fbpx
ದೇವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗಿಡವನ್ನು ನೆಟ್ಟು ಬೆಳೆಸಿದರೆ ದೋಷ ನಿವಾರಣೆಯಾಗುತ್ತದೆ.

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗಿಡವನ್ನು ನೆಟ್ಟು ಬೆಳೆಸಿದರೆ ದೋಷ ನಿವಾರಣೆಯಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರ ದ ಪ್ರಕಾರ ಕೆಲವು ಮರ ,ಗಿಡಗಳನ್ನು  ನಿಮ್ಮ ನಕ್ಷತ್ರಗಳಿಗೆ ಅನುಸಾರವಾಗಿ , ನಕ್ಷತ್ರಗಳ ಪ್ರಕಾರ ನೆಟ್ಟರೆ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಅನುಗುಣವಾಗಿ ನವಗ್ರಹ ವನ,  ಗಿಡ ಮೂಲಿಕೆ ವನಗಳು, ದೇವ ವನಗಳ ಸಂಖ್ಯೆ ಹೆಚ್ಚುತ್ತಿವೆ.

ಎಲ್ಲಾ ಕಡೆ  ಕಟ್ಟಡಗಳು ನಿರ್ಮಾಣವಾಗುತ್ತಿರುವ ಈ  ಕಾಲದಲ್ಲಿ ಹಸಿರು, ಗಿಡ, ಮರಗಳನ್ನು ಕಡಿದು ಹಾಕುತ್ತಿದ್ದಾರೆ.ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ನಕ್ಷತ್ರದವರು ಯಾವ ಗಿಡವನ್ನು ಬೆಳೆಸುವುದರಿಂದ ಅವರ ದೋಷಗಳು ನಿವಾರಣೆಯಾಗುತ್ತವೆ ಎಂದು ತಿಳಿಸಿದ್ದಾರೆ.

1.ಅಶ್ವಿನಿ,ಮಘ,ಮೂಲಾ ನಕ್ಷತ್ರ.

 

ಈ ನಕ್ಷತ್ರಗಳ ಅಧಿಪತಿ ಕೇತು ಗ್ರಹ ಆದ್ದರಿಂದ ಕೇತು ದೋಷ ನಿವಾರಣೆಗೆ ಅರಳಿ ಮರವನ್ನು ಬೆಳೆಸಿ ಹಾಗೆ ಜಾಜಿ ಹೂವಿನ ಗಿಡವನ್ನು ಮನೆಯಲ್ಲಿಟ್ಟು ಬೆಳೆಸಿ.

2.ಭರಣಿ,ಪುಬ್ಬ,ಪೂರ್ವಾಷಾಡ ನಕ್ಷತ್ರ.

 

ಈ ನಕ್ಷತ್ರಗಳಿಗೆ  ಅಧಿಪತಿ ಶುಕ್ರ ಗ್ರಹ . ಆದ್ದರಿಂದ ಶುಕ್ರ  ಗ್ರಹದ ದೋಷ ನಿವಾರಣೆಗೆ ಔದುಂಬರ,  ಕಮಲದ ಹೂವಿನ ಗಿಡಗಳನ್ನು ಬೆಳೆಸಿದರೆ ಒಳ್ಳೆಯದು.

3.ಕೃತಿಕ,ಉತ್ತರ,ಉತ್ತರಾಷಾಡ ನಕ್ಷತ್ರ.

 

ಈ ನಕ್ಷತ್ರಗಳ ಅಧಿಪತಿ ಸೂರ್ಯ ಗ್ರಹ  ಆದ್ದರಿಂದ ಸೂರ್ಯ ದೋಷ ನಿವಾರಣೆಗೆ  ಹೊಂಗೆ ಮರವನ್ನು ಬೆಳಿಸಿ ಮತ್ತು ಕನಕಾಂಬರ ಹೂವಿನ  ಗಿಡಗಳನ್ನು ಬೆಳೆಸಿದರೆ ಒಳ್ಳೆಯದು.

4.ರೋಹಿಣಿ,ಹಸ್ತ,ಶ್ರವಣ ನಕ್ಷತ್ರ.

 

ಈ ನಕ್ಷತ್ರಗಳಿಗೆ ಅಧಿಪತಿ ಚಂದ್ರ ಗ್ರಹ. ಆದ್ದರಿಂದ ಚಂದ್ರ ಗ್ರಹ ದೋಷ ನಿವಾರಣೆಗೆ ಮುತ್ತುಗದ ಎಲೆಯ  ಮರ ಮತ್ತು ಬಿಳಿ ತಾವರೆ ಹೂವಿನ ಗಿಡಗಳನ್ನು ಬೆಳೆಸಬೇಕು.

5.ಮೃಗಶಿರ ,ಚಿತ್ತ, ಧನಿಷ್ಠ ನಕ್ಷತ್ರ.

ಈ ನಕ್ಷತ್ರಗಳಿಗೆ   ಅಧಿಪತಿ ಕುಜ ಗ್ರಹ.ಆದ್ದರಿಂದ ಕುಜ ಗ್ರಹ ದೋಷ ನಿವಾರಣೆಗೆ ಕಗ್ಗಲಿ ಮರ ಹಾಗೂ ದತ್ತೂರಿ ಹೂವಿನ ಗಿಡಗಳನ್ನು ಮನೆಯ ಬಳಿ ಬೆಳೆಸಿ.

6.ಅರಿದ್ರ,ಸ್ವಾತಿ,ಶತಭಿಷ ನಕ್ಷತ್ರ.

 

ಈ ನಕ್ಷತ್ರಗಳ ಅಧಿಪತಿ ರಾಹು ಗ್ರಹ.ರಾಹು ಗ್ರಹ ದೋಷ ನಿವಾರಣೆಗೆ ಮಾವಿನ ಹಣ್ಣಿನ  ಮರ ಹಾಗೂ ಬೆಟ್ಟದ ತಾವರೆ ಹೂವಿನ ಗಿಡಗಳನ್ನು ಬೆಳೆಸಬೇಕು.

7.ಪುನರ್ವಸು ,ವಿಶಾಖ,ಪೂರ್ವಭಾದ್ರಪದ ನಕ್ಷತ್ರ.

 

ಈ ನಕ್ಷತ್ರಗಳಿಗೆ ಅಧಿಪತಿ ಗುರು ಗ್ರಹ.ಗುರು ಗ್ರಹ ದೋಷ ನಿವಾರಣೆಗೆ  ಶ್ರೀ ಗಂಧದ ಮರ ಮತ್ತು ಪಾರಿಜಾತ ಹೂವಿನ ಗಿಡಗಳನ್ನು ಬೆಳೆಸಬೇಕು.

8.ಪುಷ್ಯ ,ಅನುರಾಧ,ಉತ್ತರಭಾದ್ರಪದ ನಕ್ಷತ್ರ.

 

ಈ ನಕ್ಷಗಳಿಗೆ ಅಧಿಪತಿ ಶನಿ ಗ್ರಹ.ಶನಿ ಗ್ರಹದ ದೋಷ ನಿವಾರಣೆಗೆ ಶಮೀ ವೃಕ್ಷ ಹಾಗೂ ತುಳಸಿ ಸಸ್ಯವನ್ನು ಇಟ್ಟು ಬೆಳೆಸಬೇಕು.

9.ಆಶ್ಲೇಷ, ಜ್ಯೇಷ್ಠ, ರೇವತಿ ನಕ್ಷತ್ರ.

 

ಈ ನಕ್ಷತ್ರಗಳ ಆಧಿಪತಿ ಬುಧ ಗ್ರಹ.ಬುಧ ಗ್ರಹ ದೋಷ ನಿವಾರಣೆಗೆ ಸಂಪಿಗೆ ಹೂವಿನ ಮರ ಮತ್ತು ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಸಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top