fbpx
ಭವಿಷ್ಯ

ಕಟಕ ರಾಶಿಯವರು ತಿಳ್ಕೊಳ್ಬೇಕಾದ ವಿಷಯಗಳು ..

ಕಟಕ ರಾಶಿಯವರು ತಿಳ್ಕೊಳ್ಬೇಕಾದ ವಿಷಯಗಳು ..

ಈ ರಾಶಿಯವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುವರು ಹಾಗೆ ಹಿರಿಯರಿಗೆ ಗೌರವವನ್ನು ನೀಡುವುದಿಲ್ಲ.

ಕಟಕ ರಾಶಿಯವರ ಅತ್ಯಂತ ಕೆಟ್ಟ ಗುಣಗಳು.

ಕಟಕ ರಾಶಿಯವರು ಬೇರೆಯವರನ್ನು ಶಾಂತಿ, ನಿಮ್ಮದಿಯಿಂದ ಇರಲು ಬಿಡುವುದಿಲ್ಲ.ಬೇರೆಯವರ ಮನಸ್ಸನ್ನು ಹಾಳು ಮಾಡುವದೇ ಇವರ ಮೊದಲ ಗುಣ.ಕಟಕ ರಾಶಿಯವರು ಪ್ರಾಣಿಯ ಚಿಹ್ನೆ ನೀರಿನಲ್ಲಿ ಜೀವಿಸುವ ಏಡಿ. ಈ ಪ್ರಾಣಿಯು ಸಮುದ್ರ,ಕೆರೆ,ಕಟ್ಟೆಗಳಲ್ಲಿ,ಬಾವಿಗಳಲ್ಲಿ ಸಿಗುವ ಮತ್ತು ಅಲ್ಲಿಯೇ ವಾಸಿಸುವ ಜಲ ಪ್ರಾಣಿ.ಈ ಏಡಿಯ ಕೆಲಸ ನೀರನ್ನು ಕಲಕುವುದು ಹಾಗೆ ಈ ರಾಶಿಯವರ ಗುಣ ,ಸ್ವಭಾವ ಕೂಡ ಬೇರೆಯವರ ಮನಸ್ಸನ್ನು ಕೆದಕುವುದು, ನೆಮ್ಮದಿಯನ್ನು ಹಾಳು ಮಾಡುವುದು.

ಇವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುವರು.ಇವರು ವಯಸ್ಸಿನಲ್ಲಿ ಎಷ್ಟೇ ಕಿರಿಯರಾದರೂ ಸಹ ಇವರಿಗಿಂತ ವಯಸ್ಸಿನಲ್ಲಿ ದೊಡ್ಡವರಾದ ಹಿರಿಯರಿಗೆ ಗೌರವವನ್ನು ನೀಡುವುದಿಲ್ಲ (ತಂದೆ,ತಾಯಿ,ಶಿಕ್ಷಕರು,ಸಹೋದ್ಯೋಗಿಗಳು, ಸಹೋದರಿ,ಸಹೋದರರು) ಹಿರಿಯರ ಮೇಲೆಯೇ ಅಧಿಕಾರ ಚಲಾಯಿಸುವರು,ಗರ್ವವನ್ನು ತೋರಿಸುವರು. ಬೇರೆಯವರಿಗೆ ಹೆಚ್ಚಾಗಿ ಶೋಷಣೆ ಮಾಡಲು ಬಯಸುವ ಮನಸ್ಸುಳ್ಳವರು ಮತ್ತು ಹಾಗೆಯೇ ಮಾಡುವರು ಸಹ.

ವ್ಯವಹಾರ.

ಇವರು ಹಣಕಾಸು, ಸಂಪತ್ತಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ನಡೆಸುತ್ತಿರುತ್ತಾರೆ. ಹಣಕಾಸಿನ ಸಂಸ್ಥೆಯನ್ನು ಕಟ್ಟಿದರೆ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ ಆದರೆ ಬೇರೆಯವರಿಂದಲೇ ಖರ್ಚನ್ನು ಮಾಡಿಸುತ್ತಾರೆ.

ಸಾಂಸಾರಿಕ ಜೀವನ.

ಕಟಕ ರಾಶಿಯವರ ವೈವಾಹಿಕ ಜೀವನದಲ್ಲಿ ವೈರಾಗ್ಯ ಹೆಚ್ಚಾಗಿ ಕಾಡಿಗೆ ಹೋಗುತ್ತಾರೆ. ಇದೇ ಕಟಕ ರಾಶಿಯಲ್ಲಿ ಹುಟ್ಟಿದ ತುಳಸೀ ದಾಸರು ಕೂಡ ಕಟಕ ರಾಶಿಯಲ್ಲೇ ಹುಟ್ಟಿದವರು ಜಗಳವಾಗಿ ಸಂಸಾರದ ಜಂಜಾಟದಿಂದ ಹೆಂಡತಿಯಿಂದ ವೈರಾಗ್ಯ ಹೊಂದುತ್ತಾರೆ.

 

ಈ ರಾಶಿಯವರಿಗೆ ಹೊಂದುವ ಬಣ್ಣ ನೀಲಿ ಅಥವಾ ಜಾಮೂನಿನ ಬಣ್ಣ.ಇವರಿಗೆ ದೇವರ ಮೇಲೆ ನಂಬಿಕೆ ಕೂಡ ಇದೆ.ತಮ್ಮ ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ಸಹ ಅನುಭವಿಸುತ್ತಾರೆ.ಪ್ರಪಂಚದಲ್ಲಿ ನೆಡೆಯುವ ಆಗು ಹೋಗುಗಳ ವಿಷಯವನ್ನು ತಿಳಿದು ಕೊಳ್ಳುವುದರಲ್ಲಿ ಆಸಕ್ತಿ ಜಾಸ್ತಿ.

ತಮ್ಮ ಜೀವಿತಾವಧಿಯಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳನ್ನು ನಿರ್ಮಾಣ ಮಾಡಿ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಾರೆ.ಆದರೆ ಕೊನೆಗೆ ಇವರ ಸಂಪತ್ತು ಬೇರೆಯವರ ಪಾಲಾಗುವುದೇ ಹೆಚ್ಚು.ಇವರ ಮರಣವಾದ ನಂತರ ಆ ಅಸ್ತಿಯೂ ಅನಾಥವಾಗುವುದು.
ಈ ರಾಶಿಯವರು ಜೀವನದಲ್ಲಿ ಎಷ್ಟು ಎತ್ತರದ ಸ್ಥಾನವನ್ನು ಪಡೆಯುತ್ತಾರೋ ಅಷ್ಟೇ ಕೆಳಮಟ್ಟಕ್ಕೂ ಇಳಿಯುತ್ತಾರೆ. ಕಟಕ ರಾಶಿಯವರ ಜಾತಕವನ್ನು ಪರಿಶೀಲಿಸಿ ನೋಡಿದಾಗ ಸಾಕಷ್ಟು ಮಂದಿ ಅಧಿಕಾರವನ್ನು ಹೊಂದುತ್ತಾರೆ.ವೇದ ಸಿದ್ದಾಂತವನ್ನು ಯಾಗಗಳನ್ನು ಅಭ್ಯಾಸ ಮಾಡುತ್ತಾರೆ.ಜನರಿಗೆ ಜ್ಞಾನವನ್ನು ಉಪದೇಶಿಸಲು ಮಠವನ್ನು ನಿರ್ಮಾಣ ಮಾಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top