fbpx
ಮನೋರಂಜನೆ

ಮತ್ತೊಂದು ಹೊಸ ಬಿಲ್ಡಪ್ ಕೊಡಲು ರೆಡಿಯಾಗಿರುವ ಪ್ರಥಮ್!

ಮತ್ತೊಂದು ಹೊಸ ಬಿಲ್ಡಪ್ ಕೊಡಲು ಬಂದಿರುವ ಪ್ರಥಮ್!

 

 

ಬಿಗ್‍ಬಾಸ್ ಕನ್ನಡ ಸೀಸನ್ 4ರ ವಿಜೇತ ಪ್ರಥಮ್ ಬಿಲ್ಡಪ್ ಕೊಡೋದ್ರಲ್ಲಿ ಸಕತ್ ಫೇಮಸ್ ಆಗಿದ್ದರು ಈಗ ಇದೇ ಪ್ರಥಮ್ ಮತ್ತೊಂದು ಬಿಲ್ಡಪ್ ಕೊಡೋಕೆ ರೆಡಿಯಾಗಿದ್ದಾರೆ. ಅದೇನೆಂದ್ರೆ ಅವರು ಹೊಸ ಸಿನಿಮಾವೊಂದನ್ನು ಮಾಡೋಕೆ ರೆಡಿಯಾಗಿದ್ದು ಚಿತ್ರಕ್ಕೆ ಬಿಗ್‍ಬಾಸ್ ವಿನ್ನರ್ ಪ್ರಥಮ್ ಅನ್ನೋ ಇಟ್ಟಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಟ್ಯಾಗ್‍ಲೈನ್ ಆಗಿ “ಈ ನನ್ ಮಗಂದು ಇದೇ ಆಯ್ತು ಗುರು” ಎಂದು ನೀಡಿದ್ದಾರೆ.

 

 

ಈ ಚಿತ್ರದ ವಿಶೇಷವೆಂದರೆ ಈ ಚಿತ್ರಕ್ಕೆ ಪ್ರಥಮ್ ಹೀರೋ ಮಾತ್ರವಲ್ಲ ನಿರ್ದೇಶಕ ಕೂಡ ಹೌದು. ಈ ಚಿತ್ರಕ್ಕೆ ದುಡ್ಡ್ ಹಾಕ್ತಿರೋದು ಉದಯ್ ಮೆಹ್ತಾ ಮತ್ತು ವಾಸವಿ ಮೆಹ್ತಾ. ಸದ್ಯ ಎಂಎಲ್‍ಎ, ದೇವರಂತಾ ಮನುಷ್ಯ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಪ್ರಥಮ್ ಸದ್ಯದಲ್ಲೇ ಈ ಹೊಸ ಸಿನಿಮಾದ ಫೋಟೋಶೂಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

 

 

ಪ್ರಥಮ್ ಅವರ ಎಂಎಲ್‍ಎ ಚಿತ್ರಕ್ಕೆ ಸಂಗೀತ ನೀಡಿರುವ ವಿಕ್ರಮ್ ಅವರೇ ಈ ಚಿತ್ರಕ್ಕೂ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಚಿತ್ರಕಥೆ ಸಂಪೂರ್ಣ ಕಾಮಿಡಿಯಾಗಿರಲಿದೆ ಎಂದು ಪ್ರಥಮ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top