷಿಣೆ ಹಾಕಿ ಬೇಡಿಕೊಂಡರೆ.ಇಷ್ಟಾರ್ಥ ಸಿದ್ದಿ ನೆರವೇರುವುದು ಎಂದು ಭಕ್ತರು ನಂಬಿದ್ದಾರೆ.ಹನುಮ ಜಯಂತಿಯ ಸಮಯದಲ್ಲಿ  ಇಲ್ಲಿ ಹನುಮ ದೇವನಿಗೆ  ಜಾತ್ರೆ ನೆಡೆಯುತ್ತದೆ ಜಾತ್ರೆಯ  5 ನೇ ದಿನ ಬ್ರಹ್ಮರಥೋತ್ಸವ ಮತ್ತು ಧಾರ್ಮಿಕ ಆಚರಣೆಗಳು ನಡೆಯುತ್ತವೆ.

 

 

ಈ ದೇವಸ್ಥಾನದಲ್ಲಿರುವ ಅಂಜನೆಯಸ್ವಾಮಿಯ ಮೂರ್ತಿಯ ಒಂದು ಕೈಯಲ್ಲಿ  ಸಂಜೀವಿನಿ ಬೆಟ್ಟವನ್ನು ಎತ್ತಿ ಹಿಡಿದ್ದಾನೆ.ತನ್ನ ಕಾಲಿನ ಕೆಳಗೆ ದುಷ್ಟರಾದ ರಾಕ್ಷಸರನ್ನು ಮೆಟ್ಟಿ ನಿಂತಿದ್ದಾನೆ ಹನುಮನು ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು ಆಂಜನೇಯನ ದರ್ಶನ ನೀಡುತ್ತಿದ್ದಾನೆ.

ಇದೇ ವರ್ಷ ಏಪ್ರಿಲ್ 2017 ರಲ್ಲಿ  ಈ ದೇವಾಲಯದಲ್ಲಿ ವಜ್ರ ಮಹೋತ್ಸವ ಸಮಾರಂಭ  ನೆಡೆಯಿತು.ಈ ದೇವಸ್ಥಾನದ ಪಕ್ಕದಲ್ಲಿಯೇ ಕುಂಚಿಟಿಗರ ಜನಾಂಗದವರು ಕಲ್ಯಾಣ ಮಂಟಪವನ್ನು ಸಹ ನಿರ್ಮಿಸಿದ್ದಾರೆ.

ಈ ದೇವಸ್ಥಾನ ಬೆಳಗ್ಗೆ 6 ರಿಂದ ಮಧ್ಯಾಹ್ನ 12.30 ರ ವರೆಗೆ,ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ,ಶನಿವಾರದ ದಿನ ಮಾತ್ರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಾಯಂಕಾಲ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ   ದೇವಸ್ಥಾನಕ್ಕೆ ಬರುವ ಭಕ್ತರಿಗೆಂದೇ ತೆರೆದಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top